ಮಚ್ಚು ಹಿಡಿದು ರೀಲ್ಸ್‌, ರಜತ್‌ ಕಿಶನ್‌ ಮತ್ತೆ ಬಂಧನ, ಜಾಮೀನುರಹಿತ ವಾರೆಂಟ್‌ನಡಿ ಲಾಕ್‌ ಆದ ಬಿಗ್‌ಬಾಸ್‌ ಮಾಜಿ ಸ್ಪರ್ಧಿ
ಕನ್ನಡ ಸುದ್ದಿ  /  ಮನರಂಜನೆ  /  ಮಚ್ಚು ಹಿಡಿದು ರೀಲ್ಸ್‌, ರಜತ್‌ ಕಿಶನ್‌ ಮತ್ತೆ ಬಂಧನ, ಜಾಮೀನುರಹಿತ ವಾರೆಂಟ್‌ನಡಿ ಲಾಕ್‌ ಆದ ಬಿಗ್‌ಬಾಸ್‌ ಮಾಜಿ ಸ್ಪರ್ಧಿ

ಮಚ್ಚು ಹಿಡಿದು ರೀಲ್ಸ್‌, ರಜತ್‌ ಕಿಶನ್‌ ಮತ್ತೆ ಬಂಧನ, ಜಾಮೀನುರಹಿತ ವಾರೆಂಟ್‌ನಡಿ ಲಾಕ್‌ ಆದ ಬಿಗ್‌ಬಾಸ್‌ ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ಮಾಜಿ ಸ್ಪರ್ಧಿ ರಜತ್‌ ಕಿಶನ್‌ನನ್ನು ಬೆಂಗಳೂರಿನ ಬಸವೇಶ್ವರ ನಗರದ ಪೊಲೀಸರು ಮತ್ತೆ ಬಂಧಿಸಿದ್ದಾರೆ. ನ್ಯಾಯಾಲಯವು ರಜತ್‌ ಮತ್ತು ವಿನಯ್‌ಗೆ ಷರತ್ತುಬದ್ಧ ಜಾಮೀನು ನೀಡಿತ್ತು. ಪ್ರತಿ ವಿಚಾರಣೆಗೂ ಹಾಜರಾಗುವಂತೆ ಷರತ್ತು ವಿಧಿಸಲಾಗಿದ್ದರೂ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ.

ಮಚ್ಚು ಹಿಡಿದು ರೀಲ್ಸ್‌, ರಜತ್‌ ಕಿಶನ್‌ ಮತ್ತೆ ಬಂಧನ, ಜಾಮೀನುರಹಿತ ವಾರೆಂಟ್‌ನಡಿ ಲಾಕ್‌ ಆದ ಬಿಗ್‌ಬಾಸ್‌ ಮಾಜಿ ಸ್ಪರ್ಧಿ
ಮಚ್ಚು ಹಿಡಿದು ರೀಲ್ಸ್‌, ರಜತ್‌ ಕಿಶನ್‌ ಮತ್ತೆ ಬಂಧನ, ಜಾಮೀನುರಹಿತ ವಾರೆಂಟ್‌ನಡಿ ಲಾಕ್‌ ಆದ ಬಿಗ್‌ಬಾಸ್‌ ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ಮಾಜಿ ಸ್ಪರ್ಧಿ ರಜತ್‌ ಕಿಶನ್‌ನನ್ನು ಬೆಂಗಳೂರಿನ ಬಸವೇಶ್ವರ ನಗರದ ಪೊಲೀಸರು ಮತ್ತೆ ಬಂಧಿಸಿದ್ದಾರೆ. ಮಚ್ಚು ಹಿಡಿದು ರೀಲ್ಸ್‌ ಮಾಡಿದ್ದ ಆರೋಪದಡಿ ರಜತ್‌ಗೆ ಪೊಲೀಸರು ನೋಟಿಸ್‌ ನೀಡಿದ್ದರು. ಈ ಸಂದರ್ಭದಲ್ಲಿ ನ್ಯಾಯಾಲಯದ ಆದೇಶದ ಮೇರೆಗೆ ಈತನನ್ನು ಬಂಧಿಸಲಾಗಿದೆ. ಈ ಹಿಂದೆ ಇದೇ ಪ್ರಕರಣದಲ್ಲಿ ರಜತ್‌ ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದರು. ನ್ಯಾಯಾಲಯವು ರಜತ್‌ ಮತ್ತು ವಿನಯ್‌ಗೆ ಷರತ್ತುಬದ್ಧ ಜಾಮೀನು ನೀಡಿತ್ತು. ಪ್ರತಿ ವಿಚಾರಣೆಗೂ ಹಾಜರಾಗುವಂತೆ ಷರತ್ತು ವಿಧಿಸಲಾಗಿದ್ದರು, ಇವರು ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಹೀಗಾಗಿ, ಆರೋಪಿ ರಜತ್‌ ವಿರುದ್ಧ ಜಾಮೀನುರಹಿತ ವಾರೆಂಟ್‌ ಹೊರಡಿಸಲಾಗಿತ್ತು. ಇಂದು ಮಧ್ಯಾಹ್ನ ಒಂದು ಗಂಟೆಗೆ ಇವರನ್ನು ಕೋರ್ಟ್‌ ಮಂದೆ ಹಾಜರುಪಡಿಸುವ ಸಾಧ್ಯತೆ ಇದೆ.

