Bigg Boss Kannada 11: ಬಿಗ್ ಬಾಸ್‌ ಮನೆಯಿಂದ ಆಚೆ ಹೋಗ್ತಾರಾ ತ್ರಿವಿಕ್ರಂ? ಸಿಟ್ಟಿಗೆದ್ದ ಕಿಚ್ಚ ಸುದೀಪ್ ಏನಂದ್ರು ನೋಡಿ
ಕನ್ನಡ ಸುದ್ದಿ  /  ಮನರಂಜನೆ  /  Bigg Boss Kannada 11: ಬಿಗ್ ಬಾಸ್‌ ಮನೆಯಿಂದ ಆಚೆ ಹೋಗ್ತಾರಾ ತ್ರಿವಿಕ್ರಂ? ಸಿಟ್ಟಿಗೆದ್ದ ಕಿಚ್ಚ ಸುದೀಪ್ ಏನಂದ್ರು ನೋಡಿ

Bigg Boss Kannada 11: ಬಿಗ್ ಬಾಸ್‌ ಮನೆಯಿಂದ ಆಚೆ ಹೋಗ್ತಾರಾ ತ್ರಿವಿಕ್ರಂ? ಸಿಟ್ಟಿಗೆದ್ದ ಕಿಚ್ಚ ಸುದೀಪ್ ಏನಂದ್ರು ನೋಡಿ

ಬಿಗ್‌ ಬಾಸ್‌ ಮನೆಯಲ್ಲಿ ಈ ವಾರದ ಪಂಚಾಯ್ತಿ ಬಲು ಜೋರಾಗೇ ನಡೆದಿದೆ. ಕಿಚ್ಚ ಸುದೀಪ್ ಅವರು ಕಾರ್ಯಕ್ರಮ ಆರಂಭಿಸುವಾಗಲೇ ಸಿಟ್ಟಾಗಿರುವಂತೆ ತೋರುತ್ತದೆ. ಮನೆಯಲ್ಲಿ ನಡೆದ ಕೆಲ ಚರ್ಚೆಗಳ ಬಗ್ಗೆ ಅಲ್ಲಿ ಅಸಮಾಧಾನ ಉಂಟಾಗಿದೆ. ಸುದೀಪ್ ತ್ರಿವಿಕ್ರಂ ಅವರಿಗೆ ಸುಮಾರು ಪ್ರಶ್ನೆಗಳನ್ನು ಕೇಳಿದ್ದಾರೆ.

ಬಿಗ್ ಬಾಸ್‌ ಮನೆಯಿಂದ ಆಚೆ ಹೋಗ್ತಾರಾ ತ್ರಿವಿಕ್ರಂ?
ಬಿಗ್ ಬಾಸ್‌ ಮನೆಯಿಂದ ಆಚೆ ಹೋಗ್ತಾರಾ ತ್ರಿವಿಕ್ರಂ?

ಬಿಗ್ ಬಾಸ್‌ ಮನೆಯಲ್ಲಿ ಕೆಲ ಸ್ಪರ್ದಿಗಳು ಬಿಗ್‌ ಬಾಸ್‌ ನೀಡಿದ ತೀರ್ಪನ್ನು ಅಥವಾ ಅವರ ಮಾತನ್ನು ಒಪ್ಪುತ್ತಿಲ್ಲ. ಅವರ ಮಾತಿಗೆ ಅಗೌರವ ಸೂಚಿಸುತ್ತಿದ್ದಾರೆ ಎಂದು ಇಂದಿನ ಪಂಚಾಯ್ತಿಯಲ್ಲಿ ಹೇಳಲಾಗುತ್ತಿದೆ. ತ್ರಿವಿಕ್ರಂ ಅವರು ಬಿಗ್ ಬಾಸ್ ನಿರ್ಧಾರವನ್ನು ಪ್ರಶ್ನೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಕಲರ್ಸ್‌ ಕನ್ನಡ ಬಿಡುಗಡೆ ಮಾಡಿದ ಪ್ರೋಮೋದಲ್ಲಿ ಸುದೀಪ್ ಅವರು ತ್ರಿವಿಕ್ರಂ ಅವರನ್ನು ಪ್ರಶ್ನೆ ಮಾಡಿದ್ದಾರೆ.

