BBK 10: ‘ಸುರಕ್ಷತೆ ನಾಶವಾಗುತ್ತಿದೆ, ಬಿಗ್‌ಬಾಸ್‌ ಕುಟುಂಬದ ಶೋ ಆಗಿ ಉಳಿದಿಲ್ಲ!’ ಕಿಚ್ಚನಿಗೆ ಸಂಗೀತಾ ಶೃಂಗೇರಿ ಅಣ್ಣನ ಅಳಲು
ಕನ್ನಡ ಸುದ್ದಿ  /  ಮನರಂಜನೆ  /  Bbk 10: ‘ಸುರಕ್ಷತೆ ನಾಶವಾಗುತ್ತಿದೆ, ಬಿಗ್‌ಬಾಸ್‌ ಕುಟುಂಬದ ಶೋ ಆಗಿ ಉಳಿದಿಲ್ಲ!’ ಕಿಚ್ಚನಿಗೆ ಸಂಗೀತಾ ಶೃಂಗೇರಿ ಅಣ್ಣನ ಅಳಲು

BBK 10: ‘ಸುರಕ್ಷತೆ ನಾಶವಾಗುತ್ತಿದೆ, ಬಿಗ್‌ಬಾಸ್‌ ಕುಟುಂಬದ ಶೋ ಆಗಿ ಉಳಿದಿಲ್ಲ!’ ಕಿಚ್ಚನಿಗೆ ಸಂಗೀತಾ ಶೃಂಗೇರಿ ಅಣ್ಣನ ಅಳಲು

Bigg boss Kannada Season 10: ಬಿಗ್‌ಬಾಸ್‌ ಮನೆಯಲ್ಲಿ ಹಿಂಸೆಯೇ ಹೆಚ್ಚು ಮುನ್ನೆಲೆಗೆ ಬರುತ್ತಿದೆ. ಟಾಸ್ಕ್‌ ವಿಚಾರದಲ್ಲಿ ವೈಯಕ್ತಿಕ ಹಗೆ ಸಾಧಿಸುತ್ತಿದ್ದಾರೆ. ವಿನಯ್‌ ರಕ್ಕಸ ಆಟಕ್ಕೆ ಸಂಗೀತಾ ಮತ್ತು ಡ್ರೋಣ್‌ ಪ್ರತಾಪ್‌ ಆಸ್ಪತ್ರೆ ಪಾಲಾಗಿದ್ದಾರೆ. ಇತ್ತ ಇದೇ ಶೋ ಬಗ್ಗೆ ಸಂಗೀತ ಅಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

BBK 10: ‘ಸುರಕ್ಷತೆ ನಾಶವಾಗುತ್ತಿದೆ, ಬಿಗ್‌ಬಾಸ್‌ ಕುಟುಂಬದ ಶೋ ಆಗಿ ಉಳಿದಿಲ್ಲ!’ ಕಿಚ್ಚನಿಗೆ ಸಂಗೀತಾ ಶೃಂಗೇರಿ ಅಣ್ಣನ ಅಳಲು
BBK 10: ‘ಸುರಕ್ಷತೆ ನಾಶವಾಗುತ್ತಿದೆ, ಬಿಗ್‌ಬಾಸ್‌ ಕುಟುಂಬದ ಶೋ ಆಗಿ ಉಳಿದಿಲ್ಲ!’ ಕಿಚ್ಚನಿಗೆ ಸಂಗೀತಾ ಶೃಂಗೇರಿ ಅಣ್ಣನ ಅಳಲು

Bigg Boss Kannada Season 10: ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ಹಿಂಸಾರೂಪ ಪಡೆದುಕೊಳ್ಳುತ್ತಿದೆ. ಫ್ಯಾಮಿಲಿ ಶೋ, ಕುಟುಂಬದವರೆಲ್ಲ ಕೂತು ನೋಡುವ ಶೋ ಎಂದೆಲ್ಲ ಹೇಳಿಕೊಂಡಿದ್ದ ವಾಹಿನಿ, ಇದೀಗ ಅತಿಯಾದ ಹಿಂಸೆಗೆ ಪ್ರಚೋದನೆ ನೀಡುತ್ತಿದೆಯೇ? ಹೀಗೊಂದು ಪ್ರಶ್ನೆಗೆ ಇತ್ತೀಚಿನ ಕೆಲ ಘಟನೆಗಳೇ ಸಾಕ್ಷಿ. ಬಿಗ್‌ ಬಾಸ್‌ ಮನೆಯಲ್ಲಿ ಟಾಸ್ಕ್‌ ನೆಪದಲ್ಲಿ ಮಾರಣಾಂತಿಕವಾಗಿ ಸ್ಪರ್ಧಿಗಳು ಎದುರಾಳಿ ಸ್ಪರ್ಧಿಗಳ ಮೇಲೆ ದಾಳಿ ಮಾಡುತ್ತಿದ್ದಾರೆ.

