Bigg Boss Kannada 11: ಗ್ರೇ ಏರಿಯಾ ಕಿಂಗ್ ಉಗ್ರಂ ಮಂಜು ವಿರುದ್ಧ ತಿರುಗಿ ಬಿದ್ದ ಬಿಗ್ ಬಾಸ್‌ನ ಹಳೇ ಕಂಟೆಸ್ಟೆಂಟ್ಸ್!
Bigg Boss Kannada 11: ಬಿಗ್ ಬಾಸ್ ಕನ್ನಡ ಸೀಸನ್ 11ರ ಈ ಹಿಂದೆ ಎಲಿಮಿನೇಟ್ ಆಗಿ ಮನೆಯಿಂದ ಹೊರ ನಡೆದ ಸ್ಪರ್ಧಿಗಳು ಅಚ್ಚರಿಯ ರೀತಿಯಲ್ಲಿ ಬಿಗ್‌ಬಾಸ್ ಮನೆಗೆ ಎಂಟ್ರಿಕೊಟ್ಟಿದ್ದಾರೆ. ಎಲ್ಲರ ಮನದಲ್ಲೂ ಈಗ ಹಳೇ ದಿನಗಳ ನೆನಪುಗಳ ಚಿಟ್ಟೆ ಹಾರಾಡುತ್ತಿದೆ. ಫಿನಾಲೆ ರೇಸ್‌ನ ಸ್ಪರ್ಧಿಗಳ ಮೊಗದಲ್ಲಿಯೂ ನಗು ಮೂಡಿದೆ.

Bigg Boss Kannada 11: ಬಿಗ್ ಬಾಸ್ ಕನ್ನಡ ಸೀಸನ್ 11 ಇನ್ನೇನು ಎರಡು ವಾರಗಳಲ್ಲಿ ಅಂತ್ಯ ಕಾಣಲಿದೆ. ಫಿನಾಲೆ ಸಮೀಪ ಬರ್ತಿದ್ದಂತೆ, ಸ್ಪರ್ಧಿಗಳ ನಡುವಿನ ಆಟದ ವೈಖರಿ ಬದಲಾಗಿದೆ. ಅಗ್ರೆಸ್ಸಿವ್ ಮೋಡ್‌ಗೆ ಎಲ್ಲರೂ ಹೊರಳಿದ್ದಾರೆ. ಸಾಮಾನ್ಯವಾಗಿ ಇದ್ದಾಗ ಎಲ್ಲರೂ ಅಷ್ಟೇ ಸಹಜವಾಗಿ ವರ್ತಿಸುವ ಸ್ಪರ್ಧಿಗಳು, ಟಾಸ್ಕ್ ಸಢೇರಿ ಇತರ ಚಟುವಟಿಕೆಗಳಲ್ಲಿ ಉಗ್ರಾವತಾರ ತಾಳುತ್ತಿದ್ದಾರೆ. ಮಿಡ್ ವೀಕ್ ಎಲಿಮಿನೇಷನ್ ತೂಗುಗತ್ತಿಯಿಂದ ಪಾರಾಗಲು, ತಮ್ಮ ಆಟ ಮತ್ತು ನಡವಳಿಕೆಗಳ ಬಗ್ಗೆ ನನ್ನದೇ ಸರಿ ಎಂದು ಸಮರ್ಥನೆ ನೀಡುತ್ತಿದ್ದಾರೆ. ಈ ನಡುವೆ ಇದೇ ಬಿಗ್ ಮನೆಗೆ ಇದೇ ಸೀಸನ್‌ನ ಹಳೇ ಸ್ಪರ್ಧಿಗಳ ಆಗಮನವಾಗಿದೆ. ಉಗ್ರಂ ಮಂಜು ಮುಖವಾಡ ಮತ್ತೆ ಕಳಚಿದೆ.
ಹೌದು, ಬಿಗ್ ಬಾಸ್ ಕನ್ನಡ ಸೀಸನ್ 11ರ ಈ ಹಿಂದೆ ಎಲಿಮಿನೇಟ್ ಆಗಿ ಮನೆಯಿಂದ ಹೊರ ನಡೆದ ಸ್ಪರ್ಧಿಗಳು ಅಚ್ಚರಿಯ ರೀತಿಯಲ್ಲಿ ಬಿಗ್‌ಬಾಸ್‌ಗೆ ಎಂಟ್ರಿಕೊಟ್ಟಿದ್ದಾರೆ. ಎಲ್ಲರ ಮನದಲ್ಲೂ ಈಗ ಹಳೇ ದಿನಗಳ ನೆನಪುಗಳ ಚಿಟ್ಟೆ ಹಾರಾಡುತ್ತಿದೆ. ಫಿನಾಲೆ ರೇಸ್‌ನ ಸ್ಪರ್ಧಿಗಳ ಮೊಗದಲ್ಲಿಯೂ ನಗು ಮೂಡಿದೆ. ಹೀಗೆ ಬಂದವರು ಸುಮ್ಮನಿದ್ದಾರೆಯೇ? ಇಲ್ಲ. ಸಿಹಿ ಕಹಿ ಅನುಭವಗಳ ಬಗ್ಗೆ ಮರು ಪ್ರವೇಶಿಸಿದ ಮಾಜಿ ಸ್ಪರ್ಧಿಗಳು ಹಂಚಿಕೊಂಡಿದ್ದಾರೆ. ಆ ಪೈಕಿ ಕೆಂಪು ಹೃದಯ, ಕಪ್ಪು ಹೃದಯದ ವಿತರಣೆಯೂ ಆಗಿದೆ. ಬಹುತೇಕರು ಉಗ್ರಂ ಮಂಜು ಅವರಿಗೆ ಕಪ್ಪು ಹೃದಯ ನೀಡಿದ್ದಾರೆ.
