ಬಿಗ್‌ ಬಾಸ್‌ ಮನೆಯಲ್ಲಿ ಹನುಮಂತ ಸಖತ್‌ ಕ್ರಿಮಿನಲ್‌ ಎನ್ನುತ್ತಲೇ ಮೀಸಲಾತಿ ವಿಚಾರವನ್ನು ಬಿಚ್ಚಿಟ್ಟ ಮಾಜಿ ಸ್ಪರ್ಧಿ
ಕನ್ನಡ ಸುದ್ದಿ  /  ಮನರಂಜನೆ  /  ಬಿಗ್‌ ಬಾಸ್‌ ಮನೆಯಲ್ಲಿ ಹನುಮಂತ ಸಖತ್‌ ಕ್ರಿಮಿನಲ್‌ ಎನ್ನುತ್ತಲೇ ಮೀಸಲಾತಿ ವಿಚಾರವನ್ನು ಬಿಚ್ಚಿಟ್ಟ ಮಾಜಿ ಸ್ಪರ್ಧಿ

ಬಿಗ್‌ ಬಾಸ್‌ ಮನೆಯಲ್ಲಿ ಹನುಮಂತ ಸಖತ್‌ ಕ್ರಿಮಿನಲ್‌ ಎನ್ನುತ್ತಲೇ ಮೀಸಲಾತಿ ವಿಚಾರವನ್ನು ಬಿಚ್ಚಿಟ್ಟ ಮಾಜಿ ಸ್ಪರ್ಧಿ

Bigg Boss Kannada 11 Finale: ಬಿಗ್‌ ಬಾಸ್‌ ಕನ್ನಡ 11ರ ಫಿನಾಲೆಯಲ್ಲಿ ಟಾಪ್‌ ಆರರಲ್ಲಿ ಘಟಾನುಘಟಿ ಸ್ಪರ್ಧಿಗಳೇ ನಿಂತಿದ್ದಾರೆ. ಉಗ್ರಂ ಮಂಜು, ತ್ರಿವಿಕ್ರಮ್‌, ಹನುಮಂತ, ಭವ್ಯಾ ಗೌಡ, ಮೋಕ್ಷಿತಾ ಪೈ, ರಜತ್‌ ಪೈಕಿ ಯಾರು ಕಪ್‌ ಎತ್ತಿ ಹಿಡಿಯುವವರು ಎಂಬ ಚರ್ಚೆಗಳೂ ನಡೆಯುತ್ತಿವೆ. ಈ ನಡುವೆ ಇಬ್ಬರ ಹೆಸರನ್ನು ಸೂಚಿಸಿದ ಹಂಸಾ, ಒಬ್ಬರಿಗೆ ಕ್ರಿಮಿನಲ್‌ ಎಂದಿದ್ದಾರೆ.

ಬಿಗ್‌ ಬಾಸ್‌ ಮನೆಯಲ್ಲಿ ಹನುಮಂತ ಸಖತ್‌ ಕ್ರಿಮಿನಲ್‌ ಎಂದ ಮಾಜಿ ಸ್ಪರ್ಧಿ
ಬಿಗ್‌ ಬಾಸ್‌ ಮನೆಯಲ್ಲಿ ಹನುಮಂತ ಸಖತ್‌ ಕ್ರಿಮಿನಲ್‌ ಎಂದ ಮಾಜಿ ಸ್ಪರ್ಧಿ

Bigg Boss Kannada 11: ಬಿಗ್‌ ಬಾಸ್‌ ಕನ್ನಡ 11ರ ವಿನ್ನರ್‌ ಯಾರು ಎಂಬ ಕೌತುಕಕ್ಕೆ ಇಡೀ ಕರುನಾಡು ಕಾಯುತ್ತಿದೆ. ಸದ್ಯ ಟಾಪ್‌ ಆರರಲ್ಲಿ ಘಟಾನುಘಟಿ ಸ್ಪರ್ಧಿಗಳೇ ನಿಂತಿದ್ದಾರೆ. ಉಗ್ರಂ ಮಂಜು, ತ್ರಿವಿಕ್ರಮ್‌, ಹನುಮಂತ, ಭವ್ಯಾ ಗೌಡ, ಮೋಕ್ಷಿತಾ ಪೈ, ರಜತ್‌ ಪೈಕಿ ಯಾರು ಕಪ್‌ ಎತ್ತಿ ಹಿಡಿಯುವವರು ಎಂಬ ಚರ್ಚೆಗಳೂ ನಡೆಯುತ್ತಿವೆ. ಈ ನಡುವೆ ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ನೆಚ್ಚಿನ ಸ್ಪರ್ಧಿಗಳ ಫ್ಯಾನ್ಸ್‌, ವೋಟ್‌ಗಾಗಿ ದೊಡ್ಡ ಅಭಿಯಾನವನ್ನೇ ಆರಂಭಿಸಿದ್ದಾರೆ. ಇನ್ನು ಕೆಲವರು ಇವರೇ ಗೆಲ್ತಾರೆ ಎಂದೂ ಭವಿಷ್ಯ ನುಡಿಯುತ್ತಿದ್ದಾರೆ. ಆ ಪೈಕಿ ಮಾಜಿ ಸ್ಪರ್ಧಿ ಹಂಸ ನಾರಾಯಣಸ್ವಾಮಿ ಸಹ ಇಬ್ಬರ ಹೆಸರನ್ನು ಸೂಚಿಸಿದ್ದಾರೆ.

