Bigg Boss Kannada 11: ಎಲಿಮಿನೇಷನ್‌ ಬಾಗಿಲಿನಿಂದ ಬಚಾವ್ ಆದ ಭವ್ಯಾ ಗೌಡ; ಬಿಗ್‌ ಟ್ವಿಸ್ಟ್‌ ನೀಡಿದ ಬಿಗ್‌ ಬಾಸ್‌
ಕನ್ನಡ ಸುದ್ದಿ  /  ಮನರಂಜನೆ  /  Bigg Boss Kannada 11: ಎಲಿಮಿನೇಷನ್‌ ಬಾಗಿಲಿನಿಂದ ಬಚಾವ್ ಆದ ಭವ್ಯಾ ಗೌಡ; ಬಿಗ್‌ ಟ್ವಿಸ್ಟ್‌ ನೀಡಿದ ಬಿಗ್‌ ಬಾಸ್‌

Bigg Boss Kannada 11: ಎಲಿಮಿನೇಷನ್‌ ಬಾಗಿಲಿನಿಂದ ಬಚಾವ್ ಆದ ಭವ್ಯಾ ಗೌಡ; ಬಿಗ್‌ ಟ್ವಿಸ್ಟ್‌ ನೀಡಿದ ಬಿಗ್‌ ಬಾಸ್‌

ಬಿಗ್‌ ಬಾಸ್‌ ಮನೆಯಿಂದ ಈ ವಾರ ಯಾರೂ ಎಲಿಮಿನೇಟ್ ಆಗಿಲ್ಲ. ಆದರೆ ಭವ್ಯಾ ಗೌಡ ಹಾಗೂ ಧನರಾಜ್ ಆಚಾರ್ ಇಬ್ಬರೂ ಎಲಿಮಿನೇಟ್‌ ಆಗುವ ಕೊನೆಯ ಹಂತದವರೆಗೆ ಹೋಗಿದ್ದರು. ಭವ್ಯಾ ಗೌಡ ಅವರು ಬ್ಯಾಗ್ ಪ್ಯಾಕ್ ಮಾಡಿಕೊಂಡು ಮುಖ್ಯದ್ವಾರದ ಬಳಿ ನಿಂತಿದ್ದರು.

ಎಲಿಮಿನೇಷನ್‌ ಬಾಗಿಲಿನಿಂದ ಬಚಾವ್ ಆದ ಭವ್ಯಾ ಗೌಡ
ಎಲಿಮಿನೇಷನ್‌ ಬಾಗಿಲಿನಿಂದ ಬಚಾವ್ ಆದ ಭವ್ಯಾ ಗೌಡ

ಬಿಗ್‌ ಬಾಸ್‌ ಮನೆಯಲ್ಲಿ ಈ ವಾರ ನಾಮಿನೇಷನ್ ನಡೆದಿಲ್ಲ. ನಾಮಿನೇಷನ್ ಮಾಡಲು ನಿರ್ಧರಿಸಿ ಆ ನಿರ್ಧಾರವನ್ನು ಹಿಂಪಡೆದಂತೆ ತೋರುವ ರೀತಿಯಲ್ಲಿ ನಿನ್ನೆಯ ಕಿಚ್ಚನ ಪಂಚಾಯ್ತಿ ಇತ್ತು. ಬಿಗ್‌ ಬಾಸ್‌ ಮನೆಯಲ್ಲಿ ಸಾಮಾನ್ಯವಾಗಿ ವಾರದಿಂದ ವಾರಕ್ಕೆ ಸ್ಪರ್ಧಿಗಳ ಸಂಖ್ಯೆ ಕಡಿಮೆಯಾಗುತ್ತಾ ಬರುತ್ತದೆ. ಕಡಿಮೆ ಆದಂತೆ ಆಟದ ಕಾವು ಕೂಡ ಹೆಚ್ಚುತ್ತದೆ. ಅದೇ ರೀತಿ ಈ ವಾರ ಬಿಗ್‌ ಬಾಸ್‌ ಮನೆಯಿಂದ ಯಾರು ಎಲಿಮಿನೇಟ್ ಆಗಿದ್ದಾರೆ ಎಂದು ತಿಳಿದುಕೊಳ್ಳುವ ಕುತೂಹಲ ಜನರಿಗಿರುತ್ತದೆ. ಈ ವಾರ ಬಿಗ್‌ ಬಾಸ್‌ ಮನೆಯಿಂದ ಭವ್ಯಾ ಗೌಡ ಅವರು ನಾಮಿನೇಟ್‌ ಆಗಿ ಹೊರಬರುತ್ತಾರೆ ಎಂದು ಎಲ್ಲರೂ ಅಂದುಕೊಂಡಿದ್ದರು.

