ಬಿಗ್‌ಬಾಸ್‌ ಕನ್ನಡ 11: ಧನರಾಜ್‌ ಆಚಾರ್‌ ಜೊತೆ ಡ್ಯಾನ್ಸ್‌ ಮಾಡುತ್ತಾ, ಕೈ ಕುಲುಕಿ, ಹಗ್‌ ಮಾಡಿ ಕ್ಷಮೆ ಕೇಳಿದ ಲಾಯರ್‌ ಜಗದೀಶ್‌
ಕನ್ನಡ ಸುದ್ದಿ  /  ಮನರಂಜನೆ  /  ಬಿಗ್‌ಬಾಸ್‌ ಕನ್ನಡ 11: ಧನರಾಜ್‌ ಆಚಾರ್‌ ಜೊತೆ ಡ್ಯಾನ್ಸ್‌ ಮಾಡುತ್ತಾ, ಕೈ ಕುಲುಕಿ, ಹಗ್‌ ಮಾಡಿ ಕ್ಷಮೆ ಕೇಳಿದ ಲಾಯರ್‌ ಜಗದೀಶ್‌

ಬಿಗ್‌ಬಾಸ್‌ ಕನ್ನಡ 11: ಧನರಾಜ್‌ ಆಚಾರ್‌ ಜೊತೆ ಡ್ಯಾನ್ಸ್‌ ಮಾಡುತ್ತಾ, ಕೈ ಕುಲುಕಿ, ಹಗ್‌ ಮಾಡಿ ಕ್ಷಮೆ ಕೇಳಿದ ಲಾಯರ್‌ ಜಗದೀಶ್‌

ಟಾಸ್ಕ್‌ ಸಮಯದಲ್ಲಿ ಧನ್‌ರಾಜ್‌ ಆಚಾರ್ ಜೊತೆ ಜಗಳವಾಡಿ, ಬಾಡಿ ಶೇಮಿಂಗ್‌ ಮಾಡಿದ್ದ ಲಾಯರ್‌ ಜಗದೀಶ್‌ ಮರುದಿನ ಅವರ ಕ್ಷಮೆ ಕೇಳಿದ್ದಾರೆ. ಬೆಳಗ್ಗೆ ಡ್ಯಾನ್ಸ್‌ ಮಾಡುತ್ತಾ ಧನರಾಜ್‌ ಆಚಾರ್‌ ಕೈ ಕುಲುಕಿ, ಹಗ್‌ ಮಾಡಿ ಸಾರಿ ಅದು ಆಟದ ಒಂದು ಭಾಗವಷ್ಟೇ, ಪರ್ಸನಲ್‌ ಏನೂ ಇಲ್ಲ ಎಂದಿದ್ದಾರೆ.

ಬಿಗ್‌ಬಾಸ್‌ ಕನ್ನಡ 11:  ಧನರಾಜ್‌ ಆಚಾರ್‌ ಜೊತೆ ಡ್ಯಾನ್ಸ್‌ ಮಾಡುತ್ತಾ, ಕೈ ಕುಲುಕಿ, ಹಗ್‌ ಮಾಡಿ ಕ್ಷಮೆ ಕೇಳಿದ ಲಾಯರ್‌ ಜಗದೀಶ್‌
ಬಿಗ್‌ಬಾಸ್‌ ಕನ್ನಡ 11: ಧನರಾಜ್‌ ಆಚಾರ್‌ ಜೊತೆ ಡ್ಯಾನ್ಸ್‌ ಮಾಡುತ್ತಾ, ಕೈ ಕುಲುಕಿ, ಹಗ್‌ ಮಾಡಿ ಕ್ಷಮೆ ಕೇಳಿದ ಲಾಯರ್‌ ಜಗದೀಶ್‌ (PC: Jio Cinema)

