Bigg Boss Kannada 11: ಬಿಗ್‌ ಬಾಸ್‌ ಮನೆಯಲ್ಲಿ ಸಂಕ್ರಾಂತಿ ಸಂಭ್ರಮ; ಒಳ್ಳೊಳ್ಳೆ ಮಾತಾಡಿ ಮುನಿಸು ತಣಿಸಿಕೊಂಡ ಸ್ಪರ್ಧಿಗಳು
ಕನ್ನಡ ಸುದ್ದಿ  /  ಮನರಂಜನೆ  /  Bigg Boss Kannada 11: ಬಿಗ್‌ ಬಾಸ್‌ ಮನೆಯಲ್ಲಿ ಸಂಕ್ರಾಂತಿ ಸಂಭ್ರಮ; ಒಳ್ಳೊಳ್ಳೆ ಮಾತಾಡಿ ಮುನಿಸು ತಣಿಸಿಕೊಂಡ ಸ್ಪರ್ಧಿಗಳು

Bigg Boss Kannada 11: ಬಿಗ್‌ ಬಾಸ್‌ ಮನೆಯಲ್ಲಿ ಸಂಕ್ರಾಂತಿ ಸಂಭ್ರಮ; ಒಳ್ಳೊಳ್ಳೆ ಮಾತಾಡಿ ಮುನಿಸು ತಣಿಸಿಕೊಂಡ ಸ್ಪರ್ಧಿಗಳು

Bigg Boss Kannada 11: ಬಿಗ್‌ ಬಾಸ್‌ ಮನೆಯಲ್ಲಿ ಸಂಕ್ರಾಂತಿ ಹಬ್ಬ ಆಚರಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ನಟಿ ತಾರಾ ಕೂಡ ಭಾಗಿಯಾಗಿದ್ದಾರೆ. ತಾವು ಈ ಹಿಂದೆ ಆಡಿದ ಕೆಲ ಮಾತುಗಳ ಬಗ್ಗೆ ಸ್ಪರ್ಧಿಗಳು ಮತ್ತೊಮ್ಮೆ ಮಾತಾಡಿ ತಪ್ಪೊಪ್ಪಿಕೊಂಡಿದ್ದಾರೆ.

 ಬಿಗ್‌ ಬಾಸ್‌ ಮನೆಯಲ್ಲಿ ಸಂಕ್ರಾಂತಿ ಸಂಭ್ರಮ
ಬಿಗ್‌ ಬಾಸ್‌ ಮನೆಯಲ್ಲಿ ಸಂಕ್ರಾಂತಿ ಸಂಭ್ರಮ (Colors Kannada)

ಬಿಗ್‌ ಬಾಸ್‌ ಮನೆಯಲ್ಲಿ ಸಂಕ್ರಾಂತಿ ಆಚರಿಸಿ ಸಂಭ್ರಮಿಸಿದ್ದಾರೆ. ಬಿಗ್ ಬಾಸ್‌ ಮನೆಗೆ ತಾರಾ ಆಗಮಿಸಿ ಎಲ್ಲ ಸ್ಪರ್ಧಿಗಳನ್ನು ಹುರಿದುಂಬಿಸಿದ್ದಾರೆ. ಇಷ್ಟು ದಿನ ಯಾರೆಲ್ಲ, ಏನೆಲ್ಲ ಮಾತಾಡಿಕೊಂಡು ವೈಮನಸ್ಸು ಮಾಡಿಕೊಂಡಿದ್ದರೋ ಅವರೆಲ್ಲರಿಗೂ ಅದೆಲ್ಲವನ್ನು ಸರಿ ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು. ತಾರಾ ಮನೆಯೊಳಗಡೆ ಬರುತ್ತಿದ್ದಂತೆ ಎಲ್ಲರೂ ಖುಷಿಯಿಂದ ಅವರನ್ನು ಬರ ಮಾಡಿಕೊಂಡರು. ಬಿಗ್‌ ಬಾಸ್‌ ಮನೆ ಮಂದಿ ಎಲ್ಲರೂ ದೇವರಿಗೆ ಪೂಜೆ ಮಾಡಿ ಆರತಿ ಬೆಳಗಿದರು. ಇಷ್ಟೆಲ್ಲ ಆದ ನಂತರ ಒಬ್ಬೊಬ್ಬರಾಗಿ ತಮ್ಮ ಮಾತನ್ನು ಆರಂಭಿಸಿದರು.

