ಬಿಗ್‌ ಬಾಸ್‌ ಫಿನಾಲೆಗೂ ಮುನ್ನ ಕುದುರಿದ ಲಕ್! ಹಾರ ಹಾಕಿಸಿಕೊಂಡು ಹೊಸ ಶೋ ಆಫರ್‌ಗೆ ಓಕೆ ಎಂದ ಹನುಮಂತು
ಕನ್ನಡ ಸುದ್ದಿ  /  ಮನರಂಜನೆ  /  ಬಿಗ್‌ ಬಾಸ್‌ ಫಿನಾಲೆಗೂ ಮುನ್ನ ಕುದುರಿದ ಲಕ್! ಹಾರ ಹಾಕಿಸಿಕೊಂಡು ಹೊಸ ಶೋ ಆಫರ್‌ಗೆ ಓಕೆ ಎಂದ ಹನುಮಂತು

ಬಿಗ್‌ ಬಾಸ್‌ ಫಿನಾಲೆಗೂ ಮುನ್ನ ಕುದುರಿದ ಲಕ್! ಹಾರ ಹಾಕಿಸಿಕೊಂಡು ಹೊಸ ಶೋ ಆಫರ್‌ಗೆ ಓಕೆ ಎಂದ ಹನುಮಂತು

Bigg Boss Kannada 11 Finale: ಬಿಗ್‌ ಬಾಸ್‌ ಫಿನಾಲೆ ಮುಗಿಯುವುದಕ್ಕೆ ಇನ್ನೂ ಒಂದು ದಿನ ಬಾಕಿ ಇದೆ. ಭಾನುವಾರ ಅಧಿಕೃತವಾಗಿ ಯಾರು ವಿನ್ನರ್‌ ಎಂಬ ಉತ್ತರ ಸಿಗಲಿದೆ. ಈಗ ಈ ಶೋ ಮುಗಿಯುವುದಕ್ಕೂ ಮೊದಲೇ, ಇನ್ನೊಂದು ಶೋನ ಆಫರ್‌ ಗಿಟ್ಟಿಸಿಕೊಂಡಿದ್ದಾರೆ ಹನುಮಂತ ಲಮಾಣಿ. ಅದುವೇ ಬಾಯ್ಸ್‌ ವರ್ಸಸ್‌ ಗರ್ಲ್ಸ್‌.

ಕಲರ್ಸ್‌ ಕನ್ನಡದ ಹೊಸ  ಬಾಯ್ಸ್‌ ವರ್ಸಸ್‌ ಗರ್ಲ್ಸ್‌ ಶೋಗೆ ಎಂಟ್ರಿ ಪಡೆದ ಹನುಮಂತ
ಕಲರ್ಸ್‌ ಕನ್ನಡದ ಹೊಸ ಬಾಯ್ಸ್‌ ವರ್ಸಸ್‌ ಗರ್ಲ್ಸ್‌ ಶೋಗೆ ಎಂಟ್ರಿ ಪಡೆದ ಹನುಮಂತ (Colors Kannada)

Bigg Boss Kannada 11: ಬಿಗ್‌ ಬಾಸ್‌ ಕನ್ನಡ 11ರ ಗ್ರ್ಯಾಂಡ್‌ ಫಿನಾಲೆ ಆರಂಭವಾಗಿದೆ. ಭಾನುವಾರ ಈ ಶೋ ಮುಗಿಯುತ್ತಿದ್ದಂತೆ, ಫೆಬ್ರವರಿ 1 ರಿಂದ ಹೊಸ ಶೋ ಬಾಯ್ಸ್‌ ವರ್ಸಸ್‌ ಗರ್ಲ್ಸ್‌ ಕಲರ್ಸ್‌ ಕನ್ನಡದಲ್ಲಿ ಶುರುವಾಗಲಿದೆ. ಈಗಾಗಲೇ ಪ್ರೋಮೋ ಮೂಲಕವೇ ಈ ಶೋ ಸದ್ದು ಮಾಡುತ್ತಿದೆ. ಆ ಶೋನಲ್ಲಿ ಯಾರೆಲ್ಲ ಇರಲಿದ್ದಾರೆ ಎಂಬುದಕ್ಕೂ ಉತ್ತರ ಸಿಕ್ಕಿದೆ. ಈಗ ಅಚ್ಚರಿಯ ರೀತಿಯಲ್ಲಿ ಇನ್ನೂ ನಾಲ್ಕು ಸ್ಪರ್ಧಿಗಳು ಈ ಶೋನ ಭಾಗವಾಗಿದ್ದಾರೆ. ಬಿಗ್‌ ಬಾಸ್‌ ಮುಗಿಯುವುದಕ್ಕೂ ಮುನ್ನವೇ ಹನುಮಂತ ಲಮಾಣಿ ಬಾಯ್ಸ್‌ ವರ್ಸಸ್‌ ಗರ್ಲ್ಸ್‌ ಶೋನ ಭಾಗವಾಗಲಿದ್ದಾರೆ.

