ಬಿಗ್ ಬಾಸ್ ಮನೆಯಲ್ಲಿ ಜ್ಯೋತಿಷಿ ಆದ ಚೈತ್ರಾ ಕುಂದಾಪುರ; ಶಿಶಿರ್ ಶಾಸ್ತ್ರಿ ಹಸ್ತರೇಖೆ ನೋಡಿ ಆಕೆ ನುಡಿದ ಭವಿಷ್ಯವೇನು?
ಈ ವಾರ ಒಟ್ಟು 10 ಮಂದಿ ನಾಮಿನೇಷನ್ ಆಗಿದ್ದಾರೆ. ಚೈತ್ರಾ ಕುಂದಾಪುರ ನೇರವಾಗಿ ನಾಮಿನೇಟ್ ಆಗಿದ್ಧಾರೆ. ಇದನ್ನು ಹೊರತುಪಡಿಸಿ ಮನೆಯಲ್ಲಿ 2ನೇ ದಿನ ಬಹಳ ಆಸಕ್ತಿಕರ ಘಟನೆಗಳು ನಡೆದವು. ಜ್ಯೋತಿಷಿಯಾಗಿ ಬದಲಾದ ಚೈತ್ರಾ, ಶಿಶಿರ್ ಶಾಸ್ತ್ರಿ ಕೈ ನೋಡಿ ಅವರ ಭವಿಷ್ಯ ನುಡಿದರು.
ಬಿಗ್ ಬಾಸ್ ಕನ್ನಡ 11 ಸೀಸನ್ ಎರಡನೇ ದಿನಕ್ಕೆ ಕಾಲಿಟ್ಟಿದೆ. ದೊಡ್ಮನೆಯಲ್ಲಿ ಕೆಲವು ಸ್ಪರ್ಧಿಗಳು ಹತ್ತಿರವಾಗುತ್ತಿದ್ದರೆ, ಇನ್ನೂ ಕೆಲವರು ಹಾವು ಮುಂಗುಸಿಯಂತೆ ಕಿತ್ತಾಡಲು ಶುರು ಮಾಡಿದ್ದಾರೆ. ಎರಡನೇ ದಿನ ಸುದೀಪ್ ಅಭಿನಯದ ಕೋಟಿಗೊಬ್ಬ 3 ಚಿತ್ರದ ಪಟಾಕಿ ಪೋರಿ ಹಾಡಿನ ಮೂಲಕ ಆರಂಭವಾಯ್ತು. ಸ್ಪರ್ಧಿಗಳೆಲ್ಲಾ ನಿದ್ರೆ ಕಣ್ಣಿನಲ್ಲಿ ಎದ್ದು ಕಿಚ್ಚನ ಹಾಡಿಗೆ ಡ್ಯಾನ್ಸ್ ಮಾಡಿ ದಿನವನ್ನು ಸ್ವಾಗತಿಸಿದರು.
ಶಿಶಿರ್ ಶಾಸ್ತ್ರಿ ಕೈ ನೋಡಿ ಭವಿಷ್ಯ ನುಡಿದ ಚೈತ್ರಾ ಕುಂದಾಪುರ
ಬೆಳ್ಳಂ ಬೆಳಗ್ಗೆ ಯುಮುನಾ ಶ್ರೀನಿಧಿ ಮತ್ತು ಸುರೇಶ್-ರಂಜಿತ್ ನಡುವೆ ಸಣ್ಣ ಪುಟ್ಟ ವಾಗ್ವಾದ ನಡೆಯಿತು. ಟಾಯ್ಲೆಟ್ ಬೀಗದ ಕುರಿತು ಶಿಶಿರ್ ಹಾಗೂ ಭವ್ಯಾ ಗೌಡ ನಡುವೆ ವಾಗ್ವಾದ ನಡೆಯಿತು. ಮಧ್ಯಾಹ್ನದ ವೇಳೆಗೆ ಚೈತ್ರಾ ಕುಂದಾಪುರ ಜ್ಯೋತಿಷಿಯಾಗಿ ಬದಲಾದರು. ಶಿಶಿರ್ ಶಾಸ್ತ್ರಿ ಹಸ್ತರೇಖೆ ನೋಡಿದ ಚೈತ್ರಾ ಕುಂದಾಪುರ ನಿಮಗೆ ದುಡ್ಡಿನ ಸಮಸ್ಯೆಯೇ ಬರುವುದಿಲ್ಲ. ಹಾಗಂತ ನೀವು ನೂರಾರು ಕೋಟಿ ದುಡ್ಡು ಮಾಡುವುದಿಲ್ಲ. ನಿಮ್ಮ ಜೀವನಕ್ಕೆ ಎಷ್ಟು ಬೇಕೋ ಅಷ್ಟು ಹಣ ಮಾಡುತ್ತೀರಿ ಅಷ್ಟೇ. ಒಮ್ಮೆ ಯಾರನ್ನಾದರೂ ನಂಬಿ ಹಣ ಕಳೆದುಕೊಳ್ಳುತ್ತೀರಿ. ಆದರೆ ಮತ್ತೆ ಆ ಹಣ ಸಂಪಾದಿಸುತ್ತೀರಿ. ಸುಮಾರು 70-75 ವರ್ಷ ಬದುಕುತ್ತೀರಿ.
