
Bigg Boss 11 Kannada Live: ಬಿಗ್‌ಬಾಸ್ ಕನ್ನಡ ಗ್ರ್ಯಾಂಡ್ ಫಿನಾಲೆಗೆ ತೆರೆ; ಹನುಮಂತ ವಿನ್ನರ್, ತ್ರಿವಿಕ್ರಮ್ ರನ್ನರ್
Bigg Boss Kannada 11 Grand Finale LIVE Updates: ಕಿಚ್ಚ ಸುದೀಪ್ ನಡೆಸಿಕೊಡುವ ಬಿಗ್‌ಬಾಸ್ ಕನ್ನಡ ಸೀಸನ್ 11ರ ವಿನ್ನರ್ ಮತ್ತು ರನ್ನರ್ ಅಪ್ ಯಾರೆಂದು ಸದ್ಯದಲ್ಲಿಯೇ ತಿಳಿಯಲಿದೆ. ಹನುಮಂತ, ತ್ರಿವಿಕ್ರಮ್, ಮೋಕ್ಷಿತಾ ಪೈ, ರಜತ್, ಉಗ್ರಂ ಮಂಜು ದೊಡ್ಮನೆ ಕಣದಲ್ಲಿರುವ ಐದು ಫೈನಲಿಸ್ಟ್‌ಗಳಾಗಿದ್ದಾರೆ. ಈಗಾಗಲೇ ಕಾರ್ಯಕ್ರಮ ಆರಂಭವಾಗಿದೆ.
Sun, 26 Jan 202506:18 PM IST
ಬಿಗ್ ಬಾಸ್ ಟ್ರೋಪಿ ತನ್ನದಾಗಿಸಿಕೊಂಡ ಹನುಮಂತ
ಹನುಮಂತ ಬಿಗ್ ಬಾಸ್ ಸೀಸನ್ 11ರ ಗೆಲುವು ತನ್ನದಾಗಿಸಿಕೊಂಡಿದ್ದಾರೆ. ತ್ರಿವಿಕ್ರಂ ಮೊದಲ ರನರ್ ಅಪ್ ಆಗಿದ್ಧಾರೆ
Sun, 26 Jan 202506:00 PM IST
ಟಾಪ್ 3 ಸ್ಥಾನ ಪಡೆದುಕೊಂಡ ರಜತ್; ವೈಲ್ಡ್‌ಕಾರ್ಡ್ ಎಂಟ್ರಿ ಆದ್ರೂ ಆಟ ಮಾತ್ರ ಜೋರು
ಬಿಗ್ ಬಾಸ್ ವೇದಿಕೆ ಮೇಲೆ 10 ಲಕ್ಷ ಬಹುಮಾನ ಗೆದ್ದಿದ್ದಾರೆ
Sun, 26 Jan 202505:45 PM IST
ಬಿಗ್ ಬಾಸ್ ಮನೆಯಲ್ಲಿ ಜನಪದ ಕಂಪು
ಬಿಗ್ ಬಾಸ್ ಮನೆಯಲ್ಲಿ ಹನುಮಂತ ಹಾಗೂ ಅವರ ತಂಡದಿಂದ ಭಜನಾ ಕಾರ್ಯಕ್ರಮ ನಡೆಯುತ್ತಿದೆ
Sun, 26 Jan 202504:58 PM IST
ಬಿಗ್ ಬಾಸ್ ವೇದಿಕೆಯಲ್ಲಿ ಕಿಚ್ಚ ಭಾವುಕ
ಬಿಗ್ ಬಾಸ್ ವೇದಿಕೆಯಲ್ಲಿ ಮೌನ ಆವರಿಸಿದೆ. ಪುಟ್ಟ ಮಗು ಹಾಗೂ ಕಲಾವಿದರು ಸುದೀಪ್ ಅವರ ಅಮ್ಮನನ್ನು ಕಾಲ್ಪನಿಕವಾಗಿ ವೇದಿಕೆಗೆ ತಂದಿದ್ದಾರೆ. ಯೋಗರಾಜ್ ಭಟ್ ನಿರೂಪಣೆ ಮಾಡುತ್ತಿದ್ದಾರೆ
Sun, 26 Jan 202504:29 PM IST
ಮೋಕ್ಷಿತಾ ಬಿಗ್ ಬಾಸ್ ವೇದಿಯಮೇಲೆ ಪಡೆದ ಹಣ ಎಷ್ಟು?
