BBK 10: ಇದೇನಾ ವಿನಯ್ ನಿಮ್ಮ ಶಿಸ್ತು, ಪ್ರತಾಪ್ ಮೈಕ್ ಎಲ್ಲಿ? ಮೈಕಲ್ ಜಸ್ಟ್ ಗೆಟ್ ಔಟ್; ಮನೆ ಮಂದಿಗೆ ಕಿಚ್ಚನ ಕ್ಲಾಸ್!
ಇಡೀ ವಾರ ಬಿಗ್ ಬಾಸ್ ಪಾಠಶಾಲೆಯ ವಿದ್ಯಾರ್ಥಿ ಮತ್ತು ಶಿಕ್ಷಕರಾಗಿ ಬದಲಾಗಿದ್ದ ಸ್ಪರ್ಧಿಗಳು ವಾರಾಂತ್ಯದಲ್ಲಿ ಅಶಿಸ್ತಿನ ಮಕ್ಕಳಂತೆ ವರ್ತಿಸಿದ್ದಾರೆ. ಮೇಷ್ಟ್ರಾಗಿ ಸುದೀಪ್, ಎಲ್ಲರಿಗೂ ಚೆನ್ನಾಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ.
BBK 10: ಇಡೀ ವಾರ ಬಿಗ್ಬಾಸ್ ಮನೆಯ ಸದಸ್ಯರು ಶಾಲೆಯಲ್ಲಿ ಮಕ್ಕಳಾಗಿ ನಲಿದಿದ್ದರು. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಹೊರತುಪಡಿಸಿದರೆ, ಯಾವುದೇ ಜಗಳಗಳಿಲ್ಲದೆ, ಅನಾಹುತಗಳಿಲ್ಲದೆ ಸುವ್ಯವಸ್ಥಿತವಾಗಿಯೇ ಇಡೀ ವಾರ ಕಳೆಯಿತು. ವಾರಾಂತ್ಯ ಇನ್ನೇನು ಮುಗಿಯುತ್ತೆ ಎನ್ನುತ್ತಿದ್ದಂತೆ, ರಾಗಿ ಮುದ್ದೆ ವಿಷ್ಯ ದೊಡ್ಡ ರಾಮಾಯಣವನ್ನೇ ಸೃಷ್ಟಿ ಮಾಡಿತ್ತು.
ಮುದ್ದೆಯೂಟದ ನಂತರ ಬಿಗ್ಬಾಸ್ ಮನೆಯ ಗ್ಯಾಸ್ ಕನೆಕ್ಷನ್ ಡಿಸ್ಕನೆಕ್ಟ್ ಆಗಿದ್ದರಿಂದ ಇಡೀ ಮನೆಯ ಸದಸ್ಯರೆಲ್ಲ ಕಂಗಾಲಾಗಿದ್ದರು. ಇದಕ್ಕೆ ರಾತ್ರಿ ಹಸಿಕೊಂಡೇ ಇರಬೇಕಾಗುತ್ತದೆ ಎಂಬ ಕಾರಣಕ್ಕೆ ಅಸಮಧಾನವೂ ಹೊಗೆಯಾಡಲಾರಂಭಿಸಿತ್ತು. ಆದರೆ ಹಸಿವಿಂದ ಕೂತ ಮನೆಯ ಸದಸ್ಯರಿಗೆ ಎಂದೆಂದೂ ಮರೆಯಲಾಗದಂಥ ಸಖತ್ ಸ್ಪೆಷಲ್ ಸರ್ಪೈಸ್ ಸಿಕ್ಕಿತ್ತು. ಕಿಚ್ಚನಿಂದ ಭರ್ಜರಿ ಬಿರಿಯಾನಿ ಊಟ ಬಂದಿತ್ತು.
ಇದೀಗ ವಾರಾಂತ್ಯ ಬಂದಿದೆ. ಶನಿವಾರದ ಪಂಚಾಯ್ತಿಗೂ ಕಿಚ್ಚನ ಎಂಟ್ರಿಯಾಗಿದೆ. ಆದರೆ, ಎಂದಿನಂತೆ ಸಹಜವಾಗಿ ಕಿಚ್ಚ ಎಂಟ್ರಿಯಾಗಿರಲಿಲ್ಲ. ಕೊಂಚ ಬಿರುಸಾಗಿಯೇ ಆಗಮಿಸಿ ಮನೆ ಮಂದಿಗೆ ಶಾಕ್ ನೀಡಿದ್ದಾರೆ. ಬಜರ್ ಆದಮೇಲೂ ಮನೆ ಮಂದಿ ಯಾರೂ ಸರಿಯಾದ ಸಮಯಕ್ಕೆ ಆಗಮಿಸಿರಲಿಲ್ಲ. ಕೊಂಚ ಕೋಪದಲ್ಲಿಯೇ ಮನೆಮಂದಿಯನ್ನು ತರಾಟೆ ತೆಗೆದುಕೊಂಡಿದ್ದಾರೆ ಸುದೀಪ್.
"ಫಸ್ಟ್ ಟೈಮ್ನಿಂದ ಬಜರ್ ಆದಮೇಲಿಂದ ನೋಡ್ತಾನೇ ಇದ್ದೀನಿ. ನೀವೇಲ್ಲರೂ ಮಲಗಿದ್ದೀರಾ? ಅಬ್ಬಬ್ಬಾ ಅಂದ್ರೆ ಏನಾಗುತ್ತೆ ಬರಲಿಲ್ಲ ಅಂದ್ರೆ ಅಲ್ವಾ? ಪ್ರತಾಪ್ ನಿನ್ನ ಮೈಕ್ ಎಲ್ಲಿ. ಸೀರಿಯಸ್ನೆಸ್ ಇದೆ ಅಂತ ಅನಿಸ್ತಾನೇ ಇಲ್ವಲ್ಲ ವಿನಯ್. ಮೈಕಲ್ ಅವರೇ ಒಂದು ವೇದಿಕೆ ಸಿಕ್ಕಿದೆ ಎಂದಾಗ, ಎಲ್ಲರ ಮರ್ಯಾದೆ ಸಿಗ್ತಿದೆ ಎಂದಾಗ, ನೀತಿ ನಿಯಮ ಮರೆತು, ಆ ವೇದಿಕೆಯ ಮರ್ಯಾದೆ ತೆಗೆಯೋದು ಅಲ್ವಾ? ತೆಗಿಸ್ತಿನಿ ಈಗ ಮುಖ್ಯದ್ವಾರ ಗೆಟ್ಔಟ್! ಎಂದು ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.