ಬಿಗ್‌ಬಾಸ್‌ ಮನೆಯಲ್ಲಿ ಪ್ರತಿದಿನವೂ ಒಂದಲ್ಲಾ ಒಂದು ಕಿರಿಕ್‌ ನಡೆಯುತ್ತಲೇ ಇದೆ. ಸಣ್ಣ ಪುಟ್ಟ ವಿಚಾರ ದೊಡ್ಡದಾಗಿ ಸ್ಪರ್ಧಿಗಳು ಜಗಳವಾಡುತ್ತಿದ್ದಾರೆ. ಬುಧವಾರದ ಎಪಿಸೋಡ್‌ನಲ್ಲಿ ಕೂಡಾ ಲಾಯರ್‌ ಜಗದೀಶ್‌, ಧನರಾಜ್‌ ಆಚಾರ್‌ ಜೊತೆ ಜಗಳವಾಗಿತ್ತು. ಮಾನಸಾಗೆ ಕೂಡಾ ಜಗದೀಶ್‌ ಅಸಭ್ಯ ಶಬ್ಧ ಬಳಸಿದ್ದರು. ಈಗ ಜಗದೀಶ್‌ ಧನರಾಜ್‌ ಆಚಾರ್‌ ಬಳಿ ಕ್ಷಮೆ ಕೇಳಿದ್ದಾರೆ.

ಲಾಯರ್‌ ವಿರುದ್ಧ ತಿರುಗಿಬಿದ್ದಿದ್ದ ಸಹ ಸ್ಪರ್ಧಿಗಳು

ನಾಮಿನೇಷನ್‌ ಲಿಸ್ಟ್‌ನಿಂದ ಸೇಫ್‌ ಆಗಲು ಬಿಗ್‌ಬಾಸ್‌, ಸ್ಪರ್ಧಿಗಳಿಗೆ ತಕ್ಕಡಿ ಭಾಗ್ಯ ಎಂಬ ಟಾಸ್ಕ್‌ ನೀಡಿದ್ದರು. ಆಟ ಆಡುವಾಗ ರೆಫ್ರಿ ಧನರಾಜ್‌ ಜೊತೆ ಜಗದೀಶ್‌ ಜಗಳವಾಡಿದ್ದರು. ನೀನು ರೆಫ್ರಿ ಆಗಲೂ ಲಾಯಕ್‌ ಇಲ್ಲ, ನೀನು ಕಾಮಿಡಿ ಮಾಡಿಕೊಂಡು ಬದುಕುತ್ತಿದ್ದೀಯ, ಎಗರಾಡಬೇಡ ಎಂದೆಲ್ಲಾ ಮಾತನಾಡಿದ್ದರು. ಇದರಿಂದ ಧನರಾಜ್‌ ಬೇಸರ ವ್ಯಕ್ತಪಡಿಸಿದ್ದರು. ಮೊದಲ ಬಾರಿ ಒಬ್ಬ ಹಿರಿಯರ ಜೊತೆ ನಾನು ಈ ರೀತಿ ಮಾತನಾಡುತ್ತಿರುವುದು ಎಂದಿದ್ದರು. ನಂತರ ಮಾನಸಾ ವಿರುದ್ಧ ತಿರುಗಿಬಿದ್ದಿದ್ದ ಜಗದೀಶ್‌, ಯಾವ ಸೀಮೆ ಹೆಂಗಸು ಎಂದಿದ್ದರು. ಇದರಿಂದ ಮಾನಸಾ ಕೂಡಾ ಕಣ್ಣೀರಿಟ್ಟಿದ್ದರು. ಇದಾದ ನಂತರ ಎಲ್ಲರೂ ಲಾಯರ್‌ ವಿರುದ್ದ ಗರಂ ಆಗಿದ್ದರು.

