Bigg boss Kannada 11: ಕುಟುಂಬದಲ್ಲಿ ತುರ್ತು ಪರಿಸ್ಥಿತಿ ಹಿನ್ನೆಲೆ, ಕಣ್ಣೀರಿಡುತ್ತಲೇ ಬಿಗ್‌ ಬಾಸ್‌ನಿಂದ ಹೊರನಡೆದ ಗೋಲ್ಡ್‌ ಸುರೇಶ್‌
ಕನ್ನಡ ಸುದ್ದಿ  /  ಮನರಂಜನೆ  /  Bigg Boss Kannada 11: ಕುಟುಂಬದಲ್ಲಿ ತುರ್ತು ಪರಿಸ್ಥಿತಿ ಹಿನ್ನೆಲೆ, ಕಣ್ಣೀರಿಡುತ್ತಲೇ ಬಿಗ್‌ ಬಾಸ್‌ನಿಂದ ಹೊರನಡೆದ ಗೋಲ್ಡ್‌ ಸುರೇಶ್‌

Bigg boss Kannada 11: ಕುಟುಂಬದಲ್ಲಿ ತುರ್ತು ಪರಿಸ್ಥಿತಿ ಹಿನ್ನೆಲೆ, ಕಣ್ಣೀರಿಡುತ್ತಲೇ ಬಿಗ್‌ ಬಾಸ್‌ನಿಂದ ಹೊರನಡೆದ ಗೋಲ್ಡ್‌ ಸುರೇಶ್‌

Bigg Boss Kannada 11: ತುರ್ತು ಪರಿಸ್ಥಿತಿ ಹಿನ್ನೆಲೆಯಲ್ಲಿ ಗೋಲ್ಡ್‌ ಸುರೇಶ್‌ ಮನೆಯಿಂದ ಹೊರ ನಡೆದಿದ್ದಾರೆ. ಈ ವಾರ ಎಲಿಮಿನೇಟ್‌ ಯಾರಾಗಲಿದ್ದಾರೆ ಎಂಬ ಕುತೂಹಲ ಎಲ್ಲರಿಯೂ ಇತ್ತು. ಆದರೆ, ನಾಮಿನೇಷನ್‌ಗೂ ಮೊದಲೇ ಗೋಲ್ಡ್‌ ಸುರೇಶ್‌ ಕುಟುಂಬದಲ್ಲಿ ಸಮಸ್ಯೆ ಎದುರಾಗಿದ್ದರಿಂದ ಮನೆಯಿಂದ ಹೊರ ನಡೆದಿದ್ದಾರೆ.

ತುರ್ತು ಪರಿಸ್ಥಿತಿ; ಕಣ್ಣೀರಿಡುತ್ತಲೇ ಬಿಗ್‌ ಬಾಸ್‌ನಿಂದ ಹೊರನಡೆದ ಗೋಲ್ಡ್‌ ಸುರೇಶ್‌
ತುರ್ತು ಪರಿಸ್ಥಿತಿ; ಕಣ್ಣೀರಿಡುತ್ತಲೇ ಬಿಗ್‌ ಬಾಸ್‌ನಿಂದ ಹೊರನಡೆದ ಗೋಲ್ಡ್‌ ಸುರೇಶ್‌

Bigg boss Kannada 11: ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರ ಈ ವಾರದ ಕ್ಯಾಪ್ಟನ್‌ ಆಗಿರುವ ಗೋಲ್ಡ್‌ ಸುರೇಶ್, ಇದೀಗ ಅಚ್ಚರಿಯ ಬೆಳವಣಿಗೆಯಲ್ಲಿ ಮನೆಯಿಂದ ಹೊರ ನಡೆದಿದ್ದಾರೆ. ಈ ವಾರ ಯಾರು ಎಲಿಮಿನೇಷನ್‌ ಆಗಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿಯೂ ಇತ್ತು. ಆದರೆ, ಎಲಿಮಿನೇಷ್‌ಗೂ ಮೊದಲೇ ಗೋಲ್ಡ್‌ ಸುರೇಶ್‌ ಕುಟುಂಬದಲ್ಲಿನ ತುರ್ತು ಪರಿಸ್ಥಿತಿ ಹಿನ್ನೆಲೆಯಲ್ಲಿ ಮನೆಯಿಂದ ಹೊರ ನಡೆದಿದ್ದಾರೆ.

