Bigg Boss Kannada 11: ಬಂಧನದಲ್ಲಿದ್ದಾರೆ ಬಿಗ್ ಬಾಸ್ ಮನೆಯ ರಾಜ, ರಾಣಿ; ಚೈತ್ರಾ ಮಾತಿಗೆ ಕೋಪಗೊಂಡು ಬಳೆ ಒಡೆದುಕೊಂಡ ಭವ್ಯಾ ಗೌಡ
ಬಿಗ್ ಬಾಸ್ ಮನೆಯಲ್ಲಿ ಈ ವಾರದ ಟಾಸ್ಕ್ ಜನರಿಗೆ ಸಖತ್ ಮಜ ನೀಡಿದೆ. ರಾಜನಾಗಿ ಉಗ್ರಂ ಮಂಜು ಹಾಗೇ ಯುವರಾಣಿಯಾಗಿ ಮೋಕ್ಷಿತಾ ಕಾಣಿಸಿಕೊಂಡಿದ್ದಾರೆ. ಆದರೆ ಬಿಗ್ ಬಾಸ್ ಈಗ ಅವರಿಬ್ಬರನ್ನೇ ಬಂಧನದಲ್ಲಿಟ್ಟಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಪ್ರಕಾರ ಈಗ ಯುವರಾಣಿ ಮೋಕ್ಷಿತಾ ಹಾಗೂ ರಾಜ ಉಗ್ರಂ ಮಂಜು ಅವರನ್ನು ಬಂಧನದಲ್ಲಿ ಇಡಲಾಗಿದೆ. ಇಬ್ಬರನ್ನೂ ಕರೆದು ಅವರ ಕೈಗೆ ಬೇಡಿ ಹಾಕಿ ಲಾಕ್ ಮಾಡಲಾಗಿದೆ. ಇನ್ನು ಉಗ್ರಂ ಮಂಜು ಅವರು ಹಾಗೂ ಮೋಕ್ಷಿತಾ ಇಬ್ಬರ ಕಣ್ಣಿಗೂ ಬಟ್ಟೆ ಕಟ್ಟಲಾಗಿದೆ. ಬಟ್ಟೆ ಕಟ್ಟಿ ಅವರಿಬ್ಬರನ್ನು ಹೊರಗಡೆ ಕರೆದುಕೊಂಡು ಹೋಗಿ ಕಟ್ಟಿ ಹಾಕಿದ್ದಾರೆ. ರಾಜ ಹಾಗೂ ರಾಣಿಯನ್ನು ಬಿಡಿಸಿಕೊಳ್ಳವುದು ಈಗ ಪ್ರಜೆಗಳ ಕೆಲಸ ಆಗಿರುತ್ತದೆ. ಆ ಕಾರಣಕ್ಕಾಗಿ ಪ್ರಜೆಗಳು ಅಂದರೆ ಮನೆಯ ಇತರ ಸದಸ್ಯರು ಆಟ ಆಡಬೇಕಿದೆ.
ಇನ್ನು ಟಾಸ್ಕ್‌ನಲ್ಲಿ ಬಿಗ್ ಬಾಸ್ ಭರ್ಜರಿ ಟ್ವಿಸ್ಟ್ ಇಟ್ಟಿದ್ದಾರೆ. ಟ್ವಿಸ್ಟ್ ಪ್ರಕಾರ ಅವರನ್ನು ಬಿಡಿಸಿಕೊಳ್ಳಲು ತುಂಬಾ ಕಷ್ಟ ಇದೆ. ಒಂದಷ್ಟು ಕ್ಲ್ಯೂ ಕೊಡಲಾಗಿದೆ ಅದನ್ನಾಧರಿಸಿ ಅವರು ತಮ್ಮ ರಾಜ ಅಥವಾ ರಾಣಿಯನ್ನು ಬಿಡಿಸಿಕೊಳ್ಳಬೇಕು. ಇನ್ನು ಈ ಆಟವನ್ನು ಎರಡು ತಂಡವಾಗಿ ಆಡುತ್ತಿದ್ದಾರೆ. ಒಂದು ಕೆಂಪು ಬಣ ಇನ್ನೊಂದು ನೀಲಿ ಬಣ. ಹೀಗಿರುವಾಗ ತ್ರಿವಿಕ್ರಂ ಮತ್ತು ಭವ್ಯಾ ಆಟ ಆಡುತ್ತಿದ್ಧಾರೆ.