8 ಲಕ್ಷ ಮೊತ್ತವನ್ನು ಪಡೆದುಕೊಂಡಿದ್ದಾರೆ
Sun, 26 Jan 202504:18 PM IST
ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಡಲಿದ್ದಾರೆ ಸುದೀಪ್
ಇದು ಸುದೀಪ್ ನಿರೂಪಣೆಯ ಕೊನೆಯ ಬಿಗ್ ಬಾಸ್ ಸೀಸನ್ ಆಗಿದ್ದು, ಕೊನೆಗುಳಿದ 3 ಸ್ಪರ್ಧಿಗಳನ್ನು ವೇದಿಕೆಗೆ ಕರೆತರಲು ಅವರೇ ಬಿಗ್ ಬಾಸ್ ಮನೆಗೆ ಹೋಗುತ್ತಿದ್ದಾರೆ. ಸುದೀಪ್ ಅವರ ತಂದೆ ಕೂಡ ಲೈವ್ ಆಗಿ ಬಿಗ್ ಬಾಸ್ ನೋಡಲು ಬಂದಿದ್ದಾರೆ.
Sun, 26 Jan 202504:17 PM IST
ಶಿಶಿರ್ ಮೋಕ್ಷಿತಾ ಡಾನ್ಸ್
ಬಿಗ್ ಬಾಸ್ ವೇದಿಕೆಯಲ್ಲಿ ಶಿಶಿರ್ ಹಾಗೂ ಐಶ್ವರ್ಯ ಡಾನ್ಸ್ ಮಾಡಿದ್ದಾರೆ
Sun, 26 Jan 202504:09 PM IST
ಬಿಗ್ ಬಾಸ್ ಮನೆಯಿಂದ ಮೋಕ್ಷಿತಾ ಔಟ್
ಬಿಗ್ ಬಾಸ್ ಮನೆಯಿಂದ ಮೋಕ್ಷಿತಾ ಹೊರಬಂದಿದ್ದಾರೆ. ಇನ್ನುಳಿದವರು ತ್ರಿವಿಕ್ರಂ, ಹನುಮಂತ, ರಜತ್
Sun, 26 Jan 202503:59 PM IST
ಬಿಗ್ ಬಾಸ್ ವೇದಿಕೆಯಲ್ಲಿ 'ಯಜಮಾನ'
ಬಿಗ್ ಬಾಸ್ ವೇದಿಕೆಯಲ್ಲಿ "ಯಜಮಾನ' ಧಾರಾವಾಹಿ ನಾಯಕಿ ಹಾಗೂ ನಾಯಕ ನೃತ್ಯ ಮಾಡಿ ರಂಜಿಸಿದ್ದಾರೆ.
Sun, 26 Jan 202503:49 PM IST
ಬಿಗ್ ಬಾಸ್ ಫಿನಾಲೆಯಲ್ಲಿಯಲ್ಲಿ ಗಿಚ್ಚಿ ಗಿಲಿಗಿಲಿ ತಂಡದಿಂದ ಡ್ರಾಮಾ
ಬಿಗ್ ಬಾಸ್ ಮನೆಯಲ್ಲಿ ನಡೆದ ಕೆಲ ಸನ್ನಿವೇಷಗಳನ್ನು ನಾಟಕದ ರೂಪದಲ್ಲಿ ಕೆಲ ಕಲಾವಿದರು ನಾಟಕದ ರೂಪದಲ್ಲಿ ಬಿಗ್ ಬಾಸ್ ವೇದಿಕೆಯಲ್ಲಿ ಅಭಿನಯಿಸಿದ್ದಾರೆ.
Sun, 26 Jan 202503:11 PM IST
ಬಿಗ್ ಬಾಸ್ ಮನೆಯಿಂದ ಉಗ್ರಂ ಮಂಜು ಔಟ್
ಬಿಗ್ ಬಾಸ್ ಮನೆಯಿಂದ ಉಗ್ರಂ ಮಂಜು ಹೊರಬಿದ್ದಿದ್ದಾರೆ. ಒಟ್ಟೂ ಮೂರುಲಕ್ಷದ ಐವತ್ತು ಸಾವಿರ ರೂಪಾಯಿ ಪಡೆದುಕೊಂಡಿದ್ದಾರೆ.