ಬಿಗ್‌ ಬಾಸ್‌ನಲ್ಲಿ ಭವ್ಯಾ ಗೌಡ ಅವರು ಹಾಗೂ ಧನರಾಜ್ ಆಚಾರ್ ಇವರಿಬ್ಬರೂ ಕೊನೆಯ ಘಳಿಗೆ ವರೆಗೆ ತಮ್ಮ ಎದೆಬಡಿತ ಜೋರಾಗಿಸಿಕೊಂಡು. ಆಯ್ತು ಇನ್ನು ನನ್ನ ಆಟ ಮುಗೀತು ಎಂದು ಅಂದುಕೊಳ್ಳುತ್ತಿರುವಾಗಲೇ ಬಿಗ್‌ ಬಾಸ್‌ ಒಂದು ಉಡುಗೊರೆಯನ್ನು ನೀಡಿದ್ದಾರೆ. ಆ ಉಡುಗೊರೆಯ ಪ್ರಕಾರ ಬಿಗ್‌ ಬಾಸ್‌ ಮನೆಯಿಂದ ಈ ವಾರ ಯಾರೂ ಔಟ್ ಆಗಿಲ್ಲ. ಕೊನೆಯಲ್ಲಿ ಉಳಿದುಕೊಂಡವರು ಭವ್ಯಾ ಗೌಡ ಆಗಿದ್ದರು. ಅವರ ಪ್ರಕಾರ ನಾನು ಇನ್ನು ಈ ಮನೆಯಿಂದ ಖಂಡಿತ ಹೊರಗಡೆ ಹೋಗುತ್ತೇನೆ ಎಂದು ನಿರ್ಧಾರವಾಗಿತ್ತು.

ಯಾಕೆಂದರೆ ಅವರು ತಮ್ಮ ಸೂಟ್‌ಕೇಸ್‌ ತೆಗೆದುಕೊಂಡು ಬಿಗ್‌ ಬಾಸ್‌ ಮನೆಯ ಮುಖ್ಯ ದ್ವಾರದ ವರೆಗೆ ಹೊಗುತ್ತಾರೆ. ಮನೆಯ ಎಲ್ಲ ಸ್ಪರ್ಧಿಗಳೂ ಸಹ ಭವ್ಯಾ ಗೌಡ ಅವರು ನಾಮಿನೇಟ್ ಆಗಿ ಈಗ ಮನೆಯಿಂದ ಹೊರಗಡೆ ಹೋಗುತ್ತಾರೆ ಎಂದೇ ಅಂದುಕೊಂಡಿರುತ್ತಾರೆ. ಮೋಕ್ಷಿತಾ ಹಾಗೂ ಗೌತಮಿ ಇಬ್ಬರೂ ದೂರ ನಿಂತು ನೋಡುತ್ತಿರುತ್ತಾರೆ. ಆದರೆ ಆಗ ಬಿಗ್‌ ಬಾಸ್‌ ಈ ವಾರ ನಾಮಿನೇಷನ್ ಇಲ್ಲ ಎಂದು ಹೇಳುತ್ತಾರೆ.

ಒಮ್ಮೆ ನರಕದ ಬಾಗಿಲಿಗೆ ಹೋಗಿ ಮತ್ತೆ ವಾಪಸ್‌ ಸ್ವರ್ಗಕ್ಕೆ ಬಂದ ಅನುಭವ ಅವರಿಗಾಗಿರಬಹುದು. ಸುದೀಪ್ ಅವರು ನೀವು ಈ ಮನೆಯಲ್ಲಿ ಮತ್ತೆ ನಿಮ್ಮ ಆಟವನ್ನು ಮುಂದುವರೆಸುತ್ತಿದ್ದೀರಿ ಎಂದು ಹೇಳಿದ ತಕ್ಷಣ ಅವರಿಗೆ ಒಂದು ಕ್ಷಣ ನಂಬಲು ಸಾಧ್ಯವಾಗಲಿಲ್ಲ. ನಂತರದ ಖುಷಿಯನ್ನು ಹೇಳತೀರದು. ಈ ರೀತಿಯಾಗಿ ತುಂಬಾ ಉತ್ಸಾಹದಿಂದ ಮತ್ತೆ ಭವ್ಯಾ ಮನೆಯೊಳಗಡೆ ಹೋಗಿದ್ದಾರೆ. ರಾತ್ರಿ ಎಷ್ಟೊತ್ತಾದರೂ ಸ್ಪರ್ಧಿಗಳು ಮಲಗದೇ ಇದೇ ವಿಷಯವನ್ನು ಚರ್ಚೆ ಮಾಡುತ್ತಿದ್ದರು.

ಇನ್ನು ಧನರಾಜ್ ಆಚಾರ್ ಕೂಡ ಈ ಬಗ್ಗೆ ತುಂಬಾ ತಲೆಕಡಿಸಿಕೊಂಡಿದ್ದರು. ಯಾಕೆಂದರೆ ಭವ್ಯಾ ಗೌಡ ಅವರನ್ನು ಬಿಟ್ಟರೆ ಎಲಿಮಿನೇಟ್ ಆಗಿ ಹೋಗಬೇಕಾದ ಜಾಗದಲ್ಲಿ ಧನರಾಜ್ ಇದ್ದರು.

Whats_app_banner