‘ನಮ್ಮಿಬ್ಬರದ್ದು ಟು ಸೈಡ್‌ ಲವ್‌’ ಮದುವೆ ಆಗೋ ಸಂಬಂಧಿಕರ ಹುಡುಗಿ ಬಗ್ಗೆ ಹೇಳಿ, ತನಿಷಾ ಕುಪ್ಪಂಡ ಹೆಸರನ್ನೂ ಪ್ರಸ್ತಾಪಿಸಿದ ವರ್ತೂರು ಸಂತೋಷ್‌!
ಕನ್ನಡ ಸುದ್ದಿ  /  ಮನರಂಜನೆ  /  ‘ನಮ್ಮಿಬ್ಬರದ್ದು ಟು ಸೈಡ್‌ ಲವ್‌’ ಮದುವೆ ಆಗೋ ಸಂಬಂಧಿಕರ ಹುಡುಗಿ ಬಗ್ಗೆ ಹೇಳಿ, ತನಿಷಾ ಕುಪ್ಪಂಡ ಹೆಸರನ್ನೂ ಪ್ರಸ್ತಾಪಿಸಿದ ವರ್ತೂರು ಸಂತೋಷ್‌!

‘ನಮ್ಮಿಬ್ಬರದ್ದು ಟು ಸೈಡ್‌ ಲವ್‌’ ಮದುವೆ ಆಗೋ ಸಂಬಂಧಿಕರ ಹುಡುಗಿ ಬಗ್ಗೆ ಹೇಳಿ, ತನಿಷಾ ಕುಪ್ಪಂಡ ಹೆಸರನ್ನೂ ಪ್ರಸ್ತಾಪಿಸಿದ ವರ್ತೂರು ಸಂತೋಷ್‌!

Varthur Santhosh: ಬಿಗ್‌ ಬಾಸ್‌ ಕನ್ನಡ ಸೀಸನ್‌ 10ರ ಸ್ಪರ್ಧಿ ವರ್ತೂರು ಸಂತೋಷ್‌ ಇದೀಗ ತಮ್ಮ ಮದುವೆ ಕುರಿತು ಮಾತನಾಡಿದ್ದಾರೆ. ತಾನು ಪ್ರೀತಿಸುತ್ತಿರುವ ಸಂಬಂಧಿಕರ ಹುಡುಗಿಯ ಬಗ್ಗೆ ಹೇಳಿಕೊಂಡು, ತನಿಷಾ ಕುಪ್ಪಂಡ ಹೆಸರನ್ನೂ ಪ್ರಸ್ತಾಪಿಸಿದ್ದಾರೆ.

ಮದುವೆ ಆಗೋ ಸಂಬಂಧಿಕರ ಹುಡುಗಿ ಬಗ್ಗೆ ಹೇಳಿದ ವರ್ತೂರು ಸಂತೋಷ್‌
ಮದುವೆ ಆಗೋ ಸಂಬಂಧಿಕರ ಹುಡುಗಿ ಬಗ್ಗೆ ಹೇಳಿದ ವರ್ತೂರು ಸಂತೋಷ್‌