Sun, 26 Jan 202502:41 PM IST
ಬಿಗ್ ಬಾಸ್ ನೀಡಿದ ಆಫರ್ ನಿರಾಕರಿಸಿದ ಸ್ಪರ್ಧಿಗಳು
ಬಿಗ್ ಬಾಸ್ 20 ಲಕ್ಷ ನೀಡುತ್ತೇನೆ ಎಂದು ಆಫರ್ ನೀಡಿದರೂ, ಎಲ್ಲ ಸ್ಪರ್ಧಿಗಳು ಅದನ್ನು ನಿರಾಕರಿಸಿ ಟ್ರೋಪಿ ಪಡೆಯಬೇಕು ಎಂದು ನಿರ್ಧರಿಸಿದ್ದಾರೆ.
Sun, 26 Jan 202502:19 PM IST
ಬಿಗ್ ಬಾಸ್ ವೇದಿಕೆಯಲ್ಲಿ ಗೌತಮಿ ಡಾನ್ಸ್
ಸಖಿಯೇ, ಸಖಿಯೇ ಹಾಡಿಗೆ ಗೌತಮಿ ನೃತ್ಯ ಮಾಡಿದ್ದಾರೆ.
Sun, 26 Jan 202501:27 PM IST
ಆರಂಭಗಿದೆ ಬಿಗ್ ಬಾಸ್ ಫಿನಾಲೆ; ಔಟ್ ಆದ ಯಾವ ಸ್ಪರ್ಧಿ ಒಳಗಿರಬೇಕಿತ್ತು ಎಂಬ ಚರ್ಚೆ
ಬಿಗ್ ಬಾಸ್ ಫಿನಾಲೆ ಆರಂಭವಾಗಿದೆ. ಬಿಗ್ ಬಾಸ್ ಫಿನಾಲೆಗೆ ಎಂಟ್ರಿಕೊಟ್ಟಿರುವ ಸ್ಪರ್ಧಿಗಳು ಹಾಗೂ ಬಿಗ್ ಬಾಸ್ ಮನೆಯಿಂದ ಹೊರಗಿರುವ ಸ್ಪರ್ಧಿಗಳ ನಡುವೆ ಮಾತುಕತೆ ನಡೆಯುತ್ತಿದೆ. ಯಾವ ಸ್ಪರ್ಧಿ ಇನ್ನೂ ಬಿಗ್ ಬಾಸ್ ಮನೆಯಲ್ಲಿರಬೇಕಿತ್ತು? ಫಿನಾಲೆಗೆ ಬರಬೇಕಿತ್ತು ಎಂಬ ಪ್ರಶ್ನೆಯನ್ನು ಸುದೀಪ್ ಕೇಳಿದ್ದಾರೆ.
Sun, 26 Jan 202501:02 PM IST
Bigg Boss Winner: ದಾಖಲೆಯ 5 ಕೋಟಿ ವೋಟ್ ಪಡೆದು ಕಪ್ ಎತ್ತಿದ ಸ್ಪರ್ಧಿಯ ಕುರಿತು ಹೀಗಿದೆ ವದಂತಿ
ಟಾಪ್ ಐವರಲ್ಲಿ ರಜತ್, ಉಗ್ರಂ ಮಂಜು, ಮೋಕ್ಷಿತಾ ಪೈ, ತ್ರಿವಿಕ್ರಮ್ ಮತ್ತು ಹನುಮಂತ ಉಳಿದಿದ್ದಾರೆ. ಕೆಲ ಮೂಲಗಳ ಪ್ರಕಾರ ವಿಜೇತರ ಮಾಹಿತಿ ಇದೀಗ ಎಚ್‌ಟಿ ಕನ್ನಡಕ್ಕೆ ಲಭ್ಯವಾಗಿದ್ದು. ಇವರಲ್ಲಿ 5 ಕೋಟಿ ಪ್ಲಸ್ ವೋಟ್ ಪಡೆದು ದಾಖಲೆಯ ಗೆಲುವು ಸಾಧಿಸಿರುವುದು ಹಳ್ಳಿ ಹಕ್ಕಿ ಹನುಮಂತ ಲಮಾಣಿ ಎನ್ನಲಾಗ್ತಿದೆ! ಈ ಕುರಿತ ವಿಶೇಷ ವರದಿ ಓದಲು ಇಲ್ಲಿ ಕ್ಲಿಕ್ ಮಾಡಿ
Sun, 26 Jan 202501:00 PM IST
ಫಿನಾಲೆ ಹೊತ್ತಲ್ಲೂ ಹಾಡಿನ ಮೂಲಕವೇ ನಗು ನಗುತ್ತ ಬಿಸಿ ಮುಟ್ಟಿಸಿದ ಹನುಮಂತ
Bigg Boss Kannada 11: ಫಿನಾಲೆ ಸಂದರ್ಭದಲ್ಲಿ ಕಿಚ್ಚ ಸುದೀಪ್ ಎಲ್ಲ ಸ್ಪರ್ಧಿಗಳ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಆಗ ಹನುಮಂತ ಉತ್ತರಿಸಿದ್ದಾರೆ. ಕೊನೆಯಲ್ಲಿ ಹಾಡಿನ ಮೂಲಕವೇ ರಜತ್‌ನಂತ ಮಗ ಇರಬಾರದು ಜಗಳ ಮಾಡಾಕ ಎಂದಿದ್ದಾರೆ.
