Bigg Boss Kannada 11: ಬಿಗ್ ಬಾಸ್ ಮನೆಯಲ್ಲಿ ಪ್ರೀತಿ ಗೀತಿ ಇತ್ಯಾದಿ.. ಕಿಚ್ಚನ ಎದುರೇ ಬಯಲಾಯ್ತು ಭವ್ಯಾ- ತ್ರಿವಿಕ್ರಮ್ ಲವ್!
Bigg Boss Kannada 11: ಬಿಗ್ ಬಾಸ್ ಕನ್ನಡ 11ರ ಫಿನಾಲೆ ಸನಿಹಕೆ ಬಂದಿದೆ. ಟ್ರೋಫಿ ಎತ್ತಿ ಹಿಡಿಯಲು ಇನ್ನೊಂದೆ ಮೆಟ್ಟಿಲು ಬಾಕಿ ಇದೆ. ಈ ನಡುವೆ ಬಿಗ್ ಬಾಸ್ ಮನೆಯಲ್ಲಿ ತ್ರಿವಿಕ್ರಮ್- ಭವ್ಯಾ ನಡುವೆ ಲವ್ ಶುರುವಾಗಿದ್ಯಾ? ಇವರಿಬ್ಬರ ಬಗ್ಗೆ ಈಗ ಕಿಚ್ಚ ಸುದೀಪ್‌ಗೂ ವಿಷಯ ಗೊತ್ತಾಗಿದೆ.

Bigg Boss Kannada 11: ಬಿಗ್ ಬಾಸ್ ಕನ್ನಡ ಸೀಸನ್ 11ರ ಮುಕ್ತಾಯಕ್ಕೆ ಇನ್ನೊಂದು ವಾರ ಮಾತ್ರ ಬಾಕಿ ಉಳಿದಿದೆ. ಜನವರಿ 25 ಮತ್ತು 26ಕ್ಕೆ ಗ್ರ್ಯಾಂಡ್ ಫಿನಾಲೆ ನಡೆಯಲಿದ್ದು, ಭಾನುವಾರ ಈ ಸಲದ ವಿನ್ನರ್ ಯಾರು ಎಂಬ ಕೌತುಕಕ್ಕೆ ಬ್ರೇಕ್ ಬೀಳಲಿದೆ. ಇತ್ತ ಬಿಗ್ ಬಾಸ್ ಮನೆಯಲ್ಲಿ ಶನಿವಾರ ಒಂದು ವಿಕೆಟ್ ಬಿದ್ದಿದೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಮಿಡ್ ವೀಕ್ ಎಲಿಮಿನೇಷನ್ ಪ್ರಕಾರ ವಾರದ ಮಧ್ಯೆ ಒಬ್ಬರು ಎಲಿಮಿನೇಟ್ ಆಗಿರಬೇಕಿತ್ತು. ಧನರಾಜ್ ಆಟದಲ್ಲಿ ತಪ್ಪು ಕಂಡು ಬಂದ ಹಿನ್ನೆಲೆಯಲ್ಲಿ, ಶನಿವಾರಕ್ಕೆ ಮುಹೂರ್ತ ಫಿಕ್ಸ್ ಆಗಿತ್ತು. ಅದರಂತೆ, ಗೌತಮಿ ಜಾಧವ್ ಮನೆಯಿಂದ ಹೊರನಡೆದಿದ್ದಾರೆ.
ಈಗ ಬಿಗ್ ಬಾಸ್‌ನ ಭಾನುವಾರದ ಏಪಿಸೋಡ್‌ನಲ್ಲಿ ಏನಿರಲಿದೆ ಎಂಬ ಕೌತುಕ ಮನೆ ಮಾಡಿದೆ. ಅದನ್ನು ತಣಿಸಲೆಂದೇ ಇಂದಿನ ಮೊದಲ ಪ್ರೋಮೋ ಬಿಡುಗಡೆ ಆಗಿದೆ. ಪ್ರೋಮೋದಲ್ಲಿ ಭವ್ಯಾ ಗೌಡ ಅವರಿಗೂ ತ್ರಿವಿಕ್ರಮ್ ನಡುವೆ ಏನೋ ನಡೆಯುತ್ತಿದೆ ಅನ್ನೋದರ ಬಗ್ಗೆ ಚರ್ಚೆ ನಡೆದಿದೆ. ಕಿಚ್ಚ ಸುದೀಪ್ ಇದೇ ವಿಚಾರವನ್ನೇ ಒತ್ತಿ ಒತ್ತಿ ಹೇಳಿದ್ದಾರೆ. ಮನೆಯಲ್ಲೊಂದು ಇನ್ಸಿಡೆಂಟ್ ನಡೆದಿದೆ. ನನಗೆ ಗಮನಕ್ಕೇ ಬಂದಿರಲಿಲ್ಲ ಎಂದು ಕಿಚ್ಚ ಹೇಳಿದ್ದಾರೆ. ಅಷ್ಟೊತ್ತಿಗೆ ಗೋಲ್ಡ್ ಸುರೇಶ್ ಸಂಭಾಷಣೆ ಪ್ಲೇ ಆಗಿದೆ.