ಷರತ್ತುಬದ್ಧ ಜಾಮೀನು

ಬಿಗ್‌ಬಾಸ್‌ ಕನ್ನಡದ ಮಾಜಿ ಸ್ಪರ್ಧಿಗಳಾದ ರಜತ್‌ ಕಿಶನ್‌ ಮತ್ತು ವಿನಯ್‌ ಗೌಡರಿಗೆ 24ನೇ ಎಸಿಎಂಎಂ ಕೋರ್ಟ್‌ ಷರತ್ತುಬದ್ಧ ಜಾಮೀನು ಮಂಜೂರು ಮಾಡಲಾಗಿತ್ತು. ಇವರಿಬ್ಬರ ಮೇಲೆ ಶಸ್ತ್ರಾಸ್ತ್ರ ಕಾಯಿದೆಯಡಿ ಕೇಸ್‌ ದಾಖಲಿಸಲಾಗಿತ್ತು. ವಿಚಾರಣೆ ವೇಳೆ ಇವರು ಫೈಬರ್‌ ಮಚ್ಚು ನೀಡಿದ್ದರು. ಆದರೆ, ನಿಜವಾದ ಮಚ್ಚಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ರೀಲ್ಸ್‌ ಮಾಡುವಾಗ ನಿಜವಾದ ಮಚ್ಚು ಬಳಸಿದ ಕಾರಣ ಇವರಿಬ್ಬರ ಮೇಲೆ ಬೆಂಗಳೂರಿನ ಬಸವೇಶ್ವರ ನಗರ ಪೊಲೀಸ್‌ ಠಾಣೆಯಲ್ಲಿ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದರು. ಕೋರ್ಟ್‌ ಮೂರು ದಿನ ಪೊಲೀಸ್‌ ಕಸ್ಟಡಿಗೆ ನೀಡಿತ್ತು. ಕಸ್ಟಡಿ ಮುಗಿದ ಬಳಿಕ ಇವರಿಬ್ಬರು ಜಾಮೀನಿನ ಮೇಲೆ ನ್ಯಾಯಾಲಯದಿಂದ ಹೊರಬಂದಿದ್ದರು.

ಬಿಗ್‌ ಬಾಸ್‌ ಕನ್ನಡ ಸೀಸನ್‌ 10ರ ವಿನಯ್‌ ಗೌಡ ಮತ್ತು ಸೀಸನ್‌ 11ರ ರಜತ್‌ ಕಿಶನ್‌ ಇಬ್ಬರನ್ನು ಸೋಮವಾರ (ಮಾ. 24) ಪೊಲೀಸರು ಬಂಧಿಸಿದ್ದರು. ಕೈಯಲ್ಲಿ ಲಾಂಗ್‌ ಹಿಡಿದು ನಟ ದರ್ಶನ್‌ ಅವರ ಕರಿಯ ಸಿನಿಮಾದ ಟ್ಯೂನ್‌ಗೆ ಪೋಸ್‌ ನೀಡಿದ್ದರು. 

