ರಜತ್ ಡಾನ್ಸ್, ಮೋಕ್ಷಿತಾ ಹಾಡು, ಶಿಶಿರ್ ಕಣ್ಣೀರು, ಧನರಾಜ್ ಕಾಮಿಡಿ; ಸೀಕ್ರೆಟ್ ಟಾಸ್ಕ್ ಗೆದ್ದು ಬೀಗಿದ ರಾಜ ಉಗ್ರಂ ಮಂಜು
ಈ ವಾರ ಬಿಗ್ ಬಾಸ್ ಮನೆ, ಬಿಗ್ ಬಾಸ್ ಸಾಮ್ರಾಜ್ಯವಾಗಿದೆ. ಈ ಸಾಮ್ರಾಜ್ಯದ ಮಹಾರಾಜ ಮಂಜು ಎಂದು ಬಿಗ್ ಬಾಸ್ ಘೋಷಣೆ ಮಾಡುತ್ತಿದ್ದಂತೆ, ವೇಷಭೂಷಣ ಬದಲಿಸಿಕೊಂಡು ಬಂದ ಮಂಜು, ಸಿಂಹಾಸನ ಅಲಂಕರಿಸಿದ್ದಾರೆ. ಅಷ್ಟೇ ಅಲ್ಲ ಮನೆ ಪ್ರಜೆಗಳನ್ನು ತಮ್ಮ ಹಿಡಿತಕ್ಕೆ ಪಡೆದು, ಬೇಕಾದಂತೆ ಆಡಿಸಿದ್ದಾರೆ ರಾಜ ಮಂಜಣ್ಣ.
Bigg Boss Kananda 11: ಬಿಗ್ ಬಾಸ್ ಮನೆಯೀಗ ಬಿಗ್ ಬಾಸ್ ಸಾಮ್ರಾಜ್ಯವಾಗಿ ಬದಲಾಗಿದೆ. ಇಡೀ ಮನೆ ನಿಕೃಷ್ಟ, ಕಪಟ ರಾಜನ ಕೈಗೆ ಸಿಕ್ಕಿದೆ. ಅದರಂತೆ ರಾಜನಾಡಿ ಉಗ್ರಂ ಮಂಜು ಆಳ್ವಿಕೆ ನಡೆಸುತ್ತಿದ್ದಾರೆ. ಅಧಿಕಾರ ಸಿಕ್ಕಿದ್ದೇ ತಡ, ಮನೆಮಂದಿಯನ್ನು ಕೈಗೊಂಬೆಯಂತೆ ಆಡಿಸುತ್ತಿದ್ದಾರೆ ಉಗ್ರಂ ಮಂಜು. ಇತ್ತ ರಾಜನ ಹಿಡಿತಕ್ಕೆ ಸಿಲುಕಿ ಮನೆ ಮಂದಿಯೂ ಪರದಾಡುತ್ತಿದ್ದಾರೆ. ಅದರಲ್ಲೂ ಸೋಮವಾರ ರಾಜನ ಅಂಧಾ ದರ್ಬಾರ್‌ನಲ್ಲಿ ಬಹುತೇಕರು ಬಗೆಬಗೆ ಶಿಕ್ಷೆ ಅನುಭವಿಸಿದ್ದಾರೆ.
ಈ ವಾರ ಬಿಗ್ ಬಾಸ್ ಮನೆ, ಬಿಗ್ ಬಾಸ್ ಸಾಮ್ರಾಜ್ಯವಾಗಿದೆ. ಈ ಸಾಮ್ರಾಜ್ಯದ ಮಹಾರಾಜ ಮಂಜು ಎಂದು ಬಿಗ್ ಬಾಸ್ ಘೋಷಣೆ ಮಾಡುತ್ತಿದ್ದಂತೆ, ವೇಷಭೂಷಣ ಬದಲಿಸಿಕೊಂಡು ಬಂದ ಮಂಜು, ಸಿಂಹಾಸನ ಅಲಂಕರಿಸಿದ್ದಾರೆ. ಮನೆಯ ಮಹಿಳಾ ಸದಸ್ಯರು ಸೀರೆಯಲ್ಲಿ ಕಂಡರೆ, ಪುರುಷ ಸ್ಪರ್ಧಿಗಳು ಸಾಂಪ್ರದಾಯಿಕ ಉಡುಗೆಯಲ್ಲಿ ಎದುರಾಗಿದ್ದಾರೆ. ಎಲ್ಲರೂ ಒಟ್ಟಾಗಿ ಮಹಾರಾಜ ಮಂಜುಗೆ ಕಿರೀಟ ತೊಡಿಸಿದ್ದಾರೆ. ಆರತಿ ಮಾಡಿ, ರಾಜನಿಗೆ ಜೈಕಾರ ಹಾಕಿದ್ದಾರೆ.
