ಹಿಂಗೆ ಜಗಳ ಆಡ್ತೀರಿ ಎಂದಿದ್ದರೆ ನಾನು ಬರ್ತಾನೇ ಇರಲಿಲ್ಲ; ಮೊದಲ ದಿನವೇ ಹಳ್ಳಿ ಹಕ್ಕಿ ಹನುಮಂತನಿಗೆ ಸಾಕಾಯ್ತು ಬಿಗ್‌ಬಾಸ್
Bigg Boss Kannada 11: ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್‌ಬಾಸ್ ಶೋಗೆ ಆಗಮಿಸಿದ ಮೊದಲ ದಿನವೇ ಬಿಗ್‌ಬಾಸ್ ಸರ್ಪ್ರೈಸ್ ನೀಡಿದ್ದಾರೆ. ಈ ವಾರ ಹನಮಂತ ಅವರಿಗೆ ಕ್ಯಾಪ್ಟನ್ ಪಟ್ಟ ಸಿಕ್ಕಿದೆ. ಹೀಗೆ ಬಿಗ್ ಮನೆಗೆ ಬಂದ ಮೊದಲ ಹನಮಂತಗೆ ದಿನವೇ ಬಿಗ್ ಬಾಸ್ ಶೋ ಸಾಕಾಗಿದೆ. ನಾನಿನ್ನು ಇಲ್ಲಿ ಇರಲ್ಲ ಎಂದು ಹೊರಡುತ್ತೇನೆ ಎಂದಿದ್ದಾರೆ.
Bigg Boss Kannada 11: ಸಹಜವಾಗಿ ಬಿಗ್‌ಬಾಸ್ ಕಾರ್ಯಕ್ರಮದಲ್ಲಿ ವೈಲ್ಡ್ ಕಾರ್ಡ್ ಎಂಟ್ರಿಯಾಗುವುದು ಕೆಲ ವಾರಗಳು ಕಳೆದ ಬಳಿಕ. ಆದರೆ, ಈ ಸಲ ಅಚ್ಚರಿಯ ಬೆಳವಣಿಗೆಗೆ ಕನ್ನಡದ ಬಿಗ್ ಬಾಸ್ ಸಾಕ್ಷಿಯಾಗಿದೆ. ಕಳೆದ ವಾರ ಲಾಯರ್ ಜಗದೀಶ್ ಮೇಲೆ ದೈಹಿಕ ಹಲ್ಲೆ ಮಾಡಿದ ಆರೋಪದ ಮೇಲೆ ಬಿಗ್ ಬಾಸ್ ಮನೆಯಿಂದ ಹೊರನಡೆದರೆ, ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಕ್ಕೆ ಲಾಯರ್ ಜಗದೀಶ್ ಅವರನ್ನೂ ಮನೆಯಿಂದ ಹೊರ ಕಳಿಸಲಾಗಿತ್ತು. ಹಾಗೆ ಹೊರ ಹೋದ ಬಳಿಕ ಮನೆ ಪ್ರವೇಶಿಸಿದವರು ಗಾಯಕ ಹನಮಂತ ಲಮಾಣಿ.
ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್‌ಬಾಸ್ ಶೋಗೆ ಆಗಮಿಸಿದ ಮೊದಲ ದಿನವೇ ಬಿಗ್‌ಬಾಸ್ ಸರ್ಪ್ರೈಸ್ ನೀಡಿದ್ದಾರೆ. ಈ ವಾರ ಹನಮಂತ ಅವರಿಗೆ ಕ್ಯಾಪ್ಟನ್ ಪಟ್ಟ ಸಿಕ್ಕಿದೆ. ಅದರಂತೆ, ಭಾನುವಾರದ ಸಂಚಿಕೆಯಲ್ಲಿಯೇ ಮನೆಯ ಇತರ ಸದಸ್ಯರಿಗೆ ಯಾವೆಲ್ಲ ಕೆಲಸ ಮಾಡಬೇಕು ಎಂಬ ಜವಾಬ್ದಾರಿಯನ್ನೂ ವಹಿಸಿದ್ದಾರೆ. ಹನಮಂತನ ಸಹಾಯಕ್ಕೆ ಗೋಲ್ಡ್ ಸುರೇಶ್ ಮತ್ತು ಧನರಾಜ್ ಅವರನ್ನು ಜತೆಗೆ ಬಿಟ್ಟಿದ್ದಾರೆ. ಹೀಗೆ ಬಿಗ್ ಮನೆಗೆ ಬಂದ ಮೊದಲ ಹನಮಂತಗೆ ದಿನವೇ ಬಿಗ್ ಬಾಸ್ ಶೋ ಸಾಕಾಗಿದೆ. ನಾನಿನ್ನು ಇಲ್ಲಿ ಇರಲ್ಲ ಎಂದು ಹೊರಡುತ್ತೇನೆ ಎಂದಿದ್ದಾರೆ.
