BBK 10: ಬಳೆ ಬಲಹೀನತೆಯಲ್ಲ.. ವಿನಯ್‌ಗೆ ತಿವಿದ ಕಿಚ್ಚ; ಮೊಗ್ಯಾಂಬೊಗೆ ಮಜಾ ಬಂತು ಎಂದ ವೀಕ್ಷಕ, ಇಲ್ಲಿವೆ ನೋಡುಗರ ಪ್ರತಿಕ್ರಿಯೆ
ಕನ್ನಡ ಸುದ್ದಿ  /  ಮನರಂಜನೆ  /  Bbk 10: ಬಳೆ ಬಲಹೀನತೆಯಲ್ಲ.. ವಿನಯ್‌ಗೆ ತಿವಿದ ಕಿಚ್ಚ; ಮೊಗ್ಯಾಂಬೊಗೆ ಮಜಾ ಬಂತು ಎಂದ ವೀಕ್ಷಕ, ಇಲ್ಲಿವೆ ನೋಡುಗರ ಪ್ರತಿಕ್ರಿಯೆ

BBK 10: ಬಳೆ ಬಲಹೀನತೆಯಲ್ಲ.. ವಿನಯ್‌ಗೆ ತಿವಿದ ಕಿಚ್ಚ; ಮೊಗ್ಯಾಂಬೊಗೆ ಮಜಾ ಬಂತು ಎಂದ ವೀಕ್ಷಕ, ಇಲ್ಲಿವೆ ನೋಡುಗರ ಪ್ರತಿಕ್ರಿಯೆ

Vaarada Kathe Kichchana Jote: ಅಂದುಕೊಂಡಂತೆ ಕಿಚ್ಚ ಸುದೀಪ್‌, ವಿನಯ್‌ಗೆ ಭರ್ಜರಿಯಾಗಿಯೇ ಬಳೆ ವಿಚಾರಕ್ಕೆ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಆಡುವ ಪ್ರತಿ ಮಾತಿನ ಮೇಲೆ ನಿಗಾ ಇರಲಿ ಎಂದೂ ಕಿವಿ ಹಿಂಡಿದ್ದಾರೆ. ಸುದೀಪ್‌ ಅವರ ಈ ಮಾತಿಗೆ ನೆಟ್ಟಿಗರಿಂದಲೂ ಮೆಚ್ಚುಗೆ ಸಂದಾಯವಾಗಿವೆ. ನೋಡುಗರು ಏನಂದ್ರು? ಇಲ್ಲಿದೆ ನೋಡಿ ಅವರ ಕಾಮೆಂಟ್ಸ್‌.

BBK 10: ಬಳೆ ಬಲಹೀನತೆಯಲ್ಲ.. ವಿನಯ್‌ಗೆ ತಿವಿದ ಕಿಚ್ಚ; ಮೊಗ್ಯಾಂಬೊಗೆ ಮಜಾ ಬಂತು ಎಂದ ವೀಕ್ಷಕ, ಇಲ್ಲಿವೆ ನೋಡುಗರ ಪ್ರತಿಕ್ರಿಯೆ
BBK 10: ಬಳೆ ಬಲಹೀನತೆಯಲ್ಲ.. ವಿನಯ್‌ಗೆ ತಿವಿದ ಕಿಚ್ಚ; ಮೊಗ್ಯಾಂಬೊಗೆ ಮಜಾ ಬಂತು ಎಂದ ವೀಕ್ಷಕ, ಇಲ್ಲಿವೆ ನೋಡುಗರ ಪ್ರತಿಕ್ರಿಯೆ

Bigg Boss Kannada 10: ಕಲರ್ಸ್‌ ಕನ್ನಡ ವಾಹಿನಿ ಮತ್ತು ಜಿಯೋ ಸಿನಿಮಾದಲ್ಲಿ ದಿನದ 24ಗಂಟೆ ಲೈವ್‌ ಪ್ರಸಾರವಾಗುತ್ತಿರುವ ಬಿಗ್‌ಬಾಸ್‌ ಕನ್ನಡ ಸೀಸನ್‌ 10 ಇದೀಗ ನಾಲ್ಕನೇ ವಾರಕ್ಕೆ ಬಂದು ನಿಂತಿದೆ. ಮೊದಲ ವಾರದಿಂದಲೇ ಜಗಳ, ಕಿತ್ತಾಟ, ಮನಸ್ತಾಪಗಳಿಂದಲೇ ಮುಂದುವಿರದ ಬಿಗ್‌ಬಾಸ್‌ ಪ್ರಯಾಣ, ನಾಲ್ಕನೇ ವಾರದಲ್ಲಿ ಅದು ಅತಿರೇಕಕ್ಕೆ ಹೋಗಿತ್ತು. ಬಳೆ ವಿಚಾರಕ್ಕೆ ವಿನಯ್‌ ಆಡುವ ಮಾತುಗಳು ಕೇವಲ ಮನೆಮಂದಿಗಷ್ಟೇ ಅಲ್ಲ ಕರುನಾಡ ಜನತೆಗೂ ಅರಗಿಸಿಕೊಳ್ಳಲು ಕಷ್ಟವಾಗಿದ್ದವು.