ಗೋಲ್ಡ್ ಸುರೇಶ್: ಚೆನ್ನಾಗಿದೆ ಲವ್ವು.. (ತ್ರಿವಿಕ್ರಮ್ ಬಳಿ ಮಾತನಾಡುತ್ತ)
ಗೋಲ್ಡ್ ಸುರೇಶ್: ತ್ರಿವಿಕ್ರಮ್ ಪ್ರಪೋಸ್ ಮಾಡಿದ್ದಾನೆ, ಒಪ್ಕೊಂಡ್ಯಾ? (ಭವ್ಯಾ ಬಳಿ ಮಾತನಾಡುತ್ತ)
ಈ ಸಂಭಾಷಣೆಯ ವಿಡಿಯೋ ತುಣುಕು ಪ್ಲೇ ಆದ ಬಳಿಕ, ಮನೆ ಮಂದಿ ಅಚ್ಚರಿಯ ರೀತಿಯಲ್ಲಿ ತ್ರಿವಿಕ್ರಮ್ ಮತ್ತು ಭವ್ಯಾ ಅವರನ್ನು ನೋಡಿದ್ದಾರೆ. ಇತ್ತ, ಹನುಮಂತು ನಿಮಗೇನು ಅರ್ಥವಾಯ್ತು?" ಎಂದು ಸುದೀಪ್ ಪ್ರಶ್ನೆ ಮಾಡಿದ್ದಾರೆ. "ಐ ಲವ್ ಯೂ ಎಂದಿದ್ದಾನೆ ಅನ್ನೋದು ಗೊತ್ತಾಯ್ತು" ಎಂದಿದ್ದಾರೆ. "ಗೊತ್ತಿತ್ತು..ಮಧ್ಯ ಮಧ್ಯ ಸೀಕ್ರೆಟ್ ಚೆನ್ನಾಗಿ ಮೆಂಟೆನ್ ಮಾಡುತ್ತಿದ್ದಾರೆ ಅಂತ.. ಆದರೆ ಈ ಲೆವೆಲ್‌ಗೆ ಅಂತ ಗೊತ್ತಿರಲಿಲ್ಲ" ಎಂದು ರಜತ್, ತ್ರಿವಿಕ್ರಮ್ ಅವರ ಕಾಲೆಳೆದಿದ್ದಾರೆ. "ತಂಗಿ ಜಿಂಕೆ ಭಾವ ಜಿಂಕೆ" ಎಂದು ಧನರಾಜ್ ಕಾಮಿಡಿ ಮಾಡಿದರೆ, "ಆ ಥರದ್ದು ಏನೂ ಇಲ್ಲ ಸರ್. ಗುಡ್ ವೈಬ್ಸ್ ಕನೆಕ್ಷನ್ಸ್ ಇದೆ.. ಆ ಥರದ ಫೀಲಿಂಗ್ಸ್ ಇದೆ" ಎಂದು ಭವ್ಯಾ ಹೇಳುತ್ತಿದ್ದಂತೆ, "ಗುಡ್ ವೈಫಾ?" ಎಂದು ಮತ್ತೆ ಕಿಚಾಯಿಸಿದ್ದಾರೆ ಕಿಚ್ಚ. ಅಲ್ಲಿಗೆ ಮನೆ ಮಂದಿ ಮತ್ತೊಮ್ಮೆ ಬಿದ್ದ ಬಿದ್ದು ನಕ್ಕಿದ್ದಾರೆ.
ಇಂದು ಯಾರು ಹೊರಕ್ಕೆ?
ಗೌತಮಿ ಮನೆಯಿಂದ ಎಲಿಮಿನೇಟ್ ಆಗುತ್ತಿದ್ದಂತೆ, ಸೇವ್ ಆಗಿ ಉಳಿದವರ ಪೈಕಿ ತ್ರಿವಿಕ್ರಮ್, ಹನುಮಂತು ಮತ್ತು ಮೋಕ್ಷಿತಾ ನೇರವಾಗಿ ಫಿನಾಲೆ ವಾರಕ್ಕೆ ಎಂಟ್ರಿ ಪಡೆದಿದ್ದಾರೆ. ಇವರನ್ನು ಬಿಟ್ಟು ಉಗ್ರಂ ಮಂಜು, ರಜತ್, ಧನರಾಜ್, ಭವ್ಯಾ ಗೌಡ ಪೈಕಿ ಒಬ್ಬರು ಇಂದು ಎಲಿಮಿನೇಟ್ ಆಗಲಿದ್ದಾರೆ. ಒಬ್ಬರ ನಿರ್ಗಮನದ ಬಳಿಕ ಮುಂದಿನ ಫಿನಾಲೆ ವಾರಕ್ಕೆ ಆರು ಮಂದಿ ಎಂಟ್ರಿ ಪಡೆಯಲಿದ್ದಾರೆ.
