ರಜತ್ ಕೆನ್ನೆ ತಟ್ಟಿ ಪೇಚಿಗೆ ಸಿಲುಕಿದ ಧನರಾಜ್; ಕೈ ಕೈ ಮಿಲಾಯಿಸಿದ ಜೋಡಿಗೆ ಕಿಚ್ಚ ಸುದೀಪ್ ಕಡೆಯಿಂದ ಸಿಕ್ತು ಪಂಜರದ ಶಿಕ್ಷೆ
Bigg boss Kannada 11: ಈ ವಾರ ಧನರಾಜ್ ಮತ್ತು ರಜತ್ ಕಿಶನ್ ನಡುವಿನ ಕಿತ್ತಾಟ ಇಡೀ ಮನೆಯ ವಾತಾವರಣವನ್ನೇ ಹಾಳು ಮಾಡಿತ್ತು. ಮಾತಿನ ಮೂಲಕ ಆರಂಭವಾದ ಇವರಿಬ್ಬರ ಜಗಳ, ಕೈ ಕೈ ಮಿಲಾಯಿಸುವವರೆಗೂ ಹೋಗಿ ನಿಂತಿತ್ತು. ಕಳಪೆ ಕೊಡುವಾಗಲೂ ವಿಕೋಪಕ್ಕೆ ಹೋಗಿ, ಧನರಾಜ್ ಮೇಲೆ ರಜತ್ ಮುಗಿಬಿದ್ದರು. ಈಗ ಕಿಚ್ಚನ ಪಂಚಾಯ್ತಿಯಲ್ಲಿ ಈ ವಿಚಾರವೇ ಹಾಟ್ ಟಾಪಿಕ್ ಆಗಿದೆ.
![ಕೈ ಕೈ ಮಿಲಾಯಿಸಿದ ಜೋಡಿಗೆ ಕಿಚ್ಚ ಸುದೀಪ್ ಕಡೆಯಿಂದ ಸಿಕ್ತು ಪಂಜರದ ಶಿಕ್ಷೆ ಕೈ ಕೈ ಮಿಲಾಯಿಸಿದ ಜೋಡಿಗೆ ಕಿಚ್ಚ ಸುದೀಪ್ ಕಡೆಯಿಂದ ಸಿಕ್ತು ಪಂಜರದ ಶಿಕ್ಷೆ](https://images.hindustantimes.com/kannada/img/2024/12/14/550x309/fghjku_1734180316681_1734180327621.png)
Bigg Boss Kannada 11: ಬಿಗ್ ಬಾಸ್ ಮನೆಯಲ್ಲಿ ಈ ವಾರವೂ ಸ್ಪರ್ಧಿಗಳ ನಡುವೆ ಮಾರಾಮಾರಿ ನಡೆದಿದೆ. ಟಾಸ್ಕ್ ವಿಚಾರವಾಗೊ ಹೊತ್ತಿದ ಕಿಡಿ, ಈಗ ನಿಗಿ ನಿಗಿ ಬೆಂಕಿಯಾಗಿದೆ. ಧನರಾಜ್ ಮತ್ತು ರಜತ್ ಕಿಶನ್ ನಡುವಿನ ಕಿತ್ತಾಟ ಇಡೀ ಮನೆಯ ವಾತಾವರಣವನ್ನೇ ಹಾಳು ಮಾಡಿತ್ತು. ಅಷ್ಟಕ್ಕೆ ಮುಗಿಯಲಿಲ್ಲ. ಮೊದಲ ದಿನ ಮಾತಿನ ಮೂಲಕ ಆರಂಭವಾದ ಇವರಿಬ್ಬರ ಜಗಳ, ಕೈ ಕೈ ಮಿಲಾಯಿಸುವವರೆಗೂ ಹೋಗಿ ನಿಂತಿತು. ಕಳಪೆ ಕೊಡುವಾಗಲೂ ವಿಕೋಪಕ್ಕೆ ಹೋಗಿ, ಧನರಾಜ್ ಮೇಲೆ ರಜತ್ ಮುಗಿಬಿದ್ದರು. ಈಗ ಕಿಚ್ಚನ ಪಂಚಾಯ್ತಿಯಲ್ಲಿ ಈ ವಿಚಾರವೇ ಹಾಟ್ ಟಾಪಿಕ್ ಆಗಿದೆ.
