‌Bigg Boss Kannada 11: ಕರ್ಮ ರಿಟರ್ನ್ಸ್‌! ಈ ಒಂದು ತಪ್ಪು ಮಾಡಿ, ತಮ್ಮ ಗುಂಡಿ ತಾವೇ ತೋಡಿಕೊಂಡ್ರಾ ಉಗ್ರಂ ಮಂಜು, ಗೌತಮಿ, ಭವ್ಯಾ?
ಕನ್ನಡ ಸುದ್ದಿ  /  ಮನರಂಜನೆ  /  ‌Bigg Boss Kannada 11: ಕರ್ಮ ರಿಟರ್ನ್ಸ್‌! ಈ ಒಂದು ತಪ್ಪು ಮಾಡಿ, ತಮ್ಮ ಗುಂಡಿ ತಾವೇ ತೋಡಿಕೊಂಡ್ರಾ ಉಗ್ರಂ ಮಂಜು, ಗೌತಮಿ, ಭವ್ಯಾ?

‌Bigg Boss Kannada 11: ಕರ್ಮ ರಿಟರ್ನ್ಸ್‌! ಈ ಒಂದು ತಪ್ಪು ಮಾಡಿ, ತಮ್ಮ ಗುಂಡಿ ತಾವೇ ತೋಡಿಕೊಂಡ್ರಾ ಉಗ್ರಂ ಮಂಜು, ಗೌತಮಿ, ಭವ್ಯಾ?

Bigg boss Kannada 11: ಒಂಭತ್ತನೇ ವಾರದ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಮಹಾರಾಜ ಉಗ್ರಂ ಮಂಜು ಬಣ ಗೆದ್ದು ಬೀಗಿದೆ. ಆ ಗೆಲುವಿನಲ್ಲಿಯೇ ಮಹಾರಾಜ ಸೇರಿ ಗೌತಮಿ ಮತ್ತು ಭವ್ಯ ಮಹಾ ಎಡವಟ್ಟು ಮಾಡಿಕೊಂಡಿದ್ದಾರೆ. ವ್ಯಕ್ತಿತ್ವದ ಆಟದಲ್ಲಿ ತಮ್ಮ ವ್ಯಕ್ತಿತ್ವವನ್ನೇ ಕಳೆದುಕೊಂಡಿದ್ದಾರೆ.

Bigg Boss Kannada 11: ಉಗ್ರಂ ಮಂಜು, ಗೌತಮಿ ಜಾಧವ್‌, ಭವ್ಯಾ ಗೌಡ ವರ್ತನೆಗೆ ಟೀಕೆ
Bigg Boss Kannada 11: ಉಗ್ರಂ ಮಂಜು, ಗೌತಮಿ ಜಾಧವ್‌, ಭವ್ಯಾ ಗೌಡ ವರ್ತನೆಗೆ ಟೀಕೆ

‌Bigg Boss Kannada 11: ಬಿಗ್‌ ಬಾಸ್‌ ಮನೆಯಲ್ಲಿ ಬಿಗ್‌ ಬಾಸ್‌ ಸಾಮ್ರಾಜ್ಯದ ಆಳ್ವಿಕೆ ಕೊನೆಗೊಂಡಿದೆ. ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಧನರಾಜ್‌ ಗೆದ್ದು ಬೀಗಿದ್ದಾರೆ. ಮತ್ತೊಂದೆಡೆ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ನಮ್ಮ ಬಣವೇ ಗೆದ್ದಿದೆ ಎಂದು ಗತ್ತು ಪ್ರದರ್ಶಿಸಿ ಗಹಗಹಿಸಿ ನಕ್ಕ ಉಗ್ರಂ ಮಂಜು ಮತ್ತು ಗೌತಮಿ ಜಾಧವ್‌, ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ವೀಕ್ಷಕರಿಗೆ ಕೊಂಚ ಕಟುವಾಗಿಯೇ ಕಂಡರು. ಅದಕ್ಕೆ ಕಾರಣ; ಗೆದ್ದ ಮೇಲೆ ಆ ಉಮೇದಿನಲ್ಲಿಯೇ ಮೋಕ್ಷಿತಾ ಎದುರೇ "ಆಕಾಶದಲ್ಲಿ ನೀ ದೀಪವಾದೆ.." ಹಾಡು ಹೇಳಿ ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ವಾರವೀಡಿ ಭಾವನೆಗಳ ಕಿತ್ತಾಟ..

