ಬಿಗ್‌ಬಾಸ್‌ ಕನ್ನಡ: ಹೇಗಿತ್ತು ಸೀಸನ್‌ 10, ರನ್ನರ್‌ ಆಗಿದ್ದು ಯಾರು, ಗೆದ್ದು ಬೀಗಿದ್ದು ಯಾರು?
ಕನ್ನಡ ಸುದ್ದಿ  /  ಮನರಂಜನೆ  /  ಬಿಗ್‌ಬಾಸ್‌ ಕನ್ನಡ: ಹೇಗಿತ್ತು ಸೀಸನ್‌ 10, ರನ್ನರ್‌ ಆಗಿದ್ದು ಯಾರು, ಗೆದ್ದು ಬೀಗಿದ್ದು ಯಾರು?

ಬಿಗ್‌ಬಾಸ್‌ ಕನ್ನಡ: ಹೇಗಿತ್ತು ಸೀಸನ್‌ 10, ರನ್ನರ್‌ ಆಗಿದ್ದು ಯಾರು, ಗೆದ್ದು ಬೀಗಿದ್ದು ಯಾರು?

ಬಿಗ್‌ಬಾಸ್‌ ಸೀಸನ್‌ 10 ರಲ್ಲಿ ಒಟ್ಟು 19 ಸ್ಪರ್ಧಿಗಳು ಭಾಗವಹಿಸಿದ್ದರು. 112ನೇ ದಿನ ಐವರು ಸ್ಪರ್ಧಿಗಳು ಮನೆಯಲ್ಲಿ ಉಳಿದುಕೊಂಡಿದ್ದರು. ಒಬ್ಬೊಬ್ಬರೇ ಎಲಿಮಿನೇಟ್‌ ಆಗಿ ಕೊನೆಗೆ ಡ್ರೋನ್‌ ಪ್ರತಾಪ್‌ ರನ್ನರ್‌ ಅಪ್‌ ಆದರೆ, ಕಾರ್ತಿಕ್‌ ಮಹೇಶ್‌ ವಿನ್ನರ್‌ ಆಗಿದ್ದರು.

ಬಿಗ್‌ಬಾಸ್‌ ಕನ್ನಡ ಸೀಸನ್‌ 10ರ ನೆನಪುಗಳು
ಬಿಗ್‌ಬಾಸ್‌ ಕನ್ನಡ ಸೀಸನ್‌ 10ರ ನೆನಪುಗಳು (PC: Jio Cinema)

ಬಿಗ್‌ಬಾಸ್‌ ಸೀಸನ್‌ 11 ಇನ್ನು ಎರಡು ದಿನಗಳಲ್ಲಿ ಮುಕ್ತಾಯವಾಗಲಿದೆ. ಈ ಬಾರಿ ಯಾವ ಸ್ಪರ್ಧಿ ಗೆಲುವು ಸಾಧಿಸಬಹುದು ಎಂಬ ಚರ್ಚೆ ಆರಂಭವಾಗಿದೆ. ಮನೆಯಲ್ಲಿ ತ್ರಿವಿಕ್ರಮ್‌, ಹನುಮಂತ, ರಜತ್, ಉಗ್ರಂ ಮಂಜು, ಮೋಕ್ಷಿತಾ ಪೈ, ಭವ್ಯಾಗೌಡ ಸೇರಿ ಒಟ್ಟು 6 ಮಂದಿ ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಶನಿವಾರ ಹಾಗೂ ಭಾನುವಾರ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಸಂಜೆ 6 ಗಂಟೆಗೆ ಗ್ರ್ಯಾಂಡ್‌ ಫಿನಾಲೆ ನಡೆಯಲಿದ್ದು ಭಾನುವಾರ, ಕಿಚ್ಚ ಸುದೀಪ್‌ ವಿನ್ನರ್‌ ಯಾರು ಅನ್ನೋದನ್ನು ಅನೌನ್ಸ್‌ ಮಾಡಲಿದ್ದಾರೆ.

ಸೀಸನ್‌ 10ರಲ್ಲಿದ್ದ ಸ್ಪರ್ಧಿಗಳು ಯಾರು?

