BBK 10: ಬಿಗ್‌ಬಾಸ್‌ನಲ್ಲಿ ಇಬ್ಬರ ಕೊಲೆ ಯತ್ನ, ವಿನಯ್ ರೌಡಿಸಂ ಅತಿಯಾಯ್ತು! ವೀಕ್ಷಕ ಕೊಟ್ಟ ಕಾರಣಗಳು ಹೀಗಿವೆ
ಬಿಗ್ ಬಾಸ್ ಮನೆಯಲ್ಲಿನ ವಿನಯ್ ಅವರ ವರ್ತನೆ ನಿಜಕ್ಕೂ ಅತಿಯಾಗಿದೆ. ವೀಕ್ಷಕರೂ ವಿನಯ್ ನಡೆಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಲ್ಲದೆ, ಅವರ ವಿರುದ್ಧ ಟೀಕೆ ಮಾಡುತ್ತಿದ್ದಾರೆ.
BBK 10: ಬಿಗ್ಬಾಸ್ ಸೀಸನ್ 10ರಲ್ಲಿ ಎಲ್ಲವೂ ಅತಿಯಾಗುತ್ತಿದೆ. ಅತಿರೇಕಕ್ಕೆ ಹೋಗುತ್ತಿದೆ. ಟಾಸ್ಕ್ ಆಟ ಟಾಸ್ಕ್ ರೀತಿಯಲ್ಲಿ ಇರದೇ, ದ್ವೇಷದ ಹಗೆತನ ಸಾಧಿಸುವ ನಿಟ್ಟಿನಲ್ಲಿ ಎದುರಾಳಿ ತಂಡವನ್ನು ಟಾರ್ಗೆಟ್ ಮಾಡಿದಂತೆ ಕಾಣಿಸಿದೆ. ಬಿಗ್‌ಬಾಸ್ ಲೋಕ ಹೆಸರಿನ ಈ ವಾರದ ಲಕ್ಷುರಿ ಬಜೆಟ್‌ನ ರಕ್ಕಸರು ಮತ್ತು ಗಂಧರ್ವರು ಟಾಸ್ಕ್‌ನಲ್ಲಿ ರಕ್ಕಸರು ಅಬ್ಬರಿಸಿ ಬೊಬ್ಬಿರಿಸಿದ್ದಾರೆ. ಅದರಲ್ಲೂ ವರ್ತೂರು ಸಂತೋಷ್ ನೇತೃತ್ವದ ರಕ್ಕಸರು ಒಂದು ಹೆಜ್ಜೆ ಮುಂದೆ ಹೋಗಿ ಗಂಧರ್ವರಿಗೆ ನರಕ ದರ್ಶನ ಮಾಡಿಸಿದ್ದಾರೆ!
ರಕ್ಕಸರಾಗಿ ಬದಲಾದ ವಿನಯ್ ಗೌಡ ನಿಜಕ್ಕೂ ರಾಕ್ಷಸನಂತೆ ವರ್ತಿಸಿ, ಕೆಲವರನ್ನು ಟಾರ್ಗೆಟ್ ಮಾಡಿ ಹಳೇ ದ್ವೇಷ ತೀರಿಸಿಕೊಂಡಿದ್ದಾರೆ. ಸಂಗೀತಾ, ಕಾರ್ತಿಕ್, ಪ್ರತಾಪ್ ಅವರನ್ನೇ ಗುರಿಯಾಗಿಸಿಕೊಂಡು, ಮುಖಕ್ಕೆ ಸೋಪಿನ ಪೌಡರ್ ಹಾಕಿದ ನೀರನ್ನು ಎರಚಿದ್ದಲ್ಲದೆ, ಕಾರ್ತಿಕ್ ಮುಖಕ್ಕೂ ಒಂದಷ್ಟು ಕ್ರೀಮ್‌ಗಳನ್ನು ಬಳಿದು ಕೆಟ್ಟತನ ಪ್ರದರ್ಶಿಸಿದ್ದಾರೆ. ಈ ನಡುವೆ ಸಂಗೀತಾ ಮತ್ತು ಪ್ರತಾಪ್ ಟಾಸ್ಕ್‌ನಲ್ಲಿ ಸೋಪಿನ ಪೌಡರ್ ನೀರು ಮುಖಕ್ಕೆ ಎರಚಿದ ಹಿನ್ನೆಲೆಯಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆ ಪಾಲಾಗಿದ್ದಾರೆ.