ಬಿಗ್‌ಬಾಸ್‌ಗೆ ಆವಾಜ್‌ ಹಾಕಿದ್ದ ಜಗದೀಶ್‌

ಈ ಘಟನೆ ನಂತರ ಕ್ಯಾಮರಾ ಮುಂದೆ ಬಂದ ಲಾಯರ್‌ ಜಗದೀಶ್‌, ಬಿಗ್‌ಬಾಸ್‌ನಲ್ಲಿ ನಡೆಯುತ್ತಿರುವುದನ್ನೆಲ್ಲಾ ಬಹಿರಂಗಗೊಳಿಸುತ್ತೇನೆ. ನನ್ನ ಕೆಪಾಸಿಟಿ ಇಲ್ಲಿ ಯಾರಿಗೂ ಗೊತ್ತಿಲ್ಲ. ಈಗಲೇ ಮನಸ್ಸು ಮಾಡಿದರೆ ನಾನು ನಿಮ್ಮೆಲ್ಲರಿಗೂ ಹೆಲಿಕಾಪ್ಟರ್‌ನಿಂದ ಊಟ ತರಿಸುತ್ತೇನೆ. ನನಗೆ ಹೊರಗಡೆ ಬೇರೆಯದ್ದೇ ಘಟನೆ ಇದೆ. ನನ್ನನ್ನು ಇಲ್ಲಿಂದ ಹೊರ ಕಳಿಸಿ, ನನಗೆ ಇಲ್ಲಿ ಇರಲು ಇಷ್ಟವಿಲ್ಲ ಎಂದು ಬಿಗ್‌ಬಾಸ್‌ಗೆ ಧಮ್ಕಿ ಹಾಕಿದ್ದರು. ಆದರೆ ಇಷ್ಟೆಲ್ಲಾ ಮಾತನಾಡಿ ಈಗ ಜಗದೀಶ್‌, ಧನರಾಜ್‌ ಆಚಾರ್‌ಗೆ ಕ್ಷಮೆ ಕೇಳಿದ್ದಾರೆ.

ಹಗ್‌ ಮಾಡಿ ಕ್ಷಮೆ ಕೇಳಿದ ಲಾಯರ್‌ ಜಗದೀಶ್‌

4ನೇ ದಿನ ಗೆಳೆಯ ಚಿತ್ರದ ಹಾಡನ್ನು ಬೆಳಗ್ಗೆ ಬಿಗ್‌ಬಾಸ್‌ ಮನೆಯಲ್ಲಿ ಕೇಳಿಸಲಾಯ್ತು. ಎಲ್ಲಾ ಸ್ಪರ್ಧಿಗಳು ಎದ್ದು ಡ್ಯಾನ್ಸ್‌ ಮಾಡಲು ಆರಂಭಿಸಿದರು. ಹತ್ತಿರದಲ್ಲೇ ಡ್ಯಾನ್ಸ್‌ ಮಾಡುತ್ತಿದ್ದ ಧನರಾಜ್‌ ಆಚಾರ ಜೊತೆಯಲ್ಲೇ ಜಗದೀಶ್‌ ಡ್ಯಾನ್ಸ್‌ ಮಾಡುತ್ತಾ, ಕೈ ಕುಲುಕಿದರು. ನಂತರ ಇಬ್ಬರೂ ಹಗ್‌ ಮಾಡಿದರು. ಆಗ ಧನ್‌ರಾಜ್‌ ಆಚಾರ್‌ ಜಗದೀಶ್‌ಗೆ ಗುಡ್‌ ಮಾರ್ನಿಂಗ್‌ ಸರ್‌ ಎಂದರು, ಬಳಿ ಹೋದ ಜಗದೀಶ್‌ ಮತ್ತೆ ಕೈ ಕುಲುಕುತ್ತಾ ಸಾರಿ, ಅದು ಆಟದ ಒಂದು ಭಾಗವಷ್ಟೇ, ಅಲ್ಲಿ ಆಡಿದ್ದು ಬರೀ ಆಟವಷ್ಟೇ, ಪರ್ಸನಲ್‌ ಏನೂ ಇಲ್ಲ. ಫಿಸಿಕಲಿ ನೀವು ಚಿಕ್ಕವರಾದ್ರೂ, ಸ್ಟ್ರೆಂತ್‌ ಇದೆ ಅನ್ನೋದನ್ನು ತೋರಿಸಿದ್ದೀರ, ನಂತರ ಧನರಾಜ್‌ ಆಚಾರ್‌, ಜಗದೀಶ್‌ಗೆ ಹೊಸದಾಗಿ ಎಗರೋ ಆಸನ ಹೇಳಿಕೊಟ್ಟರು.