ರಕ್ಕಸರ ಅತಿರೇಕದ ವರ್ತನೆಗೆ ಗಂಧರ್ವರು ಬಳಲಿ ಬೆಂಡಾಗಿದ್ದಾರೆ. ಅದ್ಯಾವ ಮಟ್ಟಿಗೆ ಎಂದರೆ, ಸೋಪಿನ ಪೌಡರ್‌ ನೀರನ್ನು ಮುಖಕ್ಕೆ ಎರಚಿದ ಹಿನ್ನೆಲೆಯಲ್ಲಿ ಸಂಗೀತಾ ಶೃಂಗೇರಿ ಮತ್ತು ಡ್ರೋಣ್‌ ಪ್ರತಾಪ್‌ ಆಸ್ಪತ್ರೆ ಪಾಲಾಗಿದ್ದಾರೆ. ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಹೀಗಿರುವಾಗಲೇ ಸಂಗೀತಾ ಶೃಂಗೇರಿ ಅಣ್ಣನೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೊಂಚ ಗರಂ ಆಗಿಯೇ ವಾಹಿನಿಗೆ ವಾರ್ನಿಂಗ್‌ ಮಾಡಿದ್ದಾರೆ.

ಚೇರ್‌ ಅಫ್‌ ಥಾರ್ನ್ಸ್ ಟಾಸ್ಕ್‌ನಲ್ಲಿ ವರ್ತೂರು ಸಂತೋಷ್‌ ನೇತೃತ್ವದ ತಂಡ ಟಾಸ್ಕ್‌ ಅನ್ನು ಟಾಸ್ಕ್‌ ರೀತಿ ಆಡದೆ, ಜಿದ್ದಿಗೆ ಬಿದ್ದಂತೆ, ಸಂಗೀತಾ ಅವರನ್ನೇ ಟಾರ್ಗೆಟ್‌ ಮಾಡಿ, ಶೇವಿಂಗ್‌ ಫೋಮ್‌ ಮತ್ತು ಸೋಪಿನ ಪೌಡರ್‌ನ ನೀರನ್ನು ಮುಖಕ್ಕೆ ಎರಚಿ ರಕ್ಕಸರಂತೆ ವರ್ತಿಸಿದ್ದರು. ವಿನಯ್‌ ಮಾನವೀಯತೆ ಇಲ್ಲದಂತೆ ವರ್ತಿಸಿದ್ದರು. ವಿನಯ್‌ ವರ್ತನೆಗೆ ಬಿಗ್‌ಬಾಸ್‌ ಸ್ಪರ್ಧಿಗಳು ಮಾತ್ರವಲ್ಲದೇ ವೀಕ್ಷಕ ವರ್ಗವೂ ರೋಸಿ ಹೋಗಿತ್ತು. ಇದೀಗ ಇದೇ ಘಟನೆ ಬಗ್ಗೆ ಸಂಗೀತಾ ಶೃಂಗೇರಿ ಅವರ ಅಣ್ಣ ಸಂತೋಷ್‌ ಕುಮಾರ್‌ ನೇರವಾಗಿ ಸುದೀಪ್‌ಗೆ ನೀವು ಮಾಡುತ್ತಿರುವುದು ಸರಿಯಲ್ಲ ಎಂದಿದ್ದಾರೆ.

ಸಂಗೀತಾ ಅಣ್ಣನ ಇನ್‌ಸ್ಟಾ ಸ್ಟೋರಿ ಹೀಗಿದೆ..