ಯಾರಿಗೆ ಯಾವ ಸ್ಥಾನ?
ಮನೆಯ ಯಾವ ಸದಸ್ಯ ಯಾವ ಸ್ಥಾನದಲ್ಲಿ ಇರಬೇಕು ಎಂದು ಹನಮಂತ ನಿರ್ಧರಿಸಬೇಕು ಎಂದು ಬಿಗ್ ಬಾಸ್ ಆದೇಶಿಸಿದ್ದಾರೆ. ಅದರಂತೆ. ಒಂದರಿಂದ 14 ಅಂಕಿಯಲ್ಲಿ ಒಬ್ಬೊಬ್ಬರಿಗೂ ಒಂದೊಂದು ಸ್ಥಾನ ನೀಡಿದ್ದಾರೆ. ಆ ಪೈಕಿ ಮೊದಲ ಸ್ಥಾನದಲ್ಲಿ ಶಿಶಿರ್, ಎರಡರಲಿ ಗೌತಮಿ, ಮೂರರಲ್ಲಿ ಮೋಕ್ಷಿತಾ, ನಾಲ್ಕರಲ್ಲಿ ಐಶ್ವರ್ಯಾ, ಐದರಲ್ಲಿ ಧನರಾಜ್, ಆರರಲ್ಲಿ ಉಗ್ರಂ ಮಂಜು, ಏಳರಲ್ಲಿ ಭವ್ಯಾ ಗೌಡ, ಎಂಟರಲ್ಲಿ ಅನುಷಾ, ಒಂಭತ್ತರಲ್ಲಿ ಧರ್ಮ ಕೀರ್ತಿರಾಜ್, ಹತ್ತರಲ್ಲಿ ಮಾನಸಾ, 11ರಲ್ಲಿ ಹಂಸಾ, 12ರಲ್ಲಿ ತ್ರಿವಿಕ್ರಮ್, 13ರಲ್ಲಿ ಚೈತ್ರಾ, 14ರಲ್ಲಿ ಗೋಲ್ಡ್ ಸುರೇಶ್‌ಗೆ ಸ್ಥಾನ ನೀಡಿದ್ದಾರೆ.
ಹನಮಂತ ಮೇಲೆ ಮುಗಿಬಿದ್ದ ಸ್ಪರ್ಧಿಗಳು
ಹೀಗೆ ಅವರವರ ಸ್ಥಾನ ನೀಡಿದ್ದೇ ತಡ, ಎಲ್ಲರೂ ನನಗೇಕೆ ಈ ಸ್ಥಾನ ನೀಡಿದ್ದೀರಿ ಎಂದು ವಿವರಣೆ ಕೊಡಿ ಎಂದು ಹನಮಂತ ಪ್ರಶ್ನೆ ಮಾಡಿದ್ದಾರೆ. ತ್ರಿವಿಕ್ರಮ್, ಭವ್ಯ ಕೊಂಚ ಬಿರುಸಾಗಿಯೇ ಮಾತನಾಡಿದ್ದಾರೆ. ಬಳಿಕ ನಾನಿಲ್ಲಿ ಬಂದಿದ್ದು ಚಪಾತಿ ಮಾಡೋಕೆ, ಲವ್ ಮಾಡೋಕೆ ಬಂದಿಲ್ಲ ಎಂದು ಧರ್ಮ ಉತ್ತರ ನೀಡಿದ್ದಾರೆ. ಇದನ್ನು ಕಂಡ ಹನಮಂತ, ತಲೆ ಮೇಲೆ ಕೈ ಹೊತ್ತು ಕೂತಿದ್ದಾರೆ. ಹಿಂಗೆ ಜಗಳ ಆಡ್ತೀರಿ ಎಂದಿದ್ದರೆ ನಾನು ಬರ್ತಾನೇ ಇರಲಿಲ್ಲ. ನಾನು ಈ ಆಟದಲ್ಲಿಲ್ಲ, ಕ್ಯಾನ್ಸಲ್. ಕ್ಯಾಪ್ಟನ್ ಕ್ಯಾನ್ಸಲ್ ಎಂದು ಬಿಗ್‌ಬಾಸ್‌ಗೆ ಕ್ಯಾಮರಾ ಮುಂದೆ ಹೇಳಿದ್ದಾರೆ.
ವೀಕ್ಷಕರ ಪ್ರತಿಕ್ರಿಯೆ ಏನು?
- ಹಳ್ಳಿ ಹುಡುಗನ್ನ ಕರ್ಕೊಂಡು ಹೋಗಿ ನಿಮ್ಮ ಬೇಳೆ ಬೇಯಿಸಿ ಕೊಳ್ತಾ ಇದಾರೆ ಬಿಗ್ ಬಾಸ್
- ನರಿಗಳ ಬೋನಿ ಯಿಂದ ಸಿಂಹ ನಾ ಹೊರಗಡೆ ಹಾಕಿ, ಒಳಗೆ ಕುರಿನ ಬಿಟ್ಟರೆ ಪಾಪಾ ಏನು ಮಾಡೋಕೆ ಆಗುತ್ತೆ
- ಬಿಗ್ ಬಾಸ್ ತಂಡ ಹನುಮಂತ ಅವರನ್ನು ಅವರನ್ನು ಮುಗ್ಧತೆಯನ್ನು ಬಲಿ ಪಡೆಯುತ್ತದೆ ಅನಿಸುತ್ತೆ
- ಮಗ ಅಂತ ಲಾಯರ್ ಜಗ್ಗಣ್ಣನ್ನೇ ಬಿಡ್ಲಿಲ್ಲ ಇನ್ನೂ ನಿನ್ನ ಬಿಡ್ತಾರೇನೋ ಹುರ್ದು ಮುಕ್ತಾರೆ... ಉಷಾರ್ ಹನುಮಂತ
- ಆ ಜಾಗದಲ್ಲಿ ಜಗದೀಶ್ ಸರ್ ಇದ್ದಿದ್ರೆ, ಒಬ್ಬೊಬ್ಬರು ಉಸಿರು ಬಿಡ್ತಾ ಇರಲಿಲ್ಲ.. ಪಾಪ ಹನುಮಂತ ಮುಗ್ದ
- ಯಪ್ಪಾ ನೆನ್ನೆ ಬಂದವನು ಎಲ್ಲಾ ಎಪಿಸೋಡ್ ನೋಡವ್ನೆ ಅಂತಾನು ನೋಡ್ದೆ ಅವ್ನ ಮೇಲೆ ಜಗಳಕ್ಕೆ ಹೋಗ್ತಾವಲ್ಲ ಇವು
- ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಅಂತ ಉಂಟಲ್ಲ ಹಾಗೆ ಆಯಿತು..
ಆತನಿಗೆ ಏನು ಗೊತ್ತಿಲ್ಲ ಅಂತ ಎಲ್ಲರ ಹಾರಾಟ ಅವನ ಮೇಲೆ.. ಒಬ್ಬ ಅಮಾಯಕನ್ನು ಬಲಿಪಶು ಮಾಡುವ ಆಟ..
ವಿಭಾಗ