ಇದೇ ವರ್ಷ ವರ್ತೂರು ಸಂತೋಷ್ ಎರಡನೇ ಮದುವೆ; ಗೊತ್ತಿರುವ ಹುಡುಗಿಯನ್ನೇ ವರಿಸಲಿದ್ದಾರೆ ಹಳ್ಳಿಕಾರ್ ಒಡೆಯ
ಬಿಗ್ ಬಾಸ್ ಮೂಲಕ ಹೆಚ್ಚು ಜನಪ್ರಿಯತೆ ಪಡೆದ ವರ್ತೂರು ಸಂತೋಷ್ ಇದೀಗ ಎರಡನೇ ಮದುವೆ ಆಗುತ್ತಿರುವ ವಿಚಾರವನ್ನು ಖಚಿತಪಡಿಸಿದ್ದಾರೆ. ಸ್ನೇಹಿತನ ಜತೆಗೆ ನಿಂತು ವಿಡಿಯೋ ಮಾಡಿ, ಇದೇ ವರ್ಷದಲ್ಲಿ ಮದುವೆ ಆಗುವ ಬಗ್ಗೆ ಹೇಳಿಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ತಮ್ಮದೇ ಆದ ಅಪಾರ ಅಭಿಮಾನಿಗಳನ್ನು ಸಂಪಾದಿಸಿಕೊಂಡಿರುವ ವರ್ತೂರು ಸಂತೋಷ್, ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಅದರಲ್ಲೂ ಬಿಗ್ ಬಾಸ್‌ನಲ್ಲಿ ಭಾಗವಹಿಸಿ ಬಂದ ಬಳಿಕ ಹೆಚ್ಚು ಮುನ್ನೆಲೆಗೆ ಬಂದವರು ಈ ವರ್ತೂರು ಸಂತೋಷ್. ಅಭಿಮಾನಿ ವಲಯದಲ್ಲಿ ಹಳ್ಳಿಕಾರ್ ಒಡೆಯ ಎಂದೇ ಫೇಮಸ್ ಆದ ಸಂತೋಷ್, ಇದೀಗ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಇನ್ನೇನು ಇದೇ ವರ್ಷದಲ್ಲಿ ಮದುವೆ ಆಗಲಿದ್ದಾರೆ. ಈ ವಿಚಾರವನ್ನು ಸ್ವತಃ ತಾವೇ ಹೇಳಿಕೊಂಡ ವಿಡಿಯೋ ಅವರ ಇನ್‌ಸ್ಟಾಗ್ರಾಂನಲ್ಲಿದೆ.
ವರ್ತೂರು ಸಂತೋಷ್ ಅವರ ಸ್ನೇಹಿತ ಶ್ರೀನಿವಾಸ್ ಎಂಬುವವರು ಖುದ್ದು ಸಂತೋಷ್ ಅವರ ಜೊತೆಗೆ ನಿಂತು, ತಿಗಳರ ತಮಿಳು ಭಾಷೆಯಲ್ಲಿ ಮದುವೆ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ. ಇದೇ ವರ್ಷ ನಮ್ಮ ವರ್ತೂರು ಸಂತೋಷ್ ಮದುವೆ ಆಗುವುದು ಖಚಿತ. ಎಲ್ಲ ನಮ್ಮ ತಿಗಳ ವನ್ಯ ಕುಲ ಕ್ಷತ್ರೀಯ ಜನರು, ನಮ್ಮ ವರ್ತೂರು ಸಂತೋಷ್‌ಗೆ ಆಶೀರ್ವಾದ ಮಾಡಬೇಕು ಎಂದು ನಾನು ಕೇಳಿಕೊಳ್ಳುತ್ತೇನೆ. ನೂರು ವರ್ಷ ಖುಷಿಯಾಗಿರಬೇಕು ಎಂದು ನಾನು ಈ ಮೂಲಕ ಕೇಳಿಕೊಳ್ಳುತ್ತೇನೆ. ಜೈ ಹಳ್ಳಿಕಾರ್ ಎಂದಿದ್ದಾರೆ ಶ್ರೀನಿವಾಸ್.
