Bigg Boss 11: ಯುವರಾಣಿ ಕಂಡಲ್ಲಿ ನಮಸ್ಕಾರ ಮಾಡಲ್ಲ ಎಂದ ಗೌತಮಿ; ಉಗ್ರಂ ಮಂಜು ಮೋಕ್ಷಿತಾ ನಡುವೆ ಕಿರಿಕ್
ಕನ್ನಡ ಸುದ್ದಿ  /  ಮನರಂಜನೆ  /  Bigg Boss 11: ಯುವರಾಣಿ ಕಂಡಲ್ಲಿ ನಮಸ್ಕಾರ ಮಾಡಲ್ಲ ಎಂದ ಗೌತಮಿ; ಉಗ್ರಂ ಮಂಜು ಮೋಕ್ಷಿತಾ ನಡುವೆ ಕಿರಿಕ್

Bigg Boss 11: ಯುವರಾಣಿ ಕಂಡಲ್ಲಿ ನಮಸ್ಕಾರ ಮಾಡಲ್ಲ ಎಂದ ಗೌತಮಿ; ಉಗ್ರಂ ಮಂಜು ಮೋಕ್ಷಿತಾ ನಡುವೆ ಕಿರಿಕ್

Bigg Boss Kannada 11: ಬಿಗ್ ಬಾಸ್‌ ಮನೆಯಲ್ಲಿ ಈ ವಾರ ಆಟ ಜೋರಾಗೆ ಇದೆ ಮೋಕ್ಷಿತಾ, ಉಗ್ರಂ ಮಂಜು ಹಾಗೂ ಗೌತಮಿ ನಡುವೆ ಗಲಾಟೆ ಆಗಿದೆ. ಮೊದಲು ಇದನ್ನೆಲ್ಲ ಆರಂಭ ಮಾಡಿದ್ದು ಯಾರು ಎಂಬ ಪ್ರಶ್ನೆ ಮಾತ್ರ ಹಾಗೇ ಉಳಿದು ಹೋಗಿದೆ.

ಯುವರಾಣಿ ಕಂಡಲ್ಲಿ ನಮಸ್ಕಾರ ಮಾಡಲ್ಲ ಎಂದ ಗೌತಮಿ
ಯುವರಾಣಿ ಕಂಡಲ್ಲಿ ನಮಸ್ಕಾರ ಮಾಡಲ್ಲ ಎಂದ ಗೌತಮಿ

ಬಿಗ್‌ ಬಾಸ್‌ ಮನೆಯ ಸಾಮ್ರಾಜ್ಯಕ್ಕೆ ಈಗ ಇಬ್ಬರು ನಾಯಕರಾಗಿದ್ದಾರೆ. ಮೋಕ್ಷಿತಾ ಬಿಗ್ ಬಾಸ್‌ ಮನೆಯ ಯುವರಾಣಿಯಾಗಿದ್ದಾರೆ. ಬಿಗ್ ಬಾಸ್‌ ಮನೆಯ ಯುವರಾಣಿಯಾಗಲೂ ಬಿಗ್‌ ಬಾಸ್‌ ಅಧಿಕಾರ ಕೊಟ್ಟಿದ್ದಾರೆ. ಆ ಅಧಿಕಾರವನ್ನು ಮೋಕ್ಷಿತಾ ಬಳಸಿಕೊಂಡು ಆಟ ಆಡುತ್ತಿದ್ದಾರೆ. ಜನರಿಗಂತು ಬರಪೂರ ಮನರಂಜನೆ ಲಭಿಸುತ್ತಿದೆ. ಮೋಕ್ಷಿತಾ ಕೆಲವು ನಿಯಮಗಳನ್ನು ಈ ಮನೆಯಲ್ಲಿ ಮಾಡಿರುತ್ತಾರೆ. ಆ ನಿಯಮಕ್ಕೆ ತಕ್ಕಂತೆ ಎಲ್ಲರೂ ನಡೆದುಕೊಳ್ಳಬೇಕು ಎಂದು ಹೇಳಿರಲಾಗುತ್ತದೆ. ಆದರೆ ಗೌತಮಿ ಅದಕ್ಕೆ ಒಪ್ಪಿಕೊಳ್ಳುವುದಿಲ್ಲ.

