Bigg Boss Kannada 11: ನನ್ನ ಸ್ವಾಭಿಮಾನಕ್ಕಿಂತ ಯಾವುದೂ ಹೆಚ್ಚಲ್ಲ ಎಂದು ಗೌತಮಿ ಜೊತೆ ಜೋಡಿಯಾಗಲು ಒಪ್ಪದ ಮೋಕ್ಷಿತಾ; ಬಿಗ್ ಬಾಸ್‌
ಕನ್ನಡ ಸುದ್ದಿ  /  ಮನರಂಜನೆ  /  Bigg Boss Kannada 11: ನನ್ನ ಸ್ವಾಭಿಮಾನಕ್ಕಿಂತ ಯಾವುದೂ ಹೆಚ್ಚಲ್ಲ ಎಂದು ಗೌತಮಿ ಜೊತೆ ಜೋಡಿಯಾಗಲು ಒಪ್ಪದ ಮೋಕ್ಷಿತಾ; ಬಿಗ್ ಬಾಸ್‌

Bigg Boss Kannada 11: ನನ್ನ ಸ್ವಾಭಿಮಾನಕ್ಕಿಂತ ಯಾವುದೂ ಹೆಚ್ಚಲ್ಲ ಎಂದು ಗೌತಮಿ ಜೊತೆ ಜೋಡಿಯಾಗಲು ಒಪ್ಪದ ಮೋಕ್ಷಿತಾ; ಬಿಗ್ ಬಾಸ್‌

ನನ್ನ ಸ್ವಾಭಿಮಾನಕ್ಕಿಂತ ಯಾವುದೂ ಹೆಚ್ಚಲ್ಲ ಎಂದು ಮೋಕ್ಷಿತಾ ಹೇಳಿದ್ದಾರೆ. ಇದಕ್ಕೆ ಕಾರಣ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಯಾರಾದರೂ ಮೋಕ್ಷಿತಾ ಪರವಾಗಿ ಆಟ ಆಡಬೇಕಿರುತ್ತದೆ. ಆಗ ಗೌತಮಿ ಬಳಿ ವಿನಂತಿ ಮಾಡಿಕೊಳ್ಳುವ ಪ್ರಸಂಗ ಬರುತ್ತದೆ. ಆದರೆ ಮೋಕ್ಷಿತಾ ಅದನ್ನು ಒಪ್ಪುವುದಿಲ್ಲ.

ಗೌತಮಿ ಜೊತೆ ಜೋಡಿಯಾಗಲು ಒಪ್ಪದ ಮೋಕ್ಷಿತಾ
ಗೌತಮಿ ಜೊತೆ ಜೋಡಿಯಾಗಲು ಒಪ್ಪದ ಮೋಕ್ಷಿತಾ

ಬಿಗ್ ಬಾಸ್‌ ಮನೆಯಲ್ಲಿ ಆಟದ ಕಾವು ಹೆಚ್ಚುತ್ತಿದೆ. ಈಗ ಕ್ಯಾಪ್ಟನ್ಸಿ ಟಾಸ್ಕ್‌ ಎದುರಾಗಿದೆ. ಇದರಲ್ಲಿ ಯಾರು ಗೆಲ್ಲುತ್ತಾರೆ ಎಂದು ಕಾದು ನೋಡುವ ಮುನ್ನವೇ ಆಟಕ್ಕೇ ಕುತ್ತು ಬಂದಿದೆ. ಈ ಆಟವನ್ನು ಎಲ್ಲರೂ ಜೋಡಿಯಾಗಿ ಆಡಬೇಕಿತ್ತು. ಎಲ್ಲರೂ ತಮ್ಮ ತಮ್ಮ ಜೋಡಿಯ ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ ಮೋಕ್ಷಿತಾ ಹಾಗೂ ಗೌತಮಿ ಮಾತ್ರ ಹಾಗೇ ಉಳಿದುಕೊಂಡಿದ್ದಾರೆ. ಈಗ ಮೋಕ್ಷಿತಾಗೆ ಗೌತಮಿ ಸಹಕರಿಸಲೇಬೇಕು. ಗೌತಮಿಗೆ ಮೋಕ್ಷಿತಾ ಸಹಕರಿಸಲೇ ಬೇಕು ಎಂಬ ಪ್ರಸಂಗ ಎದುರಾಗಿದೆ. ಹೀಗಿರುವಾಗ ಮುಂದೇನಾಗುತ್ತದೆ ಎಂದು ವೀಕ್ಷಕರು ಕಾಯುತ್ತಿದ್ದಾರೆ. ಯಾಕೆಂದರೆ ಮೊದಲಿನಿಂದಲೂ ಗೌತಮಿ ಹಾಗೂ ಮೋಕ್ಷಿತಾ ಇಬ್ಬರಿಗೂ ಆಗಿ ಬರುವುದಿಲ್ಲ.

