BBK 10: ಡ್ರೋಣ್ ಪ್ರತಾಪ್ ಬದಲು ಸಂಗೀತಾಗೆ ಬಿಗ್ ಬಾಸ್ ಫಿನಾಲೆ ಟಿಕೆಟ್! ಮೋಸದಾಟ, ಫಿಕ್ಸಿಂಗ್ ಎಂದು ದೂರಿ ಸಾಕ್ಷ್ಯ ತೋರಿಸಿದ ನೆಟ್ಟಿಗರು
ಫಿನಾಲೆಗೆ ಇನ್ನೇನು ಕೆಲವೇ ದಿನಗಳು ಇವೆ ಎನ್ನುತ್ತಿದ್ದಂತೆ, ಬಿಗ್ ಬಾಸ್ ಮನೆಯಿಂದ ನೇರವಾಗಿ ಫಿನಾಲೆ ಸುತ್ತಿಗೆ ಪ್ರವೇಶ ಪಡೆದಿದ್ದಾರೆ ಸಂಗೀತಾ ಶೃಂಗೇರಿ. ಈ ನಡುವೆ ಅಂಕಪಟ್ಟಿಯಲ್ಲಿ ಮೊದಲಿದ್ದರೂ ಡ್ರೋಣ್ ಪ್ರತಾಪ್ಗೆ ಅಚ್ಚರಿಯ ಸೋಲಾಗಿದೆ. ಬಿಗ್ಬಾಸ್ನ ಈ ನಿರ್ಧಾರ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.
BBK 10: ಬಿಗ್ಬಾಸ್ ಕನ್ನಡ ಸೀಸನ್ 10 ಕೊನೇ ಹಂತಕ್ಕೆ ಕಾಲಿರಿಸುತ್ತಿದೆ. ಇನ್ನೇನು ಮೂರು ವಾರಗಳಷ್ಟೇ ಬಾಕಿ ಉಳಿದಿವೆ. ಈ ನಡುವೆ ಈ ಸಲದ ಬಿಗ್ಬಾಸ್ನಲ್ಲಿ ಫಿನಾಲೆಗೂ ಮುನ್ನವೇ ಫಿನಾಲೆ ಸ್ಪರ್ಧಾ ಕಣಕ್ಕೆ ಟಿಕೆಟ್ ನೀಡಿ ಕುತೂಹಲ ಮೂಡಿಸಿತ್ತು. ಅದರಂತೆ, ಶುಕ್ರವಾರ ಸಂಗೀತಾ ಶೃಂಗೇರಿ ಫಿನಾಲೆ ಸ್ಪರ್ಧೆಗೆ ಮೊದಲ ಕಂಟೆಸ್ಟಂಟ್ ಆಗಿ ಪದಾರ್ಪಣೆ ಮಾಡಿದ್ದಾರೆ.
ಈ ವಾರ ಮನೆಯಲ್ಲಿ ಟಿಕೆಟ್ ಟು ಫಿನಾಲೆ ಎಂಬ ಟಾಸ್ಕ್ ನಡೆಸಿತ್ತು ಬಿಗ್ ಬಾಸ್. ಆ ಪೈಕಿ ಅತಿ ಹೆಚ್ಚು ಅಂಕ ಪಡೆದವರು ನೇರವಾಗಿ ಫಿನಾಲೆ ಸುತ್ತಿಗೆ ಪ್ರವೇಶ ಪಡೆಯಲಿದ್ದಾರೆ ಎಂದು ಬಿಗ್ ಬಾಸ್ ಹೇಳಿದ್ದರು. ಆದರೆ, ಶುಕ್ರವಾರ ಬಿಗ್ಬಾಸ್ ತಿಳಿಸಿದ ನಿರ್ಧಾರ ಕಂಡು, ಮನೆ ಮಂದಿಯಷ್ಟೇ ಅಲ್ಲ, ಬಿಗ್ ಬಾಸ್ ನೋಡುಗರೂ ಬೇಸರ ಹೊರಹಾಕಿದ್ದಾರೆ.
ಟಿಕೆಟ್ ಟು ಫಿನಾಲೆ ಆರಂಭವಾದ ಬಳಿಕ ಸ್ವತಃ ಬಿಗ್ ಬಾಸ್ ಅತಿ ಹೆಚ್ಚು ಅಂಕ ಪಡೆದವರನ್ನು ಫಿನಾಲೆಗೆ ಕಳುಹಿಸುವುದಾಗಿ ಹೇಳಿದ್ದರು. ಆದರೆ, ಆ ಮಾತಿಗೆ ಬಿಗ್ಬಾಸ್ ತಪ್ಪಿ ನಡೆದರಾ? ಹೀಗೊಂದು ಪ್ರಶ್ನೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿ ಸದ್ದು ಮಾಡುತ್ತಿದೆ. ಬಿಗ್ಬಾಸ್ ಅವರ ಈ ನಿರ್ಧಾರದಿಂದ ಡ್ರೋಣ್ ಪ್ರತಾಪ್ಗೆ ಮೋಸವಾಗಿದೆ ಎಂದೇ ಸಾಕಷ್ಟು ಮಂದಿ ಅಭಿಪ್ರಾಯ ತಿಳಿಸುತ್ತಿದ್ದಾರೆ.
ಅದರಂತೆ ಟಾಸ್ಕ್ ಲೆಕ್ಕಾಚಾರವನ್ನು ನೋಡುವುದಾದರೆ, 420 ಅಂಕ ಪಡೆದ ಡ್ರೋಣ್ ಪ್ರತಾಪ್ ಮೊದಲ ಸ್ಥಾನದಲ್ಲಿ ಇದ್ದರೆ, ಎರಡನೇ ಸ್ಥಾನದಲ್ಲಿ ಸಂಗೀತಾ ಶೃಂಗೇರಿ 300 ಅಂಕ, ಮೂರನೇ ಸ್ಥಾನದಲ್ಲಿ ನಮ್ರತಾ ಗೌಡಗೆ 210 ಅಂಕಗಳು ಲಭಿಸಿದ್ದವು. ಈ ಮೂವರ ಪೈಕಿ 420 ಅಂಕ ಪಡೆದ ಪ್ರತಾಪ್ ಫಿನಾಲೆ ಪ್ರವೇಶಿಸಬೇಕಿತ್ತು. ಆದರೆ, ಕೊನೇ ಕ್ಷಣದಲ್ಲಿ ಈ ಮೂವರಲ್ಲಿ ಯಾರು ಬೆಸ್ಟ್ ಎಂದಾಗ, ಎಲ್ಲರೂ ಸಂಗೀತಾ ಹೆಸರನ್ನು ಸೂಚಿಸಿದರು. ಎಲ್ಲರ ಮಾತಿನಂತೆ, ಸಂಗೀತಾ ಫಿನಾಲೆ ಪ್ರವೇಶಿಸಿದರು.
ಇತ್ತ ಬಿಗ್ಬಾಸ್ನ ಈ ನಡೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಬಿಗ್ ಬಾಸ್ ಹೇಳಿದಂತೆ ನಡೆದುಕೊಳ್ಳಲಿಲ್ಲ ಎಂದು ನೆಟ್ಟಿಗರು ಕಾಮೆಂಟ್ಗಳ ಮೂಲಕ ಟೀಕೆ ಮಾಡುತ್ತಿದ್ದಾರೆ. ಲೆಕ್ಕಾಚಾರದಂತೆ ಡ್ರೋಣ್ ಪ್ರತಾಪ್ ಫಿನಾಲೆ ತಲುಪಬೇಕಿತ್ತು. ಇದು ಮೋಸ, ಫಿಕ್ಸಿಂಗ್ ನಡೆಯುತ್ತಿದೆ ಎಂದು ಕಾಮೆಂಟ್ ಮೂಲಕ ಬೇಸರ ಹೊರಹಾಕುತ್ತಿದ್ದಾರೆ.
ನೆಟ್ಟಿಗರು ಹೇಳಿದ್ದೇನು?
- ಪ್ರತಾಪ್ ಪಾಯಿಂಟ್ಸ್ಗೆ ಬೆಲೇನೆ ಇಲ್ಲದಂತಾಯಿತು
- ವುಮೆನ್ ಕಾರ್ಡ್ ಮತ್ತೆ ಯಶಸ್ವಿಯಾಗಿ ವರ್ಕ್ ಆಯ್ತು
- ಬಿಗ್ ಬಾಸ್ ಕಡೆಯಿಂದಲೇ ಮೋಸವಾಗಿದೆ. ಅದು ಪ್ರತಾಪ್ಗೆ ಸಿಗಬೇಕಿತ್ತು
- ಪ್ರತಾಪ್ ಪಾಪ ಟಾಸ್ಕ್ ಆಡಿ 420 ಪಾಯಿಂಟ್ ತಗೊಂಡು ಶ್ರಮ ಪಟ್ಟಿದ್ದಕ್ಕೆ ಪ್ರತಿ ಫಲ ಸಿಗಲಿಲ್ಲ
- ಅಷ್ಟೆಲ್ಲ ಕಷ್ಟ ಪಟ್ಟು ಅಡಿದಕ್ಕೆ ಬೇಲೇನೆ ಇಲ್ಲ ಅಲ್ಲ ಗುರು
- ಪ್ರತಾಪ್ಗೆ ನ್ಯಾಯ ಸಿಗಲಿಲ್ಲ
- ಬಿಗ್ ಬಾಸ್ ಮೋಸ.. ಕಷ್ಟಪಟ್ಟು ಆಟ ಆಡಿ ಅತಿ ಹೆಚ್ಚು ಪಾಯಿಂಟ್ ತೊಗೊಂಡು ಕೊನೆಗೆ ಮೋಸ ಮಾಡಿದ್ರು
- ಡಬ್ಬ ಬಿಗ್ ಬಾಸ್.. ನಾನು ಪ್ರತಾಪ್ ಅಭಿಮಾನಿ ಅಲ್ಲಾ ಹಾಗೂ ಸಂಗೀತ ನಾ ವಿರುದ್ಧನೂ ಇಲ್ಲ .. Finale taskನಲ್ಲಿ ಇಷ್ಟೆಲ್ಲ ವಾರ ಇಡೀ ಆಟ ಆಡಿಸಿ ಪ್ರತಾಪ್ ಗೆದ್ದು ಬಂದಾಗ ಅವನಿಗೆ ಮಾತ್ರ ಫೈನಲ್ ಗೆ ಹೋಗೋ ಅವಕಾಶ ಕೊಡಬೇಕಾಗಿತ್ತು.. ಪುನಃ ವೋಟಿಂಗ್ ಯಾಕೆ ಮಾಡಿಸಬೇಕಿತ್ತು.. ಹಾಗಾದರೆ ಪ್ರತಾಪ್ ಆಟ ಮಾಡಿದಕ್ಕೆ ಬೆಲೆನೇ ಇಲ್ವಾ.. ಇದು ಬಿಗ್ ಬಾಸ್ ಮೋಸದಾಟ ಅಲ್ಲವೇ?