ಬಿಗ್‌ಬಾಸ್ ಕನ್ನಡ 11: ದೊಡ್ಮನೆಯಲ್ಲಿ ಮುಂಗಾರು ಮಳೆ ಸೀನ್ ರೀ ಕ್ರಿಯೇಟ್; ಕ್ಯಾಪ್ಟನ್ ಹಂಸಾಗೆ ಪ್ರಪೋಸ್ ಮಾಡಿದ ಜಗದೀಶ್
ಸೋಮವಾರದ ಎಪಿಸೋಡ್‌ನಲ್ಲಿ ಹಾವು ಮುಂಗುಸಿಯಂತೆ ಜಗಳವಾಡಿದ್ದ ಹಂಸ ಹಾಗೂ ಜಗದೀಶ್ ಮಂಗಳವಾರದ ಎಪಿಸೋಡ್‌ನಲ್ಲಿ ಫ್ರೆಂಡ್ಸ್ ಆಗಿದ್ದಾರೆ. ಜಗದೀಶ್ ಒಂದು ಹೆಜ್ಜೆ ಮುಂದೆ ಹೋಗಿ ಹಂಸಾಗೆ ಪ್ರಮೋಸ್ ಮಾಡಿದ್ದಾರೆ. ದೊಡ್ಮನೆಯಲ್ಲಿ ಮುಂಗಾರು ಮಳೆ ಎಪಿಸೋಡ್ ರೀ ಕ್ರಿಯೇಟ್ ಆಗಿದೆ.
ಬಿಗ್‌ಬಾಸ್ ಸೀಸನ್ 11 ಎರಡನೇ ವಾರಕ್ಕೆ ಕಾಲಿಟ್ಟಿದೆ. ಮೊದಲ ವಾರವೇ ಯಮುನಾ ಶ್ರೀನಿಧಿ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಎರಡನೇ ವಾರದ ನಾಮಿನೇಷನ್ ಟಾಸ್ಕ್ ಆರಂಭವಾಗಿದೆ. ಮೊದಲ ಸುತ್ತಿನ ಸ್ಪರ್ಧೆಯಲ್ಲಿ ನರಕವಾಸಿಗಳು ವಿನ್ ಆಗಿದ್ದಾರೆ. ಸ್ವರ್ಗದಲ್ಲಿರುವವರು ನರಕದವರಿಗೆ ಅಡುಗೆ ಮಾಡಿ ಬಡಿಸಿದ್ದಾರೆ. ಇಷ್ಟು ದಿನಗಳ ಕಾಲ ಗಂಜಿ ಸೇವಿಸುತ್ತಿದ್ದ ನರಕವಾಸಿಗಳು ಈಗ ಹೊಟ್ಟೆ ತುಂಬಾ ಊಟ ಮಾಡಿ ಖುಷಿಯಾಗಿದ್ದಾರೆ.
ಹಾವು ಮುಂಗುಸಿಯಂತೆ ಕಿತ್ತಾಡಿಕೊಂಡಿದ್ದ ಜಗದೀಶ್-ಹಂಸ
ನರದಲ್ಲಿದ್ದ ರಂಜಿತ್ ಸ್ವರ್ಗಕ್ಕೆ ಶಿಫ್ಟ್ ಆಗಿದ್ದು, ಅಲ್ಲಿಂದ ಜಗದೀಶ್ ನರಕಕ್ಕೆ ಬಂದಿದ್ದಾರೆ. ಮೊದಲ ವಾರದ ಕ್ಯಾಪ್ಟನ್ ಆಗಿ ಹಂಸ ಆಯ್ಕೆ ಆಗಿದ್ದಾರೆ. ಕೆಲವು ಸ್ಪರ್ಧಿಗಳು ಅದರಲ್ಲೂ ಜಗದೀಶ್ ಹಂಸ ಅವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಸೋಮವಾರದ ಎಪಿಸೋಡ್‌ನಲ್ಲಿ ಜಗದೀಶ್ , ಗುಟ್ಟಾಗಿ ಮಾತನಾಡಿಕೊಂಡು ಏಕಾ ಏಕಿ ಹಂಸ ಮೇಲೆ ಗರಂ ಆಗಿದ್ದರು. ನನಗೆ ತಲೆ ನೋವಾಗುತ್ತಿದೆ, ಟಾಬ್ಲೆಟ್ ಬೇಕು ಎಂದು ಜಗದೀಶ್ ಕೇಳುತ್ತಾರೆ. ನಿಮಗೆ ತಲೆ ನೋವು ಇದ್ದರೆ ಬಿಗ್‌ಬಾಸ್‌ಗೆ ಕೇಳಿ ಅವರು ಮೆಡಿಸನ್ ತರಿಸಿಕೊಡುತ್ತಾರೆ ಎಂದು ಹಂಸ ಹೇಳುತ್ತಾರೆ. ನೀನು ಕ್ಯಾಪ್ಟನ್ ಅಂತ ಏಕೆ ಇರೋದು ಎಂದು ಜಗದೀಶ್ ಹಂಸಗೆ ಏಕವಚನದಲ್ಲಿ ಕೇಳುತ್ತಾರೆ. ಇದೇ ವಿಚಾರಕ್ಕೆ ಹಂಸ ಹಾಗೂ ಜಗದೀಶ್ ನಡುವೆ ಮಾತಿನ ಜಕಮಕಿ ನಡೆಯುತ್ತದೆ.