ವಿನಯ್ ನಡೆಗೆ ಪ್ರೇಕ್ಷಕ ಗರಂ
- ಸರ್ ನೆನ್ನೆ ಆಗಿದ್ದು ಬರಿ ಟಾಸ್ಕ್ ಅಲ್ಲ ಡ್ರೋನ್ ಪ್ರತಾಪ್ ಮತ್ತೆ ಸಂಗೀತ ನ ಕೊಲೆ ಮಾಡುವ ಮಟ್ಟಿಗೆ ಇತ್ತು ಸರ್
- ನಿನ್ನೆ ಆಗಿದ್ದು ಟಾಸ್ಕ್ ಅಲ್ಲ. ಸಂಗೀತ, ಡ್ರೋನ್ ಪ್ರತಾಪ್ ಅವರ ಮೇಲೆ ಆದ ಕೊಲೆ ಪ್ರಯತ್ನ. ನಿನ್ನೆ ಆ ಎಪಿಸೋಡ್ ನೋಡಿ ಮೈ ಎಲ್ಲಾ ಉರಿದು ಹೋಯಿತು
- ನಿನ್ನ ಸಂಗೀತಾ ಗೆ ಆ ಪಾಪಿಗಳು ಹಿಂಸೆ ಕೊಡೋದನ್ನ ನೋಡಿ ನನ್ನ ತಾಯಿ ಟಿವಿ ನೋಡುತ್ತಾ ಕಣ್ಣೀರು ಹಾಕಿದಳು. ಹೆತ್ತ ತಾಯಿ ಇನ್ನೆಷ್ಟು ಕಣ್ಣೀರು ಹಾಕಿರಬಹುದು.
- ಸಂಗೀತ ಕುರ್ಚಿ ಇಂದ ಎದ್ದೆಳಲಿಲ್ಲ ಎಂದರೆ ಸಂಗೀತನ ಕೊಲೆ ಆಗುತಿತ್ತು.. ವಿನಯ್‌ನ ಉದ್ದೇಶ ಕೂಡ ಅದೇ ಇತ್ತು.. ನಮ್ಮ ಮನೆಯವರು ಎಲ್ಲ ನಿನ್ನೆ ಎಪಿಸೋಡ್ ನೋಡಿ ಕಣ್ಣೀರು ಹಾಕುತ್ತಿದ್ದರು ಜಸ್ಟ್ ಫಾರ್ ಸಂಗೀತ.. ಪಾಪ ರೀ ಅವಳನ್ನು ಎಲ್ಲರೂ ಆ ಮನೇಲಿ ಟಾರ್ಗೆಟ್ ಮಾಡ್ತಾ ಇದಾರೆ... ವಿನಯ್ ಮತ್ತು ಮೈಕಲ್ ನೀವ್ ಮಾಡಿದ್ದು ಸರಿ ಇಲ್ಲ.. ನಿಮ್ಮ ಮನೇಲೂ ಹೆಣ್ಮಕ್ಳು ಇದ್ದಾರೆ..
- ಸುದೀಪ್ ಅವ್ರೆ ಬ್ರಾಂಡೆಡ್ ಬಟ್ಟೆ ಹಾಕಿ ಹಣ ತಗೊಂಡು ಕಾಮಿಡಿ ಶೋ ಮಾಡಿ ಹೋಗಬೇಡಿ, ನಿನ್ನೆ ವಿನಯ್ ಟೀಮ್ ಅವ್ರು ಮಾಡಿದ್ದು ಅತೀ ಹೀನಾಯವಾಗಿತ್ತು. ಅವ ಯಾರು ರೌಡಿನಾ ಬಿಗ್ಬಾಸ್ ಮನೇಲಿ? ನೀವು ಯಾಕೆ ಸುಮ್ಮನೆ ಇರೋದು ಅಲ್ಲಾ ಅವ ನಿಮ್ಮ ಸಂಬಂಧಿನ? ಯಾಕೆ ವಾರ್ನ್ ಮಾಡ್ತಿಲ್ಲ ನೀವು? ಎಲ್ಲಾ ಸೀಸನ್ ಅಲ್ಲಿ ಕೂಡ ಹಾರಾಡ್ತಿದ್ದರಿ ನೀವು ಈ ಸೀಸನ್ ಅಲ್ಲಿ ಯಾಕೆ ಕಾಮಿಡಿ ಶೋ ಮಾಡಿ ಹೋಗ್ತಿದ್ದಿರ? ಇದು ಎಲ್ಲಾ ಕನ್ನಡಿಗರ ಕೂಗು ನೆನಪಿರಲಿ. ವಿನಯ್ ಯಾಕೆ ಕಳಪೆನಾ ಚರ್ಚೆ ಮಾಡ್ತಾನೇ ನೀವು ಯಾಕೆ ಇನ್ನ ಪ್ರಶ್ನೆ ಮಾಡಿಲ್ಲ? ಈ ವಾರ ಅಲ್ಲಿ ಕಳಪೆಯನ್ನ ನಿಮ್ಮ ಸಮ್ಮುಖದಲ್ಲೇ ಚರ್ಚೆ ಮಾಡಿ ಜೈಲ್ಗೆ ಹಾಕ್ಸಿ ಇಲ್ಲಾ ಅಂದ್ರೆ ಕಳಪೆ ತೀರ್ಮಾನ ಜನರಿಗೆ ಬಿಟ್ಟ್ ಕೊಡಿ, ಜನರ ವೋಟ್ ಬೇಕು ಇದು ಬೇಡ್ವಾ?