ಸೀಸನ್‌ 11 ಮುಕ್ತಾಯದ ಸಮಯದಲ್ಲಿ ಒಮ್ಮೆ ಸೀಸನ್‌ 10ನ್ನು ನೆನಪಿಸಿಕೊಳ್ಳುವುದಾದರೆ ಕಳೆದ ಬಾರಿ ಬಿಗ್‌ ಬಾಸ್‌ ಹೇಗಿತ್ತು? ಕೊನೆಯಲ್ಲಿ ಎಷ್ಟು ಸ್ಪರ್ಧಿಗಳು ಉಳಿದುಕೊಂಡಿದ್ದರು? ವಿನ್ನರ್‌ ಆಗಿದ್ದು ಯಾರು? ಒಮ್ಮೆ ಮೆಲುಕು ಹಾಕೋಣ. ಕಳೆದ ಬಾರಿಯ ಬಿಗ್‌ಬಾಸ್‌ 8 ಅಕ್ಟೋಬರ್‌ 2023ರಂದು ಆರಂಭವಾಗಿ , 28 ಜನವರಿ 2024ರಂದು ಕೊನೆಗೊಂಡಿತ್ತು. ಬಿಗ್‌ಬಾಸ್‌ 10ನೇ ವಾರ್ಷಿಕೋತ್ಸವವನ್ನು ಆಚರಿಸಲು ಕಳೆದ ಬಾರಿ ಹ್ಯಾಪಿ ಬಿಗ್‌ ಬಾಸ್‌ ಥೀಮ್‌ ಮಾಡಲಾಗಿತ್ತು. 112 ದಿನಗಳ ಕಾಲ ಕಾರ್ಯಕ್ರಮ ಪ್ರಸಾರವಾಗಿತ್ತು.

ಕಳೆದ ಬಾರಿ ಬಿಗ್‌ಬಾಸ್‌ ಆರಂಭದಲ್ಲಿ ವೇದಿಕೆಯಲ್ಲೇ ಓಟಿನ ಆಧಾರದ ಮೇಲೆ ಕೆಲವು ಸ್ಪರ್ಧಿಗಳನ್ನು ಮನೆಗೆ ವಾಪಸ್‌ ಕಳಸಲಾಗಿತ್ತು. ನಟಿ ಚಿತ್ರಾಲ್‌ ರಂಗಸ್ವಾಮಿ ಹಾಗೂ ಅವಿನಾಶ್ ಅವರಿಗೆ ಕಡಿಮೆ ಓಟು ಬಂದಿದ್ದರಿಂದ ಶೋ ದಿನವೇ ಅವರನ್ನು ರಿಜೆಕ್ಟ್‌ ಮಾಡಲಾಗಿತ್ತು. ಉಳಿದಂತೆ 19 ಸ್ಪರ್ಧಿಗಳು ಮನೆ ಪ್ರವೇಶಿಸಿದ್ದರು. ಸ್ನೇಕ್‌ ಶ್ಯಾಮ್, ಗೌರೀಶ್‌ ಅಕ್ಕಿ, ರಕ್ಷಕ್‌, ಇಶಾನಿ, ಭಾಗ್ಯಶ್ರೀ, ನೀತು, ಸ್ನೇಹಿತ್‌, ಪವಿ, ಅವಿನಾಶ್‌, ಸಿರಿ, ಮೈಕೆಲ್‌, ತನಿಷಾ, ನಮ್ರತಾ, ಸಂತೋಷ್‌ , ವರ್ತೂರು ಸಂತೋಷ್‌, ವಿನಯ್‌, ಸಂಗೀತಾ, ಪ್ರತಾಪ್‌ ಹಾಗೂ ಕಾರ್ತಿಕ್‌ ಮಹೇಶ್‌ ಸ್ಪರ್ಧಿಗಳಾಗಿ ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಟ್ಟಿದ್ದರು.

