Bigg Boss Winner: ದಾಖಲೆಯ 5 ಕೋಟಿ ವೋಟ್ ಪಡೆದು ಕಪ್ ಎತ್ತಿದ ಸ್ಪರ್ಧಿ ಇವರೇ! ರನ್ನರ್ ಅಪ್ ಆದವರು ಯಾರು? ಇಲ್ಲಿದೆ ಮಾಹಿತಿ
Bigg Boss Kannada 11 Grand Finale: ಬಿಗ್ ಬಾಸ್ ಕನ್ನಡ 11 ಗ್ರ್ಯಾಂಡ್ ಫಿನಾಲೆಯಲ್ಲಿ 17 ವಾರಗಳ ಕೌತುಕಕ್ಕೆ ಕೊನೆಗೂ ಬ್ರೇಕ್ ಬಿದ್ದಿದೆ. ಈ ಸೀಸನ್‌ನ ವಿನ್ನರ್ ಯಾರು ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಹಾಗಾದರೆ, ಈ ಸಲ ಕಪ್ ಎತ್ತಿ ಹಿಡಿದವರು ಯಾರು? ರನ್ನರ್ ಅಪ್ ಆದವರು ಯಾರು? ಇಲ್ಲಿದೆ ಮಾಹಿತಿ.

Bigg Boss Kannada 11 Grand Finale: ಈ ವರೆಗಿನ 10 ಸೀಸನ್‌ಗಳ ತೂಕ ಒಂದೆಡೆಯಾದರೆ, 11ನೇ ಸೀಸನ್‌ನ ತೂಕ ಅದೆಲ್ಲದಕ್ಕಿಂತ ಹೆಚ್ಚು. ಸೀಸನ್‌ನಿಂದ ಸೀಸನ್‌ಗೆ ಹೆಚ್ಚೆಚ್ಚು ವೀಕ್ಷಕರನ್ನು ಸೆಳೆದುಕೊಳ್ಳುತ್ತಿರುವ ಈ ರಿಯಾಲಿಟಿ ಶೋ, 11ನೇ ಆವೃತ್ತಿಯಲ್ಲಿ ಹಲವು ದಾಖಲೆಗಳನ್ನು ತನ್ನದಾಗಿಸಿಕೊಂಡಿದೆ. ಮೊದಲೆಲ್ಲ ಲಕ್ಷ ಲಕ್ಷ ವೋಟ್‌ಗಳು ಸಂದಾಯವಾಗುತ್ತಿದ್ದರೆ, ಈಗ ಅದು ಕೋಟಿಯ ಗಡಿ ದಾಟಿದೆ. ಇಂತಿಪ್ಪ 11ನೇ ಸೀಸನ್ ಈಗ ಅಂತಿಮ ಘಟ್ಟಕ್ಕೆ ಬಂದು ನಿಂತಿದ್ದು, ಉಳಿದ ಐವರು ಸ್ಪರ್ಧಿಗಳಲ್ಲಿ ಒಬ್ಬ ವಿಜೇತನ ಘೋಷಣೆ ಆಗಿದೆ. ವಿನ್ನರ್ ಯಾರು? ಇಲ್ಲಿದೆ ಮಾಹಿತಿ.
ಬಿಗ್ ಬಾಸ್ ಶುರುವಾಗಿ 17 ವಾರಗಳು ಇಂದಿಗೆ ಮುಗಿಯಲಿದೆ. ಅಂದಿನಿಂದ 20 ಸ್ಪರ್ಧಿಗಳು ಈ ಶೋನಲ್ಲಿ ತಮ್ಮ ಆಟ ಆಡಿದ್ದಾರೆ. ಆ ಪೈಕಿ 15 ಮಂದಿ ಎಲಿಮಿನೇಟ್ ಆಗಿ ಹೊರನಡೆದಿದ್ದಾರೆ. ಇಂದಿಗ ಅಂತಿಮವಾಗಿ ಕೇವಲ ಐವರು ಸ್ಪರ್ಧಿಗಳು ಮಾತ್ರ ಬಿಗ್ ಬಾಸ್ ಫಿನಾಲೆಯಲ್ಲಿದ್ದಾರೆ. ಶನಿವಾರದ ಸಂಚಿಕೆಯಲ್ಲಿ ಭವ್ಯಾ ಗೌಡ ಐದನೇ ರನ್ನರ್ ಅಪ್ ಆಗಿ ಮನೆಯಿಂದ ಹೊರನಡೆದರೆ, ಉಳಿದಂತೆ ಭಾನುವಾರದ ಏಪಿಸೋಡ್‌ಗೆ ರಜತ್, ಉಗ್ರಂ ಮಂಜು, ಮೋಕ್ಷಿತಾ ಪೈ, ತ್ರಿವಿಕ್ರಮ್ ಮತ್ತು ಹನುಮಂತ ಕಾಲಿಟ್ಟಿದ್ದಾರೆ. ಈಗ ಈ ಐವರ ಪೈಕಿ ಒಬ್ಬರು ಟ್ರೋಫಿ ಎತ್ತಿ ಹಿಡಿದಿದ್ದಾರೆ.