ಕಳೆದ ವಾರ ಬಿಗ್ ಮನೆಯಲ್ಲಿ ಹೊಸ ಬದಲಾವಣೆಯ ಗಾಳಿ ಬೀಸಿದೆ. ಇಷ್ಟು ದಿನ ಸದಾ ಜೋಡಿ ದೇಹ ಒಂದೇ ಜೀವದಂತಿದ್ದ ಗೆಳೆಯ ಉಗ್ರಂ ಮಂಜು, ಗೆಳತಿ ಗೌತಮಿ ಜಾಧವ್ ಇದೀಗ ದೂರ ದೂರ ಆಗಿದ್ದಾರೆ. ಕಳೆದ ವಾರ ಈ ಜೋಡಿಯ ಆಟ ಹೇಗಿದೆ ಎಂಬುದನ್ನು ಕಿಚ್ಚ ಸುದೀಪ್ ಸಹ ವರ್ಣಿಸಿದ್ದರು. ಅಲ್ಲಿಂದ ಕ್ಯಾಪ್ಟನ್ ಆಗಿ ತಮ್ಮ ಆಟದ ವೈಖರಿಯನ್ನೇ ಬದಲಾಯಿಸಿದ್ದಾರೆ. ಉಗ್ರಂ ಮಂಜು ಅವರ ವಿರುದ್ಧ ಕ್ಷಣ ಕ್ಷಣಕ್ಕೂ ಒಂದಿಲ್ಲೊಂದು ಟೀಕೆ ಮಾಡುತ್ತಿದ್ದಾರೆ. ಈ ನಡುವೆಯೇ ಈ ಸಲದ ಕಳಪೆ ಪಟ್ಟ ತ್ರಿವಿಕ್ರಂ ಮತ್ತು ಚೈತ್ರಾ ಕುಂದಾಪುರ ಪಾಲಾದರೆ, ಉತ್ತಮ ಪಟ್ಟದ ಜತೆಗೆ ಕ್ಯಾಪ್ಟನ್ ಆಗಿದ್ದಾರೆ ಗೋಲ್ಡ್ ಸುರೇಶ್.
ರಜತ್, ಧನರಾಜ್‌ಗೆ ಕ್ಲಾಸ್
ಹೀಗೆ ತರಹೇವಾರಿ ಬೆಳವಣಿಗೆಗಳು ಈ ವಾರ ಬಿಗ್ ಮನೆಯಲ್ಲಿ ಘಟಿಸಿವೆ. ಮನೆಮಂದಿಗೆ ಪಾಠ ಮಾಡಬೇಕಾದ ವಿಚಾರಗಳೂ ಸಾಕಷ್ಟಿವೆ. ಅದರಂತೆ ಇದೀಗ ಹೊಸ ಪ್ರೋಮೋ ಬಿಡುಗಡೆ ಆಗಿದೆ. ಪ್ರೋಮೋದಲ್ಲಿ ರಜತ್ ಮತ್ತು ಧನರಾಜ್ ಇಬ್ಬರಿಗೂ ಕ್ಲಾಸ್ ತೆಗೆದುಕೊಂಡಿದ್ದಾರೆ. "ಧನರಾಜ್ ಅಂಡ್ ರಜತ್.. ಏನು ಹುಲಿ ಸಿಂಹ ಆಗೋಕೆ ನೀವು ಬಿಗ್ ಬಾಸ್‌ಗೆ ಹೋಗಿರೋದಾ ಅಥವಾ ಮನುಷ್ಯರಾಗಿರೋಕೆ ಹೋಗಿದಿರಾ? ರಜತ್ ಅವರ ಕೆನ್ನೆ ಮುಟ್ಟಿ ಪ್ರವೋಕ್ ಮಾಡುವಂಥದ್ದು ನಿಮಗೆ ಏನು ಅವಶ್ಯಕತೆ ಏನಿತ್ತು ಧನರಾಜ್? ಎಂದು ಧನುಗೆ ಬಿಸಿ ಮುಟ್ಟಿಸಿದ್ದಾರೆ ಕಿಚ್ಚ.
ಇಬ್ಬರಿಗೂ ಸಿಕ್ತು ವಿಶೇಷ ಶಿಕ್ಷೆ
ನಾಲಿಗೆ ಮೇಲೆ ನಿಗಾ ಇರಲಿ ರಜತ್ ಎಂದು ಸುದೀಪ್ ಹೇಳುತ್ತಿದ್ದಂತೆ, ನಾನು ಅಂಥ ಕೆಟ್ಟ ಮಾತನ್ನ ಹೇಳಿಲ್ಲ ಸರ್ ಎಂದಿದ್ದಾರೆ. ಅದಕ್ಕೆ ಪ್ರತಿಯಾಗಿ, ನಿಮ್ಮ ಪ್ರಕಾರ ಕೆಟ್ಟ ಮಾತು ಅಂದ್ರೆ ಏನು ಅಂತ ಹೇಳಿಬಿಡಿ. ಅದನ್ನೊಂದು ಬುಕ್ ಮಾಡಿ ಇಡ್ತಿವಿ. ಬಿಗ್ ಬಾಸ್‌ನಲ್ಲಿ ನಿಮ್ಮಿಬ್ಬರಿಗೆ ಐದು ನಿಮಿಷ ಫಿಸಿಕಲಿ ಫೈಟ್ ಮಾಡೋಕೆ ಟೈಮ್ ಕೊಡ್ತಿನಿ. ಫೈಟ್ ಮಾಡ್ತೀರಾ? ಅದು ಸಾಧ್ಯಾನಾ? ಇದಕ್ಕೊಂದು ಶಿಕ್ಷೆ ಇದ್ದೇ ಇದೆ. ಈ ಪಂಜರದ ಒಳಗೆ ರಜತ್ ಅವರನ್ನು ಹಾಕ್ತಿವಿ. ಅವ್ರು ಎಲ್ಲೋ ಹೋಗಬೇಕಂದ್ರೂ ಅವರನ್ನು ಧನರಾಜ್ ಕರೆದುಕೊಂಡು ಹೋಗಬೇಕು ಎಂದಿದ್ದಾರೆ.
![Whats_app_banner Whats_app_banner](https://kannada.hindustantimes.com/static-content/1y/wBanner.png)
ವಿಭಾಗ