Sun, 26 Jan 202510:21 AM IST
ಬಿಗ್ ಬಾಸ್ ಟ್ರೋಫಿ ನಂದಾದ್ರೆ- ಮೋಕ್ಷಿತಾ ಪೈ ಅಭಿಪ್ರಾಯ
Sun, 26 Jan 202510:19 AM IST
ಎಲ್ಲಾದರೂ ಬಿಗ್‌ಬಾಸ್ ಟ್ರೋಫಿ ಗೆದ್ದರೆ ಏನಾಗಬಹುದು? ತ್ರಿವಿಕ್ರಮ್ ಅಭಿಪ್ರಾಯ
Sun, 26 Jan 202510:18 AM IST
ಬಿಗ್‌ಬಾಸ್ ಟ್ರೋಫಿ ದೊರಕಿದ್ರೆ ಮಂಜುವಿಗೆ ಬಂಪರ್ ಲಾಟರಿಯಂತೆ!
ಸೋಷಿಯಲ್ ಮೀಡಿಯಾದಲ್ಲಿ ಕಲರ್ಸ್ ಕನ್ನಡ ಹಂಚಿಕೊಂಡ ಪೋಸ್ಟರ್‌ನಲ್ಲಿ ಬಿಗ್‌ಬಾಸ್ ವಿನ್ನರ್ ಆದ್ರೆ ಏನಾಗುತ್ತದೆ ಎಂದು ಉಗ್ರಂ ಮಂಜು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಲೈಫಲ್ಲೇ ಫಸ್ಟ್ ಅವಾರ್ಡ್, ಬಂಪರ್ ಲಾಟರಿ ಎಂದು ಮಂಜು ಹೇಳಿದ್ದಾರೆ.
Sun, 26 Jan 202510:16 AM IST
ಫಿನಾಲೆ ಸ್ಟೇಜ್ ಮೇಲೆ ಕಿಚ್ಚು ಹಚ್ಚೋಕೆ ಕಿಚ್ಚ ರೆಡಿ
ಬಿಗ್‌ಬಾಸ್ ಕನ್ನಡ ಫಿನಾಲೆ ಅಂತಿಮ ದಿನ ವೇದಿಕೆಗೆ ಕಿಚ್ಚ ಸುದೀಪ್ ಆಗಮನದ ಮೊದಲ ಝಲಕ್
Sun, 26 Jan 202509:45 AM IST
ಯಾರು ಬಿಗ್‌ಬಾಸ್ ಕನ್ನಡ ಸೀಸನ್ 11 ವಿನ್ನರ್?