ಶ್ರೀನಿವಾಸ್ ಮಾತನಾಡಿದ ಬಳಿಕ, ಅದೇ ವಿಡಿಯೋದಲ್ಲಿ ತಮ್ಮ ಮದುವೆಗೆ ಬಂದು ಹರಸಿ ಎಂದು ಸ್ವತಃ ವರ್ತೂರು ಸಂತೋಷ್ ತಿಗಳರ ಭಾಷೆಯಲ್ಲಿಯೇ ಮನವಿ ಮಾಡಿದ್ದಾರೆ. "ನಮ್ಮ ಸಮುದಾಯದಿಂದ ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆದವರು ತುಂಬಾ ಕಡಿಮೆ. ನಾನು ಸೋಷಿಯಲ್ ಮೀಡಿಯಾ ಜೊತೆಗೆ ಬಿಗ್ ಬಾಸ್ ತನಕ ಹೋಗಿದ್ದೇನೆ. ನಮ್ಮ ಸಮುದಾಯದವರ ಆಶೀರ್ವಾದ ಯಾವಾಗಲೂ ನನ್ನ ಮೇಲಿರಲಿ. ಬಿಗ್ ಬಾಸ್‌ನಲ್ಲಿದ್ದಾಗ ಇಡೀ ಕರ್ನಾಟಕದ ಜನತೆ ಆಶೀರ್ವಾದ ಮಾಡಿದ್ದರು. ಈಗಲೂ ಆಶೀರ್ವಾದ ಮಾಡಿ" ಎಂದು ವಿಡಿಯೋದಲ್ಲಿ ಕೋರಿಕೊಂಡಿದ್ದಾರೆ ವರ್ತೂರು ಸಂತೋಷ್. ಅಂದಹಾಗೆ ಮದುವೆ ಯಾವಾಗ, ಹುಡುಗಿ ಯಾರು ಎಂಬಿತ್ಯಾದ ವಿವರವನ್ನು ಅವರು ನೀಡಿಲ್ಲ.
ಸಂಬಂಧಿಕರ ಹುಡುಗಿಯನ್ನೇ ವರಿಸಲಿರುವ ವರ್ತೂರು
ವರ್ತೂರು ಸಂತೋಷ್ ಮದುವೆ ವಿಚಾರ ಮುನ್ನೆಲೆಗೆ ಬರುತ್ತಿದ್ದಂತೆ, ಬಿಗ್ ಬಾಸ್ ಮನೆಯಲ್ಲಿ ಪರಿಚಯವಾದ ತನಿಷಾ ಕುಪ್ಪಂಡ ಅವರ ಹೆಸರು ತಳುಕು ಹಾಕಿಕೊಳ್ಳುತ್ತಿತ್ತು. ಆದರೆ, ಆ ಸುದ್ದಿಗೆ ಪ್ರತಿಕ್ರಿಯೆ ನೀಡಿದ್ದ ಸಂತೋಷ್, ತನಿಷಾ ನನ್ನ ಸ್ನೇಹಿತೆ ಎಂದು ಹೇಳಿಕೊಂಡಿದ್ದರು. ಅದಾದ ಮೇಲೆ ಎರಡನೇ ಮದುವೆ ವಿಚಾರದ ಬಗ್ಗೆ ಮಾತನಾಡಿದ್ದ ಅವರು, ಸಂಬಂಧಿಕರ ಹುಡುಗಿಯನ್ನೇ ಮದುವೆ ಆಗುತ್ತಿರುವ ಬಗ್ಗೆ ಹೇಳಿಕೊಂಡಿದ್ದರು. ಆದರೆ, ಆ ಹುಡುಗಿ ಯಾರು ಎಂಬುದನ್ನು ಮಾತ್ರ ರಿವೀಲ್ ಮಾಡಿಲ್ಲ.
ಇದು ಎರಡನೇ ಮದುವೆ!
ವರ್ತೂರು ಸಂತೋಷ್ ಅವರಿಗೆ ಈಗಾಗಲೇ ಮದುಗೆ ಆಗಿ ಅದು ಕಾರಣಾಂತರಗಳಿಂದ ಮುರಿದು ಬಿದ್ದಿದೆ. ಇನ್ನು ಕೆಲವೆಡೆ ಮೊದಲ ಹೆಂಡತಿಗೆ ಹೆಣ್ಣು ಮಗು ಸಹ ಇದೆ ಎಂದು ಹೇಳಲಾಗುತ್ತಿದೆ. ಈ ವಿಚಾರ ವರ್ತೂರು ಸಂತೋಷ್ ಬಿಗ್ ಬಾಸ್‌ನಲ್ಲಿದ್ದಾಗಲೇ, "ನನಗಿನ್ನು ಮದುವೆ ಆಗಿಲ್ಲ" ಎಂದು ಹೇಳುತ್ತಿದ್ದಂತೆ, ಇತ್ತ ಹೊರಗಡೆ ದೊಡ್ಡ ಮಟ್ಟದ ವಿವಾದ ಸೃಷ್ಟಿಯಾಗಿತ್ತು. ಇದೀಗ ಅದೆಲ್ಲದರ ನಡುವೆಯೇ ಎರಡನೇ ಮದುವೆಯ ತಯಾರಿಯಲ್ಲಿದ್ದಾರೆ ವರ್ತೂರು ಸಂತೋಷ್.