9ನೇ ವಾರ ಬಿಗ್‌ ಬಾಸ್‌ ಮನೆ ಅಕ್ಷರಶಃ ರಣಾಂಗಣವಾಗಿತ್ತು. ಕಿತ್ತಾಟ, ನೂಕಾಟದ ನಡುವೆ ಕಣ್ಣೀರೂ ಕೋಡಿಯಂತೆ ಹರಿದಿತ್ತು. ಭಾವನೆಗಳು ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದ್ದವು. ಮಾತಿಗೆ ಮಾತು, ಸೇಡಿಗೆ ಸೇಡು, ಏಟಿಗೆ ಏಟು ಅನ್ನೋ ವರಸೆ ಈ ವಾರವೂ ಬಿಗ್‌ ಮನೆಯಲ್ಲಿ ಕಂಡಿತ್ತು. ಮಹಾರಾಜ ಒಬ್ಬನೇ ಇದ್ದ ರಾಜ್ಯಕ್ಕೆ ಯುವರಾಣಿಯ ಆಗಮನವೂ ಆಯ್ತು. ಇಬ್ಬರ ನಡುವೆ ತಿಕ್ಕಾಟವೂ ಮುಂದುವರಿಯಿತು. ಕೊನೆಗೆ ಆಗಂತುಕರಿಂದ ಇಬ್ಬರ ಬಂಧನವಾಯ್ತು. ಇಬ್ಬರ ಪೈಕಿ ಮೊದಲು ಬಿಡುಗಡೆ ಆದ ತಂಡ ಕ್ಯಾಪ್ಟನ್ಸಿ ಓಟಕ್ಕೆ ಅರ್ಹತೆ ಪಡೆಯಿತು. ಆಟಕ್ಕೂ ತೆರೆಬಿದಿತ್ತು.

ಆಪತ್ತಿನಲ್ಲಿ ಅರಸೊತ್ತಿಗೆ ಟಾಸ್ಕ್‌ನಲ್ಲಿ ಜಯ

ಆಪತ್ತಿನಲ್ಲಿ ಅರಸೊತ್ತಿಗೆ ಟಾಸ್ಕ್‌ನಲ್ಲಿ ಉಗ್ರಂ ಮಂಜು ಅವರ ತಂಡ ಜಯಭೇರಿ ಬಾರಿಸಿತು. ಆಗ, ಗೆದ್ದ ಖುಷಿಯಲ್ಲಿ ಉಗ್ರಂ ಮಂಜು ಬಾಲ್ಕನಿಗೆ ತೆರಳಿ ಗನ್‌ ಎತ್ತಿ ಹಿಡಿದು ಜಯದ ನಗೆ ಬೀರಿದರು. ಇದೇ ವೇಳೆ ಮೋಕ್ಷಿತಾ ಅವರನ್ನೇ ನೋಡುತ್ತ, "ಆಕಾಶದಲ್ಲಿ ನೀ ದೀಪವಾದೆ.." ಹಾಡು ಹಾಡಿದರು. ಈ ಹಾಡಿಗೆ ಗೌತಮಿ ಮತ್ತು ಭವ್ಯಾ ಗೌಡ ಧ್ವನಿಯಾದರು. ಆ ಹಾಡಿನಲ್ಲಿ ಮೋಕ್ಷಿತಾ ಅವರನ್ನೇ ಟಾರ್ಗೆಟ್‌ ಮಾಡಿದಂತಿತ್ತು. ಉಗ್ರಂ ಮಂಜು ಮತ್ತು ಗೌತಮಿಯ ಈ ನಡೆ, ಸೋಷಿಯಲ್‌ ಮೀಡಿಯಾದಲ್ಲಿ ತೀವ್ರ ಟೀಕೆಗೆ ಗುರಿಯಾಗುತ್ತಿದೆ. ಬಗೆ ಬಗೆ ಕಾಮೆಂಟ್‌ಗಳೂ ಹರಿದು ಬರುತ್ತಿವೆ. ಇಲ್ಲಿವೆ ಆ ಕಾಮೆಂಟ್‌ಗಳು.