ಹೆಣ್ಮಕ್ಕಳು ಮತ್ತು ಗಂಡ್ಮಕ್ಕಳ ನಡುವೆ ನಡೆಯುವ ಜಿದ್ದಾಜಿದ್ದಿನ ಅಖಾಡದಲ್ಲಿ ಗರ್ಲ್ಸ್‌ ಗ್ಯಾಂಗ್‌ನಲ್ಲಿ ಶುಭಾ ಪೂಂಜಾ ಕ್ಯಾಪ್ಟನ್‌ ಆಗಿದ್ದರೆ, ಅವರ ಟೀಮ್‌ನಲ್ಲಿ ಸ್ಪಂದನಾ, ರಮ್ಯಾ, ಶೋಭಾ ಶೆಟ್ಟಿ ಐಶ್ವರ್ಯ ಶಿಂಧೋಗಿ, ಸ್ಫೂರ್ತಿ ಪ್ರೋಮೋದಲ್ಲಿ ಕಾಣಿಸಿಕೊಂಡಿದ್ದರು. ಇತ್ತ ಬಾಯ್ಸ್‌ ಟೀಮ್‌ಗೆ ವಿನಯ್ ಗೌಡ ಕ್ಯಾಪ್ಟನ್‌ ಆಗಿದ್ದರೆ, ಅವರ ಜತೆಗೆ ಲಾಯರ್‌ ಜಗದೀಶ್, ಮಂಜು ಪಾವಗಡ, ಸೂರಜ್, ಪ್ರಶಾಂತ್, ವಿವೇಕ್‌ ಸಿಂಹ ತಂಡದಲ್ಲಿದ್ದಾರೆ. ಈಗ ಇದೇ ಟೀಮ್‌ಗೆ ಅಧಿಕೃತವಾಗಿ ಇನ್ನೂ ಹಲವು ಕಲಾವಿದರು ಎಂಟ್ರಿಕೊಟ್ಟಿದ್ದಾರೆ. ಅವರೆಲ್ಲರೂ ಬಿಗ್‌ ಬಾಸ್‌ ಸ್ಪರ್ಧಿಗಳೇ ಎಂಬುದು ವಿಶೇಷ.

ಸದ್ಯ ಬಿಗ್‌ ಬಾಸ್‌ ಮನೆಯಲ್ಲಿ ಹನುಮಂತ ಲಮಾಣಿ, ಭವ್ಯಾ ಗೌಡ, ರಜತ್‌ ಕಿಶನ್‌, ಮೋಕ್ಷಿತಾ ಪೈ, ಉಗ್ರಂ ಮಂಜು, ತ್ರಿವಿಕ್ರಂ ಫಿನಾಲೆಯ ಹತ್ತಿರದಲ್ಲಿದ್ದಾರೆ. ಕಪ್‌ನ ಸನಿಹ ಬಂದಿದ್ದಾರೆ. ಈ ನಡುವೆಯೇ ಯಾರು ಶನಿವಾರದ ಸಂಚಿಕೆಯಲ್ಲಿ ಹೊರಬರಬಹುದು ಎಂಬ ಕೌತುಕದ ಉತ್ತರಗಳೂ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ. ಹೀಗಿರುವಾಗಲೇ ಬಾಯ್ಸ್‌ ವರ್ಸಸ್‌ ಗರ್ಲ್ಸ್‌ ಶೋಗೆ ಹನುಮಂತು ಜತೆಗೆ ರಜತ್‌, ಭವ್ಯಾ ಗೌಡ ಮತ್ತು ಧನರಾಜ್‌ ಆಯ್ಕೆಯಾಗಿದ್ದಾರೆ. ಹಾರ ಹಾಕುವ ಮೂಲಕ ಆ ಶೋನ ಸ್ಪರ್ಧಿಗಳು ಇವರೆಲ್ಲರನ್ನು ಬರಮಾಡಿಕೊಂಡಿದ್ದಾರೆ.

