Bigg Boss Grand finale: ಬಿಗ್‌ ಬಾಸ್‌ ಕನ್ನಡ 11ರ ವಿಜೇತರಿಗೆ ಬಂದ ಕೋಟಿ ಕೋಟಿ ವೋಟ್‌ ಎಷ್ಟು? ಕಿಚ್ಚನಿಂದ ಅಚ್ಚರಿಯ ನಂಬರ್ಸ್‌ ಬಹಿರಂಗ
ಕನ್ನಡ ಸುದ್ದಿ  /  ಮನರಂಜನೆ  /  Bigg Boss Grand Finale: ಬಿಗ್‌ ಬಾಸ್‌ ಕನ್ನಡ 11ರ ವಿಜೇತರಿಗೆ ಬಂದ ಕೋಟಿ ಕೋಟಿ ವೋಟ್‌ ಎಷ್ಟು? ಕಿಚ್ಚನಿಂದ ಅಚ್ಚರಿಯ ನಂಬರ್ಸ್‌ ಬಹಿರಂಗ

Bigg Boss Grand finale: ಬಿಗ್‌ ಬಾಸ್‌ ಕನ್ನಡ 11ರ ವಿಜೇತರಿಗೆ ಬಂದ ಕೋಟಿ ಕೋಟಿ ವೋಟ್‌ ಎಷ್ಟು? ಕಿಚ್ಚನಿಂದ ಅಚ್ಚರಿಯ ನಂಬರ್ಸ್‌ ಬಹಿರಂಗ

Bigg Boss Grand finale: ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ಇಂದು (ಜನವರಿ 25) ಆರಂಭವಾಗಿದೆ. 6 ಗಂಟೆಯಿಂದ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದೆ. ಕಿಚ್ಚ ಸುದೀಪ್ ವೋಟಿಂಗ್‌ ನಂಬರ್‍‌ಗಳನ್ನು ಸ್ಪರ್ಧಿಗಳ ಮುಂದೆ ತೆರೆದಿಟ್ಟಿದ್ದಾರೆ.

ಬಿಗ್‌ ಬಾಸ್‌ ಕನ್ನಡ 11ರ ಗ್ರ್ಯಾಂಡ್ ಫಿನಾಲೆ
ಬಿಗ್‌ ಬಾಸ್‌ ಕನ್ನಡ 11ರ ಗ್ರ್ಯಾಂಡ್ ಫಿನಾಲೆ (Colors Kannada)

ಬಿಗ್‌ ಬಾಸ್‌ ಸೀಸನ್ 11ರ ಗ್ರ್ಯಾಂಡ್ ಫಿನಾಲೆ ಆರಂಭವಾಗಿದೆ. ಇಂದು ಯಾರು ಫಿನಾಲೆಗೆ ಉಳಿದುಕೊಳ್ಳುತ್ತಾರೆ. ಇನ್ಯಾರಿಗೆ ಈ ಪಯಣ ಮುಕ್ತಾಯವಾಗುತ್ತದೆ ಎಂದು ತಿಳಿಯುತ್ತದೆ. ಸಾಕಷ್ಟು ಜನ ಕಾತರದಿಂದ ಕಾಯುತ್ತಿರುವ ಬಿಗ್ ಬಾಸ್‌ ವಿನ್ನರ್ ಯಾರು ಎಂಬ ಪ್ರಶ್ನೆಗೆ ನಾಳೆ ಜನವರಿ 26ರಂದು ತಿಳಿಯಲಿದೆ. ಕಿಚ್ಚ ಸುದೀಪ್ ತಮ್ಮ ಮಸ್ತ್‌ ಲುಕ್‌ನಲ್ಲಿ ವೇದಿಕೆಗೆ ಎಂಟ್ರಿ ನೀಡಿದ್ದಾರೆ. ಹಳೆಯ ಸ್ಪರ್ಧಿಗಳೂ ಸಹ ಬಿಗ್ ಬಾಸ್‌ ಗ್ರ್ಯಾಂಡ್ ಫಿನಾಲೆಗೆ ಬಂದಿದ್ದಾರೆ. ಸ್ಪರ್ಧಿಗಳೆಲ್ಲ ನೃತ್ಯ ಮಾಡುವ ಮೂಲಕ ರಂಜಿಸಿದ್ದಾರೆ. ಇಂದು ಎಲಿಮಿನೇಟ್ ಆಗಲಿರುವ ಸ್ಪರ್ಧಿಗೆ ಎಷ್ಟು ಓಟ್‌ ಬಂದಿದೆ ಎಂದು ರಿವೀಲ್ ಮಾಡಿದ್ದಾರೆ.

