Hanumantha Lamani: ‘ನಾನು ನಾನು ಎಂಬ ಅಹಂಕಾರದ ಅಮಲಿನ ನಡುವೆ ಗೆದ್ದದ್ದು ಮಾತ್ರ ಹನುಮಂತುವಿನ ಆ ಒಂದು ಗುಣ’
ಕನ್ನಡ ಸುದ್ದಿ  /  ಮನರಂಜನೆ  /  Hanumantha Lamani: ‘ನಾನು ನಾನು ಎಂಬ ಅಹಂಕಾರದ ಅಮಲಿನ ನಡುವೆ ಗೆದ್ದದ್ದು ಮಾತ್ರ ಹನುಮಂತುವಿನ ಆ ಒಂದು ಗುಣ’

Hanumantha Lamani: ‘ನಾನು ನಾನು ಎಂಬ ಅಹಂಕಾರದ ಅಮಲಿನ ನಡುವೆ ಗೆದ್ದದ್ದು ಮಾತ್ರ ಹನುಮಂತುವಿನ ಆ ಒಂದು ಗುಣ’

ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರ ವಿಜೇತರಾಗಿ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಚಿಲ್ಲೂರು ಬಡ್ನಿ ತಾಂಡಾದ ಯುವಕ ಹನುಮಂತ ಲಮಾಣಿ ಗೆದ್ದು ಬೀಗಿದ್ದಾರೆ. ಈ ಗೆಲುವಿಗೆ ಸೋಷಿಯಲ್‌ ಮೀಡಿಯಾದಲ್ಲಿ ಸಂಭ್ರಮ ಶುರುವಾಗಿದೆ. ಈ ಗೆಲುವಿಗೆ ಶುಭಾಶಯಗಳ ಸುರಿಮಳೆಯೇ ಹರಿದು ಬರುತ್ತಿದೆ.

‘ನಾನು ನಾನು ಎಂಬ ಅಹಂಕಾರದ ಅಮಲಿನ ನಡುವೆ ಗೆದ್ದದ್ದು ಮಾತ್ರ ಹನುಮಂತುವಿನ ಆ ಒಂದು ಗುಣ’
‘ನಾನು ನಾನು ಎಂಬ ಅಹಂಕಾರದ ಅಮಲಿನ ನಡುವೆ ಗೆದ್ದದ್ದು ಮಾತ್ರ ಹನುಮಂತುವಿನ ಆ ಒಂದು ಗುಣ’

Bigg Boss Kannada 11 winner: ಬಿಗ್‌ ಬಾಸ್‌ ಕನ್ನಡ 11ರ ವಿಜೇತರ ಘೋಷಣೆ ಆಗಿದೆ. ಹಳ್ಳಿ ಹಕ್ಕಿ ಹನುಮಂತ ಲಮಾಣಿ ಬರೋಬ್ಬರಿ 3 ಕೋಟಿ ವೋಟ್‌ಗಳ ಅಂತರದಲ್ಲಿ ಗೆದ್ದು ಬೀಗಿದ್ದಾರೆ. ಅಂದರೆ, ಮೊದಲ ರನ್ನರ್‌ ಅಪ್‌ ತ್ರಿವಿಕ್ರಮ್‌ಗೆ ಸಿಕ್ಕಿದ್ದು ಕೇವಲ 2 ಪ್ಲಸ್‌ ಕೋಟಿ ವೋಟ್‌ ಮಾತ್ರ. ಹನುಮಂತುಗೆ ಸಿಕ್ಕಿದ್ದು ತ್ರಿವಿಕ್ರಮ್‌ನ ಡಬಲ್‌ಗೂ ಅಧಿಕ ವೋಟ್‌! ಅಂದರೆ ಬರೋಬ್ಬರಿ 5,23,89,318 ವೋಟ್‌ ಪಡೆದು ಯಾರೂ ಮಾಡದ ದಾಖಲೆ ತಮ್ಮದಾಗಿಸಿಕೊಂಡಿದ್ದಾರೆ ಹನುಮಂತು. ಸೋಷಿಯಲ್‌ ಮೀಡಿಯಾದಲ್ಲಿ ಈ ಗೆಲುವಿಗೆ ಶುಭಾಶಯಗಳ ಸುರಿಮಳೆಯೇ ಹರಿದು ಬರುತ್ತಿದೆ. ಆ ಪೈಕಿ ಅರಬಗಟ್ಟೆ ಅಣ್ಣಪ್ಪ ಫೇಸ್‌ಬುಕ್‌ನಲ್ಲಿ ಈ ಗೆಲುವಿನ ಬಗ್ಗೆ ಬರಹವೊಂದನ್ನು ಹಂಚಿಕೊಂಡಿದ್ದಾರೆ.

ಖುಷಿ ಕೊಟ್ಟ ಗೆಲುವು..

“ಪಕ್ಕಾ ರೌಡಿಗಳಂತಾಡುತ್ತಿದ್ದ, ಬರೀ ಗೆಲುವಿನ ಅಮಲೇರಿಸಿಕೊಂಡು ಹುಂಬುತನವನ್ನೇ ಆತ್ಮವಿಶ್ವಾಸವೆಂದೆಲ್ಲ ಬೀಗುತ್ತಿದ್ದವರ ಮಧ್ಯೆ ಈ ವಿಜಯ ಖುಷಿ ಕೊಟ್ಟಿದೆ. ಹನುಮಂತು ಬಗ್ಗೆ ಅತೀ ಕೆಟ್ಟು ಕೆಟ್ಟಾದ ಕಮೆಂಟ್ಸ್ ನೋಡಿ ತುಂಬಾ ಬೇಸರವೆನಿಸಿತು. ಇವನ ಮುಗ್ಧತೆ, ಮಾತು, ಹಳ್ಳಿಯವನೆಂಬೆಲ್ಲವು ಸಿಂಪಥಿಗಾಗಿ ನಾಟಕಗಳಾದರೆ ಪಕ್ಕಾ ಡಾನ್‌ಗಳ ಥರಾ ಶೋಕಿ ಕೊಡುತ್ತಿದ್ದರಲ್ಲ ಅದೇನು ದಿಟವೆ? ನಾಟಕವನ್ನು ಒಂದೆರಡು ದಿನ ಮಾಡಬಹುದಷ್ಟೆ”

