Bigg Boss Kannada 11: ಬಿಗ್ ಬಾಸ್ ಮನೆಯಲ್ಲಿ ರದ್ದಾಯ್ತು ಮಧ್ಯಂತರ ಎಲಿಮಿನೇಷನ್; ಬಿಗ್ ಬಾಸ್ ಕೊಟ್ಟ ಕಾರಣ ಏನು ನೋಡಿ
Bigg Boss Kannada 11: ಬಿಗ್ ಬಾಸ್ ಮನೆಯಲ್ಲಿ ವಾರದ ಮಧ್ಯದಲ್ಲಿ ಈ ಬಾರಿ ಎಲಿಮಿನೇಷನ್ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ಕಾರಣಾಂತರಗಳಿಂದಾಗಿ ಆ ಎಲಿಮಿನೇಷನ್ ರದ್ದಾಗಿದೆ. ಇದಕ್ಕೆ ಕಾರಣ ಏನು ಎಂಬ ಮಾಹಿತಿ ಇಲ್ಲಿದೆ.

ಬಿಗ್ ಬಾಸ್ ಫಿನಾಲೆ ಹತ್ತಿರ ಬರುತ್ತಿದ್ದು, ಬಿಗ್ ಬಾಸ್ ಮನೆಯಲ್ಲಿ ಈಗ ಒಂಭತ್ತು ಸ್ಪರ್ಧಿಗಳು ಮಾತ್ರ ಉಳಿದುಕೊಂಡಿದ್ದಾರೆ. ಹೀಗಿರುವಾಗ ಇನ್ನೊಂದಷ್ಟು ಸ್ಪರ್ಧಿಗಳನ್ನು ಮನೆಗೆ ಕಳಿಸುವ ದಿನಗಳು ಹತ್ತಿರ ಬರುತ್ತಿದೆ. ಆ ಕಾರಣಕ್ಕಾಗಿ ಬಿಗ್ ಬಾಸ್ ಈ ವಾರದಲ್ಲಿ ಎರಡು ಎಲಿಮಿನೇಷನ್ ನಡೆಯಲಿದೆ ಎಂದು ತಿಳಿಸಿದ್ದರು. ಮನೆಯವರಿಗೂ ಈ ವಿಚಾರ ಗೊತ್ತಾಗಿತ್ತು. ಆದರೆ ನಂತರ ಆಗಿದ್ದೇ ಬೇರೆ. ಇನ್ನು ಇದರ ನಡುವೆ ಗೌತಮಿ ಮನೆಯಿಂದ ಹೊರ ಬಂದಿದ್ದಾರೆ, ಅವರೇ ಈ ವಾರ ಬಿಗ್ ಬಾಸ್ ಮನೆಯ ಮಿಡ್ ಮೀಕ್ ಎಲಿಮಿನೇಟೆಡ್ ಸ್ಪರ್ಧಿ ಎಂದು ಹಲವು ಗಾಳಿ ಸುದ್ದಿಗಳು ಓಡಾಡುತ್ತಿದ್ದವು. ಆದರೆ ಈ ವಾರದ ಮಧ್ಯ ಯಾರೂ ಬಿಗ್ ಬಾಸ್ ಮನೆಯಿಂದ ಹೊರ ಬಂದಿಲ್ಲ.
ತಪ್ಪು ಮಾಡಿದ್ರಾ ಧನರಾಜ್?
ಎಲ್ಲರೂ ವಿಶ್ರಮಿಸುತ್ತಿರುವ ಸಮಯದಲ್ಲಿ ಬಿಗ್ ಬಾಸ್ ಮಾತನಾಡಿ, “ನಿನ್ನೆ ನಡು ರಾತ್ರಿ ಯಾರಾದರೂ ಒಬ್ಬರು ಬಿಗ್ ಬಾಸ್ ಮನೆಯಿಂದ ಹೊರ ಹೋಗಬೇಕಿತ್ತು. ಆದರೆ ಯಾರನ್ನೂ ನಾವು ಬಿಗ್ ಬಾಸ್ ಮನೆಯಿಂದ ಹೊರ ಹಾಕಿಲ್ಲ. ಇದಕ್ಕೆ ಒಂದು ಮುಖ್ಯ ಕಾರಣವಿದೆ” ಎಂದು ಹೇಳುತ್ತಾರೆ. ಆಗ ಧನರಾಜ್ ಆಚಾರ್ ಏನೋ ತಪ್ಪಾಗಿ ಆಟ ಆಡಿದ ಸೂಚನೆ ಸಿಗುತ್ತದೆ. ಆಟದ ಯಾವುದೋ ನಿಯಮವನ್ನು ಅವರು ಮುರಿದಿದ್ದಾರೆ ಎಂದು ತೋರುತ್ತದೆ. ಯಾಕೆಂದರೆ ಧನರಾಜ್ ಆಚಾರ್ “ನನ್ನಿಂದ ದೊಡ್ಡ ತಪ್ಪಾಗಿದೆ. ಆದರೆ ಇಷ್ಟೊಂದು ದೊಡ್ಡ ತಪ್ಪನ್ನು ನಾನು ಮಾಡಿದ್ದೇನೆ ಎಂದು ನನಗೆ ಗೊತ್ತಿರಲಿಲ್ಲ. ಮೊದಲು ನನ್ನನ್ನು ನಾಮಿನೇಟ್ ಮಾಡಿ ಬಿಗ್ ಬಾಸ್” ಎಂದು ಕೇಳಿಕೊಂಡು ಕಣ್ಣೀರು ಹಾಕಿದ್ದಾರೆ.