- ಸಂಗೀತ ಅಂಡ್ ಪ್ರತಾಪ್ ಅವರಿಗೆ ಕಿಚ್ಚನ ಪಂಚಾಯತಿಯಲ್ಲಿ ನ್ಯಾಯ ಸಿಗ್ಲೇ ಬೇಕು ಅನ್ನೋರು ಲೈಕ್ ಮಾಡಿ
ವೀಕ್ಷಕರೊಬ್ಬರು ಬರೆದ ಐದು ಅಂಶಗಳು ಹೀಗಿವೆ
1) ವಿನಯ್ ಬಿಗ್ ಬಾಸ್ ಮನೆಗೆ ಆಟ ಆಡೋಕೆ ಬಂದಿದಾನಾ ಅಥವಾ ಮತ್ತೊಬ್ಬರನ್ನು ಟ್ರೀಗರ್ ಮಾಡಿ ರೌಡಿಸಂ ಮಾಡೋಕೆ ಹೋಗಿದಾನಾ..
2) ನಮ್ರತಾ ಬಿಗ್ ಬಾಸ್ ಮನೆಗೆ ಆಟ ಆಡೋಕೆ ಹೋಗಿದಾಳ ಅಥವಾ ಚಮಚಗಿರಿ ಮಾಡೋಕೆ ಹೋಗಿದಾಳ..
3) ವಿನಯ್ ಕಾರ್ತಿಕ್ ಗೆ ಗುಲಾಮ ಅಂತಾನೆ ಹಾಗಾದ್ರೆ ನಮ್ರತಾ ಸ್ನೇಹಿತ್ ಪವಿ ಇವರು ವಿನಯ್ ಗೆ ಗುಲಾಮರು ಅಲ್ವಾ..
4) ಮಿಸ್ ಆಗಿ ಚಪ್ಪಲಿ ವಿನಯ್ ಗೆ ಬಿತ್ತು ಅದೇ ಕಾರಣ ತಗೊಂಡು ಕಳಪೆ ಕೋಡೋ ಮೂರ್ಖರು ವಿನಯ್ ಹಿಟ್ಟಿನಿಂದ ಕಾರ್ತಿಕ್ ಮುಖಕ್ಕೆ ಹೋಡಿಯೋದು ನಮ್ರತಾ ಕಾರ್ತಿಕ್ ಕೈ ಮೇಲೆ ಕಾಲಿಟ್ಟು ನಡಿಯೋಕೆ ಹೋಗಿದ್ದು ಇದೆಲ್ಲಾ ಕಾಣಿಸಿಲ್ವ..
5) ವಿನಯ್ ಲೋ ತಗಡು ಲೋ ಗುಲಾಮ ಲೋ ಬೋಡಾ ಬಾಯಿಗೆ ಬಂದಂತೆ ಮಾತಾಡೋ ವಿನಯ್ ಇವ್ನೂ ಯಾವ ಸೀಮೆ ಫ್ರೆಂಡ್ ಕಾರ್ತಿಕ್ ಗೆ..
ಇವರಿಗೆಲ್ಲ ನಾಚಿಕೆ ಆಗಬೇಕು ಗುಂಪು ಕಟ್ಟಿಕೊಂಡು ಆಟ ಆಡೋಕೆ.. ಕೆಲವು ಸ್ಪರ್ಧಿಗಳ ಪ್ರಕಾರ ಕಾರ್ತಿಕ್ ಕಳಪೆ ಆದರೆ ಸತತವಾಗಿ ಎಲ್ಲಾ ವಾರಗಳಲ್ಲಿ ಅತ್ಯುತ್ತಮವಾಗಿ ಮತ್ತು ಪ್ರಾಮಾಣಿಕವಾಗಿ ಆಟ ಆಡ್ತಾ ಇರೋದು ಕಾರ್ತಿಕ್