Rajath Kishan: ಟ್ರೋಲ್‌ ಪೇಜ್‌ಗಳ ವಿರುದ್ಧ ದೂರು ನೀಡಿದ ರಜತ್ ಪತ್ನಿ ಅಕ್ಷತಾ; ಬಿಗ್‌ ಬಾಸ್‌ ಸ್ಪರ್ಧಿಗೆ ಎದುರಾಗಿತ್ತು ಸಂಕಷ್ಟ
ಕನ್ನಡ ಸುದ್ದಿ  /  ಮನರಂಜನೆ  /  Rajath Kishan: ಟ್ರೋಲ್‌ ಪೇಜ್‌ಗಳ ವಿರುದ್ಧ ದೂರು ನೀಡಿದ ರಜತ್ ಪತ್ನಿ ಅಕ್ಷತಾ; ಬಿಗ್‌ ಬಾಸ್‌ ಸ್ಪರ್ಧಿಗೆ ಎದುರಾಗಿತ್ತು ಸಂಕಷ್ಟ

Rajath Kishan: ಟ್ರೋಲ್‌ ಪೇಜ್‌ಗಳ ವಿರುದ್ಧ ದೂರು ನೀಡಿದ ರಜತ್ ಪತ್ನಿ ಅಕ್ಷತಾ; ಬಿಗ್‌ ಬಾಸ್‌ ಸ್ಪರ್ಧಿಗೆ ಎದುರಾಗಿತ್ತು ಸಂಕಷ್ಟ

ಬಿಗ್‌ ಬಾಸ್‌ ಸೀಸನ್ 11ರ ಸ್ಪರ್ಧಿ ರಜತ್ ಕಿಶನ್ ಅವರ ಪತ್ನಿ ಅಕ್ಷತಾ ಟ್ರೋಲ್ ಪೇಜ್‌ಗಳ ವಿರುದ್ಧ ದೂರು ನೀಡಿದ್ದಾರೆ. ಇದಕ್ಕೆ ಕಾರಣ ಏನು ಎಂಬುದನ್ನು ನಾವಿಲ್ಲಿ ನೀಡಿದ್ದೇವೆ.

ಬಿಗ್‌ ಬಾಸ್‌ ರಜತ್, ಪತ್ನಿ ಅಕ್ಷತಾ
ಬಿಗ್‌ ಬಾಸ್‌ ರಜತ್, ಪತ್ನಿ ಅಕ್ಷತಾ

ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿ ರಜತ್‌ಗೆ ಟ್ರೋಲ್‌ ಪೇಜ್‌ಗಳ ಕಾಟ ಆರಂಭವಾಗಿದೆ. ಬಿಗ್ ಬಾಸ್ ಸ್ಪರ್ಧಿ ರಜತ್ ಹಾಗೂ ಮಾಜಿ ಗೆಳತಿ ಜೊತೆಗಿನ ಫೋಟೋ ವೈರಲ್ ಆಗುತ್ತಿದೆ. ಇಬ್ಬರು ಜತೆಗಿರುವ ಫೋಟೋ ಅಪ್ಲೋಡ್ ಮಾಡಿರುವ ಟ್ರೋಲ್ ಪೇಜ್‌ಗಳು ಅವರ ಈಗಿನ ಬದುಕಿಗೆ ಅಡಚಣೆ ಉಂಟು ಮಾಡುತ್ತಿದೆ. ರಜತ್ ಅವರ ಪತ್ನಿ ಟ್ರೋಲ್‌ ಪೇಜ್‌ನಲ್ಲಿ ಅಪ್ಲೋಡ್‌ ಮಾಡಿರುವ ಫೋಟೋವನ್ನು ತೆಗೆಯುವಂತೆ ಕೇಳಿಕೊಂಡಿದ್ದಾರಂತೆ, ಆದರೆ ಅವರು ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗುತ್ತಿದೆ. ಅವರು ಹೇಳಿದಂತೆ ರಜತ್ ಪತ್ನಿ ಕೂಡ ಹಣವನ್ನು ಅವರಿಗೆ ಕಳಿಸಿದ್ದಾರಂತೆ.