ಒಬ್ಬರು ಸೂಚನೆ ನೀಡಬೇಕು. ಇನ್ನೊಬ್ಬರು ಅದನ್ನು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಪಾಲಿಸಬೇಕು. ಈ ರೀತಿಯಾಗಿ ಆಟ ಇರುತ್ತದೆ. ಆದರೆ ತ್ರಿವಿಕ್ರಂ ಭವ್ಯ ಅವರಿಗೆ ಮಟ್ಟಿ ಸಹಾಯ ಮಾಡಿದ್ದಾರೆ ಎನ್ನುವುದು ಚೈತ್ರಾ ಅವರ ವಾದ. ಆದರೆ ಇದನ್ನು ಯಾರೂ ಒಪ್ಪುತ್ತಿಲ್ಲ. ಇಲ್ಲ ನಾನು ಮುಟ್ಟಿಲ್ಲ ಎಂದು ತ್ರಿವಿಕ್ರಂ ಹೇಳುತ್ತಿದ್ಧಾರೆ. ಸಿಕ್ಕಾಪಟ್ಟೆ ಸಮಯದ ವರೆಗೆ ಇದೇ ರೀತಿ ಆಗುತ್ತದೆ.
ಅದಾದ ನಂತರದಲ್ಲಿ ಭವ್ಯ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಆಡುವ ಸಮಯದಲ್ಲಿ ಕೂಡ ಚೈತ್ರಾ ಕುಂದಾಪುರ ತುಂಬಾ ಕಿರುಚಾಡುತ್ತಾರೆ. ಭವ್ಯ ಸುಮ್ಮನಿರಿ ಎಂದು ಕೇಳಿಕೊಳ್ಳುತ್ತಾರೆ. ಆದರೆ ಚೈತ್ರಾ ಸುಮ್ಮನಾಗುವುದಿಲ್ಲ, ಆಗ ಅವರು ತಮ್ಮ ಕೈಯ್ಯನ್ನು ಅಲ್ಲಿದ್ದ ಮೇಜಿಗೆ ಬಡಿಯುತ್ತಾರೆ. ಅವರ ಕೈಗಿದ್ದ ಬಳೆಗಳು ಪುಡಿ ಪುಡಿಯಾಗಿ ಬೀಳುತ್ತವೆ.ಅದನ್ನು ನಾವೀಗ ಬಿಡುಗಡೆಯಾದ ಪ್ರೋಮೋದಲ್ಲಿ ಕಾಣಬಹುದು.
ಗೌತಮಿದೂ ಅತಿ ಆಯ್ತೂ ಮಹಾರಾಜ ಮಂಜಣ್ಣ ಮಾತಾಡೋ ಮುಂಚೆ ಅವಳೇ ಎಲ್ಲಾ ಮಾತಾಡ್ತಾಳೆ ಉದಾ ಮೋಕ್ಷೀತಾ ಮೈಕ್ ಧರಿಸದೇ ಇದ್ದಾಗ ಇವಳೇ ಶಿಕ್ಷೆ ನಿರ್ಧಾರ ಮಾಡ್ತಾಳೇ ಎಂದು ಗೌತಮಿ ವಿರುದ್ಧವಾಗಿ ಕಾವ್ಯ ಕಾಮೆಂಟ್ ಮಾಡಿದ್ದಾರೆ.
ಚೈತ್ರಾ ನಿರ್ಧಾರ
ಉಸ್ತುವಾರಿಯನ್ನು ಮಾಡುವಾಗ ಚೈತ್ರ ಯಾರಿಗೂ ಹೆದರದೆ ಬಿಗ್ ಬಾಸ್ ಏನು ನಿಯಮ ಮಾಡುತ್ತಾರೊ ಆ ಪ್ರಕಾರ ಮಾಡುತ್ತಾರೆ ಇದು ಹಲವು ಬಾರಿ ಸಾಬೀತಾಗಿದೆ. ಇದನ್ನು ಅರ್ಥಮಾಡಿಕೊಂಡವರಿಗೆ ಗೊತ್ತು ಎಂದು ನಾಗರಾಜ್ ಎಂಬುವವರು ಚೈತ್ರಾ ಪರ ಕಾಮೆಂಟ್ ಮಾಡಿದ್ದಾರೆ.
ನೆನ್ನೆ ಶಿಶಿರನ್ನ ಮಂಜು ಎತ್ತಿದ್ದೆ ತಡ, ಬಿಗ್ಬಾಸ್ ನಿಲ್ಲಿಸಿ ನಿಲ್ಲಿಸಿ ಅಂತ ಆದೇಶ ಕೊಟ್ರು.
ಅದೇ ಜಗದೀಶ್ ಗಲಾಟೆ ಆಗುವಾಗ ಯಾಕಪ್ಪ ಬೇಗ ನಿಲ್ಲಿಸಿಲ್ಲ?
ಕುಡುಕ ಮಂಜು ಗೆ ಚಾನಲ್ ಮತ್ತು ಬಿಬಿ ಟೀಮ್ ಸಪೋರ್ಟ್ ಖಂಡಿತ ಇದೆ ಎಂದು ಜನೀಲ್ ಎಂಬುವವರು ಕಾಮೆಂಟ್ ಮಾಡಿದ್ಧಾರೆ. ಒಟ್ಟಿನಲ್ಲಿ ಬಿಗ್ ಬಾಸ್ ಬಗ್ಗೆ ನಾನಾ ರೀತಿಯ ಅಭಿಪ್ರಾಯಗಳಿದೆ.