ಶಿಸಿರ್ ಶಾಸ್ತ್ರಿಗೆ ಮದುವೆ ಆಗೋದು ತಡವಂತೆ
ನಿಜವಾಗಿ ಹೇಳಿ ನಿಮಗೆ 3 ರಿಲೇಷನ್‌ಶಿಪ್ ಇತ್ತಾ? ಎಂದು ಚೈತ್ರಾ ಕೇಳುತ್ತಾರೆ. ಇದಕ್ಕೆ ಶಿಶಿರ್ ಹೌದು ಎನ್ನುತ್ತಾರೆ. ಆದರೆ ನಿಮಗೆ ಅದೆಲ್ಲಾ ವಾಪಸ್ ಬರುವುದಿಲ್ಲ ಎನ್ನುತ್ತಾರೆ. ಖಂಡಿತ ನನಗೆ ಅದು ಬೇಡಬೇ ಬೇಡ ಎಂದು ಶಿಶಿರ್ ಉತ್ತರಿಸುತ್ತಾರೆ. ಬಂದರೂ ಅದನ್ನು ನೀವು ಸ್ವೀಕರಿಸಬೇಡಿ, ಏಕೆಂದರೆ ಅದರಿಂದ ನಿಮಗೆ ಬಹಳ ಸಮಸ್ಯೆ ಆಗುತ್ತದೆ. ಈ ರಿಲೇಶನ್‌ಶಿಪ್‌ನಿಂದ ನೀವು ಬಹಳ ಕಳೆದುಕೊಂಡಿದ್ದೀರಿ. ಮದುವೆ ಸ್ವಲ್ಪ ತಡವಾಗಬಹುದು. 35-38 ವಯಸ್ಸಿನಲ್ಲಿ ಆಗಬಹುದು ಎಂದು ಭವಿಷ್ಯ ನುಡಿಯುತ್ತಾರೆ.
ಈ ವಾರ ನಾಮಿನೇಷನ್ ಆಗಿದ್ದು ಯಾರು?
ಇದು ಮುಗಿಯುತ್ತಿದ್ದಂತೆ ಮೊದಲ ವಾರದ ನಾಮಿನೇಶನ್ ಪ್ರಕ್ರಿಯೆ ಆರಂಭವಾಗುತ್ತದೆ. ಚೈತ್ರ ಕುಂದಾಪುರ ನೇರವಾಗಿ ನಾಮಿನೇಷನ್ ಆಗಿದ್ದಾರೆ. 3 ಹಂತದ ಟಾಸ್ಕ್‌ನಲ್ಲಿ ಸ್ಪರ್ಧಿಗಳು ಒಬ್ಬರಿಗೊಬ್ಬರು ಕಿತ್ತಾಡಿಕೊಂಡೇ ನಾಮಿನೇಷನ್ ಮುಗಿಸುತ್ತಾರೆ. ಅದರಂತೆ ಮೊದಲ ವಾರ, ಗೌತಮಿ ಜಾದವ್, ಶಿಶಿರ್ ಶಾಸ್ತ್ರಿ, ಉಗ್ರಂ ಮಂಜು, ಯುಮುನಾ ಶ್ರೀನಿಧಿ, ಹಂಸ, ಭವ್ಯಾ ಗೌಡ, ಲಾಯರ್ ಜಗದೀಶ್, ಮಾನಸಾ, ಮೋಕ್ಷಿತಾ ಪೈ ನಾಮಿನೇಷನ್ ಆಗಿದ್ದಾರೆ. ಇವರಲ್ಲಿ ಈ ವಾರ ವೀಕ್ಷಕರು ಯಾವ ಸ್ಪರ್ಧಿಗಳಿಗೆ ಓಟು ಮಾಡಿ ಗೆಲ್ಲಿಸಲಿದ್ದಾರೆ? ಯಾವ ಸ್ಪರ್ಧಿಯನ್ನು ಮನೆಯಿಂದ ಕಳಿಸಲಿದ್ದಾರೆ ಕಾದು ನೋಡಬೇಕು.
ವಿಭಾಗ