ಟಾಪ್ ಆರರಲ್ಲಿ ಅತೀ ಕಡಿಮೆ ವೋಟ್ ಎಷ್ಟು ಮತ್ತು ಮೊದಲ ಸ್ಥಾನಕ್ಕೆ ಬಂದ ವೋಟ್ ಎಷ್ಟು ಎಂಬುದನ್ನು ಕಿಚ್ಚ ಸುದೀಪ್ ಶನಿವಾರದ ಸಂಚಿಕೆಯಲ್ಲಿಯೇ ರಿವೀಲ್ ಮಾಡಿದ್ದಾರೆ. ಆ ಪೈಕಿ, 5 ಕೋಟಿ 23 ಲಕ್ಷ 89 ಸಾವಿರ 318 ವಿಜೇತ ಸ್ಪರ್ಧಿಗೆ ವೋಟ್ ಬಂದಿದ್ದರೆ, ಬಿಗ್ ಬಾಸ್ ಮನೆಯಿಂದ ಹೊರಬಂದ ಭವ್ಯಾಗೆ 64 ಲಕ್ಷ 48 ಸಾವಿರ 853 ಮತಗಳು ಬಿದ್ದಿದ್ದವು. ಈ ಮೂಲಕ ಅತ್ಯಂತ ಕಡಿಮೆ ವೋಟ್ ಪಡೆದು ಕೊನೇ ಕ್ಷಣದಲ್ಲಿ ಕಪ್ ಎತ್ತಿ ಹಿಡಿಯುವ ಆಸೆಯನ್ನು ಭವ್ಯಾ ಕೈ ಚೆಲ್ಲಿದ್ದಾರೆ.
ಯಾರಿಗೆ ಒಲಿಯಿತು ಬಿಗ್ ಬಾಸ್ ಪಟ್ಟ
ಟಾಪ್ ಐವರಲ್ಲಿ ರಜತ್, ಉಗ್ರಂ ಮಂಜು, ಮೋಕ್ಷಿತಾ ಪೈ, ತ್ರಿವಿಕ್ರಮ್ ಮತ್ತು ಹನುಮಂತ ಉಳಿದಿದ್ದಾರೆ. ಕೆಲ ಮೂಲಗಳ ಪ್ರಕಾರ ವಿಜೇತರ ಮಾಹಿತಿ ಇದೀಗ ಎಚ್‌ಟಿ ಕನ್ನಡಕ್ಕೆ ಲಭ್ಯವಾಗಿದ್ದು. ಇವರಲ್ಲಿ 5 ಕೋಟಿ ಪ್ಲಸ್ ವೋಟ್ ಪಡೆದು ದಾಖಲೆಯ ಗೆಲುವು ಸಾಧಿಸಿರುವುದು ಹಳ್ಳಿ ಹಕ್ಕಿ ಹನುಮಂತ ಲಮಾಣಿ ಎನ್ನಲಾಗ್ತಿದೆ! ರಿಯಾಲಿಟಿ ಶೋಗಳ ಮೂಲಕವೇ ಗುರುತಿಸಿಕೊಂಡಿದ್ದ ಹನುಮಂತ, ಈಗ ಅತಿ ದೊಡ್ಡ ರಿಯಾಲಿಟಿ ಶೋಗಳಲ್ಲಿ ಒಂದೆನಿಸಿರುವ ಬಿಗ್ ಬಾಸ್ ಸಹ ಗೆದ್ದು ಬೀಗಿದ್ದಾರೆ. ಅದೇ ರೀತಿ ಹನುಮಂತು ವಿನ್ನರ್ ಆದರೆ, ಮೊದಲ ರನ್ನರ್ ಆಗಿ ಉಗ್ರಂ ಮಂಜು, ಎರಡನೇ ರನ್ನರ್ ಆಗಿ ಮೋಕ್ಷಿತಾ, ಮೂರನೇ ರನ್ನರ್ ಆಗಿ ತ್ರಿವಿಕ್ರಂ ಮತ್ತು ನಾಲ್ಕನೇ ರನ್ನರ್ ಆಗಿ ರಜತ್ ಹೊರಹೊಮ್ಮಿದ್ದಾರೆ ಎನ್ನಲಾಗ್ತಿದೆ. ಈ ಬಗ್ಗೆ ಇಂದು ರಾತ್ರಿ 11 ಗಂಟೆ ಕಲರ್ಸ್ ಕನ್ನಡದಲ್ಲಿ ಅಧಿಕೃತ ಘೋಷಣೆ ಆಗಲಿದೆ.