"ಇವರಿಬ್ಬರು ಸಾರ್ವಜನಿಕ ಸ್ಥಳದಲ್ಲಿ ರೀಲ್ಸ್‌ ಮಾಡಿದ್ದಾರೆ. ಈ ವಿಡಿಯೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಅಪ್ಲೋಡ್‌ ಮಾಡಿದ್ದಾರೆ. ಪೊಲೀಸರು ಆರೋಪಿಗಳ ಮನೆಗೆ ಹೋದಾಗ ಇಬ್ಬರೂ ಮನೆಯಲ್ಲಿ ಇರಲಿಲ್ಲ. ಇದೇ ಲಾಂಗ್‌ ಬಳಸಿದ್ದೇವೆ ಎಂದು ಮಚ್ಚು ನೀಡಿದ್ದಾರೆ. ತನಿಖೆಯ ವೇಳೆ ಆ ಮಚ್ಚು ಫೈಬರ್‌ನದು ಎಂದು ಅರಿವಾಗಿದೆ. ಬಳಿಕ ಇವರಿಗೆ ನೋಟಿಸ್‌ ನೀಡಲಾಗಿದೆ. ವಿಡಿಯೋವನ್ನು ಟೆಕ್ನಿಕಲ್‌ ನೋಡಿದಾಗ ಅದರಲ್ಲಿರುವ ಮಚ್ಚಿಗೂ ಇವರು ನೀಡಿರುವ ಮಚ್ಚಿಗೂ ವ್ಯತ್ಯಾಸ ಕಂಡುಬಂದಿದೆ. ಆರೋಪಿಗಳು ರೀಲ್ಸ್‌ಗೆ ಬಳಸಿರುವ ನಿಜವಾದ ಮಚ್ಚನ್ನು ಪತ್ತೆ ಹಚ್ಚಬೇಕಿದೆ" ಎಂದು ಸರಕಾರಿ ಅಭಿಯೋಜಕ ಹರೀಶ್‌ ಚಂದ್ರಗೌಡ ವಾದಿಸಿದ್ದರು.

ರಜತ್‌ ಕಿಶನ್‌, ತಮ್ಮ ಶರ್ಟ್‌ ಮೇಲೆ ಡಿ ಬಾಸ್‌ ಎಂದು ಬರೆದುಕೊಂಡು, ದರ್ಶನ್‌ ಸಿನಿಮಾಗಳ ಹೆಸರುಗಳಿರುವ ಪ್ಯಾಂಟ್‌ ಧರಿಸಿ ಕೈಯಲ್ಲಿ ಲಾಂಗ್‌ ಹಿಡಿದು ರೀಲ್ಸ್‌ ಮಾಡಿದ್ದರು. ಕಿಶನ್‌ ಜತೆಗೆ ವಿನಯ್‌ ಗೌಡ ಸಹ ಕೈಯಲ್ಲಿ ಲಾಂಗ್‌ ಹಿಡಿದು ಪೋಸ್‌ ಕೊಟ್ಟಿದ್ದರು. ಜಾಮೀನು ಸಿಕ್ಕ ಬಳಿಕ ವಿಚಾರಣೆಗೆ ಇವರು ಕೋರ್ಟ್‌ಗೆ ಖುದ್ದಾಗಿ ಹಾಜರಾಗಬೇಕಿತ್ತು. ಆದರೆ, ಈ ರೀತಿ ಹಾಜರಾಗದೆ ಮತ್ತೆ ಬಂಧನಕ್ಕೆ ಒಳಗಾಗಿದ್ದಾರೆ. ಪೊಲೀಸರು ವಿನಯ್‌ ಅವರನ್ನೂ ಬಂಧಿಸುತ್ತಾರೆಯೇ ಎಂದು ಕಾದು ನೋಡಬೇಕಿದೆ.

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in
Whats_app_banner