ಬಿಗ್‌ ಬಾಸ್‌ ಸೀಸನ್‌ 11ರಲ್ಲಿ ಹಂಸಾ ನಾರಾಯಣಸ್ವಾಮಿ ಸಹ ಸ್ಪರ್ಧಿಯಾಗಿದ್ದವರು. ಅಷ್ಟೇ ಬೇಗ ಆಚೆ ಬಂದವರು. ಹೀಗಿರುವ ಹಂಸಾ, ಈ ಸಲದ ಕಪ್‌ ಎತ್ತಿ ಹಿಡಿಯುವವರು ಯಾರು ಎಂಬ ಬಗ್ಗೆ ಮಾಧ್ಯಮಗಳಿಗೆ ಉತ್ತರಿಸಿದ್ದಾರೆ. "ವಿಕ್ರಂ ಮತ್ತು ಹನುಮಂತು, ಸುದೀಪ್‌ ಅವರ ಏಡ ಬಲ ನಿಲ್ಲುತ್ತಾರೆ. ವಿಕ್ರಂ ಮೊದಲಿಂದಲೂ ಕಷ್ಟಪಟ್ಟು ಆಗಿದ್ದಾರೆ. ಹನುಮಂತ ಅವರೂ ತುಂಬ ಚೆನ್ನಾಗಿ ಆಡಿದ್ದಾರೆ. ದೊಡ್ಡ ಅಭಿಮಾನಿ ಬಳಗವೇ ಇದೆ. ಉತ್ತರ ಕರ್ನಾಟಕ ಜನಕ್ಕೆ ಹನುಮಂತು ಗೆಲ್ಲಬೇಕು ಅನ್ನೋ ಆಸೆ ಇದೆ. ಹಾಗೆ ನೋಡಿದರೆ, ಸುದೀಪ್‌ ಸರ್‌ ಎಡ ಬಲ ಇವರಿಬ್ಬರು ಇರ್ತಾರೆ" ಎಂದಿದ್ದಾರೆ ಹಂಸಾ.

ಮನೆಯಲ್ಲಿ ಹನುಮಂತು ಪಕ್ಕಾ ಕ್ರಿಮಿನಲ್..

"ಬಿಗ್‌ ಬಾಸ್‌ ಮನೆಯಲ್ಲಿ 17 ವಾರ ಇರೋದಂದ್ರೆ ಒಂದು ಯುದ್ಧ ಗೆದ್ದು ಬಂದಂತೆ. ಬಿಗ್‌ ಬಾಸ್‌ ಮನೆಯಲ್ಲಿ ಸ್ಪರ್ಧಿಗಳಿಗೆ ಕ್ರಿಮಿನಲ್‌ ಮೈಂಡ್‌ ಸಹ ಇರಬೇಕು. ಒಂದು ವೇಳೆ ನಾನು ಜಗದೀಶ್‌ ಜತೆ ಅಲ್ಲಿಯೇ ಕಾಂಪ್ರಮೈಸ್‌ ಆಗಿ ಇದ್ದಿದ್ದರೆ, ಫಿನಾಲೆ ವರೆಗೂ ಹೋಗಿರುತ್ತಿದ್ದೆ ಎಂದು ಸಾಕಷ್ಟು ಜನ ನಾನು ಹೊರಬಂದ ಮೇಲೆ ಹೇಳಿದ್ರು. ಸದ್ಯ ಮನೆಯಲ್ಲಿ ಇರುವವರ ಪೈಕಿ ಪಕ್ಕಾ ಕ್ರಿಮಿನಲ್‌ ಅಂದ್ರೆ ಅದು ಹನುಮಂತು. ನಾವೆಲ್ಲ ಅಂದುಕೊಂಡಷ್ಟು ಮುಗ್ದರೇನು ಅಲ್ಲ. ಅಷ್ಟೇ ಸಖತ್ತಾಗಿಯೇ ಕೌಂಟರ್ ಕೊಡ್ತಿರುತ್ತಾರೆ. ಹಳ್ಳಿಯಿಂದ ಬಂದು ಘಟಾನುಘಟಿಗಳ ಜತೆಗೆ ಜಿದ್ದಾಜಿದ್ದಿಗೆ ಇಳಿದು ಗೆದ್ದು ಬಂದಿದ್ದಾರೆ ಎಂದರೆ ಅವರು ಕ್ರಿಮಿನಲ್ಲೇ" ಎಂದಿದ್ದಾರೆ.