ಶನಿವಾರದ ಸಂಚಿಕೆಯಲ್ಲಿ ನಾಮಿನೇಟ್‌ ಆದ ಎಂಟು ಮಂದಿಯ ಪೈಕಿ ಹನುಮಂತು ಮತ್ತು ತ್ರಿವಿಕ್ರಮ್‌ ಸೇವ್‌ ಆಗಿದ್ದರು. ಭಾನುವಾರದ ಸಂಚಿಕೆಯಲ್ಲಿ ಭವ್ಯಾ ಗೌಡ, ಧನರಾಜ್‌, ಶಿಶಿರ್‌ ಶಾಸ್ತ್ರಿ, ರಜತ್‌ ಕಿಶನ್‌, ಚೈತ್ರಾ ಕುಂದಾಪುರ, ಮೋಕ್ಷಿತಾ ಪೈ ಉಳಿದಿದ್ದಾರೆ. ಈ ಆರು ಜನರಲ್ಲಿ ಒಬ್ಬರು ಈ ವಾರ ಎಲಿಮಿನೇಟ್‌ ಆಗಬೇಕಿದೆ. ಆದರೆ, ಎಲಿಮಿನೇಷನ್‌ಗೂ ಮೊದಲೇ ಗೋಲ್ಡ್‌ ಸುರೇಶ್‌ ಮನೆಯಿಂದ ಎಕ್ಸಿಟ್‌ ಆಗಿದ್ದಾರೆ.

ಬೆಳಗಾವಿ ಮೂಲದ ಗೋಲ್ಸ್‌ ಸುರೇಶ್‌ ಅವರಿಗೆ, ಬಿಗ್‌ ಬಾಸ್‌ ಎಲ್ಲರ ಸಮ್ಮುಖದಲ್ಲಿಯೇ ತುರ್ತು ಪರಿಸ್ಥಿತಿಯ ಕಾರಣ ನೀಡಿ ಈ ಕೂಡಲೇ ಮನೆಯಿಂದ ಹೊರಬರುವಂತೆ ಹೇಳಿದ್ದರು. "ಸದಸ್ಯರೊಬ್ಬರ ನಿಕಟ ಕುಟುಂಬದಲ್ಲಿ ತುರ್ತು ಪರಿಸ್ಥಿತಿ ಉಂಟಾಗಿದೆ. ಅವರ ಅವಶ್ಯಕತೆ ಬಿಗ್‌ಬಾಸ್‌ಗಿಂತಲೂ, ಅವರ ಕುಟುಂಬಕ್ಕೆ ಹೆಚ್ಚು ಅಗತ್ಯ. ಈ ಕೂಡಲೇ ಅವರು ಮನೆಯಿಂದ ಹೊರಬರಬೇಕು" ಎಂದು ಗೋಲ್ಡ್‌ ಸುರೇಶ್‌ ಅವರನ್ನು ಕರೆದಿದ್ದಾರೆ.

“ಹೆಚ್ಚು ತಡಮಾಡದೇ ನಿಮ್ಮ ಬ್ಯಾಗ್‌ ಪ್ಯಾಕ್‌ ಮಾಡಿಕೊಂಡು ಬಿಗ್‌ ಬಾಸ್‌ ಮನೆಯಿಂದ ಈ ಕೂಡಲೇ ಹೊರಡಬೇಕಿದೆ” ಎಂದಿದ್ದಾರೆ. ಆಕಾಶವೇ ತಲೆ ಮೇಲೆ ಬಿದ್ದಂತೆ ಭಾವುಕರಾದ ಸುರೇಶ್, ಹೇಗೆ ಬಂದಿದ್ದೇನೋ ಹಾಗೇ ಹೋಗ್ತಿನಿ ಎಂದು ಚಿನ್ನಾಭರಣಗಳನ್ನು ಧರಿಸಿ ಮನೆಯಿಂದ ಆಚೆ ನಡೆದಿದ್ದಾರೆ. ಮನೆಯ ಇತರ ಸದಸ್ಯರು ಸುರೇಶ್‌ ಅವರಿಗೆ ಸಾಂತ್ವನ ಹೇಳಿದ್ದಾರೆ. ಏನೂ ಆಗಿರಲ್ಲ, ಅಮ್ಮ ಚೆನ್ನಾಗಿ ಇರ್ತಾರೆ ಎಂದೂ ಹೇಳಿ ಕಳಿಸಿದ್ದಾರೆ.

Whats_app_banner