Bigg Boss Kannada 11 winner: ಸೋಷಿಯಲ್ ಮೀಡಿಯಾದಲ್ಲಿ ಹನುಮಂತನ ಹವಾ: ಗೆದ್ದು ಬೀಗಿದ ಹಳ್ಳಿಹೈದನ ಕೊಂಡಾಡಿದ ಕರುನಾಡ ಜನ
ಬಿಗ್ ಬಾಸ್ ಸೀಸನ್ 11ರ ಗೆಲುವು ಹನುಮಂತನದ್ದೇ ಆಗುತ್ತದೆ ಎಂದು ಸಾಕಷ್ಟು ಜನ ಕನಸು ಕಂಡಿದ್ದರು. ಆ ಕನಸು ನನಸಾಗುತ್ತದೆ ಎಂಬ ನಂಬಿಕೆಯನ್ನೂ ಹೊಂದಿದ್ದರು. ಆ ಪ್ರಕಾರ ಈ ಬಾರಿ ಬಿಗ್ ಬಾಸ್ ಸೀಸನ್ 11ರ ಜಯಭೇರಿ ಭಾರಿಸಿದ ಹನುಮಂತನ ಗೆಲುವನ್ನು ಜನರು ಇದು ತಮ್ಮದೇ ಗೆಲುವು ಎನ್ನುವ ರೀತಿಯಲ್ಲಿ ಆಚರಿಸುತ್ತಿದ್ದಾರೆ.

ಬಿಗ್ ಬಾಸ್ ಸೀಸನ್ 11ರ ಗೆಲುವು ಹನುಮಂತನದ್ದೇ ಆಗುತ್ತದೆ ಎಂದು ಸಾಕಷ್ಟು ಜನ ಕನಸು ಕಂಡಿದ್ದರು. ಆ ಕನಸು ನನಸಾಗುತ್ತದೆ ಎಂಬ ನಂಬಿಕೆಯನ್ನೂ ಹೊಂದಿದ್ದರು. ಆ ಪ್ರಕಾರ ಈ ಬಾರಿ ಬಿಗ್ ಬಾಸ್ ಸೀಸನ್ 11ರ ಜಯಭೇರಿ ಭಾರಿಸಿದ ಹನುಮಂತನ ಗೆಲುವನ್ನು ಜನರು ಇದು ತಮ್ಮದೇ ಗೆಲುವು ಎನ್ನುವ ರೀತಿಯಲ್ಲಿ ಆಚರಿಸುತ್ತಿದ್ದಾರೆ. ಸಾಕಷ್ಟು ಜನ ಸಾಮಾಜಿಕ ಜಾಲತಾಣಗಳಲ್ಲಿ ಹನುಮಂತನ ಗೆಲುವನ್ನು ಸಂಭ್ರಮಿಸುತ್ತಿದ್ದಾರೆ.
ಹೇಗಿದೆ ನೋಡಿ ಸೋಷಿಯಲ್ ಮೀಡಿಯಾದಲ್ಲಿ ಹನುಮಂತನ ಹವಾ
ನನ್ನ ಪ್ರೀತಿಯ ಬಂಜಾರ ಸಮುದಾಯದ ಎಲ್ಲಾ ಬಂಧುಗಳೇ ನಮ್ಮೆಲ್ಲರ ಪ್ರೀತಿಯ ಗ್ರಾಮೀಣ ಪ್ರತಿಭೆ ಹೊಂದಿದ ಬಂಜಾರ ಸಮುದಾಯದ ಬಿಗ್ ಬಾಸ್ ಸ್ಪರ್ಧಿ ಹನುಮಂತ ಲಮಾಣಿ ಇವರಿಗೆ ನಮ್ಮ ಧರ್ಮ ಗುರುಗಳು ಆದಂತಹ ಶ್ರೀ ಸಂತ ಸೇವಾಲಾಲ್ ಮಹಾರಾಜರು ಪವಿತ್ರವಾದ ಸಂವಿಧಾನದ ಅಡಿಯಲ್ಲಿ ಡಾಕ್ಟರ ಬಾಬಾಸಾಹೇಬ ಅಂಬೇಡ್ಕರ ರವರ ಆಶೀರ್ವಾದ ಹಾಗೂ ನಮ್ಮೆಲ್ಲ ಸಮುದಾಯದ ಆಶೀರ್ವಾದದೊಂದಿಗೆ ಹನುಮಂತ ಲಮಾಣಿ ಬಿಗ್ ಬಾಸ್ ಸೀಸನ್ 11 ಗೆದ್ದು ಬಿಗಿದ್ದಾರೆ ನಾವೆಲ್ಲ ಹಾರೈಸೋಣ ಎಂದು ಎಸ್ ಪ್ರಕಾಶ ಲಮಾಣಿ ಅವರು ಶುಭಕೋರಿದ್ದಾರೆ.
ಇನ್ನೂ ಸಾಕಷ್ಟು ಜನ ತಮ್ಮ ಖುಷಿಯನ್ನು ಹನುಮಂತನ ಗೆಲುವಲ್ಲಿ ಕಂಡಿದ್ದಾರೆ.
ಬಿಗ್ ಬಾಸ್ ಸೀಜನ್ 11ರ ವಿಜೇತ ಹಾವೇರಿ ಜಿಲ್ಲೆಯ ಹನುಮಂತ ಲಮಾಣಿ ಅವರಿಗೆ ಅಭಿನಂದನೆಗಳು.
ಒಬ್ಬ ದಲಿತ ಹುಡುಗ ಬಿಗ್ ಬಾಸ್ ಸೀಸನ್ 11ರ ವಿನ್ನರ್ .ಆಗಿದ್ದಕ್ಕೆ ತುಂಬಾ ಖುಷಿಯಾಯ್ತು ಎಂದು ಸನಾ ಉಲ್ಲಾ ಪೋಸ್ಟ್ ಮಾಡಿದ್ದಾರೆ.
ಅಭಿಮಾನಿಗಳು ಬಡವರ ಮಕ್ಕಳು ಬೆಳಿಬೇಕು ಎಂದು ಬರೆದುಕೊಂಡಿದ್ದಾರೆ.
ಹಾವೇರಿ ಹಮ್ಮೀರ, ಉತ್ತರ ಕರ್ನಾಟಕದ ಹುಲಿ ಹನುಮಂತ
ಗೆದ್ದೇ ಗೆಲ್ಲುವೆ ಒಂದು ದಿನ..
ಗೆಲ್ಲಲೇಬೇಕು ಒಳ್ಳೆತನ ಎಂದು ಮಧು ಎನ್ನುವವರು ಎಕ್ಸ್‌ನಲ್ಲಿ ಬರೆದುಕೊಂಡು ಶುಭಕೋರಿದ್ದಾರೆ.
ಹನುಮಂತನ ಜಯ