ನೀವು ಕೋಪ ಮಾಡಿಕೊಂಡಿಲ್ಲ ಎಂದಾದರೆ ನಾನು ಕೆಲವು ಮಾತನಾಡಲು ಬಯಸುತ್ತೇನೆ ಎಂದು ತ್ರಿವಿಕ್ರಂ ಹೇಳುತ್ತಾರೆ. ಆಗ ಕಿಚ್ಚ ಸುದೀಪ್ ನಾನು ಕೋಪ ಮಾಡಿಕೊಳ್ಳಬೇಕಾ ಅಥವಾ ಬೇಡವಾ? ಎನ್ನುವುದನ್ನು ನಾನೇ ನಿರ್ಧಾರ ಮಾಡುತ್ತೇನೆ ಎಂದು ಹೇಳಿದ್ದಾರೆ. ಆಗ ತ್ರಿವಿಕ್ರಂ ಮತ್ತೆ ಸುಮ್ಮನಾಗಿದ್ದಾರೆ. ಈ ವಿಚಾರ ಬಂದಿರುವುದು ಶೋಭಾ ಶೆಟ್ಟಿಯವರನ್ನು ಬಿಗ್‌ ಬಾಸ್‌ ಹೇಗೆ ಅವರು ಹೇಳಿದ ತಕ್ಷಣ ಮನೆಗೆ ಕಳಿಸಿದರು ಎಂದು ಪ್ರಶ್ನೆ ಮಾಡಿರುವುದಕ್ಕಾಗಿ.

ಕಿಚ್ಚನ ಮಾತಿಗೆ ತ್ರಿವಿಕ್ರಂ ಕೊಟ್ಟ ಉತ್ತರ ನೋಡಿ

ಆದರೆ ತ್ರಿವಿಕ್ರಂ ಆ ಕುರಿತು ನಾನು ಬಿಗ್‌ ಬಾಸ್‌ಗೆ ಅಗೌರವ ಸೂಚಿಸಿಲ್ಲ. ನನಗೆ ನಿಮ್ಮ ಮುಂದೆ ತಲೆ ತಗ್ಗಿಸಲು ಯಾವ ಮುಜುಗರವೂ ಅಥವಾ ಅವಮಾನವೂ ಇಲ್ಲ ಎಂದಿದ್ದಾರೆ. ಆದರೆ ನನಗೆ ಯಾರೂ ತಲೆ ತಗ್ಗಿಸುವುದು ಬೇಡ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. ನನ್ನಿಂದ ಏನಾದರೂ ಅಗೌರವ ಆಗಿದ್ದರೆ ನಾನು ಈ ಮನೆಬಿಟ್ಟು ಹೋಗಲು ರೆಡಿ ಇದ್ದೇನೆ ಎಂದು ಹೇಳಿದ್ದಾರೆ ತ್ರಿವಿಕ್ರಂ.

ಅನುಮಾನವೇ ಬೇಡ ನಿಮ್ಮ ಮಾತಿನಿಂದ ಅಗೌರವ ಆಗಿದೆ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. ಹೀಗಿರುವಾಗ ಈ ವಾರ ಮನೆಯಿಂದ ತ್ರಿವಿಕ್ರಂ ಔಟ್ ಆಗುತ್ತಾರಾ? ಎಂಬ ಪ್ರಶ್ನೆ ಮೂಡಿದೆ.