ಸುರೇಶ್‌ ಅವರು ಆಟದ ನಿಯಮವನ್ನು ಹೇಳಿದರೂ ಸಹ ಗೌತಮಿ ಮಾತ್ರ ಇದಕ್ಕೆಲ್ಲ ಒಪ್ಪಿಕೊಂಡಿಲ್ಲ. ಯುವರಾಣಿ ಕಂಡಾಗೆಲ್ಲ ನೀವು ತಲೆ ಬಾಗಿ ನಮಸ್ಕಾರ ಮಾಡಬೇಕಂತೆ ಎಂದು ಸುರೇಶ್‌ ಅವರು ಹೇಳುತ್ತಾರೆ. ಆದರೆ ಗೌತಮಿ ಇಲ್ಲ ನಾನು ಹಾಗೆಲ್ಲ ತಲೆಬಾಗೋದಿಲ್ಲ. ಯಾವತ್ತು ನಾನು ಅವರಿಗೆ ತಲೆ ಬಾಗಿದೆನೋ, ಅವತ್ತು ನಾನು ಅವರು ಹೇಳಿದ್ದನ್ನು ಕೇಳಿದೆ ಎಂದಾಗುತ್ತದೆ. ಆ ಕಾರಣಕ್ಕಾಗಿ ನಾನು ತಲೆ ಬಾಗೋದಿಲ್ಲ ಎಂದು ಹೇಳುತ್ತಾಳೆ.

ಆದರೆ ಮೋಕ್ಷಿತಾ ಇದಕ್ಕೆ ಒಪ್ಪೋದಿಲ್ಲ. ಯಾಕೆಂದರೆ ಅವರಿಗೆ ಅಧಿಕಾರ ಇರುತ್ತದೆ. ಇನ್ನು ಉಗ್ರಂ ಮಂಜು ಕೋಪದಿಂದ ಆಗಾಗ ಮೋಕ್ಷಿತಾ ಮೇಲೆ ಹರಿಹಾಯುತ್ತಲೇ ಇದ್ದಾರೆ. ಅವರಿಗೆ ಮೋಕ್ಷಿತಾ ತನ್ನ ಅಧಿಕಾರ ಕಿತ್ತುಕೊಳ್ಳಲು ಬಂದಿದ್ದಾಳೆ ಎಂಬ ಕಲ್ಪನೆ ಕಾಡುತ್ತಿದೆ.

ಮೋಕ್ಷಿತಾ ಆಡಿದ್ದೆಲ್ಲ ಮೋಸದ ಆಟ. ಬೇಕು ಎಂದೇ ಕಣ್ಣಿರು ಹಾಕಿದ ನಾಟಕ ಮಾಡಿಕೊಂಡು ಹಾಡು ಹೇಳುದ್ದಾರೆ. ಅವರು ಅಷ್ಟೊಂದು ಭಾವುಕರಾಗಿದ್ದು ಸುಳ್ಳು ಎಂದು ಹಂಗಿಸಿದ್ದಾರೆ. ಅವರು ಹೇಳಿದಂತೇ “ಆಕಾಶದಲ್ಲಿ ನೀ ದೀಪವಾದೆ” ಎಂದು ಹೇಳುತ್ತಾ ಅಣಕ ಮಾಡಿದ್ದಾರೆ. ಇದರಿಂದ ಕೋಪ ಬಂದಿದೆ.

ಈ ಹಿಂದೆ ಉಗ್ರಂ ಮಂಜು ಅಧಿಕಾರ ಹೀಗಿತ್ತು

ಬಿಗ್ ಬಾಸ್‌ ಮನೆಯಲ್ಲಿ ಪ್ರತಿ ವಾರವೂ ಒಂದಲ್ಲ ಒಂದು ಹೊಸ ರೀತಿಯ ಆಟ ಸೃಷ್ಟಿಯಾಗುತ್ತದೆ. ಅದೇ ರೀತಿ ಈ ವಾರದ ಮೊದಲ ದಿನಗಳಲ್ಲಿ ಬಿಗ್ ಬಾಸ್‌ ಮನೆಗೆ ಉಗ್ರಂ ಮಂಜು ಅವರು ರಾಜ ಆಗಿದ್ದರು. ಆದರೆ ಈಗ ಆಟದಲ್ಲಿ ಟ್ವಿಸ್ಟ್ ಇಡಲಾಗಿದೆ. ಬಿಗ್‌ ಬಾಸ್‌ ಮನೆಯಲ್ಲಿ ಮೋಕ್ಷಿತಾ ಈಗ ಯುವರಾಣಿಯಾಗಿದ್ದಾರೆ. ಉಗ್ರಂ ಮಂಜು ಒಬ್ಬರೇ ಈ ಬಿಗ್ ಬಾಸ್‌ ಸಾಮ್ರಾಜ್ಯಕ್ಕೆ ರಾಜ ಎಂದು ತುಂಬಾ ಬೀಗುತ್ತಿದ್ದರು. ಆದರೆ ಈಗ ಯುವರಾಣಿಯ ಆಗಮನ ಅವರಿಗೆ ಕೋಪ ತಂದಿದೆ. ತನ್ನ ಅಧಿಕಾರವನ್ನು ಯಾರೋ ಕಸಿಯಲು ಬಂದಿದ್ದಾರೆ ಎನ್ನುವ ರೀತಿ ವರ್ತನೆ ಮಾಡುತ್ತಿದ್ದಾರೆ.

Whats_app_banner