“ನಾನು ಬಿಗ್‌ಬಾಸ್ ನೋಡಿದ್ದೇ ನಿನ್ನೆ! ನಮ್ಮವ್ವನೂ ಆಗಾಗ ನೋಡುತ್ತಿದ್ದವಳು ನಿನ್ನೆ ಹನುಮಂತ ಗೆಲ್ಲಲಿಯೆಂಬ ಕಾರಣಕ್ಕೆ ನೋಡುತ್ತಿದ್ದರು. ಹೀಗಾಗಿ ನಾನೂ ನೋಡಿದೆ. ಹಿಂದಿನ ಅವರ ದೃಶ್ಯಗಳನ್ನು ತೋರಿಸಿದಾಗಲೇ ಗೊತ್ತಾಯ್ತು. ಹನುಮಂತನ 'ವಿಟಿ' ನೋಡುವಾಗ ಆದ ಫುಳಕ ನವಿರಾದ ಭಾವ ಉಳಿದವರ 'ವಿಟಿ'ಯಲ್ಲಿ ಅದು ಕಾಣಲಿಲ್ಲ. ಬರೀ ಜಗಳ, ನಾನು ನಾನು ಎಂಬ ಅಹಂಕಾರ! ಏನು ಕಡಿದು ಗುಡ್ಡೆ ಹಾಕಿದಾರೋ ಅನ್ನೋ ಥರಾ ಅದೇನು ಫೋಸು!? ಇವೆಲ್ಲದರ ಮಧ್ಯೆ ಹನುಮಂತನದು ನಾಟಕವೇ ಆಗಿರಲಿ ಅವನ ಗೆಲುವು ನಿಜಕ್ಕೂ ಖುಷಿ ಕೊಟ್ಟಿತು”

“ಸ್ಕ್ರಿಪ್ಟೆಡ್‌ಗಳಲೆಲ್ಲ ಹುಲಿ, ಸಿಂಹ, ಆನೆ, ಚಿರತೆಯಂಥ ಬಲಾಢ್ಯ ಪ್ರಾಣಿಗಳೇ ಗೆಲ್ಲುವುದು. ಆದರೆ, ಇದು ಜಾನಪದ ಜಗತ್ತಿನ ಮಾದರಿಗೆ ಉದಾಹರಣೆಯಾಯಿತು. ಜನಪದರ ಕತೆಗಳಲ್ಲಿ ಮೊಲ, ಜಿಂಕೆ, ಆಮೆಗಳಂಥವುಗಳೇ ಗೆಲ್ಲುವುದು. ಅದು ಜನರ ಮುಗ್ದತೆಯಾದರೂ ಅದೇ ಅವರ ಬಯಕೆ ಮತ್ತು ಶಕ್ತಿ!”

“ಇವೆಲ್ಲ ಟಿಆರ್‌ಪಿಗಾಗಿ ಹಾಗೆ ಹೀಗೆ ಎಂಬುದನ್ನೆಲ್ಲ ಪಕ್ಕಕ್ಕಿಟ್ಟು ನನಗೆ ಅನ್ನಿಸಿದ್ದಿಷ್ಟು. ಹಿಂದೊಮ್ಮೆ ಬಹುಶಃ ಗಾಯನ ಸ್ಪರ್ಧೆಯಲ್ಲಿ ಅನ್ನಿಸುತ್ತೆ. ಎಲ್ಲರ ಗಮನ ಸೆಳೆದು ನಮ್ಮನ್ನು ರಂಜಿಸಿದ್ದರು ಹನುಮಂತು. ಈ ಬಿಗ್‌ಬಾಸ್‌ನಲ್ಲಿ ಹನುಮಂತ ಗೆಲ್ಲುವುದಿಲ್ಲವೆಂದುಕೊಂಡಿದ್ದೆ. ಇಲ್ಲೂ ಏನಾದರೊಂದು ಹುಳುಕು ಇದ್ದೇ ಇರುತ್ತೆ ಅನ್ನಿಸಿತ್ತು. ಆದರೆ ಕರ್ನಾಟಕದ ಜನರ ವೋಟುಗಳು ಕೋಟಿಗಟ್ಟಲೆ ಅಂತರದಲ್ಲಿ ಗುದ್ದಿಕೊಂಡು ಬಂದಿವೆ. ಅನಿವಾರ್ಯವೆನಿಸಿ ಆಯ್ಕೆ ಮಾಡಿದ್ದಾರೆ. ಒಳ್ಳೆಯದೆ! ಆದರೆ ಇಂಥ ಗೆಲುವುಗಳು ಹಳ್ಳಿ ಜನ, ಕಲಾವಿದರನ್ನು ಹಳ್ಳಕ್ಕೆ ದೂಡಿದ್ದೇ ಹೆಚ್ಚು. ನಾಟಕವಾದರೂ ಸರಿ ಇದೇ ಬುದ್ಧಿವಂತಿಕೆಯನ್ನು ಹನುಮಂತು ನಿಜ ಜೀವನದಲ್ಲೂ ತೋರಿಸಲಿ”

Whats_app_banner