Varthur Santhosh Lovestory: ಬಿಗ್‌ ಬಾಸ್‌ ಕನ್ನಡ ಸೀಸನ್‌ 10ರ 5ನೇ ರನ್ನರ್‌ ಅಪ್‌ ಆಗಿದ್ದ ವರ್ತೂರು ಸಂತೋಷ್‌, ಒಂದಿಲ್ಲೊಂದು ವಿಚಾರಕ್ಕೆ ಮುನ್ನೆಲೆಗೆ ಬರುತ್ತಲೇ ಇರುತ್ತಾರೆ. ಅದರಲ್ಲೂ ಇದೇ ವರ್ತೂರು ಸಂತೋಷ್‌ ಮತ್ತು ನಟಿ ತನಿಷಾ ಕುಪ್ಪಂಡ ನಡುವೆ ಏನೋ ಇದೆ ಅನ್ನೋ ಮಾತು ಬಿಗ್‌ಬಾಸ್‌ನಲ್ಲಿ ಇದ್ದಾಗಿನಿಂದಲೇ ಇದೆ. ಸೋಷಿಯಲ್‌ ಮೀಡಿಯಾದಲ್ಲಿ ಈ ಜೋಡಿ ಇನ್ನೇನು ಮದುವೆ ಆಗಲಿದೆ ಎಂದೂ ಸುಳ್ಳು ಸುದ್ದಿಗಳನ್ನು ವೈರಲ್‌ ಮಾಡಿದವರಿದ್ದಾರೆ. ಆದರೆ, ಈ ಸುದ್ದಿಗಳ ಬಗ್ಗೆ ಈ ಜೋಡಿ ಮಾತ್ರ ಎಲ್ಲಿಯೂ ಓಪನ್‌ ಆಗಿ ಹೇಳಿಕೊಂಡಿರಲಿಲ್ಲ.

ಇನ್ನು ವರ್ತೂರು ಸಂತೋಷ್‌ಗೆ ಮದುವೆ ಆಗಿದೆ, ಓರ್ವ ಮಗಳಿದ್ದಾಳೆ ಎಂದೆಲ್ಲ ಸುದ್ದಿಗಳು ಸದ್ದು ಮಾಡಿದ್ದವು. ಬಿಗ್‌ ಬಾಸ್‌ ಮನೆಯಲ್ಲಿ ನನಗೆ ಮದುವೆ ಆಗಿಲ್ಲ ಎಂದು ವರ್ತೂರು ಸಂತೋಷ್‌ ಹೇಳಿಕೆ ನೀಡುತ್ತಿದ್ದಂತೆ, ಈ ವಿಚಾರ ಹೆಚ್ಚು ಕಾವು ಪಡೆದುಕೊಂಡಿತ್ತು. ವರ್ತೂರು ಸಂತೋಷ್‌ ಅವರ ಮದುವೆ ಫೋಟೋಗಳನ್ನು ಹಿಡಿದು, ಮಗಳನ್ನು ಕೊಟ್ಟ ಮಾವ ಸುದ್ದಿವಾಹಿನಿಗಳಲ್ಲಿ ಬಹಿರಂಗವಾಗಿ ನಿಜಾಂಶವನ್ನು ತೆರೆದಿಟ್ಟಿದ್ದರು. ಬಗೆಬಗೆ ಆರೋಪಗಳು ವರ್ತೂರು ವಿರುದ್ಧ ಕೇಳಿಬಂದಿದ್ದವು. ಬಿಗ್‌ ಬಾಸ್‌ ಮುಗಿಸಿ ಬಂದ ಬಳಿಕ ಈ ಬಗ್ಗೆಯೂ ಅವರು ಪ್ರತಿಕ್ರಿಯೆ ನೀಡಿದ್ದರು.

ಮದುವೆ ಎಂಬುದು ವೈಯಕ್ತಿಕ ವಿಚಾರ, ಅದು ನನಗೆ ಮತ್ತು ನಮ್ಮ ಕುಟುಂಬಕ್ಕಷ್ಟ ಸೀಮಿತ ಎಂದಿದ್ದ ವರ್ತೂರು, ನನಗೆ ಮದುವೆ ಆಗಿಲ್ಲ ಎಂದು ನಾನು ಎಲ್ಲಿಯೂ ಹೇಳಿಕೊಂಡಿಲ್ಲ. ಒಂದಷ್ಟು ವಿಚಾರಗಳಿಗೆ ಅದು ಸರಿಹೋಗಲಿಲ್ಲ. ಅದು ನನ್ನ ವೈಯಕ್ತಿಕ ವಿಚಾರ, ಆ ಬಗ್ಗೆ ಪ್ರಶ್ನೆ ಕೇಳಬೇಡಿ ಎಂದಿದ್ದರು. ಇದೀಗ ಇದೇ ವರ್ತೂರು ಸಂತೋಷ್‌ ಮದುವೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಈ ಸಲ ಸ್ವತಃ ಸಂತೋಷ್‌ ಅವರೇ ತಾವು ಮದುವೆ ಆಗುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಹಾಗಾದರೆ ಆ ಹುಡುಗಿ ಯಾರು? ಹೀಗಿದೆ ವರ್ತೂರು ಅವರ ಪ್ರತಿಕ್ರಿಯೆ.

