Bigg Boss Winner: ಬಿಗ್ ಬಾಸ್ ವಿನ್ನರ್ ಹನುಮಂತನ ಮೊದಲ ಪ್ರತಿಕ್ರಿಯೆ; ಇದು ನಮ್ಮೆಲ್ಲರ ಗೆಲುವು ಎಂದು ಧನ್ಯವಾದ ತಿಳಿಸಿದ ಹಳ್ಳಿ ಹೈದ
Bigg Boss Winner Hanumantha: ಬಿಗ್ ಬಾಸ್ ಟ್ರೋಫಿ ತನ್ನದಾಗಿಸಿಕೊಂಡ ಹನುಮಂತ ಬಿಗ್ ಬಾಸ್ ವೇದಿಕೆಯಿಂದ ಮರಳಿ ಜನರಿಗೆ ಧನ್ಯವಾದ ತಿಳಿಸಿದ್ದಾರೆ. ಇದು ನನ್ನ ಗೆಲುವು ಮಾತ್ರವಲ್ಲ ನಮ್ಮೆಲ್ಲರ ಗೆಲುವು ಎಂದಿದ್ದಾರೆ.

Bigg Boss Winner Hanumantha: ಬಿಗ್ ಬಾಸ್ ಟ್ರೋಫಿ ತನ್ನದಾಗಿಸಿಕೊಂಡ ಹನುಮಂತ ಬಿಗ್ ಬಾಸ್ ವೇದಿಕೆಯಿಂದ ಬಂದ ತಕ್ಷಣ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಗೆಲುವಿನ ಬಗ್ಗೆ ಹಾಗೂ ತಾನು ಗೆಲ್ಲಲು ಕಾರಣೀಕರ್ತರಾದ ಅಭಿಮಾನಿಗಳ ಬಗ್ಗೆ ಬರೆದುಕೊಂಡಿದ್ದಾರೆ. ಧನ್ಯವಾದಗಳನ್ನು ತಿಳಿಸಿದ್ದಾರೆ. ನಿಮ್ಮ ಪ್ರೀತಿ, ಹಾಗೂ ಬೆಂಬಲದಿಂದ ಮಾತ್ರ ಇದೆಲ್ಲವೂ ಸಾಧ್ಯವಾಗಿದೆ ಎಂದು ಹೇಳಿದ್ದಾರೆ. ಅವರು ಬರೆದುಕೊಂಡ ಪೋಸ್ಟ್ ಇಲ್ಲಿದೆ ಗಮನಿಸಿ.
ಹನುಮಂತ ಹಂಚಿಕೊಂಡ ವಿಷಯಗಳಿಷ್ಟು
ಎಲ್ಲ ನನ್ನಾ ಕನ್ನಡ ಜನತೆಗೆ ನಮಸ್ಕಾರ ಇದೊಂದು ಮಹತ್ವದ ಕ್ಷಣ. ಮೊದಲು ಈ ವಿಶೇಷ ಟ್ರೋಫಿಯನ್ನು ನನ್ನದಾಗಿಸಿದ ಎಲ್ಲಾ ನನ್ನ ಪ್ರೀತಿಯ ಕನ್ನಡ ಜನತೆಗೆ ಹೃದಯಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ನಿಮ್ಮ ಅಣಿಮುಖ ಬೆಂಬಲ ಮತ್ತು ಪ್ರೀತಿಯಿಲ್ಲದೆ ನಾನು ಟ್ರೊಫಿಯನ್ನು ಪಡೆಯಲು ಸಾಧ್ಯವಾಗುತ್ತಿರಲಿಲ್ಲ "ಈ ಗೆಲುವು ನಿಮ್ಮ ಪ್ರೀತಿ, ಬೆಂಬಲ ಮತ್ತು ವಿಶ್ವಾಸದ ಫಲ. ಈ ಟ್ರೋಫಿ ನನ್ನದಲ್ಲ ನಿಮ್ಮೆಲ್ಲರದ್ದು. ನನಗೆ ಸದಾ ಪ್ರೇರಣೆ ನೀಡಿದ ಪ್ರತಿ ಹೃದಯಕ್ಕೂ ಹೃತ್ಪೂರ್ವಕ ಧನ್ಯವಾದಗಳು. ನನ್ನ ಮೇಲೆ ಇಟ್ಟ ಪ್ರೀತಿ, ಬೆಂಬಲ ಮತ್ತು ನಂಬಿಕೆಗೆ ಸದಾ ಕೃತಜ್ಞನಾಗಿರುತ್ತೇನೆ. ಎಲ್ಲ ನನ್ನಾ ಪ್ರೀತಿಯ ಕನ್ನಡ ಜನತೆಗೆ ತುಂಬು ಹೃದಯದ ಧನ್ಯವಾದಗಳು.ನನ್ನ ಮೇಲೆ ಇಟ್ಟ ಪ್ರೀತಿ, ಬೆಂಬಲ ಮತ್ತು ನಂಬಿಕೆಗೆ ಸದಾ ಕೃತಜ್ಞನಾಗಿರುತ್ತೇನೆ. ಈ ಗೆಲುವು ನಮ್ಮೆಲ್ಲರದು ಎಂದು ಹೇಳಬಯಸುತ್ತೇನೆ ತುಂಬು ಹೃದಯದ ಧನ್ಯವಾದಗಳು. "ಬಿಗ್ ಬಾಸ್‌ನ ಅಸಾಧಾರಣ ಪ್ರಯಾಣದಲ್ಲಿ ನನ್ನೊಂದಿಗೆ ಇದ್ದ ಪ್ರತಿ ಹೃದಯಕ್ಕೂ ಹೃತ್ಪೂರ್ವಕ ವಾದ ಧನ್ಯವಾದಗಳು!"