ಹೇಗಿದೆ ಜನಾಭಿಪ್ರಾಯ?
ಆಟಗಾರರಿಗೆ ಕಾಣೋಹಾಗೆ ಕನ್ನಡಿ ಇಟ್ಟಿದ್ದು ಬಿಗ್ ಬಾಸ್ ತಪ್ಪು ಇದರಲ್ಲಿ ಧನರಾಜ್ ತಪ್ಪಿಲ್ಲ ಎಂದು ಸಾಕಷ್ಟು ಜನ ಧನರಾಜ್ ಪರ ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ಈ ಹಿಂದೆ ಭವ್ಯಾ ಗೌಡ ಮೋಸ ಮಾಡಿ ಆಟ ಆಡಿದಾಗ ಅದನ್ನು ಒಪ್ಪಿಕೊಂಡು ಕ್ಯಾಪ್ಟನ್ ಪಟ್ಟ ನೀಡಿ ನಂತರ ಅಂದು ತಪ್ಪಾಗಿದೆ ಎಂದು ಕ್ಷಮಿಸಿ ಆಟ ಆಡಿಸಿದ್ದೀರಿ ಈಗ ಯಾಕೆ ಧನರಾಜ್ ಆಚಾರ್ ವಿರುದ್ಧ ಈ ರೀತಿ ಮಾಡಿದ್ದೀರಿ? ಎಂದು ಪ್ರಶ್ನಿಸುತ್ತಿದ್ದಾರೆ. ಇನ್ನು ಕೆಲವರು ಆಟವನ್ನು ಆಗಲೇ ಅರ್ಧಕ್ಕೆ ತಡೆ ಹಿಡಿದು ಮತ್ತೆ ಆಡಿಸಬೇಕಿತ್ತು, ಆದರೆ ಈ ರೀತಿ ಮಾಡಿದ್ದು ತಪ್ಪು ಎಂದು ಹೇಳುತ್ತಿದ್ದಾರೆ.
ಹಾಗಾದರೆ ಆಗಿದ್ದೇನು?
ಬಿಗ್ ಬಾಸ್ ನೀಡಿದ ಟಾಸ್ಕ್ ಆರಂಭ ಮಾಡಿ ಆಟ ಆಡುತ್ತಾ ಇರುವಾ ಹಿಂದಿನಿಂದ ನಿಂತ ಧನರಾಜ್ ಎದುರಿಗಿದ್ದ ಕನ್ನಡಿಯನ್ನು ನೋಡಿಕೊಂಡು ಅದರಲ್ಲಿ ಕಂಡ ಬಿಂಬವನ್ನು ಆಧರಿಸಿ ಮೋಸದ ಆಟ ಆಡಿದ್ದಾರೆ. ಅವರು ಕನ್ನಡಿಯನ್ನು ನೋಡದೇ ಆಟ ಆಡಬೇಕಿತ್ತು ಎಂಬುದು ಅಲ್ಲಿನ ನಿಯಮವಾಗಿತ್ತು. ಆದರೆ ಈ ಬಗ್ಗೆ ಬಿಗ್ ಬಾಸ್ ಮೊದಲೇ ಮಾಹಿತಿ ನೀಡಿರಲಿಲ್ಲ.
ಬಾಸ್ ಟಾಸ್ಕ್ ಕೊಡೋದಕ್ಕಿಂತ ಮುಂಚೆ ನೀವೆಲ್ಲ ಕಡೆನೂ ನೋಡಬೇಕಿತ್ತು. ತಪ್ಪು ಬಿಗ್ ಬಾಸ್ ನಿಮ್ ಕಡೆ ಇಟ್ಕೊಂಡು ಮತ್ತೊಬ್ಬರ ಮೇಲೆ ತಪ್ಪು ಹಾಕುವುದು ಸರಿಯಲ್ಲ. ಇದು ನೂರಕ್ಕೆ ನೂರು ಬಿಗ್ ಬಾಸ್ದು ತಪ್ಪು ಎಂದು ಮನು ಗೌಡ ಕಾಮೆಂಟ್ ಮಾಡಿದ್ದಾರೆ. ಸಾಕಷ್ಟು ಜನ ಇದಕ್ಕೆ ಸಹಮತ ಸೂಚಿಸಿದ್ದಾರೆ.