ಹೀಗಿದೆ ಜನಾಭಿಪ್ರಾಯ

ಸುದೀಪ್ ಸರ್ ಆ ಗೌತಮಿನ ಮೊದಲು ಹೊರಗಾಕಿ ಬಿಗ್ ಬಾಸ್ ಸರಿಯಾಗುತ್ತೆ ದಯವಿಟ್ಟು. ನಿಮ್ಮ ಕೈ ಮುಗೀತಿನಿ ಎಲ್ಲ ಬಿಗ್ ಬಾಸ್ ಅವಳೇ ಹಾಕ್ತಾಳ ನೋಡಿ 10 ನೇ ವಾರಕ್ಕೆ ಕಾಲಿಟ್ಟ ಬಿಗ್ ಬಾಸ್ ಮನೆಯಲ್ಲಿ ಮಂಜನ್ ಜೊತೆ ಇದಾರೆ ಬೇಕಾರೆ ಅಷ್ಟು ಎಪಿಸೋಡ್ ತೆಗೆದು ನೋಡಿ ಮನೆಯಲ್ಲಿ ಒಬ್ಬರವರೆಗೂ ಹೋಗೋದು ಏನೇ ಕಷ್ಟ ಆದರೆ ಯಾವುದರಲ್ಲಿ ಅವಳಿಲ್ಲ ಪ್ಲೀಸ್ ದಯವಿಟ್ಟು ಅವರನ್ನು ಹೊರಗೆ ಹಾಕಿ ಎಂದು ಭೀಮ್ ಕೇರ್ವಾಡ ಕಾಮೆಂಟ್ ಮಾಡಿದ್ದಾರೆ.

ವಿಕ್ರಂ ಆಡಿದ ಮಾತು ಯಾವ್ದು ಒಪ್ಕೋಳಲ್ಲ manipulator But ಅವನು ಹೇಳಿದ್ದು ಕರೆಕ್ಟ್ ಇದೆ ಸುರೇಶ್ ಹೋಗ್ತೀನಿ ಅಂದಾಗ ಕಳ್ಸಿಲ್ಲ ಶೋಭಾ ನ ಹೇಗೆ ಕಲ್ಸಿದ್ರು? ಎಂದು ಲತಾ ಅವರು ಕಾಮೆಂಟ್‌ನಲ್ಲಿ ಪ್ರಶ್ನೆ ಮಾಡಿದ್ದಾರೆ.

ಅವತ್ತು ತನ್ನ ಬಣ್ಣ ಬಯಲು ಆಗುತ್ತೆ ಅಂತ ಟಾಪಿಕ್ ಶಿಶಿರ ಕಡೆ ಡೈವರ್ಟ್ ಮಾಡಿದ ತಾನು ಸೇಫ್ ಆಗೋಕೆ ಇನ್ನೊಬ್ಬರ ನ ಬಲಿ ಪಶು ಮಾಡಿದ ತ್ರಿವಿಕ್ರಮ್ ಎಂದು ಮೀನಾ. ಜಿ ಅವರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಜನಾಭಿಪ್ರಾಯಗಳು ಭಿನ್ನವಾಗಿದೆ. ಹೆಚ್ಚಿನವು ಗೌತಮಿ ವಿರೋಧವಾಗಿದೆ.

ಮೋಕ್ಷಿತ ಬಿಗ್ ಬಾಸ್ ನಿಯಮ ಉಲ್ಲಂಘಿಸಿದರೆ ಅವಳನ್ನು ಹೊರಗೆ ಹಾಕಿ ಆದರೆ ಅವಳ ನಿರ್ಧಾರ ತಪ್ಪು ಅಂತ ‌ಹೇಳುವ ಅಧಿಕಾರ ಯಾರಿಗೂ ಇಲ್ಲ.. ಅದು ಅವಳ ವ್ಯಕ್ತಿತ್ವ ಸ್ವಾಭಿಮಾನ ದ ಪ್ರಶ್ನೆ.. ಈ 3 ತಿಂಗಳ ಆಟಕ್ಕಿಂತ ಬದುಕು ದೊಡ್ಡದು ಎಂದು ಸವಿತಾ ಬಿರಾದಾರ್ ಮೋಕ್ಷಿತಾ ಪರ ಕಾಮೆಂಟ್ ಮಾಡಿದ್ದಾರೆ.

Whats_app_banner