Bigg Boss Kannada 11: ಸೊಕ್ಕವ ಸುಟ್ಟು ಬೂದಿಯ ಮಾಡೋ.. ಎನ್ನುತ್ತ ರಜತ್ ಕಿಶನ್‌ಗೆ ಸುತ್ತಿಗೆಯಿಂದ ಹೊಡೆದ ಹನುಮಂತು
Bigg Boss Kannada 11: ಬಿಗ್ ಬಾಸ್ ಮನೆ ಮಂದಿಗೆ ಕಿಚ್ಚ ಸುದೀಪ್ ನೀಡಿದ ಆಕ್ಟಿವಿಟಿಯಲ್ಲಿ ರಜತ್ ಕಿಶನ್ ವಿರುದ್ಧ ಕಹಳೆ ಮೊಳಗಿಸಿದ್ದಾರೆ ಹನುಮಂತ ಲಮಾಣಿ. ಸುತ್ತಿಗೆಯಿಂದ ರಜತ್ ಭಾವಚಿತ್ರವಿರುವ ತಟ್ಟೆಗೆ ಹೊಡೆದು, ಸಿಟ್ಟು ಕಡಿಮೆ ಮಾಡಿಕೋ ಎಂದು ಸಲಹೆ ನೀಡಿದ್ದಾರೆ.

Bigg Boss Kannada 11: ಬಿಗ್ ಬಾಸ್ ಕನ್ನಡ ಸೀಸನ್ 11 ಇದೀಗ 90 ಪ್ಲಸ್ ದಿನಗಳನ್ನು ಪೂರೈಸಿದೆ. ಇನ್ನೇನು ಕೆಲವೇ ವಾರಗಳಲ್ಲಿ ಫಿನಾಲೆಯೂ ಬರಲಿದೆ. ಈ ನಡುವೆ ಸೂಪರ್ ಸಂಡೇ ವಿಥ್ ಬಾದ್‌ಷಾ ಸುದೀಪ್ ಸಂಚಿಕೆಯಲ್ಲಿ ಮನೆ ಮಂದಿಗೆ ಬಗೆಬಗೆ ಆಕ್ಟಿವಿಟಿ ನೀಡಿ ಎಲ್ಲರನ್ನು ಬಡಿದೆಬ್ಬಿಸುತ್ತಿದ್ದಾರೆ. ಆ ಪೈಕಿ ಇದೀಗ ಮನೆಯ ಹಾಡು ಹಕ್ಕಿ ಹನುಮಂತ ಲಮಾಣಿ, ರಜತ್ ಕಿಶನ್‌ಗೆ ಟಾಂಗ್ ಕೊಟ್ಟಿದ್ದಾರೆ. ಕೈಯಲ್ಲಿ ಸುತ್ತಿಗೆ ಹಿಡಿದು ಗುದ್ದಿದ್ದಾರೆ.
ಭಾನುವಾರದ ಬಿಗ್ ಬಾಸ್ ಸಂಚಿಕೆಯಲ್ಲಿ ಏನಿರಲಿದೆ ಎಂಬ ಕಿರು ಪ್ರೋಮೋ ಝಲಕ್ ಬಿಡುಗಡೆ ಆಗಿದೆ. ಆ ಪ್ರೋಮೋದಲ್ಲಿ ಯಾವ ಸ್ಪರ್ಧಿಯಲ್ಲಿ ಯಾವ ಗುಣ ಇಷ್ಟವಿಲ್ಲ. ಅವರು ಏನನ್ನು ಬದಲಾಯಿಸಿಕೊಳ್ಳಬೇಕು ಎಂದು ಹೇಳಿ, ಆ ಸ್ಪರ್ಧಿಯ ಭಾವಚಿತ್ರವಿರುವ ಪಿಂಗಾಣಿ ತಟ್ಟೆಯನ್ನು ಸುತ್ತಿಗೆಯಿಂದ ಒಡೆದು ಹಾಕಬೇಕು ಎಂದು ಸುದೀಪ್ ಹೇಳಿದ್ದಾರೆ. ಕಿಚ್ಚನ ಮಾತಂತೆ, ಮನೆಯಲ್ಲಿನ ಎಲ್ಲ ಸ್ಪರ್ಧಿಗಳು ಒಬ್ಬೊಬ್ಬರ ಹೆಸರನ್ನು ಸೂಚಿಸಿ ತಟ್ಟೆಯನ್ನು ಒಡೆದಿದ್ದಾರೆ.