ರಾಜ ಕಾಟಕ್ಕೆ ಬೇಸತ್ತ ಪ್ರಜೆಗಳು
ಈ ರಾಜ ತುಂಬ ಗಾಂಭೀರ್ಯ, ಹೇಳಿದಂತೆ ಕೇಳಬೇಕು, ರಾಜ ಬರ್ತಿದ್ದಾನೆ ಎಂದರೆ ಪಕ್ಕಕ್ಕೆ ಸರಿದು ನಿಲ್ಲಬೇಕು, ರಾಜನ ಮುಂದೆ ಚಪ್ಪಲಿ ಧರಿಸಬಾರದು, ಆತನ ಮುಂದೆ ತಲೆ ತಗ್ಗಿಸಿ ನಿಲ್ಲಬೇಕು, ಒಟ್ಟಿನಲ್ಲಿ ಅವನ ಅಣತಿ ಮೀರಿ ಏನೂ ಮಾಡುವಂತಿಲ್ಲ. ಅದರಂತೆ, ಸೋಮವಾರ ಅತಿಯಾಗಿ ಮಾತನಾಡಿದ ಚೈತ್ರಾ ಕುಂದಾಪುರ ಅವರ ಬಾಯಿಗೆ ಆಲೂಗಡ್ಡೆ ಇರಿಸಿ ಬಾಯಿ ಮುಚ್ಚಿಸಿದ್ದಾರೆ. ಗೌತಮಿ ಜಾಧವ್, ಧನರಾಜ್ ಆಚಾರ್ ಸೇರಿ ಮನೆಯ ಇನ್ನೂ ಹಲವರಿಗೆ ಬಸ್ಕಿಯ ಶಿಕ್ಷೆ ನೀಡಿದ್ದಾರೆ. ಹೀಗೆ ರಾಜನ ಅಬ್ಬರ್ ಆಳ್ವಿಕೆ ಮುಂದುವರಿದಿದೆ.
ಕಣ್ಣಿರೇ ಬತ್ತಿಹೋಗಿದೆ ಮಹಾಪ್ರಭು
ಈ ನಡುವೆ ಉಗ್ರಂ ಮಂಜು ಅವರಿಗೆ ಬಿಗ್ ಬಾಸ್ ಸೀಕ್ರೆಟ್ ಟಾಸ್ಕ್ ಕೊಟ್ಟಿದ್ದರು. ಮನೆಯ ನಾಲ್ಕು ಮಂದಿಯ ಪೈಕಿ ಇಬ್ಬರನ್ನು ನೈಜವಾಗಿ ನಗಿಸಬೇಕು, ಇಬ್ಬರನ್ನು ನೈಜವಾಗಿ ಅಳಿಸಬೇಕು ಎಂದು. ನಾಲ್ವರಲ್ಲಿ, ಮೂವರು ಟಾಸ್ಕ್ ಮಾಡಿದರೆ, ಕ್ಯಾಪ್ಟನ್ಸಿ ಟಾಸ್ಕ್‌ಗೆ ಆಯ್ಕೆಯಾಗುತ್ತೀರಿ ಎಂದಿದ್ದರು. ಅದರಂತೆ, ಮೊದಲಿಗೆ ಸುರೇಶ್ ಬಳಿ ತೆರಳಿ, ಅವನ ನೋವುಗಳಿಗೆ ಸ್ಪಂದಿಸುತ್ತ, ಮಗಳ ವಿಚಾರ ಪ್ರಸ್ತಾಪಿಸಿದ್ದಾರೆ. ಬಳಿಕ ಮನಸ್ಸು ಹಗುರ ಮಾಡಿಕೋ, ಅತ್ತು ಬಿಡು ಎಂದಿದ್ದಾರೆ. ಆದರೆ, ಕಣ್ಣೀರೇ ಬತ್ತಿಹೋಗಿದೆ ಮಹಾರಾಜ ಎಂದು ಸುಮ್ಮನಾಗಿದ್ದಾರೆ.
