Bigg Boss Kannada 11: ಬಿಗ್ ಬಾಸ್ ಮನೆಗೆ ಬಂದ ಅಭಿಮಾನಿಗಳ ಸಾಗರ; ಫಿನಾಲೆಗೂ ಮೊದಲೇ ಕಾದಿತ್ತು ದೊಡ್ಡ ಆಶ್ಚರ್ಯ
Bigg Boss Kannada 11: ಬಿಗ್ ಬಾಸ್ ಫಿನಾಲೆಗೆ ಇನ್ನೆರಡೇ ದಿನ ಬಾಕಿ ಇದೆ. ಈ ಸಂದರ್ಭದಲ್ಲಿ ಬಿಗ್ ಬಾಸ್ ಮನೆಗೆ ಅಭಿಮಾನಿಗಳ ಸಾಗರವೇ ಹರಿದು ಬಂದಿದೆ. ತ್ರಿವಿಕ್ರಂ, ಮೋಕ್ಷಿತಾ ಪೈ ಹಾಗೂ ಹನುಮಂತನ ಅಭಿಮಾನಿಗಳೊಂದಿಗೆ ಮಾತಾಡಿದ್ದಾರೆ.

Bigg Boss Kannada 11: ಬಿಗ್ ಬಾಸ್ ಸ್ಪರ್ಧಿಗಳ ಅಭಿಮಾನಿಗಳು ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಈ ಹಿಂದೆ ರಾಜಕೀಯ ಪಕ್ಷದ ಟಾಸ್ಕ್ ಇದ್ದಾಗ ಯಾವ ರೀತಿ ಜನರು ಬಿಗ್ ಬಾಸ್ ಮನೆಗೆ ಹೋಗಿದ್ದರೋ ಅದೇ ರೀತಿ ಈಗ ಮತ್ತೆ ಅಭಿಮಾನಿಗಳು ಬಿಗ್ ಬಾಸ್ ಮನೆಗೆ ಹೋಗಿದ್ದಾರೆ. ಅಭಿಮಾನಿಗಳನ್ನು ನೋಡಿ ಬಿಗ್ ಬಾಸ್ ಸ್ಪರ್ಧಿಗಳಿಗೆ ತುಂಬಾ ಆಶ್ಚರ್ಯ ಆಗಿದೆ. ಕೆಲವರಿಗಂತು ಇದು ಕನಸೋ ಅಥವಾ ನನಸೋ ಎಂದು ಅರ್ಥ ಆಗದ ರೀತಿಯಲ್ಲಿ ಆಶ್ಚರ್ಯ ಆಗಿದೆ. ಹೀಗಿರುವಾಗ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಅಭಿಮಾನಿಗಳಿಗೂ ಅಲ್ಲೊಂದು ಸಂತಸದ ವಾತಾವರಣ ನಿರ್ಮಾಣವಾಗಿತ್ತು. ಅಭಿಮಾನಿಗಳ ಖುಷಿಯ ಚೀರಾಟ ಕೇಳಿ ಬಿಗ್ ಬಾಸ್ ಸ್ಪರ್ಧಿಗಳು ಭಾವುಕರಾಗಿದ್ದಾರೆ.
ಸ್ಪರ್ಧಿಗಳಲ್ಲಿ ಹೆಚ್ಚಿದ ಕುತೂಹಲ
ಸ್ಪರ್ಧಿಗಳ ಭಾವಚಿತ್ರ ಇರುವ ಬ್ಯಾನರ್ ಹಾಗೂ ಪೋಸ್ಟರ್‍ಗಳನ್ನು ಹಿಡಿದು ಬಂದಿದ್ದಾರೆ. ತಮ್ಮ ಬಿಗ್ ಬಾಸ್ ಜರ್ನಿ ಹೇಗಿತ್ತು ಎಂದು ಎಲ್ಲರೂ ತಮ್ಮದೇ ಅಭಿಮಾನಿಗಳ ಮುಂದೆ ಹೇಳಿಕೊಂಡಿದ್ದಾರೆ. ಈಗ ಬಿಡುಗಡೆಯಾದ ಪ್ರೋಮೋದಲ್ಲಿ ಹನುಮಂತ, ತ್ರಿವಿಕ್ರಂ ಹಾಗೂ ಮೋಕ್ಷಿತಾ ಪೈ ಅಭಿಮಾನಿಗಳೊಡನೆ ಮಾತನಾಡಿದ್ದಾರೆ. ನಿಮ್ಮನ್ನೆಲ್ಲ ನೋಡಿ ನನಗೆ ಭಯ ಆಗುತ್ತಿದೆ ಎಂದು ಹನುಮಂತ ಹೇಳಿದ್ದಾರೆ. ತಮಾಷೆಯಾಗಿ ಮಾತನಾಡಿದ್ದಾರೆ.
ತ್ರಿವಿಕ್ರಂ
ಇನ್ನು ತ್ರಿವಿಕ್ರಂ ಮಾತನಾಡುತ್ತಾ, ನಾನು ನಿಮ್ಮದೇ ಮನೆಗ ಮಗ, ತಮ್ಮ ಅಥವಾ ಅಣ್ಣ ಯಾರಾದರೂ ಅಂದುಕೊಳ್ಳಿ. ಇಂದು ಇಲ್ಲಿ ನುಗ್ಗಿ ಬಂದು ನಿಂತಿದ್ದೇನೆ ಎಂದು ಹೇಳುತ್ತಾರೆ. ಗೆಲ್ಲಲು ಎಲ್ಲರ ಸಹಕಾರ ಬೇಕು ಎಂಬ ರೀತಿ ಮಾತಾಡಿದ್ದಾರೆ. ಅಭಿಮಾನಿಗಳಿಗೆ ಸಿಹಿ ಅಪ್ಪುಗೆ ನೀಡಿದ್ದಾರೆ.
ಮೋಕ್ಷಿತಾ
ಮೋಕ್ಷಿತಾ ಅವರು ಇಲ್ಲಿಗೆ ಬರುವಾಗಲೂ ಒಬ್ಬರೇ ಬರೋದು, ಗೆಲ್ಲೋದೂ ಒಬ್ಬರೇ ಎಂದು ಹೇಳಿದ್ದಾರೆ. ಇವರೂ ತಮ್ಮ ಅಭಿಮಾನಿಗಳನ್ನು ನೋಡಿ ಕಟಕಟೆಯ ಜಾಗದಲ್ಲಿ ನಿಂತು ಕೈ ಬೀಸಿದ್ದಾರೆ. ಈ ರೀತಿಯಾಗಿ ಫಿನಾಲೆಯ ವಾತಾವರಣ ಬಿಗ್ ಬಾಸ್ ಮನೆಯ ಒಳಭಾಗದಲ್ಲೇ ಕಾಣಸಿಕ್ಕಿದೆ. ಇದೆಲ್ಲವನ್ನೂ ನೋಡಿ ಸ್ಪರ್ಧಿಗಳಿಗೂ ಕುತೂಹಲ ಆರಂಭವಾದಂತಿದೆ..