ಬಿಗ್‌ ಬಾಸ್‌ ಮನೆಯಲ್ಲಿ ನಿವೇದಿತಾ ಗೌಡ!

ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರ ಗ್ರ್ಯಾಂಡ್‌ ಫಿನಾಲೆ ಗ್ಯಾಪ್‌ನಲ್ಲಿಯೇ ಬಿಗ್‌ ಬಾಸ್‌ ಮನೆಗೆ ಎಂಟ್ರಿಕೊಟ್ಟಿದ್ದಾರೆ ನಿವೇದಿತಾ ಗೌಡ. ಈ ಹಿಂದೆ ಕಲರ್ಸ್‌ ಕನ್ನಡದ ಬಿಗ್‌ ಬಾಸ್‌ ಸೇರಿ ಹಲವು ಶೋಗಳಲ್ಲಿ ಕಾಣಿಸಿಕೊಂಡಿದ್ದ ನಿವೇದಿತಾ ಗೌಡ, ಇನ್ನೇನು ಮುಂದಿನ ವಾರದಿಂದ (ಫೆ. 1) ಶುರುವಾಗುವ ಬಾಯ್ಸ್‌ ವರ್ಸಸ್‌ ಗರ್ಲ್ಸ್‌ ಶೋನಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.

ಯಾರು ಕಪ್‌ ಗೆಲ್ಲಬೇಕು? ಮಾಜಿ ಸ್ಪರ್ಧಿಗಳು ಹೇಳಿದ್ದು ಹೀಗೆ

ಬಿಗ್‌ ಬಾಸ್‌ ಮನೆಯಲ್ಲಿ ಉಳಿದ ಆರು ಸ್ಪರ್ಧಿಗಳಲ್ಲಿ ಯಾರು ಗೆಲ್ಲಬೇಕು? ಈ ಪ್ರಶ್ನೆಯನ್ನು ಕಿಚ್ಚ ಸುದೀಪ್‌, ಈ ಸೀಸನ್‌ನ ಮಾಜಿ ಸ್ಪರ್ಧಿಗಳ ಬಳಿ ಕೇಳಿದ್ದಾರೆ. ಆಗ ಎಲ್ಲರಿಂದ ಅಚ್ಚರಿಯ ಉತ್ತರಗಳು ಬಂದಿವೆ. ತ್ರಿವಿಕ್ರಂ ಗೆಲ್ಲಬೇಕು ಎಂದು ಐವರು ತಮ್ಮ ಮನದಾಸೆ ಹೇಳಿದರೆ, ಇನ್ನೂ ಐದು ವೋಟ್‌ಗಳು ಹನುಮಂತುಗೆ ಸಿಕ್ಕಿವೆ. ಮೋಕ್ಷಿತಾ ಗೆಲ್ಲಲೇಬಾರದು ಎಂದು ಏಳು ವೋಟ್‌ ಬಂದಿವೆ. ಇನ್ನೇನು ಸೀಸನ್‌ 11ರ ವಿನ್ನರ್‌ ಯಾರು ಎಂಬುದು ಕೆಲವೇ ಗಂಟೆಗಳಲ್ಲಿ ಗೊತ್ತಾಗಲಿದೆ.

Whats_app_banner