ಸೀಸನ್‌ 10ರ ರನ್ನರ್‌ ಅಪ್‌, ವಿನ್ನರ್‌ಗಳಿವರು

ಟಾಸ್ಕ್‌ನಲ್ಲಿ ಸರಿಯಾಗಿ ಭಾಗವಹಿಸದಿದ್ದಕ್ಕೆ ಮೊದಲ ವಾರವೇ ಸ್ನೇಕ್‌ ಶ್ಯಾಮ್‌ ಮನೆಯಿಂದ ಹೊರ ಹೋಗಿದ್ದರು. ನಂತರ ಒಬ್ಬೊಬ್ಬರೇ ಸ್ಪರ್ಧಿಗಳು ಮನೆಯಿಂದ ಹೊರ ಹೋಗಿದ್ದರು. ಕೊನೆಯಲ್ಲಿ ವರ್ತೂರು ಸಂತೋಷ್‌, ಡ್ರೋನ್‌ ಪ್ರತಾಪ್‌, ಕಾರ್ತಿಕ್‌ ಮಹೇಶ್‌, ವಿನಯ್‌ ಸಂಗೀತಾ ಶೃಂಗೇರಿ ಸೇರಿದಂತೆ 5 ಸ್ಪರ್ಧಿಗಳು ಮನೆಯಲ್ಲಿ ಉಳಿದುಕೊಂಡಿದ್ದರು. ಫಿನಾಲೆ ದಿನ ಮೊದಲು ವರ್ತೂರು ಸಂತೋಷ್‌ ಎಲಿಮಿನೇಟ್‌ ಆಗಿ ಹೊರ ಬರುತ್ತಾರೆ. ನಂತರ ವಿನಯ್‌ ಮನೆಯಿಂದ ಹೊರ ಹೋಗುತ್ತಾರೆ. ನಂತರ ಸುದೀಪ್‌, ಮನೆ ಒಳಗೆ ಬಂದು ಮೂವರೂ ಸ್ಪರ್ಧಿಗಳನ್ನು ಮಾತನಾಡಿಸಿ, ಅವರೊಂದಿಗೆ ಫೋಟೋಗೆ ಪೋಸ್‌ ಕೊಡುತ್ತಾರೆ. ಒಟ್ಟಿಗೆ ಟೀ ಕುಡಿಯುತ್ತಾರೆ.

ಆಗಷ್ಟೇ ತೆಗೆದ ಫೋಟೋ ಫ್ರೇಮ್‌ಗೆ ತಮ್ಮ‌ ಆಟೋಗ್ರಾಫ್‌ ಬರೆದುಕೊಟ್ಟು ಮೂವರೂ ಸ್ಪರ್ಧಿಗಳನ್ನು ವೇದಿಕೆ ಮೇಲೆ ಕರೆಯುತ್ತಾರೆ. ಅಲ್ಲಿ ಸಂಗೀತಾ ಎಲಿಮಿನೇಟ್‌ ಆಗುತ್ತಾರೆ. ಕೊನೆಗೆ ಪ್ರತಾಪ್‌ ಹಾಗೂ ಮಹೇಶ್‌ ಕೈ ಹಿಡಿಯುವ ಕಿಚ್ಚ ಸುದೀಪ್ ಅವರು ಕಾರ್ತಿಕ್‌ ಮಹೇಶ್ ಕೈಯ್ಯನ್ನು ಎತ್ತಿ ಹಿಡಿದು ವಿನ್ನರ್‌ ಆಗಿ ಘೋಷಿಸುತ್ತಾರೆ. ಡ್ರೋನ್‌ ಪ್ರತಾಪ್‌ ರನ್ನರ್‌ ಅಪ್‌ ಆಗಿದ್ದರು.

ಈ ಸೀಸನ್‌ನಲ್ಲಿ ಯಾರು ಗೆಲ್ಲಲ್ಲಿದ್ದಾರೆ, ಈ ಬಾರಿಯಾದರೂ ಮಹಿಳಾ ಸ್ಪರ್ಧಿಗೆ ಬಿಗ್‌ಬಾಸ್‌ ಟ್ರೋಫಿ ಸಿಗುತ್ತಾ ಅನ್ನೋದು 2 ದಿನಗಳಲ್ಲಿ ತಿಳಿಯಲಿದೆ. ‍

Whats_app_banner