ಟಾಸ್ಕ್‌ ಗೆದ್ದರೂ ವ್ಯಕ್ತಿತ್ವದಾಟದಲ್ಲಿ ಸೋಲು

  • ಮೋಕ್ಷಿತಾ ಅವರ ಜೊತೆ ನಿಜವಾದ ಫ್ರೆಂಡ್‌ಶಿಫ್‌ ಇದ್ದಿದ್ದರೆ ಅವರ ಜೊತೆಗೆ ಇದ್ದು ಅವರ ತಪ್ಪುಗಳನ್ನು ಪ್ರೀತಿಯಿಂದ ಸರಿ ಮಾಡಬಹುದಿತ್ತು.. ನಮ್ಮವರು ತಪ್ಪು ಮಾಡಿದಾಗ ಅವರನ್ನು ದೂರ ಮಾಡೋ ಬದಲು, ಜೊತೆ ಇದ್ದು ಸರಿ ಮಾಡಿದಾಗ ಮಾತ್ರ ನಮ್ಮ ಸಂಬಂಧ ನಿಜ ಅನ್ಸುತ್ತೆ.. ಇಲ್ಲ ಅಂದ್ರೆ ಅವಕಾಶವಾದಿ ಅಂತ ಅರ್ಥ.
  • ಯಾರನ್ನು ಕೂಡ ನಾವು ಜಡ್ಜ್ ಮಾಡೋಕಾಗಲ್ಲ.. ಯಾಕಂದ್ರೆ ಯಾವಾಗ್ ಯಾರ್ ಮೈಂಡ್ ಚೇಂಜ್ ಆಗ್ತಿರುತ್ತೆ... ಯಾರ್ನ ನಂಬೋಕಾಗುತ್ತೆ ಗುರು.... ಧರ್ಮ ಅವ್ರ್ನ ಒಬ್ರನ್ನ ಬಿಟ್ಟು..
  • ಇನ್ನೊಬ್ಬರ ಭಾವನೆಗಳನ್ನು ಮತ್ತೆ ಮತ್ತೆ ಅಪಹಾಸ್ಯ ಮಾಡುವುದು ಖಂಡಿತವಾಗಿಯೂ ಅವರ ಮಟ್ಟವನ್ನು ತೋರಿಸುತ್ತದೆ. ಕರ್ಮವು ಎಲ್ಲದಕ್ಕೂ ಉತ್ತರವನ್ನು ಕೊಡುತ್ತದೆ.
  • ಒಬ್ಬ ವ್ಯಕ್ತಿಯ ಫೀಲಿಂಗ್ಸ್‌ನ ತಮ್ಮ ತಮ್ಮ ಈಗೋ ಸೆಟಿಸ್‌ಫ್ಯಾಕ್ಷನ್‌ಗೋಸ್ಕರ ಎಷ್ಟು ಚೀಪ್‌ ಆಗಿ ಯೂಸ್‌ ಮಾಡ್ಕೋತಾರೆ ಅಂತ ಇವತ್ತು ನೋಡ್ದೆ. ಗೆದ್ಮೇಲೆ ಆ ದೇವಿ ಪೂಜೆ ಮಾಡಿದ್ರಿ ಅಲ್ವಾ.. ಕರ್ಮ ಯಾರಿಗೆ ಬರಬೇಕೋ ಅವರಿಗೆ ವಾಪಸ್ ಬಂದೇ ಬರುತ್ತೆ. ನೀವು ಯಾವ್ದೇ ಟಾಸ್ಕ್ ಗೆದ್ದಿರಬಹುದು. ಆದರೆ ವ್ಯಕ್ತಿಯಾಗಿ ನೀವು ಸೋತಿದ್ದೀರಿ" ಎಂದು ಮಂಜು, ಭವ್ಯಾ ಮತ್ತು ಗೌತಮಿ ಬಗ್ಗೆಯೂ ಕಾಮೆಂಟ್‌ ಮಾಡುತ್ತಿದ್ದಾರೆ.
  • ಟಾಸ್ಕ್ ಗೆದ್ದು ವ್ಯಕ್ತಿತ್ವದಲ್ಲಿ ಸೋತು ಬಿಟ್ರು.. ಪಕ್ಕ ಈ ಮೂವರಲ್ಲಿ ಇಬ್ಬರು ಟಾಪ್ 5 ಇರಲ್ಲ ನೋಡ್ತಾ ಇರಿ..
  • ಬಿಗ್ ಬಾಸ್ ಅಲ್ಲಿ ಕೆಲವರ Friendship ನೋಡಿದ್ರೆ ನಮಗೂ ಇಂಥಾ ಒಬ್ಬ ಸ್ನೇಹಿತ ಇರಬೇಕಿತ್ತು ಅಂತ ಅನಿಸೋದು...(ವಿನಯ್ & ಕಾರ್ತಿಕ್ ಸ್ನೇಹ) ಇನ್ನೂ ಈ ಮೂವರ ಸ್ನೇಹ ನೋಡಿದ್ರೆ ಸ್ನೇಹಿತರು ಇಲ್ಲದೆ ಇರೋದೇ ಒಳ್ಳೇದು ಅಂತ ಅನಿಸುತ್ತೆ, ಸ್ನೇಹ ಅನ್ನೋ ಪದಕ್ಕೇ ಕಳಂಕ ಈ ಮೂವರು..

Whats_app_banner