Drone Prathap: ‘ಅಲ್ಲಿ ಪಾಪರೆಡ್ಡಿಪಾಳ್ಯದ ಗ್ಯಾಂಗ್‌ನಿಂದ ಪಾರ್ಟಿ, ಇಲ್ಲಿ ಡ್ರೋಣ್ ಪ್ರತಾಪ್ ನೆಲಭೋಜನ, ಇಷ್ಟೇ ವ್ಯತ್ಯಾಸ’
ಮಲೆ ಮಾದಪ್ಪನ ಬೆಟ್ಟಕ್ಕೆ ತೆರಳಿರುವ ಡ್ರೋಣ್ ಪ್ರತಾಪ್, ಹರಕೆಯೊಂದನ್ನು ತೀರಿಸಿದ್ದಾರೆ. ಮಾದಪ್ಪನ ದರ್ಶನದ ಬಳಿಕ ನೆಲಭೋಜನ ಸವಿದಿದ್ದಾರೆ. ದೇಗುಲಕ್ಕೆ ಭೇಟಿ ವೇಳೆ ಅಪಾರ ಅಭಿಮಾನಿಗಳು ಪ್ರತಾಪ್ ಜತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ನೆಟ್ಟಿಗರಿಂದಲೂ ಬಗೆಬಗೆ ಕಾಮೆಂಟ್‌ಗಳು ಹರಿದು ಬಂದಿವೆ.
Drone Prathap: ಬಿಗ್ ಬಾಸ್ ಕನ್ನಡ ಸೀಸನ್ 10ರ ಬಳಿಕ ಡ್ರೋಣ್ ಪ್ರತಾಪ್ ಅವರಿಗೆ ನಾಡಿನಾದ್ಯಂತ ಮೆಚ್ಚುಗೆ ಸಿಗುತ್ತಿದೆ. ಅವರನ್ನು ಹುಡುಕಿಕೊಂಡು, ಹುಟ್ಟೂರು ನೆಟ್ಕಲ್ ಗ್ರಾಮಕ್ಕೆ ರಾಜ್ಯದ ಬೇರೆ ಬೇರೆ ಕಡೆಗಳಿಂದಲೂ ಸಾಕಷ್ಟು ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಕಲೆದ ಕೆಲ ವರ್ಷಗಳಿಂದ ಹುಟ್ಟೂರನ್ನು ಬಿಟ್ಟು ದೂರವೇ ಉಳಿದಿದ್ದ ಪ್ರತಾಪ್, ಇದೀಗ ಇಡೀ ಕುಟುಂಬದ ಜತೆಗೆ ಸಂಪೂರ್ಣ ಕಾಲ ಕಳೆಯುತ್ತಿದ್ದಾರೆ. ಅಪ್ಪನ ಜತೆ ರಾಗಿ ಮುದ್ದೆ ಮಾಡುತ್ತ, ಅಮ್ಮನ ಕೈ ತುತ್ತು ಸವಿಯುತ್ತ ಹಳೇ ದಿನಗಳಿಗೆ ಜಾರುತ್ತಿದ್ದಾರೆ.
ಒಂದಷ್ಟು ಕಾರಣಗಳಿಂದ ಊರು ಬಿಟ್ಟು ಬೆಂಗಳೂರು ಸೇರಿದ್ದ ಡ್ರೋಣ್ ಪ್ರತಾಪ್, ನೆಗೆಟಿವ್ ಟಾಕ್ ಮೂಲಕವೇ ಹೆಚ್ಚು ಸುದ್ದಿಯಲ್ಲಿದ್ದರು. ಹೀಗಿರುವ ಪ್ರತಾಪ್‌ಗೆ ಬಿಗ್ ಬಾಸ್ ಕನ್ನಡ ಸೀಸನ್ 10 ದೊಡ್ಡ ಮೈಲೇಜ್ ತಂದುಕೊಟ್ಟಿತು. ನಾಲ್ಕೈದು ವಾರ ಇರ್ತೀನಿ ಎಂದುಕೊಂಡಿದ್ದ ಪ್ರತಾಪ್, ಫಿನಾಲೆ ವರೆಗೂ ಬಂದು ರನ್ನರ್ ಅಪ್ ಆಗಿ ಹೊರಹೊಮ್ಮಿದರು. ಇದೀಗ ಹುಟ್ಟೂರಲ್ಲಿ ಬೀಡು ಬಿಟ್ಟಿರುವ ಪ್ರತಾಪ್, ದೇವರ ಹರಕೆಯನ್ನೂ ತೀರಿಸಿದ್ದಾರೆ.
ಹೌದು, ಈ ಹಿಂದೆ ಹೇಳಿಕೊಂಡಂತೆ, ಚಾಮರಾಜನಗರದ ಮಲೇ ಮಾದೇಶ್ವರ ಬೆಟ್ಟಕ್ಕೆ ಕುಟುಂಬ ಸಮೇತರಾಗಿ ತೆರಳಿದ್ದಾರೆ ಡ್ರೋಣ್ ಪ್ರತಾಪ್. ಹೀಗೆ ತೆರಳುತ್ತಿದ್ದಂತೆ, ಅಲ್ಲಿನ ಸಾಕಷ್ಟು ಮಂದಿ ಪ್ರತಾಪ್ ಅವರನ್ನು ನೋಡಿಲು ಮುಗಿಬಿದ್ದಿದ್ದಾರೆ. ಪ್ರತಾಪ್ ಜತೆ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದಾರೆ. ಇನ್ನು ಕೆಲವರು ಜೈಕಾರ ಘೋಷಣೆ ಮಾಡಿದ್ದಾರೆ. ಈ ನಡುವೆ ನೆಲಭೋಜನ ಮಾಡಿ ಹರಕೆಯನ್ನೂ ತೀರಿಸಿದ್ದಾರೆ.