ಹಂಸಾಗೆ ಪ್ರಪೋಸ್ ಮಾಡಿದ ಜಗದೀಶ್
ನಿನ್ನೆ ಜಗಳವಾಡಿದ್ದ ಹಂಸ ಹಾಗೂ ಜಗದೀಶ್ ಇಂದಿನ ಎಪಿಸೋಡ್‌ನಲ್ಲಿ ಖುಷಿಯಿಂದ ಮಾತನಾಡಿದ್ದಾರೆ. ವಾಹಿನಿ ಹಂಚಿಕೊಂಡಿರುವ ಪ್ರೋಮೋದಲ್ಲಿ ಜಗದೀಶ್ ಲವರ್ ಬಾಯ್‌ನಂತೆ ವರ್ತಿಸುತ್ತಾರೆ. ಕ್ಯಾಪ್ಟನ್ ಕ್ಯಾಪ್ಟನ್ ಐ ಲವ್ ಯೂ ಕ್ಯಾಪ್ಟನ್ ಎಂದು ಹಂಸ ಹೋದಲ್ಲಿ ಬಂದಲ್ಲಿ ಅವರನ್ನು ಹಿಂಬಾಲಿಸುತ್ತಾರೆ. ಇದಕ್ಕೆ ಪ್ರತಿಕ್ರಿಯಿಸುವ ಹಂಸ, ದಯವಿಟ್ಟು ಎಲ್ಲರೂ ಕ್ಯಾಪ್ಟನ್‌ಗೆ ಮರ್ಯಾದೆ ಕೊಡಿ ಎನ್ನುತ್ತಾರೆ, ನಿಮಗೆ ಬಿಪಿ ಹೆಚ್ಚಾಗುತ್ತದೆ, ಸ್ವಲ್ಪ ಹೊತ್ತು ಸುಮ್ಮನೆ ಕುಳಿತುಕೊಳ್ಳಿ ಎಂದು ಜಗದೀಶ್ ಹಂಸಾಗೆ ಹೇಳುತ್ತಾರೆ. ನನಗೆ ಚಿಕನ್ ಮಂಚೂರಿಯನ್ ಬೇಕು, ತೆಗೆದುಕೊಂಡು ಬಾ, ಇಲ್ಲದಿದ್ದರೆ ನಿನ್ನನ್ನೇ ಮಾಡಿಕೊಂಡು ತಿಂದುಬಿಡುತ್ತೇನೆ ಎಂದು ಜಗದೀಶ್ ನಗೆ ಚಟಾಕಿ ಹಾರಿಸುತ್ತಾರೆ.
ಮುಂಗಾರು ಮಳೆ ದೃಶ್ಯ ರೀ ಕ್ರಿಯೇಟ್
ಅವಳ ಕಣ್ಣು ನನ್ನ ಮೇಲೆ.. ನನ್ನ ಕಣ್ಣು ಅವಳ ಮೇಲೆ ಎಂದು ಜಗದೀಶ್ ಎ ಚಿತ್ರದ ಹಾಡು ಹಾಡುತ್ತಾರೆ. ಹಂಸ ನಡೆದುಬರುವಾಗ ನಾನು ನಿನ್ನ ಫ್ಯಾನ್ ಎಂದು ನೆಲದ ಮೇಲೆ ಮಲಗುತ್ತಾರೆ. ಪೂಜಾ ಗಾಂಧಿ ಅವರಂತೆ ಅವರನ್ನು ತುಳಿದುಕೊಂಡು ಹೋಗಿ ಎಂದು ಸಹ ಸ್ಪರ್ಧಿಗಳು ಹಂಸಗೆ ಹೇಳುತ್ತಾರೆ. ಅದರಂತೆ ಹಂಸ ಜಗದೀಶ್ ಎದೆ ಮೇಲೆ ಕಾಲಿಡುತ್ತಾರೆ. ಇದನ್ನು ನೋಡಿ ಇತರ ಸ್ಪರ್ಧಿಗಳು ಜೋರಾಗಿ ಅರಚುತ್ತಾರೆ. ಈ ಪ್ರೋಮೋಗೆ ವೀಕ್ಷಕರು ನಾನಾ ರೀತಿ ಕಾಮೆಂಟ್ ಮಾಡುತ್ತಿದ್ದಾರೆ. ಬೆಣ್ಣೆ ಶಾಂತಮ್ ನ ಕಡೆಗೂ ಬುಟ್ಟಿಗೆ ಹಾಕಿಕೊಂಡ ಜಗ್ಗು ದಾದ, ಜಗ್ಗು ನೆಕ್ಸ್ಟ್ ಲೆವೆಲ್‌ಗೆ ಎತ್ಕೊಂಡು ಹೋಗ್ತಿದಾನೆ ಬಿಗ್ ಬಾಸ್‌ನ , ನಮ್ ಜಗ್ಗಿ ಇಲ್ದೆ ಈ ಸೀಸನ್ ಬಿಗ್ ಬಾಸ್ ಶೂನ್ಯ ಎಂದೆಲ್ಲಾ ಜನರು ಜಗದೀಶ್‌ಗೆ ಮೆಚ್ಚುಗೆ ಮಾತುಗಳನ್ನು ಆಡುತ್ತಿದ್ದಾರೆ.