ಸೀಕ್ರೆಟ್ ಟಾಸ್ಕ್ ಪೂರ್ಣಗೊಳಿಸಿದ ಮಂಜು
ಆಗ ನೇರವಾಗಿ ಶಿಶಿರ್ ಬಳಿ ಬಂದು ಅದೇ ರೀತಿಯ ಮಾತುಗಳನ್ನಾಡಿ, ಅವರ ಮನಸು ಕರಗಿಸಿದ್ದಾರೆ. ಶಿಶಿರ್ ಕಣ್ಣೀರಿಟ್ಟಿದ್ದಾರೆ. ಬಳಿಕ ನಗಿಸುವ ಟಾಸ್ಕ್‌ನಲ್ಲಿ ರಜತ್ ಮತ್ತು ತ್ರಿವಿಕ್ರಮ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ರಜತ್‌ಗೆ ಮೊದಲಿಗೆ ಹಾಡು ಹೇಳಲು ಹೇಳಿದ್ದಾರೆ. ಅದಾದ ಬಳಿಕ, ಹಾಡಿನ ಜತೆಗೆ ಡಾನ್ಸ್ ಮಾಡುವುದಕ್ಕೂ ಹೇಳಿದ್ದಾರೆ. ರಜತ್ ಜತೆಗೆ ತ್ರಿವಿಕ್ರಮ್ ಸಹ ಸಾಥ್ ನೀಡಿದ್ದಾರೆ. ಇಬ್ಬರೂ ಡಾನ್ಸ್ ಮಾಡಿ ಮನೆ ಮಂದಿಯನ್ನು ನಗಿಸಿದ್ದಾರೆ. ಇತ್ತ ಕೊಟ್ಟ ಟಾಸ್ಕ್ ಪೂರ್ಣಗೊಳಿಸಿದ್ದ ಖುಷಿಯಲ್ಲಿ ಬೀಗುತ್ತಿದ್ದಾರೆ ರಾಜ ಉಗ್ರಂ ಮಂಜು.
ಧನು ಕಾಮಿಡಿ, ಮೋಕ್ಷಿತಾ ಹಾಡಿನ ಮೋಡಿ
ಇದೆಲ್ಲದರ ಬಳಿಕ ಮೋಕ್ಷಿತಾ ಪೈಕಿ ಇನ್ನೂನು ಬೇಕಾಗಿದೆ.. ಹಾಡಿಗೆ ಧ್ವನಿಯಾಗಿ ಕಣ್ಣೀರಿಟ್ಟರು. ಧನರಾಜ್ ಆಚಾರ್ ವಿಶೇಷ ಲುಕ್‌ನಲ್ಲಿ ಎದುರಾಗಿ ಎಲ್ಲರನ್ನೂ ನಗಿಸಿದರು. ಹನುಮಂತು ತಮ್ಮ ಹಾಡಿನ ಮೂಲಕ ಗಮನ ಸೆಳೆದರು. ಅಂಗರಕ್ಷರಾಗಿದ್ದ ತ್ರಿವಿಕ್ರಮ್ ಮತ್ತು ರಜತ್ ರಾಜನಂತೆ ತಾವೂ ಮನೆಯವರಿಂದ ಸೇವೆ ಮಾಡಿಸಿಕೊಂಡರು. ಇಂದಿನ ಟಾಸ್ಕ್ ಹೇಗಿರಬಹುದು ಎಂಬ ಕುತೂಹಲವೂ ವೀಕ್ಷಕರಿಲ್ಲಿದೆ.
ವಿಭಾಗ