Bigg Boss Kannada 11: ತಮ್ಮ ನನ್ನನ್ನು ಮರತೇಬಿಟ್ಟ ಎಂದು ಕಣ್ಣೀರಿಟ್ಟ ಮೋಕ್ಷಿತಾ; ಬಿಗ್ ಬಾಸ್ ಮನೆಯೇ ಭಾವುಕ
Bigg Boss Kannada 11: ಬಿಗ್ ಬಾಸ್ ಮನೆಯಲ್ಲಿ ಎಲ್ಲರಿಗೂ ಹೊಸ ವರ್ಷದ ಗಿಫ್ಟ್ ಎಂಬಂತೆ ಸ್ಪರ್ಧಿಗಳ ಕುಟುಂಬದವರು ಮನೆಗೆ ಎಂಟ್ರಿಕೊಡುತ್ತಿದ್ದಾರೆ. ಹೀಗಿರುವಾಗ ಮೋಕ್ಷಿತಾ ಮನೆಯಿಂದ ಮೂರು ಜನ ಬಂದಿದ್ದಾರೆ. ತಮ್ಮನನ್ನು ನೋಡಿ ಮೋಕ್ಷಿತಾ ಭಾವುಕರಾಗಿದ್ದಾರೆ.
Bigg Boss Kannada 11: ಬಿಗ್ ಬಾಸ್ ಕೊನೆಯ ದಿನಗಳಲ್ಲಿ ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಂಡ ಸ್ಪರ್ಧಿಗಳ ಮನೆಯ ಸದಸ್ಯರನ್ನು ಕರೆಸುತ್ತಾರೆ. ಅದರಂತೆ ಮೋಕ್ಷಿತಾ ಮನೆಯಿಂದಲೂ ಬಂದಿದ್ದಾರೆ. ಮೋಕ್ಷಿತಾ ತಮ್ಮ ತಮ್ಮನನ್ನು ಇಷ್ಟೊಂದು ದಿನಗಳ ಕಾಲ ಬಿಟ್ಟು ಇರಲೇ ಇಲ್ವಂತೆ. ಆದರೆ ಈಗ ತಮ್ಮ ನನ್ನನ್ನು ಮರೆತೇ ಬಿಟ್ಟಿದ್ದಾನೆ ಎಂದು ಅವರು ಬೇಸರ ಮಾಡಿಕೊಂಡಿದ್ದಾರೆ. ಬಿಗ್ ಬಾಸ್ ಮನೆಗೆ ಹೋಗುವ ಮೊದಲು ಸಾಕಷ್ಟು ಯುಟ್ಯೂಬ್ ವಿಡಿಯೋಗಳನ್ನು ಮೋಕ್ಷಿತಾ ಮಾಡಿದ್ದರು. ಆ ಎಲ್ಲ ವಿಡಿಯೋಗಳಲ್ಲೂ ಅವರು ತಮ್ಮ ತಮ್ಮನ ಆರೈಕೆಯನ್ನು ಯಾವ ರೀತಿ ಮಾಡುತ್ತಾರೆ ಎಂಬುದನ್ನು ಹಂಚಿಕೊಂಡಿದ್ದರು.