ಈ ಬಾರಿ ಬಿಗ್‌ ಬಾಸ್‌ನಲ್ಲಿ ಗೆಲ್ಲಲಿರುವ ಸ್ಪರ್ಧಿಗೆ ಬಂದ ಓಟ್‌ ಹಾಗೂ ಇಂದು ಮೊದಲು ಎಲಿಮಿನೇಟ್‌ ಆಗುತ್ತಿರುವ ಸ್ಪರ್ಧಿಗೆ ಬಂದ ವೋಟ್‌ ಎಷ್ಟು? ಎಂಬುದನ್ನು ಬಿಗ್‌ ಬಾಸ್‌ ವೇದಿಕೆಯಲ್ಲೇ ರಿವೀಲ್ ಮಾಡಲಾಗಿದೆ. ಬಿಗ್ ಬಾಸ್‌ ಮನೆಯಲ್ಲಿ ಒಂದು ದೊಡ್ಡ ಬೋರ್ಡ್ ಇಡುತ್ತಾರೆ. ಆ ಬೋರ್ಡ್‌ನಲ್ಲಿ ನಂಬರ್‍‌ಗಳ ವಿವರ ಇರುತ್ತದೆ. ಅದನ್ನು ವೀಕ್ಷಕರೆಲ್ಲರ ಎದುರೇ ರಿವೀಲ್ ಮಾಡಲಾಗಿದೆ. ಕೋಟಿ ಕೋಟಿ ಲೆಕ್ಕದಲ್ಲಿ ಬಂದ ಓಟ್‌ ನೋಡಿ ಎಲ್ಲರೂ ಆಶ್ಚರ್ಯಪಟ್ಟಿದ್ದಾರೆ.

ಇಲ್ಲಿದೆ ವೋಟಿಂಗ್‌ ವಿವರ

ಅತಿ ಹೆಚ್ಚು ವೋಟ್‌ ಪಡೆದು ವಿನ್ ಆಗಲಿರುವ ಸ್ಪರ್ಧಿ ಯಾರು ಎಂದು ಅಧೀಕೃತವಾಗಿ ತಿಳಿಸದಿದ್ದರೂ ಆ ಸ್ಪರ್ಧಿಗೆ ಎಷ್ಟು ಮತ ಬಂದಿದೆ ಎಂದು ತಿಳಿಸಿದ್ದಾರೆ.
52389318 - ವಿಜೇತರಿಗೆ ಬಂದ ಮತ
6448853 - ಈಗ ಎಲಿಮಿನೇಟ್‌ ಆಗಿ ಮನೆಯಿಂದ ಹೊರ ಬರಲಿರುವ ಸ್ಪರ್ಧಿಗೆ ಬಂದ ಮತ

ಬಿಗ್ ಬಾಸ್‌ ಮನೆಯಲ್ಲಿರುವ ಸ್ಪರ್ಧಿಗಳು

ತ್ರಿವಿಕ್ರಂ

ಹನುಮಂತ

ಮೋಕ್ಷಿತಾ ಪೈ

ಭವ್ಯಾ ಗೌಡ

ಮಂಜು

ರಜತ್

ಈ ಎಲ್ಲ ಸ್ಪರ್ಧಿಗಳಲ್ಲಿ ಯಾರು ವಿನ್ ಆಗುತ್ತಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲೂ ಚರ್ಚೆ ಜೋರಾಗಿಯೇ ನಡೆಯುತ್ತಿದೆ. ಈಗ ಎಲಿಮಿನೇಟ್ ಆಗಿರುವ ಸ್ಪರ್ಧಿಗಳಲ್ಲಿ ಧನರಾಜ್ ಕೂಡ ಫಿನಾಲೆಯಲ್ಲಿರಬೇಕಿತ್ತು ಎಂಬ ಚರ್ಚೆಗಳೂ ನಡೆಯುತ್ತಿದೆ. ಆದರೆ ಯಾರು ಈ ಆರು ಜನರಲ್ಲಿ ಬಿಗ್ ಬಾಸ್‌ ಮನೆಯಿಂದ ಹೊರ ಬೀಳುತ್ತಾರೆ ಎಂಬುದು ಸದ್ಯದ ಮಟ್ಟಿಗೆ ಎಲ್ಲರಿಗೂ ಇರುವ ಕುತೂಹಲವಾಗಿದೆ.

Whats_app_banner