ಬಿಗ್‌ ಬಾಸ್‌ ಮನೆಗೆ ಆಗಮಿಸಿದ ತಾರಾ

ತಾರಾ ಮನೆಯೊಳಗಡೆ ಬರುತ್ತಿದ್ದಂತೆ ಖುಷಿ ಹಾಗೂ ಒಳ್ಳೆಯ ಮಾತುಗಳನ್ನು ಹೊತ್ತು ತಂದಂತಿತ್ತು. ಎಲ್ಲರೂ ಅವರ ಜೊತೆ ಕುಳಿತುಕೊಂಡು ಒಂದಷ್ಟು ಮಾತಾಡಿದ್ದಾರೆ. ನಂತರ ಎಲ್ಲರೂ ಈ ಹಿಂದೆ ಆಡಿದ ಕೆಲ ಮಾತುಗಳನ್ನು ಮತ್ತೆ ಸರಿಪಡಿಸಿಕೊಳ್ಳಲು ಬಯಸಿದ್ದಾರೆ. ಅದರಲ್ಲಿ ಮೋಕ್ಷಿತಾ ಹಾಗೂ ಮಂಜಣ್ಣನ ಮಾತು ಪ್ರಮುಖ ಎನಿಸುವಂತಿತ್ತು. ಯಾಕೆಂದರೆ ಅವರಿಬ್ಬರೂ ತುಂಭಾ ದಿನಗಳಿಂದ ಅಷ್ಟು ಸರಿಯಾಗಿ ಮಾತಾಡಿಕೊಳ್ಳುತ್ತಾ ಇರಲಿಲ್ಲ. ಅವರಿಬ್ಬರ ನಡುವೆ ಜಗಳವಿತ್ತು. ಮೋಕ್ಷಿತಾ ಮೊದಲು ಮಂಜು ಅವರ ಜೊತೆಗೇ ಇದ್ದರೂ ಸಹ ನಂತರದ ದಿನಗಳಲ್ಲಿ ಅವರಿಂದ ದೂರವಾಗಿದ್ದರು. ಆ ವಿಚಾರವಾಗಿ ಮೊದಲು ಮೋಕ್ಷಿತಾ ಮಾತಾಡುತ್ತಾರೆ.

'ನಾನು ಈ ಮನೆಯಲ್ಲಿ ಹೆಚ್ಚು ಜಗಳ ಆಡಿದ್ದು ಮಂಜಣ್ಣನ ಜೊತೆ, ಆದರೆ ಆ ಪ್ರೀತಿ ಯಾವಾಗಲೂ ಇರುತ್ತೆ" ಎಂದು ಹೇಳಿದ್ದಾರೆ. ಆ ನಂತರ ಅದನ್ನು ಒಪ್ಪಿಕೊಂಡು ಉಗ್ರಂ ಮಂಜು ಮಾತಾಡಿದ್ದಾರೆ. “ನಾನು ಕೆಲ ಸಂದರ್ಭದಲ್ಲಿ ಸಿಕ್ಕಾಪಟೆ ದುಡುಕಿಬಿಟ್ಟೆ, ಆದರೆ ಹಾಗೆ ಮಾಡಬಾರದಿತ್ತು” ಎಂದು ಹೇಳಿಕೊಂಡಿದ್ದಾರೆ.

ನಂತರ ರಜತ್ ಹಾಗೂ ಧನರಾಜ್ ಕೂಡ ಮಾತಾಡಿಕೊಳ್ಳುತ್ತಾರೆ. ರಜತ್ ಈ ಹಿಂದೆ ತನ್ನ ಹಾಗೂ ಧನರಾಜ್ ಆಚಾರ್ ಅವರ ಜೊತೆ ನಡೆದ ಮಾತಿನ ಚಕಮಕಿ ಬಗ್ಗೆ ಹೇಳುತ್ತಾರೆ. ತಾನು ಆವತ್ತು ಆ ರೀತಿ ವರ್ತನೆ ಮಾಡಬಾರದಿತ್ತು ಎಂದು ಹೇಳಿಕೊಂಡಿದ್ದಾರೆ. “ಇನ್ನು ಮುಂದಿನ ದಿನಗಳಲ್ಲಿ ನಾವು ಹೊರಗಡೆ ಹೋದ ನಂತರವೂ ತುಂಬಾ ಚೆನ್ನಾಗಿರೋಣ” ಎಂದು ಹೇಳಿದ್ದಾರೆ. ನಂತರ ಎಲ್ಲರೂ ತಬ್ಬಿಕೊಂಡು ಎಳ್ಳು, ಬೆಲ್ಲ ತಿನಿಸಿಕೊಂಡಿದ್ದಾರೆ.

ಹೇಗಿದೆ ಜನಾಭಿಪ್ರಾಯ?
ಮೋಕ್ಷಿತಾ ಎಲ್ಲೋಯ್ತು ನಿನ್ನ ಸ್ವಾಭಿಮಾನ. ಫೈನಲ್ ಹತ್ರ ಬಂತು ಅಂತ ಮತ್ತೆ ಮಂಜು ಗೌತಮಿ ಗೆ ಹತ್ರ ಆಗ್ಬಿಟ್ಟೆ ಎಂದು ರಘು ಎಂಬವರು ಕಾಮೆಂಟ್ ಮಾಡಿದ್ದಾರೆ. ಯಾಕೆಂದರೆ ಈ ಹಿಂದೆ ಮೂರು ಜನರು ಒಟ್ಟಾಗಿರುತ್ತಿದ್ದರು ಮಂಜು, ಗೌತಮಿ ಮತ್ತು ಮೋಕ್ಷಿತಾ ಪೈ ಆದರೆ ಆಟಕ್ಕೆ ತಕ್ಕಂತೆ ಇವರು ನಿರ್ಧಾರ ಬದಲಿಸುತ್ತಿದ್ದಾರೆ. ಆದರೆ ಇನ್ನೇನೂ ಮಾಡುತ್ತಿಲ್ಲ. ಮೊದಲು ಮೋಕ್ಷಿತಾ ಸ್ವಾಭಿಮಾನ ಎಂದು ತುಂಬಾ ಮಾತಾಡಿದರು ಆದರೆ ಈಗ ಮತ್ತೆ ಮಂಜು ಹಾಗೂ ಗೌತಮಿ ತಂಡವನ್ನು ಸೇರಿಕೊಳ್ಳಲು ಬಯಸುತ್ತಿದ್ದಾರೆ ಇದು ಫಿನಾಲೆಯ ತಂತ್ರ ಆಗಿರಬಹುದು ಎಂದು ಹೇಳಲಾಗುತ್ತಿದೆ.

Whats_app_banner