ಟಾಸ್ಕ್‌ ವಿಚಾರದಲ್ಲಿ ಸಂಗೀತಾ ಮತ್ತು ತನಿಷಾ ಜತೆಗಿದ್ದ ಕಾರ್ತಿಕ್‌ಗೆ ಬಳೆಗಳ ರಾಜ, ಬಳೆ ಬಲಹೀನತೆಯ ಸಂಕೇತ ಎಂದು ವಿನಯ್‌ ತಮ್ಮ ರೋಷದ ಮಾತುಗಳಿಂದಲೇ ಟೀಕಿಸಿದ್ದರು. ಒಂದು ಹೆಜ್ಜೆ ಮುಂದೆ ಹೋಗಿದ್ದ ಸಂಗೀತಾ, ಬಳೆ ಹಾಕೊಂಡಿದ್ದೀನಿ ನೋಡು.. ಬಳೆ ಬಳೆ" ಎಂದು ಟಾಂಗ್‌ ಕೊಟ್ಟಿದ್ದರು. ಇದೇ ವಿಚಾರ ಸೋಷಿಯಲ್‌ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ವಿನಯ್‌ ಅವರ ವರ್ತನೆಗೆ, ಅವರು ಬಳಸುವ ಪದಗಳಿಗೆ ವೀಕ್ಷಕ ಗರಂ ಆಗಿದ್ದ.

ಪಂಚಾಯ್ತಿಯಲ್ಲಿ ವಿನಯ್‌ಗೆ ಬರೆ ಎಳೆದ ಕಿಚ್ಚ

ನಮಗೆ ಕಿಚ್ಚನ ಪಂಚಾಯ್ತಿ ಮೇಲೆ ನಂಬಿಕೆಯೇ ಇಲ್ಲ, ವಿನಯ್‌ ಅವರಿಗೆ ಸುದೀಪ್‌ ಎಚ್ಚರಿಕೆ ನೀಡುವುದೇ ಇಲ್ಲ ಎಂದು ವೀಕ್ಷಕರು ಸೋಷಿಯಲ್‌ ಮೀಡಿಯಾದಲ್ಲಿ ಅಸಮಾಧಾನ ತೋಡಿಕೊಂಡಿದ್ದರು. ಆದರೆ, ಈ ಸಲದ ಕಿಚ್ಚನ ಪಂಚಾಯ್ತಿಯಲ್ಲಿ ವಿನಯ್‌ಗೆ ಬಳೆ ವಿಚಾರವಾಗಿ ಸರಿಯಾಗಿಯೇ ಬರೆ ಎಳೆದಿದ್ದಾರೆ ಸುದೀಪ್.‌ ಬಳೆ ಬಲಹೀನತೆಯ ಸಂಕೇತ ಅಲ್ಲ, ಅದು ಬಲಶಾಲಿ ಬಳೆ" ಎಂದು ಈ ವಾರದ ಕಿಚ್ಚನ ಚಪ್ಪಾಳೆಯೂ ಬಳೆಗೆ ಸಂದಾಯವಾಗಿದೆ. ಸುದೀಪ್‌ ಅವರ ಈ ನಡೆಗೆ ಸೋಷಿಯಲ್‌ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ವಿನಯ್‌ಗೆ ಕಿಚ್ಚನ ಕ್ಲಾಸ್‌; ನೋಡುಗನ ಪ್ರತಿಕ್ರಿಯೆಗಳು ಹೀಗಿವೆ..

- ಇಡೀ ದೇಶಕ್ಕೆ ಇದೆ ಶಕ್ತಿ ಅನ್ನೋದ ಮರೆತವರಿಗೆ ಇದೊಂದು ಪಾಠ ನಿಜ ಅಂದೋರು.

