ಕನ್ನಡ ಸುದ್ದಿ / ಮನರಂಜನೆ /
Bigg Boss Kannada 11: ಟಾಪ್ 3 ಸ್ಥಾನ ಪಡೆದುಕೊಂಡ ರಜತ್; ವೈಲ್ಡ್‌ಕಾರ್ಡ್ ಎಂಟ್ರಿ ಆದ್ರೂ ಆಟ ಮಾತ್ರ ಜೋರು
Bigg Boss Kannada 11: ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಪಡೆದುಕೊಂಡು ಬಂದು ರಜತ್ ಕಿಶನ್ ಕೊನೆ ದಿನದವರೆಗೂ ಉಳಿದುಕೊಂಡಿದ್ದಷ್ಟೇ ಅಲ್ಲದೇ ಟಾಪ್ 3 ಸ್ಥಾನದಲ್ಲಿ ನಿಂತಿದ್ದಾರೆ.

ಬಿಗ್ ಬಾಸ್ ಸೀಸನ್ 11ರ ಟಾಪ್ 3 ಸ್ಥಾನ ಪಡೆದುಕೊಂಡ ರಜತ್
ಬಿಗ್ ಬಾಸ್ ಸೀಸನ್ 11ರಲ್ಲಿ ರಜತ್ ಕಿಶನ್ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಆಗಮಿಸಿ ಕೊನೆ ದಿನದವರೆಗೆ ಉಳಿದುಕೊಂಡಿದ್ದರು. ಅಂತಿಮವಾಗಿ ಉಳಿದುಕೊಂಡಿದ್ದ ಟಾಪ್ 3 ಸ್ಪರ್ಧಿಗಳನ್ನು ಕಿಚ್ಚ ಸುದೀಪ್ ವೇದಿಕೆಗೆ ಕರೆದುಕೊಂಡು ಬಂದಿದ್ದಾರೆ. ರಜತ್ ಅವರ ಬಿಗ್ ಬಾಸ್ ಜೀವನ ಹೇಗಿತ್ತು ಎಂಬುದನ್ನು ಪ್ರೋಮೋ ಮೂಲಕ ವಿವರಿಸಿದ್ದಾರೆ. ಆ ಪ್ರೋಮೋ ನೋಡಿ ರಜತ್ ಖುಷಿಯಾಗಿ ಧನ್ಯವಾದ ತಿಳಿಸಿದ್ದಾರೆ. ವೈಲ್ಡ್‌ಕಾರ್ಡ್ ಎಂಟ್ರಿ ಆದರೂ ಇಷ್ಟೊಂದು ದಿನ ಉಳಿದುಕೊಂಡಿರುವುದು ಸಾಧನೆ ಎಂದು ಪ್ರಶಂಸೆ ನೀಡಿದ್ದಾರೆ.
ಬಿಗ್ ಬಾಸ್‌ನ ರಿಯಾಲಿಟಿಯನ್ನು ಮೊದಲಿನಿಂದಲೂ ನೋಡಿಕೊಂಡು ಮನೆಯೊಳಗಡೆ ಬರುವುದು ಒಂದು ರೀತಿಯಲ್ಲಿ ಒಳ್ಳೆಯದು, ಆದರೆ ಇನ್ನೊಂದು ರೀತಿಯಲ್ಲಿ ಇದು ಆಟಕ್ಕೆ ಕೆಟ್ಟದ್ದೂ ಹೌದು ಎಂದು ಕಿಚ್ಚ ಹೇಳಿದ್ದಾರೆ. ಯಾವುದಕ್ಕೂ ಸೀಮಿತವಾಗದೆ, ಬಿಗ್ ಬಾಸ್ ಮನೆಯಲ್ಲಿ ತನ್ನ ನಿಜ ವ್ಯಕ್ತಿತ್ವ ಏನೋ ಅದನ್ನೇ ಇಷ್ಟುಕೊಂಡು ರಜತ್ ಆಟ ಆಡಿದ್ದಾರೆ. ಈ ಬಗ್ಗೆ ರಜತ್ ನಾನು ರಿಯಲ್ ಆಗಿದ್ದುಕೊಂಡೇ ಇಲ್ಲಿಯವರೆಗೆ ಬಂದೆ ಎಂದು ಹೇಳಿದ್ದಾರೆ.

ಕನ್ನಡ ಚಲನಚಿತ್ರ ಸುದ್ದಿ, ಟಿವಿ ಧಾರಾವಾಹಿಗಳು, ಒಟಿಟಿ, ವೆಬ್ ಸಿರೀಸ್, ಸಿನಿಮಾ ವಿಮರ್ಶೆ, ಸ್ಯಾಂಡಲ್ವುಡ್, ಬಾಲಿವುಡ್, ಹಾಲಿವುಡ್, ಟಾಲಿವುಡ್, ಕಾಲಿವುಡ್ ಲೋಕದ ತಾಜಾ ವಿದ್ಯಮಾನಗಳಿಗೆ 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಮನರಂಜನೆ ವಿಭಾಗ ನೋಡಿ.