ಟ್ರೋಲ್ ಪೇಜ್‌ಗಳಿಂದ ಸಂಕಷ್ಟ

ಅದಾದನ ನಂತರ ಮತ್ತೊಂದು ಟ್ರೋಲ್ ಪೇಜ್‌ನಲ್ಲಿ ಅದೇ ರೀತಿ ಫೋಟೋ ಪೋಸ್ಟ್‌ ಮಾಡಲಾಗಿದ್ದು ಮತ್ತೆ ಅಲ್ಲಿಯೂ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರಂತೆ. ಇದೇ ರೀತಿ ಮುಂದುವರೆಯಲು ಆರಂಭಿಸಿದಾಗ ಅಕ್ಷತಾ ಈ ಬಗ್ಗೆ ದೂರು ನೀಡಿದ್ದಾರೆ. ಅವರು ಕೇಳಿದಷ್ಟು ಹಣ ನೀಡಲು ಮುಂದಾದ ರಜತ್ ಪತ್ನಿ ಅಕ್ಷತಾ ಬಳಿ ಅಪರಿಚಿತ ವ್ಯಕ್ತಿ ನೀಡಿದ ಯುಪಿಐ ಐಡಿ ನೀಡಿ ಹಣ ಹಾಕಿಸಿಕೊಂಡಿದ್ದಾರೆ. ಸುಮಾರು 6500 ರೂಪಾಯಿ ಹಣವನ್ನು ಹಾಕಿದ್ದ ರಜತ್ ಪತ್ನಿಗೆ ಇನ್ನಷ್ಟು ಕರೆ ಬರಲು ಆರಂಭವಾಗಿತ್ತು.

ಹಣ ಹಾಕಿದ‌ ನಂತರ ಬೇರೆ ಬೇರೆ ಟ್ರೋಲ್ ಪೇಜ್‌ನಲ್ಲಿ ಮತ್ತೆ ಫೋಟೋ ಅಪ್ಲೋಡ್ ಮಾಡಲಾಗಿದೆ. ಡಿಲೀಟ್ ಮಾಡಿ ಎಂದು ಕೇಳಿದಾಗ ಮತ್ತೆ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಕೊನೆಗೆ ಟ್ರೋಲ್ ಪೇಜ್ ವಿರುದ್ಧ ಬೇಸತ್ತು ಸೈಬರ್ ಠಾಣೆ ಮೆಟ್ಟಿಲೇರಿದ ರಜತ್ ಪತ್ನಿ ಅಕ್ಷಿತಾ, ಪಶ್ಚಿಮ ವಿಭಾಗದ ಸೈಬರ್ ಠಾಣೆಯಲ್ಲಿ ಹತ್ತಕ್ಕೂ ಹೆಚ್ಚು ಟ್ರೋಲ್ ಪೇಜ್ ವಿರುದ್ಧ ದೂರು ನೀಡಿದ್ದಾರೆ.

ಎಫ್.ಐ.ಆರ್ ಆಗುತ್ತಿದ್ದಂತೆ ಫೋಟೋ ಡಿಲೀಟ್ ಮಾಡಿರುವ ಟ್ರೋಲ್ ಪೇಜ್‌ಗಳು ನಂತರ ಡಿಆಕ್ಟಿವ್ ಆಗಿವೆ. ಬ್ಲಾಕ್ ಮೇಲ್ ಮಾಡಿ ಹಣ ಸುಲಿಗೆ ಮಾಡಿದ ಅಪರಿಚಿತ ವ್ಯಕ್ತಿಗಾಗಿ ಪೊಲೀಸರ ಶೋಧ ನಡೆಸುತ್ತಿದ್ದಾರೆ.

ಬಿಗ್‌ ಬಾಸ್‌ ರಜತ್ ಬಗ್ಗೆ ಒಂದಿಷ್ಟು ಮಾಹಿತಿ
ಬಿಗ್‌ ಬಾಸ್‌ಗೆ ರಜತ್ ಕಿಶನ್ ವೈಲ್ಡ್‌ ಕಾರ್ಡ್ ಎಂಟ್ರಿ ಮೂಲಕ ಬಂದವರು. ಇವರಿಗೆ ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಬಿಗ್‌ ಬಾಸ್‌ ಸೀಸನ್‌ 11ರಲ್ಲಿ ಫಿನಾಲೆಗೆ ಇನ್ನೊಂದೇ ವಾರ ಬಾಕಿ ಇದೆ. ರಜತ್ ಕಿಶನ್ ಈಗಲೂ ಬಿಗ್‌ ಬಾಸ್‌ ಮನೆಯಲ್ಲೇ ಇದ್ದು, ಎಲ್ಲರಿಗೂ ಸ್ಪರ್ಧೆ ನೀಡುತ್ತಿದ್ದಾರೆ. ಫ್ಯಾಮಿಲಿ ರೌಂಡ್‌ ಇರುವಾಗ ಅವರು ಭಾವುಕರಾಗಿದ್ದರು, ತಮ್ಮ ಪತ್ನಿ ಹಾಗೂ ಮಕ್ಕಳನ್ನು ಅವರು ತುಂಬಾ ಇಷ್ಟಪಡುತ್ತಾರೆ. ಹೊರಗಡೆ ಈ ರೀತಿ ಆಗಿದೆ ಎಂದು ಅವರಿಗೆ ತಿಳಿಯಲು ಇನ್ನೊಂದೇ ವಾರ ಬಾಕಿ ಇದ್ದು ಅವರ ಪರವಾದ ಟ್ರೋಲ್‌ ಪೇಜ್‌ಗಳೂ ಇದೆ. ಸಾಮಾಜಿಕ ಜಾಲತಾಣದಲ್ಲಿ ರಜತ್ ಬೆಂಬಲಿಗರೂ ಇದ್ದಾರೆ.

Whats_app_banner