ಬಿಗ್ ಬಾಸ್ ವೇದಿಕೆಯಲ್ಲಿ ಹನುಮಂತ ಹೇಳಿದ್ದೇನು?
ಬಿಗ್ ಬಾಸ್ ಅಟಕ್ಕೆ ಬರುವಾಗ ನಾನು ಗೆಲ್ಲುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಆದರೆ ಒಳಗಡೆ ಬಂದು ಆಟ ಆಡುತ್ತಾ ಹೋದಂತೆ ಇದು ಇಷ್ಟೇ ಎಂದು ಅರ್ಥ ಆಯ್ತು. ಎಲ್ಲ ಕಡೆ ನಾನು ನಾನಾಗಿದ್ದೇ. ಆಟವನ್ನು ಯಾವ ರೀತಿ ಆಡಬೇಕೋ ಅದೇ ರೀತಿ ಆಡಿದೆ. ಜನರಿಗೆ ಅದು ಇಷ್ಟವಾಗುತ್ತಾ ಹೋಯ್ತು. ನಾನು ಯಾವ ವಿಶೇಷ ಸಂಚನ್ನೂ ರೂಪಿಸುವ ಪ್ರಯತ್ನ ಮಾಡಲಿಲ್ಲ. ನಿತ್ಯವೂ ಏನು ಬರುತ್ತದೆಯೋ ಅದನ್ನು ಮಾಡುತ್ತಾ ಹೋದೆ ಎಂದು ಸುದೀಪ್ ಅವರ ಬಳಿ ಹೇಳಿದ್ದರು. ಸಾಕಷ್ಟು ಜನರು ಹನುಮಂತನನ್ನು ಮೆಚ್ಚಿಕೊಳ್ಳುವುದಕ್ಕೆ ಕಾರಣವಾಗಿದ್ದೂ ಸಹ ಹನುಮಂತನ ಈ ನಡೆಯೇ ಆಗಿತ್ತು.
ಹನುಮಂತನಿಗೆ ಸಿಕ್ಕ ಹಣವೆಷ್ಟು?
ಹನುಮಂತನಗಿಗೆ ಬಿಗ್ ಬಾಸ್ ಗೆದ್ದರೆ 50 ಲಕ್ಷ ರೂಪಾಯಿ ನೀಡಲಾಗುತ್ತದೆ ಎಂದು ಮೊದಲೇ ತಿಳಿಸಿದ್ದರು. ಆ ಪ್ರಕಾರ ಹನುಮಂತನಿಗೆ 50 ಲಕ್ಷ ರೂಪಾಯಿ ನೀಡಲಾಗಿದೆ.
ಹನುಮಂತನ ಬಗ್ಗೆ
ಜೀ ಕನ್ನಡದಿಂದಲೇ ಬೆಳಕಿಗೆ ಬಂದ ಈ ಪ್ರತಿಭೆ, ರಿಯಾಲಿಟಿ ಶೋಗಳ ಮೂಲಕವೇ ಮನೆ ಮನೆ ಮಾತಾದ. ಡಾನ್ಸ್ ಕರ್ನಾಟಕ ಡಾನ್ಸ್ ಮುಗಿಯುತ್ತಿದ್ದಂತೆ, ಕಳೆದ ವರ್ಷ ಭರ್ಜರಿ ಬ್ಯಾಚುಲರ್ಸ್ ರಿಯಾಲಿಟಿ ಶೋನ ಮೊದಲ ಸೀಸನ್‌ನಲ್ಲಿಯೇ ಭಾಗವಹಿಸಿ ಅಲ್ಲಿಯೂ ತನ್ನ ಆಟ ಆಡಿ ಕರುನಾಡ ಮನಕದ್ದ ಈ ಹನುಮಂತ. ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ರಚಿತಾ ರಾಮ್ ತೀರ್ಪುಗಾರರ ನೆಚ್ಚಿನ ಸ್ಪರ್ಧಿಯಾಗಿಯೂ ಹನುಮಂತ ಗುರುತಿಸಿಕೊಂಡಿದ್ದರು. ಅದಾದ ಮೇಲೆ ಕಾಮಿಡಿ ಕಿಲಾಡಿಗಳು ಶೋನಲ್ಲಿಯೂ ನಗಿಸುವ ಕಾಯಕಕ್ಕೂ ಕೈ ಹಾಕಿದರು. ಒಟ್ಟಿನಲ್ಲಿ ಮುಟ್ಟಿದ್ದೆಲ್ಲ ಚಿನ್ನ ಅನ್ನೋ ರೀತಿಯಲ್ಲಿ ಭಾಗವಹಿಸಿದ ಶೋಗಳಲ್ಲಿ ವಿಜೇತರಾಗಿಯೇ ಹೊರಹೊಮ್ಮುತ್ತಿದ್ದಾರೆ ಹನುಮಂತ ಲಮಾಣಿ.