ರಜತ್‌ಗೆ ಸುತ್ತಿಗೆಯಿಂದ ಹೊಡೆದ ಹನುಮಂತು
ಮೋಕ್ಷಿತಾ ಪೈ ಉಗ್ರಂ ಮಂಜು ಅವರ ಭಾವಚಿತ್ರವಿರುವ ತಟ್ಟೆ ಒಡೆದು, ದಿನದಿಂದ ದಿನಕ್ಕೆ ಅವರು ಕೆಳಕ್ಕೆ ಇಳಿಯುತ್ತಿದ್ದಾರೆ. ಹಾಗಾಗಿ ಅವರು ಬದಲಾಯಿಸಿಕೊಳ್ಳಬೇಕು ಎಂದು ಕಾರಣ ಕೊಟ್ಟಿದ್ದಾರೆ. ಇದೇ ಪ್ರೋಮೋದಲ್ಲಿ ಹನುಮಂತ ಅವರೂ ರಜತ್‌ಗೆ ಹಾಡಿನ ಮೂಲಕ ಟಕ್ಕರ್ ಕೊಟ್ಟಿದ್ದಾರೆ. ಸೊಕ್ಕವ ಸುಟ್ಟು ಬೂದಿಯ ಮಾಡೋ.. ಸಿಟ್ಟು ಬಂದಾಗ ನಿಧಾನ ಮಾಡಣ್ಣ... ಎಂದು ಹಾಡಿ, ಸಿಟ್ಟಿನ ಕೈಯಲ್ಲಿ ಬುದ್ದಿ ಕೊಟ್ಟರೆ ಅದೇ ಮುಳ್ಳಾಗಬಹುದು ಎಂದು ಸಿಟ್ಟು ಕಡಿಮೆ ಮಾಡಿಕೊಳ್ಳುವಂತೆ ರಜತ್‌ಗೆ ಹೇಳಿದ್ದಾರೆ.
ಈ ವಾರ ಯಾರು ಎಲಿಮಿನೇಟ್?
ಸದ್ಯ ಬಿಗ್ ಬಾಸ್ ಮನೆಯಲ್ಲಿ ಉಳಿದಿರುವುದು ಕೇವಲ 10 ಮಂದಿ ಮಾತ್ರ. ಆ ಪೈಕಿ ಇಂದು ಇನ್ನೊಂದು ವಿಕೆಟ್ ಬೀಳಲಿದೆ. ಈ ವಾರ 10 ಸ್ಪರ್ಧಿಗಳ ಪೈಕಿ ಎಂಟು ಜನ ನಾಮಿನೇಟ್ ಆಗಿದ್ದರು. ಗೌತಮಿ ಜಾಧವ್, ಚೈತ್ರಾ ಕುಂದಾಪುರ, ಧನರಾಜ್ ಆಚಾರ್, ತ್ರಿವಿಕ್ರಮ್, ಮೋಕ್ಷಿತಾ ಪೈ, ಉಗ್ರಂ ಮಂಜು, ಹನುಮಂತ ಲಮಾಣಿ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದರು. ಈ ಎಂಟು ಮಂದಿಯಲ್ಲಿ ಕಿಚ್ಚನ ಚಪ್ಪಾಳೆ ಗಿಟ್ಟಿಸಿಕೊಂಡು ಈ ವಾರ ಸೇಫ್ ಆಗಿದ್ದರು ಧನರಾಜ್. ಅದಾದ ಬಳಿಕ ದೋಸ್ತ್ ಹನಮಂತು ಸಹ ಶನಿವಾರವೇ ಸೇವ್ ಆಗಿದ್ದರು. ಇನ್ನುಳಿದ ಆರು ಮಂದಿಯಲ್ಲಿ ಈ ವಾರ ಐಶ್ವರ್ಯಾ ಸಿಂಧೋಗಿ ಎಲಿಮಿನೇಟ್ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.
---
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope