BBK 10: ‘ನಿನ್ನ ಬಾಯಲ್ಲಿಯೇ ಪುರುಷ ಮಹಿಳೆ ಅನ್ನೋ ತಾರತಮ್ಯ ಬರೋದು!’ ಸಂಗೀತಾ ವಿರುದ್ಧ ಮತ್ತೆ ಮುಗಿಬಿದ್ದ ವಿನಯ್
ಕನ್ನಡ ಸುದ್ದಿ  /  ಮನರಂಜನೆ  /  Bbk 10: ‘ನಿನ್ನ ಬಾಯಲ್ಲಿಯೇ ಪುರುಷ ಮಹಿಳೆ ಅನ್ನೋ ತಾರತಮ್ಯ ಬರೋದು!’ ಸಂಗೀತಾ ವಿರುದ್ಧ ಮತ್ತೆ ಮುಗಿಬಿದ್ದ ವಿನಯ್

BBK 10: ‘ನಿನ್ನ ಬಾಯಲ್ಲಿಯೇ ಪುರುಷ ಮಹಿಳೆ ಅನ್ನೋ ತಾರತಮ್ಯ ಬರೋದು!’ ಸಂಗೀತಾ ವಿರುದ್ಧ ಮತ್ತೆ ಮುಗಿಬಿದ್ದ ವಿನಯ್

ಬಿಗ್‌ಬಾಸ್‌ ಕನ್ನಡ ಸೀಸನ್‌ 10, 75 ದಿನಗಳನ್ನು ಪೂರೈಸಿ ಫಿನಾಲೆಯತ್ತ ಹೊರಟಿದೆ. ಇದೀಗ ‘ಬಿಗ್‌ಬಾಸ್ ಮನೆಯಲ್ಲಿ ಮಹಿಳೆಯರಿಗೆ ಸರಿಯಾದ ಅವಕಾಶ ಸಿಕ್ತಿಲ್ವಾ? ಇಂಥದ್ದೊಂದು ಪ್ರಶ್ನೆ ಜಿಯೋಸಿನಿಮಾ ಬುಧವಾರ ಬಿಡುಗಡೆ ಮಾಡಿರುವ ಪ್ರೋಮೊ ನೋಡಿದವರ ಮನಸಲ್ಲಿ ಏಳುವಂತಿದೆ.

BBK 10: ‘ನಿನ್ನ ಬಾಯಲ್ಲಿಯೇ ಪುರುಷ ಮಹಿಳೆ ಅನ್ನೋ ತಾರತಮ್ಯ ಬರೋದು!’ ಸಂಗೀತಾ ವಿರುದ್ಧ ಮತ್ತೆ ಮುಗಿಬಿದ್ದ ವಿನಯ್
BBK 10: ‘ನಿನ್ನ ಬಾಯಲ್ಲಿಯೇ ಪುರುಷ ಮಹಿಳೆ ಅನ್ನೋ ತಾರತಮ್ಯ ಬರೋದು!’ ಸಂಗೀತಾ ವಿರುದ್ಧ ಮತ್ತೆ ಮುಗಿಬಿದ್ದ ವಿನಯ್

BBK 10: ಬಿಗ್‌ ಬಾಸ್‌ ಕನ್ನಡ ಸೀಸನ್‌ 10ರ ಆರಂಭದಿಂದಲೇ ಜಗಳಗಳು ನಡೆಯುತ್ತಲೇ ಬಂದಿವೆ. ಅದರಲ್ಲೂ ವಿನಯ್‌ ಗೌಡ ಮತ್ತು ಸಂಗೀತಾ ಶೃಂಗೇರಿ ನಡುವೆ ಅದು ಒಂದು ಹಂತ ಮೇಲಕ್ಕೇ ಹೋಗಿದೆ. ಟಾಸ್ಕ್‌ ವಿಚಾರದಲ್ಲೂ ಅದು ಸಾಕಷ್ಟು ಬಾರಿ ನೋಡುಗರ ಕಣ್ಣಿಗೆ ಬಿದ್ದಿದೆ. ಇದೀಗ ಫಿನಾಲೆಗೆ ಇನ್ನೇನು ನಾಲ್ಕು ವಾರಗಳಷ್ಟೇ ಉಳಿದಿದೆ. ಹೀಗಿರುವಾಗಲೇ ಮತ್ತೆ ಟಾಸ್ಕ್‌ ವಿಚಾರವಾಗಿಯೇ ಕಲಹ ಮುಂದುವರಿದಿದೆ.

ಹೌದು ಬಿಗ್‌ಬಾಸ್‌ ಕನ್ನಡ ಸೀಸನ್‌ 10, 75 ದಿನಗಳನ್ನು ಪೂರೈಸಿ ಫಿನಾಲೆಯತ್ತ ಹೊರಟಿದೆ. ಇದೀಗ ‘ಬಿಗ್‌ಬಾಸ್ ಮನೆಯಲ್ಲಿ ಮಹಿಳೆಯರಿಗೆ ಸರಿಯಾದ ಅವಕಾಶ ಸಿಕ್ತಿಲ್ವಾ? ಇಂಥದ್ದೊಂದು ಪ್ರಶ್ನೆ ಜಿಯೋಸಿನಿಮಾ ಬುಧವಾರ ಬಿಡುಗಡೆ ಮಾಡಿರುವ ಪ್ರೋಮೊ ನೋಡಿದವರ ಮನಸಲ್ಲಿ ಏಳುವಂತಿದೆ. ಹಾಗಾದ್ರೆ ಏನು ನಡೆದಿದೆ ಬಿಗ್‌ಬಾಸ್ ಮನೆಯಲ್ಲಿ?

ಬಿಗ್‌ಬಾಸ್‌ ಒಂದು ಟಾಸ್ಕ್‌ ಕೊಟ್ಟಿದ್ದಾರೆ. ಆ ಟಾಸ್ಕ್ ಆಡಲು ನೀರಲ್ಲಿ ಮುಳುಗುವ, ಉತ್ತಮ ಗುರಿ ಹೊಂದಿರುವ ನಾಲ್ಕು ಸದಸ್ಯರ ಅಗತ್ಯ ಇದೆ ಎಂದು ಬಿಗ್‌ಬಾಸ್ ಹೇಳಿದ್ದಾರೆ. ಟಾಸ್ಕ್‌ಗೆ ಆಯ್ಕೆ ಮಾಡುವಾಗ ವಿನಯ್‌, ‘ನಾನು, ಕಾರ್ತಿಕ್, ಮೈಕಲ್ ಮತ್ತು ತುಕಾಲಿ’ ಎಂದು ಹೇಳಿದ್ದಾರೆ. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಸಂಗೀತಾ, ‘ನಾನು ಯಾಕೆ ಬೇಡ ಅಂತ ಹೇಳಿಲ್ಲ ನೀವು. ಮಹಿಳೆಯರು ಹೀಗೆಯೇ ಗೆಲ್ಲಲು ಸಾಧ್ಯವಾಗ್ತಿಲ್ಲ’ ಎಂದು ತಕರಾರು ತೆಗೆದಿದ್ದಾರೆ.

ಇದಕ್ಕೆ ವಿನಯ್, ‘ಮನ್ ವುಮನ್ ಎಂದು ಬೇರೆ ಮಾಡಿ ನೋಡುವುದು ಸರಿಯಲ್ಲ. ಈ ಮನೆಯಲ್ಲಿ ನಿನ್ನ ಬಾಯಲ್ಲಿ ಮಾತ್ರ ಯಾಕೆ ಮನ್ ವುಮನ್ ಅನ್ನೋ ತಾರತಮ್ಯದ ಮಾತು ಬರೀ ನಿನ್ನ ಬಾಯಲ್ಲಿ ಕೇಳಿಸುತ್ತದೆ?’ ಎಂದು ವಿನಯ್ ಗರಂ ಆಗಿದ್ದಾರೆ. ಇದಕ್ಕೆ ಸಂಗೀತಾ ಕೂಡ ‘ಅವಕಾಶ ಸಿಕ್ತಿದೆ ಅಂತ ಬೇರೆ ವಿಷಯನೆಲ್ಲ ಇಲ್ಲಿಗೆ ಎಳೆದು ತರಬೇಡಿ’ ಎಂದು ಸಂಗೀತಾ ಕೂಡ ಅಷ್ಟೇ ಗಟ್ಟಿಯಾಗಿ ಮಾತಾಡಿದ್ದಾರೆ.

ಇತ್ತ ತನಿಷಾ ಕೂಡ ಸಂಗೀತಾ ವಿರುದ್ಧ, ‘ನೀವು ಆಡಿದ ಎಲ್ಲ ಟಾಸ್ಕ್‌ಗಳಲ್ಲಿಯೂ ಫರ್ಪೆಕ್ಟ್ ಆಗಿ ಆಡಿದ್ದೀರಾ?’ ಎಂದು ಪ್ರಶ್ನಿಸಿದ್ದಾರೆ. ಒಟ್ಟಾರೆ ಮತ್ತೊಮ್ಮೆ ಬಿಗ್‌ಬಾಸ್ ಮನೆಯಲ್ಲಿ ಮಹಿಳೆ-ಪುರುಷರ ನಡುವಿನ ತಾರತಮ್ಯದ ಬಗ್ಗೆ ಚರ್ಚೆ ಶುರುವಾಗಿದೆ. ಅದು ಜೋರಾಗಿಯೂ ಮುಂದುವರಿಯುತ್ತಿದೆ. ಇದರ ಪರಿಣಾಮ ಏನಾಗುತ್ತದೆ? ಕಾಲವೇ ಉತ್ತರಿಸಬೇಕು. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು ಜಿಯೋಸಿನಿಮಾದಲ್ಲಿ ಉಚಿತವಾಗಿ ನೋಡಿ.

Whats_app_banner