ಹನುಮಂತ, ತ್ರಿವಿಕ್ರಮ್, ಮೋಕ್ಷಿತಾ ಪೈ, ರಜತ್, ಉಗ್ರಂ ಮಂಜು ಸದ್ಯ ಬಿಗ್‌ಬಾಸ್ ಸೀಸನ್ 11ರ ಅಂತಿಮ ಸ್ಪರ್ಧೆಯಲ್ಲಿದ್ದಾರೆ. ಈ ಐದು ಫೈನಲಿಸ್ಟ್‌ಗಳಲ್ಲಿ ಅಂತಿಮವಾಗಿ ಗೆಲುವು ಪಡೆಯುವ ಸ್ಪರ್ಧಿ ಯಾರು ಎಂಬ ಕುತೂಹಲ ಎಲ್ಲರಲ್ಲಿಯೂ ಇದೆ. ಈ ಕುರಿತಂತೆ ಸೋಷಿಯಲ್ ಮೀಡಿಯಾದಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಕೆಲವರು ಹನುಮಂತ ಗೆಲ್ಲಬಹುದು ಎನ್ನುತ್ತಿದ್ದಾರೆ. ಇನ್ನು ಕೆಲವರು ತ್ರಿವಿಕ್ರಮ್ ಗೆಲ್ಲಬಹುದು ಎನ್ನುತ್ತಿದ್ದಾರೆ. ಮೋಕ್ಷಿತಾ ಪೈ ಹೆಸರನ್ನೂ ಕೆಲವರು ಹೇಳುತ್ತಿದ್ದಾರೆ. ಉಗ್ರಂ ಮಂಜು ಮತ್ತು ರಜತ್ ಗೆಲ್ಲಬಹುದೇ ಎಂಬ ಅನುಮಾನವೂ ಕೆಲವರಲ್ಲಿ ಇದೆ. ಇನ್ನು ಕೆಲವರ ಪ್ರಕಾರ ಇಂದು ಮೊದಲು ರಜತ್ ಹೊರಹೋಗುವ ಸಾಧ್ಯತೆ ಇದೆ. ಬಳಿಕ ಉಗ್ರಂ ಮಂಜು ಹೊರಹೋಗಬಹುದು ಎಂದೆಲ್ಲ ಊಹಾಪೋಹಗಳು ಹರಿದಾಡುತ್ತಿವೆ.

Sun, 26 Jan 202509:44 AM IST
ಬಿಗ್‌ಬಾಸ್ ಕನ್ನಡ 11 ವಿನ್ನರ್‌ಗೆ ಎಷ್ಟು ಲಕ್ಷ ನಗದು ಬಹುಮಾನ ದೊರಕಲಿದೆ?
ಈ ಬಾರಿ ಬಿಗ್‌ಬಾಸ್ ಕನ್ನಡದಲ್ಲಿ ಗೆಲುವು ಪಡೆದವರಿಗೆ 50 ಲಕ್ಷ ರೂಪಾಯಿ ಬಹುಮಾನ ದೊರಕಲಿದೆ. ಇದರೊಂದಿಗೆ ಬಿಗ್‌ಬಾಸ್ ಟ್ರೋಪಿ ಕೂಡ ದೊರಕಲಿದೆ. ಜೀವಮಾನವಿಡಿ ನೆನಪಿನಲ್ಲಿ ಇಟ್ಟುಕೊಳ್ಳುವಂತೆ ಬಿಗ್‌ಬಾಸ್ ವಿನ್ನರ್ ಎಂಬ ಖ್ಯಾತಿಯೂ ದೊರಕಲಿದೆ.

Sun, 26 Jan 202509:42 AM IST
ಬಿಗ್ ಬಾಸ್ ಮನೆಯಿಂದ ಹೊರ ಬಿದ್ದ ಭವ್ಯಾ ಗೌಡ
ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಭವ್ಯಾ ಗೌಡ ಫಿನಾಲೆಗೆ ಇನ್ನೊಂದೇ ದಿನ ಇರುವಾಗ ಮನೆಯಿಂದ ಹೊರಬಿದ್ದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇನ್ನು ಕೇವಲ ಐದು ಸ್ಪರ್ಧಿಗಳು ಮಾತ್ರ ಬಾಕಿ ಉಳಿದುಕೊಂಡಿದ್ದಾರೆ. ಫಿನಾಲೆ ಹತ್ತಿರ ಇದ್ದು ಇಲ್ಲಿಂದ ಹೊರ ಬೀಳುವುದು ಸುಲಭದ ಮಾತಲ್ಲ ಎನ್ನುತ್ತಲೇ ಬಿಗ್ ಬಾಸ್ ಮನೆಯ ಸ್ಪರ್ಧಿಗಳು ಅವರನ್ನು ಕಳಿಸಿಕೊಟ್ಟಿದ್ದಾರೆ.ತ್ರಿವಿಕ್ರಂ ಹಾಗೂ ನನ್ನ ನಡುವಿನ ಸಂಬಂಧದ ಬಗ್ಗೆ ಯಾರು ಏನೇ ಅಂದ್ರೂ ನಾವು ಇನ್ನು ಮುಂದೂ ಹೀಗೆ ಇರ್ತೀವಿ ಎಂದು ಇಬ್ಬರೂ ಹೇಳಿಕೊಂಡಿದ್ದಾರೆ.