Bigg Boss Kannada 11: ಕನಸು ನನಸಾಗಲೇ ಇಲ್ಲ! ಕೊನೇ ಕ್ಷಣದ ಅಚ್ಚರಿಯ ಎಲಿಮಿನೇಷನ್‌ನಲ್ಲಿ ಹೊರನಡೆದ ಮೋಕ್ಷಿತಾ ಪೈ
ಬಿಗ್ ಬಾಸ್ ಮನೆಯಿಂದ ಮೋಕ್ಷಿತಾ ಪೈ ಎಲಿಮಿನೇಟ್ ಆಗಿದ್ದಾರೆ. 17 ವಾರಗಳ ಆಟ ಮುಗಿಸಿ, ಕೊನೇ ಕ್ಷಣದಲ್ಲಿ ನಡೆದ ಅಚ್ಚರಿಯ ಎಲಿಮಿನೇಷನ್‌ನಲ್ಲಿ ಹೊರಬಿದ್ದಿದ್ದಾರೆ.

Bigg Boss Kannada 11 Grand Finale: ಬಿಗ್ ಬಾಸ್ ಕನ್ನಡ ಸೀಸನ್ 11ರ ಫಿನಾಲೆಗೆ ಎಂಟ್ರಿ ಕೊಟ್ಟಿದ್ದ ಇಬ್ಬರು ಲೇಡಿ ಕಂಟೆಸ್ಟಂಟ್‌ಗಳ ಪೈಕಿ, ಉಳಿದಿದ್ದು ಮೋಕ್ಷಿತಾ ಪೈ ಮಾತ್ರ. ಈಗ ಮೋಕ್ಷಿತಾ ಸಹ ಅಚ್ಚರಿಯ ರೀತಿಯಲ್ಲಿ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ 17 ವಾರಗಳ ಆಟಕ್ಕೆ ಬ್ರೇಕ್ ಹಾಕಿ ಇದೀಗ ಕಿಚ್ಚನ ಕರೆಗೆ ಓಗೊಟ್ಟು, ಮೂರನೇ ರನ್ನರ್ ಅಪ್ ಆಗಿ ವೇದಿಕೆ ಸೇರಿದ್ದಾರೆ.
ಅಂದಹಾಗೆ, ಒಟ್ಟು ಆರು ಮಂದಿ ಬಿಗ್ ಬಾಸ್ ಕನ್ನಡ ಸೀಸನ್ 11ರ ಫಿನಾಲೆ ತಲುಪಿದ್ದರು. ಹನುಮಂತ ಲಮಾಣಿ ಫಿನಾಲೆ ತಲುಪಿದ್ದ ಮೊದಲ ಸ್ಪರ್ಧಿಯಾಗಿದ್ದರು. ಅದಾದ ಬಳಿಕ ಮೋಕ್ಷಿತಾ, ತ್ರಿವಿಕ್ರಮ್, ರಜತ್, ಭವ್ಯಾ ಗೌಡ ಮತ್ತು ಉಗ್ರಂ ಮಂಜು ಟಾಪ್ ಆರರಲ್ಲಿ ಸ್ಥಾನ ಪಡೆದಿದ್ದರು. ಈ ಆರು ಜನರಲ್ಲಿ ಶನಿವಾರವೇ ಭವ್ಯಾ ಗೌಡ 5ನೇ ರನ್ನರ್ ಅಪ್ ಆಗಿ ಎಲಿಮಿನೇಟ್ ಆದರೆ, ಭಾನುವಾರ ಉಗ್ರಂ ಮಂಜು ನಾಲ್ಕನೇ ರನ್ನರ್ ಅಪ್ ಆಗಿ ಹೊರನಡೆದರು.
ಕನ್ನಡ ಕಿರುತೆರೆಯಲ್ಲಿ ನಟಿಯಾಗಿ ಮೋಡಿ ಮಾಡಿದವರು ನಟಿ ಮೋಕ್ಷಿತಾ. ಜೀ ಕನ್ನಡದಲ್ಲಿ ಪಾರು ಸೀರಿಯಲ್ ಮೂಲಕವೇ ನಾಡಿನ ಮನೆ ಮಾತಾದವರು ಮೋಕ್ಷಿತಾ. ಆ ಸೀರಿಯಲ್‌ನಿಂದಲೇ ಜನಪ್ರಿಯತೆಯನ್ನೂ ಗಿಟ್ಟಿಸಿಕೊಂಡಿದ್ದರು. ಅದೇ ಫೇಮ್ ಮೇಲೆಯೇ ಬಿಗ್ ಬಾಸ್ ಕನ್ನಡದ 11ನೇ ಸೀಸನ್‌ಗೆ ಸ್ಪರ್ಧಿಯಾಗಿಯೂ ಎಂಟ್ರಿಯಾಗಿದ್ದರು. ಆಟದ ಜತೆಗೆ ತಮ್ಮ ನೇರ ನಡೆ ನುಡಿ ಮತ್ತು ಮಾತುಗಾರಿಕೆಯಲ್ಲಿಯೂ ಮುಂದಿದ್ದರು. ಈಗ ಅಚ್ಚರಿಯ ರೀತಿಯಲ್ಲಿ ಫಿನಾಲೆಯಿಂದ ಹಿಂದೆ ಸರಿದಿದ್ದಾರೆ.
ಈ ವರೆಗೂ ಬಿಗ್ ಬಾಸ್‌ನಲ್ಲಿ ನಟಿ ಶ್ರುತಿ (ಬಿಗ್ ಬಾಸ್ ಕನ್ನಡ ಸೀಸನ್ 3) ಅವರನ್ನು ಹೊರತುಪಡಿಸಿ, ಬೇರಾವ ಮಹಿಳಾ ಸ್ಪರ್ಧಿ ವಿನ್ ಆದ ಉದಾಹರಣೆ ಇಲ್ಲ. ಆ ಸುದೀರ್ಘ ಗ್ಯಾಪ್ ಅನ್ನು ಮೋಕ್ಷಿತಾ ತುಂಬಲಿದ್ದಾರೆ ಎನ್ನಲಾಗಿತ್ತು. ಆದರೆ, ಇದೀಗ ಟ್ರೋಫಿಯ ಸನಿಹ ಬಂದು ಎಲಿಮಿನೇಟ್ ಆಗುವ ಮೂಲಕ ಮೂರನೇ ರನ್ನರ್ ಅಪ್ ಪಟ್ಟ ಪಡೆದುಕೊಂಡಿದ್ದಾರೆ.