ಹನುಮಂತುಗೆ ಸಿಂಪತಿ ವರ್ಕ್‌ ಆಗ್ತಿದೆ..

"ನಾನು ಬಿಗ್‌ಬಾಸ್‌ನಲ್ಲಿದ್ದಾಗ ಧನರಾಜ್‌ ಮತ್ತು ಹನಮಂತು ಅವರಿಬ್ಬರದ್ದೇ ಲೋಕವಾಗಿತ್ತು. ನಮ್ಮ ಜತೆ ಹೆಚ್ಚು ಮಿಂಗಲ್‌ ಆಗ್ತಿರಲಿಲ್ಲ. ಟಾಸ್ಕ್‌ ಮಾಡುವಾಗ ಹನುಮಂತು ಕಳೆದೋಗಿರುತ್ತಿದ್ದರು. ಸೈಲೆಂಟಾಗಿದ್ದುಕೊಂಡೇ ಫಿನಾಲೆವರೆಗೂ ಬಂದಿದ್ದಾರೆ. ಜನ ಯಾರನ್ನಾದರೂ ಇಷ್ಟ ಪಟ್ಟರೆ, ಅವರನ್ನು ತಲೆ ಮೇಲೆ ಹೊತ್ತು ಮೆರೆಸುತ್ತಾರೆ. ಅದಕ್ಕೆ ಹನುಮಂತುನೇ ಎಕ್ಸಾಂಪಲ್.‌ ಹನುಮಂತುವಿನ ಸಿಂಪತಿ ಪ್ಲಸ್‌ ಆಯಿತೆನೋ ಗೊತ್ತಿಲ್ಲ. ಯಾವುದೇ ಶೋನಲ್ಲಿ ನೋಡಿ, ಬಡವರ ಮನೆ ಮಕ್ಕಳು, ಹಳ್ಳಿಯಿಂದ ಬಂದವರು.. ಇಂಥ ಸಿಂಪತಿ ಇರೋರೆ ಫಿನಾಲೆವರೆಗೂ ಹೋಗ್ತಾರೆ" ಎಂದಿದ್ದಾರೆ.

ಮೀಸಲಾತಿ ಉದಾಹರಣೆ ನೀಡಿದ ಹಂಸ

"ಶಾಲಾ ಕಾಲೇಜಿನಲ್ಲಿ ಇದೆ. ಜನರಲ್‌ ಕೆಟಗೆರಿಯವ್ರು ಶಾಲೆಯ ಫೀಸ್‌ ಕಟ್ಟಬೇಕು. ಇತರೆ ಕೆಟಗೆರಿಯವರಿಗೆ ಕಡಿಮೆ ಫೀಸ್.‌ ನಾವು ಎಷ್ಟೇ ಓದಿ ದಬ್ಬಾಕಿದರೂ, ಕೆಲಸ ಸಿಗೋವಾಗ ಮೊದಲು ಅವರನ್ನೇ ಕನ್ಸಿಡರ್‌ ಮಾಡ್ತಾರೆ. ನಮ್ಮನ್ನು ಕಡೆಗಣಿಸ್ತಾರೆ. ಈ ರಿಯಾಲಿಟಿ ಶೋಗಳಲ್ಲಿಯೂ ಅದೇ ರೀತಿಯಾಗ್ತಿದೆ ಅಂತ ಅನಿಸ್ತಿದೆ. ಸಿಂಪತಿ ವರ್ಕ್‌ ಆಗ್ತಿದೆ" ಎಂದು ಹನುಮಂತು ಅವರ ಬಗ್ಗೆ ಮೀಸಲಾತಿಯ ಉದಾಹರಣೆ ಕೊಟ್ಟಿದ್ದಾರೆ ಹಂಸ. ಅಂದಹಾಗೆ, ಇದೇ ಶನಿವಾರ ಮತ್ತು ಭಾನುವಾರ ಸಂಜೆ 6 ಗಂಟೆಗೆ ಕಲರ್ಸ್‌ ಕನ್ನಡದಲ್ಲಿ ಬಿಗ್‌ ಬಾಸ್‌ ಗ್ರ್ಯಾಂಡ್‌ ಫಿನಾಲೆ ನಡೆಯಲಿದೆ.  

Whats_app_banner