ಸಾಕಷ್ಟು ಸಂದರ್ಭದಲ್ಲಿ ತಮ್ಮನನ್ನು ಅವರು ಎಷ್ಟು ಕಾಳಜಿ ಹಾಗೂ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು ಎಂಬುದನ್ನು ಅವರು ಹೇಳದೇ ಇದ್ದರೂ ಜನರಿಗೆ ಅರ್ಥ ಆಗುವ ರೀತಿ ಇತ್ತು. ಹೀಗಿರುವಾಗ ಅವರು ತಮ್ಮನನ್ನು ಬಿಟ್ಟು ಇಷ್ಟು ದಿನಗಳ ಕಾಲ ಇದ್ದದ್ದು ಆಶ್ಚರ್ಯವೇ.. ಈಗ ಮತ್ತೆ ಭೇಟಿಯಾಗಲು ಬಿಗ್ ಬಾಸ್ ಅವಕಾಶ ಮಾಡಿ ಕೊಟ್ಟಿರುವುದು ಅವರಿಗೆ ತುಂಬಾ ಖುಷಿ ಅದರೊಟ್ಟಿಗೆ ಬೇಸರ ಎರಡೂ ಆಗಿದೆ. ಮನೆಯಲ್ಲಿ ಎಲ್ಲರೂ ಹೊಸ ವರ್ಷದ ಖುಷಿಯಲ್ಲಿ ಡಾನ್ಸ್ ಮಾಡುತ್ತಾ ಇರುತ್ತಾರೆ. ಒಂದೇ ಬಾರಿ ಹಾಡು ನಿಂತು ಹೋಗುತ್ತದೆ. ಆಗ ಯಾರೋ ಮನೆಗೆ ಬರುತ್ತಿದ್ದಾರೆ ಎಂಬ ಅಂದಾಜು ಎಲ್ಲರಿಗೂ ಆಗುತ್ತದೆ.
ಅಕ್ಕ, ತಮ್ಮನ ಸಂಬಂಧ
ಅಕ್ಕ, ತಮ್ಮನ ನಡುವಿನ ಸಂಬಂಧ ಎಂಬಾಗಲೇ ಮೋಕ್ಷಿತಾ ಓಡಿ ಗಾರ್ಡನ್ ಏರಿಯಾಕ್ಕೆ ಬರುತ್ತಾರೆ. ಬರುವಷ್ಟರಲ್ಲಿ ಮೋಕ್ಷಿತಾ ಪೈ ಕುಟುಂಬದ ಎಲ್ಲರೂ ಬಂದು ನಿಂತಿರುತ್ತಾರೆ. ಅಪ್ಪ, ಅಮ್ಮ ಯಾರೇ ಇದ್ದರೂ ಮೋಕ್ಷಿತಾ ಅವರ್ಯಾರನ್ನೂ ಲೆಕ್ಕಿಸುವುದಿಲ್ಲ. ವೀಲ್‌ಚೇರ್ ಮೇಲೆ ಕುಳಿತಿರುವ ತನ್ನ ತಮ್ಮನ ಬಗ್ಗೆ ಹೆಚ್ಚು ಗಮನಕೊಡುತ್ತಾರೆ. ಓಡಿ ಹೋಗಿ ಅವನನ್ನು ಅಪ್ಪಿಕೊಳ್ಳುತ್ತಾರೆ, ಆದರೆ ತಮ್ಮ ಸರಿಯಾಗಿ ಪ್ರತಿಕ್ರಿಯೆ ನೀಡುವುದಿಲ್ಲ. ಅವನ ಮುಖದಲ್ಲಿ ಸಂತೋಷ ಕಾಣುವುದಿಲ್ಲ.
ಕಣ್ಣೀರಿಟ್ಟ ಮೋಕ್ಷಿತಾ
ಯಾರೋ ಅಪರಿಚಿತರನ್ನು ಕಂಡಂತೆ ತಮ್ಮ ತನ್ನನ್ನು ಕಂಡನಲ್ಲ ಎಂದು ಮೋಕ್ಷಿತಾ ತುಂಬಾ ಬೇಸರ ಮಾಡಿಕೊಳ್ಳುತ್ತಾರೆ. ಅವನು ನನ್ನ ಗುರುತೇ ಹಿಡಿಯುತ್ತಿಲ್ಲ ಎಂದು ಅವರು ಕಣ್ಣೀರು ಹಾಕಿದ್ದಾರೆ. ಇನ್ನು ಮನೆಯ ಉಳಿದೆಲ್ಲ ಸದಸ್ಯರಿಗೂ ಈ ದೃಶ್ಯವನ್ನು ನೋಡಲು ತುಂಬಾ ಬೇಸರ ಆಗುತ್ತದೆ. ಇಡೀ ಬಿಗ್ ಬಾಸ್ ಮನೆಯೇ ಭಾವುಕವಾಗಿದೆ.
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope