Bigg Boss Kannada:ಗೋಲ್ಡ್‌ ಸುರೇಶ್‌ಗೆ ಅವಾಚ್ಯ ಪದದಲ್ಲಿ ಬೈದ ರಜತ್; ನಾನು ಈ ಮನೆಯಲ್ಲಿ ಒಂದು ಕ್ಷಣವೂ ಇರುವುದಿಲ್ಲ ಎಂದು ಗೋಲ್ಡ್‌ ಸುರೇಶ್‌
ಕನ್ನಡ ಸುದ್ದಿ  /  ಮನರಂಜನೆ  /  Bigg Boss Kannada:ಗೋಲ್ಡ್‌ ಸುರೇಶ್‌ಗೆ ಅವಾಚ್ಯ ಪದದಲ್ಲಿ ಬೈದ ರಜತ್; ನಾನು ಈ ಮನೆಯಲ್ಲಿ ಒಂದು ಕ್ಷಣವೂ ಇರುವುದಿಲ್ಲ ಎಂದು ಗೋಲ್ಡ್‌ ಸುರೇಶ್‌

Bigg Boss Kannada:ಗೋಲ್ಡ್‌ ಸುರೇಶ್‌ಗೆ ಅವಾಚ್ಯ ಪದದಲ್ಲಿ ಬೈದ ರಜತ್; ನಾನು ಈ ಮನೆಯಲ್ಲಿ ಒಂದು ಕ್ಷಣವೂ ಇರುವುದಿಲ್ಲ ಎಂದು ಗೋಲ್ಡ್‌ ಸುರೇಶ್‌

ಬಿಗ್‌ ಬಾಸ್‌ ಮನೆಯೊಳಗಡೆ ವೈಲ್ಡ್‌ಕಾರ್ಡ್‌ ಎಂಟ್ರಿ ಆದಾಗಿನಿಂದ ಬೇರೆಯದೇ ಒಂದು ಲೋಕ ಸೃಷ್ಟಿಯಾಗಿದೆ. ಯಾರು ಗೆಲ್ಲುತ್ತಾರೆ ಎಂದು ನಿರ್ಣಯ ಮಾಡಲು ಎಲ್ಲರೂ ಈಗ ಕುತೂಹಲದಿದ್ದಾರೆ. ಈ ವಾರದ ಮೊದಲನೇ ಟಾಸ್ಕ್‌ ಆಡುವಾಗ ಗೋಲ್ಡ್‌ ಸುರೇಶ್‌ ಹಾಗೂ ರಜತ್‌ ನಡುವೆ ಗಲಾಟೆಯಾಗಿದೆ.

ಗೋಲ್ಡ್‌ ಸುರೇಶ್‌ಗೆ ಅವಾಚ್ಯ ಪದದಲ್ಲಿ ಬೈದ ರಜತ್
ಗೋಲ್ಡ್‌ ಸುರೇಶ್‌ಗೆ ಅವಾಚ್ಯ ಪದದಲ್ಲಿ ಬೈದ ರಜತ್

ರಜತ್ ಮನೆಯೊಳಗಡೆ ಬಂದಾಗಿನಿಂದ ನಾನು ಎಲ್ಲರಿಗಿಂತ ಜಾಸ್ತಿ ಶಕ್ತಿಯುಳ್ಳವನು ಎಂದು ಹೇಳುತ್ತಲೇ ಇದ್ದಾರೆ. ಬಿಗ್ ಬಾಸ್‌ ಮನೆಯೊಳಗಡೆ ಹೋಗುವಾಗಲೂ ಅದೇ ರೀತಿ ಮಾತಾಡಿಕೊಂಡು ಹೋಗಿದ್ದಾರೆ. ಬಿಗ್‌ ಬಾಸ್‌ ಮನೆಯೊಳಗಡೆ ಹೋದ ನಂತರ ಅಲ್ಲಿರುವ ಸ್ಪರ್ಧಿಗಳಿಗೆ ತನ್ನ ಬಗ್ಗೆ ಭಯ ಹುಟ್ಟಬೇಕು ಎಂಬಂತೆ ಅವರು ನಡೆದುಕೊಳ್ಳುತ್ತಿದ್ದರೆ, ಉಗ್ರಂ ಮಂಜು ಹಾಗೂ ಇನ್ನಿತರ ಸ್ಪರ್ಧಿಗಳು ರಜತ್ ಬಗ್ಗೆ ಇವನೇನೂ ಇಲ್ಲ, ಇನತ್ರ ಏನೂ ಮಾಡೋಕೂ ಆಗೋದಿಲ್ಲ ಎಂದು ಮಾತಾಡಿಕೊಂಡಿದ್ದಾರೆ. ಆಗ ಉಗ್ರಂ ಮಂಜು ನಾವು ಎಲ್ಲ ಸೇರಿ ಅವನನ್ನು ನೋಡಿಕೊಳ್ಳೋಣ ಬಿಡೋದು ಬೇಡ ಎಂದು ಹೇಳಿದ್ದರು.

ಅದೇ ರೀತಿ ಇಂದು ಬಿಗ್‌ ಬಾಸ್‌ ನೀಡಿದ ಆಟದಲ್ಲಿ ಪುರುಷ ಸ್ಪರ್ಧಿಗಳು ಮಾತ್ರ ಕಾಣಿಸಿಕೊಂಡಿದ್ದಾರೆ. ಆಟ ಆಡುತ್ತಿರುವ ಸಂದರ್ಭದಲ್ಲಿ ಜಗಳವಾಗಿದೆ. ತಂಡವಾಗಿ ಅಥವಾ ವಯಕ್ತಿಕವಾಗಿ ಹೇಗೆ ಆಟ ಆಡುತ್ತಿದ್ದರು ಎಂಬುದು ಪ್ರೋಮೋದಲ್ಲಿ ತಿಳಿದು ಬಂದಿಲ್ಲ. ಆದರೆ ರಜತ್, ತ್ರಿವಿಕ್ರಂ ಹಾಗೂ ಗೋಲ್ಡ್ ಸುರೇಶ್‌ ನಡುವೆ ಜಗಳ ಆಗಿರುವುದು ಕಾಣಿಸುತ್ತದೆ.

ಗೋಡ್‌ ಸುರೇಶ್‌ ಅವರು ಹಾಗೂ ರಜತ್ ತುಂಬಾ ದೊಡ್ಡ ಗಲಾಟೆ ಮಾಡಿಕೊಂಡಿದ್ದಾರೆ. ಮೊದಲ ಆಟದಲ್ಲೇ ರಜತ್ ತುಂಬಾ ಕೆಟ್ಟ ಕೆಟ್ಟ ಪದಗಳನ್ನು ಬಳಸಿ ಮಾತನಾಡಿದ್ದಾರೆ. "ಸೆಡೆ ಮಗನೆ" ಎಂದಿದ್ದಾರೆ. ಅವಾಚ್ಯ ಪದಗಳನ್ನು ಬಳಸಿದ ಕಾರಣ ಗೋಲ್ಡ್‌ ಸುರೇಶ್ ಅವರಿಗೆ ಕೋಪ ಹಾಗೂ ಅದರೊಟ್ಟಿಗೆ ತೀವ್ರ ಬೇಸರ ಆಗಿರುವುದು ಕಾಣಿಸುತ್ತದೆ. ಅವರು ನಾನು ಈ ಮನೆ ಬಿಟ್ಟು ಹೋಗ್ತೀನಿ ದಯವಿಟ್ಟು ಡೋರ್ ಓಪನ್ ಮಾಡಿ ಎಂದು ಹೇಳುತ್ತಾ ಚೀರುವುದು ಕಾಣಿಸುತ್ತದೆ.

ಉಗ್ರಂ ಮಂಜು ಗೋಲ್ಡ್‌ ಸುರೇಶ್ ಹಾಗೂ ರಜತ್ ಮಧ್ಯ ಜಗಳ ಆಗುತ್ತಿರುವ ಸಂದರ್ಭದಲ್ಲಿ ಅವರಿಬ್ಬರನ್ನೂ ತಡೆಯುವ ಪ್ರಯತ್ನ ಮಾಡಿದ್ದರು. ಆದರೆ ಅವರ ಮಾತಿಗೂ ಇಬ್ಬರೂ ಒಪ್ಪಲಿಲ್ಲ. ಇನ್ನು ಆಟ ಆಡುತ್ತಿರುವುದನ್ನು ಬಿಟ್ಟು ಗೋಲ್ಡ್‌ ಸುರೇಶ್ ಹೊರಗಡೆ ಬಂದು ಜೋರು ಜೋರಾಗಿ ಮಾತನಾಡಿ “ಇವರು ಹೇಳಿದ ಮಾತನ್ನೆಲ್ಲ ಅನ್ನಿಸಿಕೊಂಡು ಇಲ್ಲಿರಲು ನನಗೆ ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.

ಭವ್ಯಾ ಗೌಡ ಅವರನ್ನು ಸಮಾಧಾನ ಮಾಡಲು ಪ್ರಯತ್ನ ಮಾಡಿದ್ದಾರೆ. ಇನ್ನು ತ್ರಿವಕ್ರಂ ಕೂಡ ತುಂಬಾ ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದಾರೆ. ಆದರೆ ಆ ಕ್ಷಣದ ಕೋಪಕ್ಕೆ ಗೋಲ್ಡ್‌ ಸುರೇಶ್‌ ಅವರು ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ.

ರಜಿತ ಮತ್ತು ಶೋಬಾ ಇವರಿಬ್ಬರದ್ದು ಅತಿಯಾಗಿ ದೆ ಬಿಗ್ ಬಾಸ್ ಇವರ ಮನೆಯಾಗಿದೆ ಮೊದಲು ಇವರಿಬ್ಬರೂ ಆಚೆ ಕಳಿಸಿ ಬಿಗ್ ಬಾಸ್ ಎಂದು ಜನರು ಕಾಮೆಂಟ್ ಮಾಡುತ್ತಿದ್ದಾರೆ. ಜನರ ಅಭಿಪ್ರಾಯದ ಪ್ರಕಾರ ರಂಜಿತ್ ಪರ ಯಾರೂ ಇಲ್ಲ.

Whats_app_banner