ಕಾಯುವಷ್ಟು ಕಾದೆ, ಈಗ ಪ್ರೀತಿಯಲ್ಲಿದ್ದೇವೆ..

ನ್ಯೂಸ್‌ ಬೀಟ್‌ ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ವರ್ತೂರು ಸಂತೋಷ್‌, "ನನ್ನ ಜೀವನದಲ್ಲಿ ಸಾಕಷ್ಟು ಏರುಪೇರುಗಳಾಗಿವೆ. ಏನೆಂಬುದನ್ನು ನೀವೆಲ್ಲರೂ ನೋಡಿದ್ದೀರಾ. ನಾನೂ ಸುಮಾರು ದಿನಗಳಿಂದ ಕಾದೆ, ಆದರೆ, ಅತ್ತ ಕಡೆಯಿಂದ ಕಾದೆ. ಬಾಡಿ ಹೋದ ಬಳ್ಳಿಯಿಂದ ಹೂವು ಅರಳಬಲ್ಲದೆ.. ಎಂಬ ಹಾಡಂತೆ ಅದರ ಕಥೆ ಮುಗೀತು. ಜತೆಗೆ ನನ್ನ ಜೀವನದಲ್ಲಿಯೂ ಒಬ್ಬಳು ಹುಡುಗಿ ಇದ್ದಾಳೆ. ಇಬ್ಬರೂ ಚೆನ್ನಾಗಿದ್ದೀವಿ. ಪೋನ್‌ನಲ್ಲಿಯೂ ಮಾತನಾಡ್ತೀವಿ. ಮೀಟ್‌ ಮಾಡ್ತಿನಿ" ಎಂದಿದ್ದಾರೆ.

ತನಿಷಾ ಕುಪ್ಪಂಡ ಬಗ್ಗೆ ವರ್ತೂರು ಹೇಳಿದ್ದೇನು?

"ಹಾಗೆಂದ ಮಾತ್ರಕ್ಕೆ ಪಾಪ ನೀವು ತನಿಷಾ ಕುಪ್ಪಂಡ ಅವರ ಹೆಸರನ್ನು ಇಲ್ಲಿ ಸೇರಿಸಬೇಡಿ. ತನಿಷಾ ನನ್ನ ಒಳ್ಳೆ ಫ್ರೆಂಡ್‌ ಅಷ್ಟೇ. ಅಂದರೆ, ನಾನಿಲ್ಲಿ ಈ ವಿಡಿಯೋ ನೋಡುವವರಿಗೆ ಹೇಳುವುದೆನೆಂದರೆ, ಆ ಹುಡುಗಿ ನಮ್ಮ ಸಂಬಂಧಿಕರ ಮನೆಯವಳೇ. ಇವಾಗ ಎರಡೂ ಕಡೆಯಿಂದ ಲವ್‌ ಇದೆ. ಮನುಷ್ಯ ಡಿಪ್ರೆಷನ್‌ಗೆ ಹೋದಾಗ, ಕೆಳಗೆ ಬಿದ್ದಾಗ.. ಒಬ್ಬ ಹುಡುಗಿಗೆ ಹುಡುಗ ಬೇಕು, ಹುಡುಗಿಗೂ ಹುಡುಗ ಬೇಕು.. ಆಗ ಮಾತ್ರ ಅದರಿಂದ ವಾಪಸ್‌ ಬರಲು ಸಾಧ್ಯ ಎಂದಿದ್ದಾರೆ ವರ್ತೂರು ಸಂತೋಷ್.‌

----

ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ

2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope

Whats_app_banner