’ಕಿಚ್ಚ ಸುದೀಪ್ ಅವರೇ.. ನೀವು ನಮಗೆ ಭರವಸೆ ನೀಡಿದ್ರಿ.. “ಬಿಗ್ ಬಾಸ್ ಮನೆ ಸುರಕ್ಷಿತ! ಏನೂ ಆಗಲ್ಲ!” ಆದರೆ, ಈಗ ನೋಡಿದ್ರೆ, ಇದು ಹಾಗಿಲ್ಲ. ಇದು ಕುಟುಂಬದ ಶೋ ಅಂತ ಕಾಣಿಸುತ್ತಿಲ್ಲ. ಕೇಔಲ ಹಿಂಸೆ ಕಾಣ್ತಿದೆ. ಕುಟುಂಬದವರು ಹೀಗೆ ಆಕ್ರಮಣಕಾರಿ ವರ್ತನೆಯನ್ನು ಹೇಗೆ ನೋಡುತ್ತಾರೆ? ಈ ಶೋದಿಂದಾಗಿ ಇದನ್ನು ನೋಡುತ್ತಿರುವ ಕುಟುಂಬಗಳು ಗಾಬರಿಯಾಗಿವೆ. ಆಕ್ರಮಣಕಾರಿ ಆಟ, ಹಿಂಸಾಪ್ರವೃತ್ತಿಯನ್ನು ಮನೆಮಂದಿ ಕುಳಿತು ಒಟ್ಟಿಗೆ ನೋಡಬಹುದೇ? ಕಲರ್ಸ್‌ ಕನ್ನಡ ನಾವೇಕೆ ಸುದೀಪ್‌ ಸರ್‌ ಬಂದು ಸರಿಮಾಡೋಕೆ ಕಾಯಬೇಕು? ಬಿಗ್‌ ಬಾಸ್‌ ಇರೋದು ತಪ್ಪುಗಳನ್ನು ತಕ್ಷಣ ಸರಿಪಡಿಸಬೇಕಲ್ಲವೆ? ಎಂದು ಅಸಮಾಧಾನ ಹೊರಹಾಕಿದ್ದಾರೆ.

ಸಂಗೀತಾ ಅಣ್ಣ ಸಂತೋಷ್‌ ಇನ್‌ಸ್ಟಾ ಪೋಸ್ಟ್‌
ಸಂಗೀತಾ ಅಣ್ಣ ಸಂತೋಷ್‌ ಇನ್‌ಸ್ಟಾ ಪೋಸ್ಟ್‌

ಮುಂದುವರಿದ ವಿನಯ್‌ ರಕ್ಕಸ ಬುದ್ಧಿ

ಬಿಗ್‌ಬಾಸ್‌ ಮನೆಯಲ್ಲಿ ವಿನಯ್‌, ಸಂಗೀತಾ ಮತ್ತು ಕಾರ್ತಿಕ್‌ ನಡುವೆ ಮೊದಲಿಂದಲೂ ಮುನಿಸು ಇದ್ದೇ ಇದೆ. ಟಾಸ್ಕ್‌ ವಿಚಾರವಾಗಿರಲಿ, ಬಿಗ್‌ ಮನೆಯ ಯಾವುದೋ ವಿಚಾರವಾಗಿರಲಿ. ಆಗಾಗ ಈ ಮೂವರ ನಡುವೆ ಮಾತಿನ ಕಾಳಗ ನಡೆಯುತ್ತಲೇ ಇರುತ್ತದೆ. ಟಾಸ್ಕ್‌ನಲ್ಲಂತೂ ಒಂದು ಹೆಜ್ಜೆ ಮುಂದೆ ಹೋಗಿ ಬಡಿದಾಡಿಕೊಂಡ ಉದಾಹರಣೆಗಳೂ ಇವೆ. ಇದೀಗ ರಕ್ಕಸರಾಗಿ ಬದಲಾದ ವಿನಯ್‌, ಕಾರ್ತಿಕ್‌ ಮತ್ತು ಸಂಗೀತಾ ಮೇಲೆ ಅದೇ ರಕ್ಕಸ ಬುದ್ಧಿಯನ್ನು ತೋರಿದ್ದರು. ಅದ್ಯಾವ ಮಟ್ಟಿಗೆ ಎಂದರೆ, ಸಂಗೀತ ತಂಡ ಅಕ್ಷರಶಃ ಇವರ ಉಪಟಳಕ್ಕೆ ನಲುಗಿ ಹೋಗಿತ್ತು. ಇದೀಗ ಆಸ್ಪತ್ರೆಗೂ ದಾಖಲಾಗುವಂತೆ ಮಾಡಿದ್ದಾರೆ ವಿನಯ್.‌

Whats_app_banner