Bigg Boss Kannada 11: ಬಿಗ್‌ ಬಾಸ್‌ ಫಿನಾಲೆ ಸನಿಹಕೆ ಬಂದು ಎಲಿಮಿನೇಟ್‌ ಆದ ಗೌತಮಿ ಜಾಧವ್‌, ಉಗ್ರಂ ಮಂಜು ಕಣ್ಣೀರು
ಕನ್ನಡ ಸುದ್ದಿ  /  ಮನರಂಜನೆ  /  Bigg Boss Kannada 11: ಬಿಗ್‌ ಬಾಸ್‌ ಫಿನಾಲೆ ಸನಿಹಕೆ ಬಂದು ಎಲಿಮಿನೇಟ್‌ ಆದ ಗೌತಮಿ ಜಾಧವ್‌, ಉಗ್ರಂ ಮಂಜು ಕಣ್ಣೀರು

Bigg Boss Kannada 11: ಬಿಗ್‌ ಬಾಸ್‌ ಫಿನಾಲೆ ಸನಿಹಕೆ ಬಂದು ಎಲಿಮಿನೇಟ್‌ ಆದ ಗೌತಮಿ ಜಾಧವ್‌, ಉಗ್ರಂ ಮಂಜು ಕಣ್ಣೀರು

ಗೌತಮಿ ಜಾಧವ್‌ ಅವರ 111 ದಿನಗಳ ಬಿಗ್‌ ಬಾಸ್‌ ಆಟಕ್ಕೆ ಬ್ರೇಕ್‌ ಬಿದ್ದಿದೆ. ಶನಿವಾರದ ಕಿಚ್ಚನ ಪಂಚಾಯ್ತಿಯಲ್ಲಿ ಉಗ್ರಂ ಮಂಜು, ಭವ್ಯಾ ಗೌಡ, ಧನರಾಜ್‌, ರಜತ್‌, ಗೌತಮಿ ಪೈಕಿ ಪಾಸಿಟಿವ್‌ ಪಾಠ ಮಾಡ್ತಿದ್ದ ಗೌತಮಿ ಅವರೇ ಬಿಗ್ ಮನೆಯಿಂದ ಎಲಿಮಿನೇಟ್‌ ಆಗಿದ್ದಾರೆ.

ಎಲಿಮಿನೇಟ್‌ ಆದ ಗೌತಮಿ ಜಾದವ್‌
ಎಲಿಮಿನೇಟ್‌ ಆದ ಗೌತಮಿ ಜಾದವ್‌

Bigg Boss Kannada 11: ಬಿಗ್‌ ಬಾಸ್‌ ಕನ್ನಡ 11ರ ಕೊನೇ ಪಂಚಾಯ್ತಿಯ ಮೊದಲ ಏಪಿಸೋಡ್‌ (ಜ. 18) ಮುಕ್ತಾಯವಾಗಿದೆ. ವಾರದ ಮಧ್ಯೆ ಒಬ್ಬರು ಎಲಿಮಿನೇಟ್‌ ಆಗಬೇಕಿತ್ತು. ಆದರೆ, ಟಾಸ್ಕ್‌ ವೇಳೆ ಧನರಾಜ್‌ ಕಳ್ಳಾಟ ಆಡಿದ್ದರಿಂದ, ಮಧ್ಯ ಪ್ರವೇಶಿಸಿದ ಬಿಗ್‌ ಬಾಸ್‌, ಎಲಿಮಿನೇಷನ್‌ ಪ್ರಕ್ರಿಯೆಯನ್ನೇ ತಡೆಹಿಡಿದರು. ಅಲ್ಲಿಗೆ ಮನೆಯಿಂದ ಹೊರ ಹೋಗಲು ನನ್ನನ್ನು ನಾನೇ ನಾಮಿನೇಟ್‌ ಮಾಡಿಕೊಳ್ಳುತ್ತೇನೆ ಎಂದಿದ್ದರು ಧನರಾಜ್‌. ಅದರಂತೆ, ಶನಿವಾರದ ಕಿಚ್ಚನ ಪಂಚಾಯ್ತಿಯಲ್ಲಿ ಮೊದಲ ವಿಕೆಟ್‌ ಬಿದ್ದಿದೆ. ಪಾಸಿಟಿವ್‌ ಪಾಠ ಮಾಡ್ತಿದ್ದ ಗೌತಮಿ ಜಾಧವ್‌ ಮನೆಯಿಂದ ಆಚೆ ಬಂದಿದ್ದಾರೆ.