ಯಾರು ಏನಂದ್ರು?
ಬಿಗ್ ಬಾಸ್‌ನ ಈ ಸೀಸನ್‌ನ ಎಲಿಮಿನೇಟ್ ಆದ ಸ್ಪರ್ಧಿಗಳೀಗೆ ಫಿನಾಲೆ ಹೊತ್ತಲ್ಲಿಯೇ, ಅತಿಥಿಗಳಾಗಿ ಮನೆ ಪ್ರವೇಶಿಸಿದ್ದಾರೆ. ಅನುಷಾ ರೈ, ಹಂಸ, ಶಿಶಿರ್, ರಂಜಿತ್, ಗೋಲ್ಡ್ ಸುರೇಶ್, ಯಮುನಾ, ಮಾನಸಾ ಸಂತೋಷ್ ಆಗಮಿಸಿ ಖುಷಿ ಪಟ್ಟಿದ್ದಾರೆ. ಬಿಡುಗಡೆ ಆದ ಪ್ರೋಮೋದಲ್ಲಿ ಹನುಮಂತ ಮತ್ತು ಧನರಾಜ್ ಕಡೆಯಿಂದ ಗೋಲ್ಡ್ ಸುರೇಶ್ ಕಿಸ್ ಪಡೆದರೆ, ಮಾನಸ ಅವರನ್ನು ಎತ್ತಿಕೊಂಡು ಸಂಭ್ರಮಿಸಿದ್ದಾರೆ ತ್ರಿವಿಕ್ರಮ್. ಇಷ್ಟಕ್ಕೆ ಮುಗಿಯಲಿಲ್ಲ. ಮನೆಯಲ್ಲಿ ಉಳಿದ ಸ್ಪರ್ಧಿಗಳ ಪೈಕಿ ಯಾರು ಹಿತವರು ಎಂದೂ ಹಳೇ ಸ್ಪರ್ಧಿಗಳಿಗೆ ಪ್ರಶ್ನೆ ಮಾಡಿದ್ದಾರೆ ಬಿಗ್ ಬಾಸ್.
ಉಗ್ರಂ ಮಂಜು ಟಾರ್ಗೆಟ್
ಈ ಮನೆಯಲ್ಲಿ ಸಿಹಿ ಕಹಿ ಅನುಭವಗಳು, ಕೂಡಿಟ್ಟುಕೊಂಡ ನೆನಪುಗಳು ಬಹಳಷ್ಟಿವೆ. ಕೆಟ್ಟ ಘಟನೆಗಳು ಸಾಕಷ್ಟು ಇವೆ. ಆ ಘಟನೆಗಳನ್ನು ನೆನಪಿಸಿಕೊಂಡು ಹಳೇ ಸ್ಪರ್ಧಿಗಳು ಮಾತನಾಡಿದ್ದಾರೆ. ಉಪ್ಪಿನ ಕಾಯಿ ವಿಚಾರಕ್ಕೆ ಗೋಲ್ಡ್ ಸುರೇಶ್ ನಾಮಿನೇಟ್ ಆಗಿದ್ದನ್ನು ನೆನಪಿಸಿಕೊಂಡರೆ, ತುಂಬ ಸಲ ಮಂಜು ಅವರು ನನಗೆ ಹರ್ಟ್ ಮಾಡಿದ್ದಾರೆ ಎಂದು ಹಂಸ ಹೇಳಿದ್ದಾರೆ. ರಾಜರ ಟಾಸ್ಕ್‌ನಲ್ಲಿ ಮಂಜು ಅವರು ತಮ್ಮನ್ನು ಎಳೆದಾಡಿದ ವಿಚಾರವನ್ನು ಶಿಶಿರ್ ನೆನಪಿಸಿಕೊಂಡು ಕಪ್ಪು ಹೃದಯ ನೀಡಿದರೆ, ಯಮುನಾ ಶ್ರೀನಿಧಿಯೂ ಮಂಜು ಅವರನ್ನೇ ಟಾರ್ಗೆಟ್ ಮಾಡಿದ್ದಾರೆ.
