ಬಿಗ್‌ ಬಾಸ್‌ ಟ್ರೋಫಿ ಗೆದ್ದ ಬೆನ್ನಲ್ಲೇ, ಹನುಮಂತ ಲಮಾಣಿ ಮನೆಯಲ್ಲಿ ನೀರವ ಮೌನ; ಕುಟುಂಬದ ಆಪ್ತನನ್ನೇ ಕಳೆದುಕೊಂಡ ಹಳ್ಳಿ ಹಕ್ಕಿ
ಕನ್ನಡ ಸುದ್ದಿ  /  ಮನರಂಜನೆ  /  ಬಿಗ್‌ ಬಾಸ್‌ ಟ್ರೋಫಿ ಗೆದ್ದ ಬೆನ್ನಲ್ಲೇ, ಹನುಮಂತ ಲಮಾಣಿ ಮನೆಯಲ್ಲಿ ನೀರವ ಮೌನ; ಕುಟುಂಬದ ಆಪ್ತನನ್ನೇ ಕಳೆದುಕೊಂಡ ಹಳ್ಳಿ ಹಕ್ಕಿ

ಬಿಗ್‌ ಬಾಸ್‌ ಟ್ರೋಫಿ ಗೆದ್ದ ಬೆನ್ನಲ್ಲೇ, ಹನುಮಂತ ಲಮಾಣಿ ಮನೆಯಲ್ಲಿ ನೀರವ ಮೌನ; ಕುಟುಂಬದ ಆಪ್ತನನ್ನೇ ಕಳೆದುಕೊಂಡ ಹಳ್ಳಿ ಹಕ್ಕಿ

ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರಲ್ಲಿ ಹನುಮಂತ ಲಮಾಣಿ ಟ್ರೋಫಿ ಎತ್ತಿ ಹಿಡಿಯುವ ಮೂಲಕ ವಿಜೇತ ಪಟ್ಟ ಅಲಂಕರಿಸಿದ್ದಾರೆ. ಇಡೀ ಕರುನಾಡು ಈ ಗೆಲುವನ್ನು ಸಂಭ್ರಮಿಸಿದೆ. ಆದರೆ, ಈ ಸಂಭ್ರಮದ ಬೆನ್ನಲ್ಲೇ ಹನುಮಂತ ಹುಟ್ಟೂರಿನಲ್ಲಿ ನೀರವ ಮೌನ ಆವರಿಸಿದೆ. ಕುಟುಂಬದ ಸದಸ್ಯನ ಸಾವಾಗಿದೆ.

ಬಿಗ್‌ ಬಾಸ್‌ ವಿಜೇತ ಹನುಮಂತ ಲಮಾಣಿ ಮನೆಯಲ್ಲಿ ನೀರವ ಮೌನ
ಬಿಗ್‌ ಬಾಸ್‌ ವಿಜೇತ ಹನುಮಂತ ಲಮಾಣಿ ಮನೆಯಲ್ಲಿ ನೀರವ ಮೌನ

Bigg Boss Kannada 11: ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರ ವಿಜೇತನಾಗಿ ಹೊರಹೊಮ್ಮಿದ್ದಾರೆ ಗಾಯಕ ಹನುಮಂತ ಲಮಾಣಿ. ಐದು ಕೋಟಿಗೂ ಅಧಿಕ ವೋಟ್‌ ಪಡೆದು ಅಮೋಘ ಗೆಲುವು ದಾಖಲಿಸಿಕೊಂಡಿದ್ದಾರೆ. ಈ ಗೆಲುವನ್ನು ಚಿಲ್ಲೂರು ಬಡ್ನಿ ಗ್ರಾಮ ಮತ್ತು ಕರ್ನಾಟಕದ ಜನತೆಯೂ ಸಂಭ್ರಮಿಸುತ್ತಿದೆ. ಆದರೆ, ಈ ಸಂಭ್ರಮದ ನಡುವೆಯೇ ಕುಟುಂಬದ ಆಪ್ತರೊಬ್ಬರನ್ನು ಕಳೆದುಕೊಂಡಿದ್ದಾರೆ ಹನುಮಂತ!

ಭಾನುವಾರ (ಜ. 26) ಬಿಗ್‌ ಬಾಸ್‌ ಫಿನಾಲೆಯಲ್ಲಿ ಕಿಚ್ಚ ಸುದೀಪ್‌, ಹನುಮಂತು ಅವರ ಕೈ ಎತ್ತುವ ಮೂಲಕ ವಿನ್ನರ್‌ ಘೋಷಣೆ ಮಾಡಿದ್ದರು. ಸೋಷಿಯಲ್‌ ಮೀಡಿಯಾದಲ್ಲಿಯೂ ಅಪಾರ ಖ್ಯಾತಿ ಪಡೆದ ಹನುಮಂತಗೆ ಎಲ್ಲರೂ ಶುಭಾಶಯ ರವಾನಿಸಿದ್ದರು. ಇತ್ತ ಕಪ್‌ ಜತೆಗೆ ಊರು ತಲುಪಿದ್ದ ಹನುಮಂತು, ಎಲ್ಲರ ಜತೆಗೆ ಸಂಭ್ರಮಿಸಬೇಕು ಎಂದುಕೊಂಡಿದ್ದರು. ಆದರೆ, ಹಠಾತ್‌ ಬೆಳವಣಿಗೆಯಲ್ಲಿ ಅವರ ಚಿಕ್ಕಪ್ಪ ನಿಧನರಾಗಿದ್ದಾರೆ.

ಬಿಗ್‌ ಬಾಸ್‌ನಲ್ಲಿ ಹನುಮಂತ ಗೆದ್ದ ಬೆನ್ನಲ್ಲೇ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಚಿಲ್ಲೂರು ಬಡ್ನಿ ತಾಂಡಾದಲ್ಲಿ ಅವರ ಆಪ್ತರು, ಸ್ನೇಹಿತರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಅಷ್ಟೇ ಅಲ್ಲದೇ, ಅದ್ಯಾವಾಗ ಹನುಮಂತು ಊರಿಗೆ ಬರ್ತಾನೆ, ಅವನನ್ನು ಅದ್ಯಾವಾಗ ಭೇಟಿ ಮಾಡಿ, ಸಂಭ್ರಮಾಚರಣೆ ಮಾಡುವುದು ಎಂದೆಲ್ಲ ಸಿದ್ಧತೆ ಮಾಡಿದ್ದರು. ಅದರಂತೆ, ಸುತ್ತ ಮುತ್ತಲಿನ ಗ್ರಾಮಗಳ ಸ್ನೇಹಿತರು ಚಿಲ್ಲೂರು ಬಡ್ನಿಗೆ ಆಗಮಿಸಿದ್ದರು. ಆದರೆ, ಇದೀಗ ಹನುಮಂತು ಅವರ ಚಿಕ್ಕಪ್ಪ, ದೇವಪ್ಪ ಇಂದು (ಜ. 27) ನಿಧನರಾದ ಬೆನ್ನಲ್ಲೇ, ಸಂಭ್ರಮಾಚರಣೆ ಸ್ಥಗಿತಗೊಂಡಿದೆ.

Whats_app_banner