ಈಗ ಅವರಿಬ್ಬರೂ ಸೇರಿ ಆಟ ಆಡಿ ಗೆದ್ದರೆ ಯಾರಾದರೂ ಒಬ್ಬರು ಕ್ಯಾಪ್ಟನ್ ಆಗುತ್ತಾರೆ. ಆಗ ಗೌತಮಿ ಕ್ಯಾಪ್ಟನ್ ಆಗದೆ ನಿಜವಾಗಿ ಗೆದ್ದು ಮೋಕ್ಷಿತಾ ಕ್ಯಾಪ್ಟನ್ ಆದರೂ ಕೂಡ ಅದನ್ನು ಗೌತಮಿ ಹೇಳುತ್ತಿರುತ್ತಾರೆ. ಇದೆಲ್ಲ ನನ್ನಿಂದಲೇ ಎಂದು ಭಾವಿಸುತ್ತಾರೆ ಎಂಬ ಕಾರಣಕ್ಕೆ ನಾನು ಗೌತಮಿ ಜೊತೆ ಆಟ ಆಡೋದಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಇದು ಜಸ್ಟ್‌ ಆಟ ಒಮ್ಮೆ ಒಪ್ಪಿಕೊಂಡು ಆಡಿಬಿಡಿ ಎಂದು ಸಾಕಷ್ಟು ಜನ ಹೇಳುತ್ತಿದ್ದಾರೆ.

ಕ್ಯಾಪ್ಟನ್ಸಿ ಟಾಸ್ಕ್‌ಗೆ ಸೆಲೆಕ್ಟ್ ಆಗಿರುವ ಸದಸ್ಯರು ಉಳಿದ ಸದಸ್ಯರ ಬಳಿ ನಮ್ಮ ಪರವಾಗಿ ಆಟ ಆಡಿ ಎಂದು ಕೇಳಿಕೊಳ್ಳಬೇಕಿರುತ್ತದೆ. ಆ ರೀತಿ ಕೇಳಿಕೊಳ್ಳುವಾಗ ಎಲ್ಲರೂ ಒಬ್ಬೊಬ್ಬರನ್ನು ನಿಗದಿ ಮಾಡಿಕೊಳ್ಳುತ್ತಾರೆ. ಆದರೆ ಮೋಕ್ಷಿತಾ ಮಾತ್ರ ಗೌತಮಿ ಹತ್ತಿರ ನಾನು ನನಗಾಗಿ ಆಟ ಆಡಿ ಎಂದು ಕೇಳುವುದಿಲ್ಲ ಎಂದಿದ್ದಾರೆ.

ಏನಿದೆ ಜನಾಭಿಪ್ರಾಯ?

ಮೋಕ್ಷಿತಾ ತಗೊಂಡಿರೋ ನಿರ್ಧಾರ ಖಂಡಿತ ಸರಿ ಇದೆ ನಾಳೆ ಮೋಕ್ಷಿತ ಕ್ಯಾಪ್ಟನ್ ಆದ್ರೆ ಅದಕ್ಕೆ ನಾನು ಹಾಕಿದ ಭಿಕ್ಷೆ ಅಂತಾಳೆ ಗೌತಮಿ. ಯುವರಾಣಿ ಆಗಿದ್ದಾಗ ಬಿಗ್ ಬಾಸ್ ಹೇಳಿರೋ ಟಾಸ್ಕ್ ಗೆ ಮರ್ಯಾದೆ ಕೊಟ್ಟು ಆಟ ಆಡಿಲ್ಲ ಆಗ ಗೌತಮಿಗೆ ಬಿಗ್ ಬಾಸ್ ಏನು ಹೇಳಿಲ್ಲ ಈಗ ಯಾಕೆ? ಎಂದು ಅಶ್ವಿನಿ ಯಾದವ್ ಕಾಮೆಂಟ್ ಮಾಡಿದ್ದಾರೆ. ಗೌತಮಿ ಪಾಸಿಟಿವ್ ಎಂಬ ಮುಖವಾಡ ಹಾಕಿಕೊಂಡು ನೆಗಟಿವ್ ಆಟ ಆಡುತ್ತಿದ್ದಾರೆ ಎಂಬುದು ಎಲ್ಲರ ವಾದ ಆಗಿದೆ.

ತ್ರಿವಿಕ್ರಮ್ ಹೇಳಿರೋದು ಸತ್ಯನೋ ಇಲ್ವೋ ಗೊತ್ತಿಲ್ಲ ಆದ್ರೆ ಮೋಕ್ಷಿತ ಒಂದುಸಲ ಇದ್ದಂಗೆ ಮತ್ತೊಂದುಸಲ ಇರಲ್ಲ ಸೈಕೋ ರೀತಿ ಮಾತಾಡ್ತಾಳೆ ಎಂದು ಮೋಕ್ಷಿತಾ ವಿರುದ್ದವಾಗಿಯೂ ಕಾಮೆಂಟ್‌ಗಳು ಬರುತ್ತಿದೆ.

ಇದು ಮೊಕ್ಷಿತಾ ಅಂದರೆ ನಿಜವಾಗ್ಲೂ ಸ್ವಾಭಿಮಾನ ಮರಿಯಾದೆ ಗೌರವಕ್ಕಾಗಿ ಇರುವವರು ಮಂಜಣ್ಣ ಹಾಡು ಹಾಡಿ ಹಿಯಾಳಿಸಿ ನೋಯಿಸ್ತಿದ್ರೆ ಖುಷಿಯಿಂದ ನಕ್ಕವರು ಗೌತಮಿ & ಭವ್ಯ ಎಂದು ಶ್ರೀಲೀಲಾ ಕಾಮೆಂಟ್ ಮಾಡಿದ್ಧಾರೆ.

Whats_app_banner