ಪ್ರತಾಪ್‌ನ ಹರಕೆಗೆ ನೆಟ್ಟಿಗರು ಹೀಗಂದ್ರು
ಕುಟುಂಬದ ಜತೆಗೆ ಮಲೆ ಮಾದಪ್ಪನ ಬೆಟ್ಟಕ್ಕೆ ತೆರಳಿದ ಪ್ರತಾಪ್, ಅನ್ನ ಪ್ರಸಾದವನ್ನು ತಟ್ಟೆಯ ಸಹಾಯವಿಲ್ಲದೆ, ನೆಲದ ಮೇಲೆಯೇ ಸೇವಿಸಿ ಹರಕೆ ತೀರಿಸಿದ್ದಾರೆ. ಇತ್ತ ಪ್ರತಾಪ್ ಹೀಗೆ ನೆಲ ಭೋಜನ ಮಾಡುತ್ತಿರುವ ವಿಡಿಯೋಗಳು ಅವರ ಫ್ಯಾನ್ ಪೇಜ್‌ನಲ್ಲಿ ಶೇರ್ ಆಗುತ್ತಿದ್ದಂತೆ, ನೆಟ್ಟಿಗರು ಬಗೆ ಬಗೆ ರೀತಿಯಲ್ಲಿ ಕಾಮೆಂಟ್ ಹಾಕುತ್ತಿದ್ದಾರೆ.
- ಎಲ್ರು ಎಣ್ಣೆ ಪಾರ್ಟಿ ಮೋಜು ಮಸ್ತಿ ಮಾಡತ್ತಿದ್ರೆ ನೀವು ದೇವಸ್ಥಾನ ದಲ್ಲಿ ಇಷ್ಟು ಭಕ್ತಿ ಇಂದ ಪೂಜೆ ಮಾಡತಿದ್ದಿರಿ.
- ಒಂದು ಕಡೆ ಆ ಕಿತ್ತೋದವರು ಶೋಕಿ ಮಾಡಾತಾ ಎಣ್ಣಿ ಕುಡಿದ್ದಿರೆ ಇವನು ದೇವರನ್ನ ಎನ್ನುತ್ತಿದ್ದಾನೆ ಸೂಪರ್.
- ಪಾಪಿರೆಡ್ಡಿ ಪಾಳ್ಯದ ಗ್ಯಾಂಗ್ ಪಾರ್ಟಿ ಮಾಡ್ತಿದೆ ಕಪ್ ಗೆದ್ದೋನು ದುರಹಂಕಾರಿ ಮಾತಾಡ್ಕೊಂಡು ಊರು ಊರು ಅಲಿತಿದಾನೆ ಪಾಪಾ ಪ್ರತು
- ಪಾರ್ಟಿ ಮಾಡೋರಿಗೆ ಇದು ನಾಟಕ ಅನಿಸುತ್ತೆ. ಬಡವನ ಕಷ್ಟ ಬಡವನಿಗೆ ಮಾತ್ರ ಗೊತ್ತಾಗೋದು. ದೇವರು ಒಳ್ಳೇದು ಮಾಡ್ಲಿ ಪ್ರತು
- ಇಷ್ಟೇ ವ್ಯತ್ಯಾಸ ಇರೋವ್ರಿಗೂ ಇಲ್ಲದೆ ಇರೋವ್ರಿಗೂ ಮನುಷತ್ವ
- ಎಲ್ಲರೂ ಕುಣಿದು ಕುಪ್ಪಳಿಸ್ತಿದಾರೆ. ನೀವು ದೇವಸ್ಥಾನದಲ್ಲಿ ಇದ್ದೀರಾ. ಇದೇ ಅಪ್ಪ ಅಮ್ಮ ತೋರ್ಸೋ ದಾರಿ ಅಂದ್ರೆ
̲ ಮಾದಪ್ಪ ನಿಮ್ಮ ಹಿಂದೆ ಸದಾ ಇರ್ತಾರೆ. ಸದಾ ನಗುವಿನೊಂದಿಗೆ ಜೀವಿಸಿ ಒಳ್ಳೆಯದಾಗಲಿ ಪ್ರತು ಕಂದಾ
- ಆ ಮಲೆ ಮಾದೇಶ್ವರ ನಿನ್ ಜೀವನದಲ್ಲಿ ಬೆಳಕನ್ನು ಕೊಟ್ಟಿದಾನೆ ಸದಾ ಹೀಗೆ ಇರಲಿ ಮಾದಯ್ಯನ ಆಶೀರ್ವಾದ.
- ಪ್ರತಾಪ್ ಸರ್ ಗೆ ಇರೋ ಜನ ಬೆಂಬಲ ಉಳಿದ ಕಂಟೆಸ್ಟಂಟ್‌ಗಳಿಗೆ ಇಲ್ಲ
- ದೇವರು ನಿಮಗೆ ಒಳ್ಳೆಯದನ್ನು ಮಾಡಲಿ. ನಿಮ್ಮ ಮುಂದಿನ ಕೆಲಸಗಳೆಲ್ಲ ಸುಗಮವಾಗಿ ಸಾಗಲಿ. ಜನರ ಪ್ರೀತಿಯನ್ನು ಹಾಗೆ ಉಳಿಸಿಕೊಳ್ಳಿ. ಶುಭವಾಗಲಿ.