ಭವ್ಯಾ ಗೌಡ, ಧನರಾಜ್‌, ಗೌತಮಿ, ರಜತ್‌, ಉಗ್ರಂ ಮಂಜು ಈ ವಾರ ಬಿಗ್‌ ಬಾಸ್‌ ಮನೆಯಿಂದ ಹೊರ ಹೋಗಲು ನಾಮಿನೇಟ್‌ ಆಗಿದ್ದರು. ಈ ಐವರನ್ನು ಆಕ್ಟಿವಿಟಿ ರೂಮ್‌ಗೆ ಕರೆಸಿದ ಸುದೀಪ್‌, ತಮ್ಮ ಎದುರಿನ ಸೂಟ್‌ಕೇಸ್‌ ತೆರೆಯಲು ಹೇಳಿದರು. ಈ ಸೂಟ್‌ಕೇಸ್‌ ಒಳಗಡೆ ನಿಮ್ಮ ಭವಿಷ್ಯ ಇದೆ. ಯಾರು ಮೊದಲು ಓಪನ್‌ ಮಾಡ್ತೀರಿ ಎಂದು ಕೇಳಿದ್ದಾರೆ ಸುದೀಪ್.‌ ಮೊದಲಿಗೆ ರಜತ್‌ ಸೂಟ್‌ಕೇಸ್‌ ಓಪನ್‌ ಮಾಡಿದ್ದಾರೆ. ಅದರಲ್ಲಿ ಸೇಫ್‌ ಎಂದು ಬರೆದ ಕಾಗದ ಸಿಕ್ಕಿದೆ. ಅಲ್ಲಿಗೆ ರಜತ್‌ ಸೇಫ್‌ ಆಗಿದ್ದಾರೆ.‌

ಅದಾದ ಬಳಿಕ ಉಗ್ರಂ ಮಂಜು ಸಹ ಸೂಟ್‌ಕೇಸ್‌ ತೆರೆದಿದ್ದಾರೆ. ಅವರೂ ಸೇಫ್ ಆಗಿದ್ದಾರೆ. ಇದಾದ ಮೇಲೆ ಧನರಾಜ್‌, ಗೌತಮಿ, ಭವ್ಯಾ ಗೌಡ ಮೂವರಿಗೂ ಏಕಕಾಲದಲ್ಲಿ ಸೂಟ್‌ಕೇಸ್‌ ತೆರೆಯಲು ಹೇಳಿದ್ದಾರೆ. ಮೂವರ ಪೈಕಿ ಧನರಾಜ್‌ ಮತ್ತು ಭವ್ಯಾ ಗೌಡ ಸೇವ್‌ ಆಗಿದ್ದಾರೆ. ಕೊನೆಗೆ ಗೌತಮಿಗೆ ಎವಿಕ್ಟೆಡ್‌ ಎಂಬ ಬರಹ ಸಿಕ್ಕಿದೆ. ಅಲ್ಲಿಗೆ 111 ದಿನಗಳ ಗೌತಮಿ ಬಿಗ್‌ ಬಾಸ್‌ ಆಟಕ್ಕೆ ಬ್ರೇಕ್‌ ಬಿದ್ದಿದೆ. ಇತ್ತ ಗೌತಮಿ ಎಲಿಮಿನೇಟ್‌ ಆಗುತ್ತಿದ್ದಂತೆ, ಉಗ್ರಂ ಮಂಜು ಕರಗಿದ್ದಾರೆ. ತಲೆ ತಗ್ಗಿಸಿ ಕೊಂಚ ಭಾವುಕರಾಗಿದ್ದಾರೆ.

ಈಗಾಗಲೇ ಸೇವ್‌ ಆಗಿ ಉಳಿದವರ ಪೈಕಿ ತ್ರಿವಿಕ್ರಮ್, ಹನುಮಂತು ಮತ್ತು ಮೋಕ್ಷಿತಾ ನೇರವಾಗಿ ಫಿನಾಲೆ ವಾರಕ್ಕೆ ಎಂಟ್ರಿ ಪಡೆದಿದ್ದಾರೆ. ಇವರನ್ನು ಬಿಟ್ಟು ಉಗ್ರಂ ಮಂಜು, ರಜತ್‌, ಧನರಾಜ್‌, ಭವ್ಯಾ ಗೌಡ ಪೈಕಿ ಭಾನುವಾರ ಒಬ್ಬರು ಎಲಿಮಿನೇಟ್‌ ಆಗಲಿದ್ದಾರೆ. ಅವರು ಯಾರು ಎಂಬ ಕೌತುಕಕ್ಕೆ ಭಾನುವಾರವೇ ಉತ್ತರ ಸಿಗಲಿದೆ.

Whats_app_banner