- ಇದಪ್ಪ ಪಂಚಾಯ್ತಿ ಅಂದ್ರೆ, ಪಾಪ ಆನೆಗೆ ವಾಯ್ಸೇ ಬರ್ತಿಲ್ಲ ನಮ್‌ ಸುದೀಪ್‌ ಸರ್‌ನ ನೋಡಿ. ಈ ಬಳೆ ಫ್ರೇಮ್‌ನ ಅದೇ ಆನೆ ಕೈಯಲ್ಲಿಯೇ ಹಿಡಿಸಿದ್ದೀರಾ ಅದು..

- ಬಳೆ ತಾಕತ್ತು ಏನು ಅಂತ ಈವತ್ತು Big Boss ಮನೇಲಿ ಗೊತ್ತ ಆಗಿರೋದು ತುಂಬಾ ಖುಷಿ ಆಯಿತು. ಬಳೆ ತೊಟ್ಟ ಹೆಣ್ಣು ಯಾವುದರಲ್ಲೂ ಕಡಿಮೆಯಿಲ್ಲ. ಅಲ್ವಾ ಬಳೆ ತಾಕತ್ತು ಗೊತ್ತ ಇಲ್ಲದೆ ಇರೋರು ತಿಳಿದುಕೊಳ್ಳಿ..

- ಜನರು ವಿನಯ್ ಅವರನ್ನು ಕೆಟ್ಟದಾಗಿ ಕಂಡಿದ್ದು ಯಾವಾಗ. 1) ಬಳೆಗಳ ವಿಷಯ ದಲ್ಲಿ. 2) ಪ್ರತಾಪ ಅವರು ಹೆಣ್ಣು ಮಕ್ಕಳನ್ನ ಕೆಟ್ಟದಾಗಿ ನೋಡುತ್ತಾನೆ ಎಂದಾಗ. 3) ಕಳಪೆ ಮತ್ತು ನಾಮಿನೇಷನ್ ಬಗ್ಗೆ ಡಿಸ್ಕಸ್ ಮಾಡಿ ಇವರಿಗೆ ಕೊಡಬೇಕು ಎಂದು ಮಾತನಾಡಿದಾಗ. ದಯವಿಟ್ಟು ಇಷ್ಟು ಸೀಸನ್ ಗಳ್ಳಲ್ಲಿ ಇದನ್ನು ಮಾಡಿದವರಿಗೆ ಕ್ಲಾಸ್ ಆಗಿದೆ, ಈಗಲೂ ಸಹ ಈ ವಿಷಯ ಗಳಲ್ಲಿ ಅವರಿಗೆ ಕ್ಲಾಸ್ ತಗೊಳಿ ಸರ್

- ವಿನಯ್ ಮಾತಲ್ಲಿ ಹಿಡಿತ ಇಲ್ಲ ಬಾಯಿಗೆ ಬಂದಂತೆ ಮಾತಾಡ್ತಾನೆ,, ಇವನ ಫ್ಯಾಮಿಲಿ ಮಾತ್ರನಾ ನೋಡೋದು ಹೊರಗಡೆ ಬೇರೆಯವರ ಫ್ಯಾಮಿಲಿ ನೋಡ್ತಾರೆ ಅಲ್ವಾ?????

- ಮೊಗ್ಯಾಂಬೊಗೆ ಮಜಾ ಬಂತು

- ದಯಮಾಡಿ ವಿನಯ್ ಅವರು ಡ್ರೋನ್ ಪ್ರತಾಪ್ ಹೆಣ್ಣು ಅನ್ನು ನೋಡುವ ದೃಷ್ಟಿ ಸರಿ ಇಲ್ಲ ಎಂದು ಹೇಳಿದರು, ಇದು ಒಬ್ಬ ವ್ಯಕ್ತಿಯ ವ್ಯಕ್ತತ್ವವನ್ನು ಹಾಳು ಮಾಡುತ್ತದೆ, ದಯಮಾಡಿ ಇದಕ್ಕೆ ಕ್ಲಾಸ್ ತಗೊಳಿ ಸುದೀಪ್ ಸರ್

- ವಿನಯ್ ಮಾತಿನಲ್ಲಿ ಹಿಡಿತವಿಲ್ಲ ತನ್ನ ಫ್ಯಾಮಿಲಿ ಮಾತ್ರ ಹೊರಗಡೆ ನೋಡುವುದು ಬೇರೆಯವರ ಫ್ಯಾಮಿಲಿ ನೋಡೋದಿಲ್ಲ ?

- ವಾರ ಪೂರ್ತಿ ಹುಲಿತರ ಮೆರ್ದೋನು ಈಗ ಇಲಿ ಆಗೋಗಿದ್ದಾನೆ ನೋಡ್ರೋ ವಿನಯ್

- ವಿನಯ್ ಅವರನ್ನು ಪ್ರಶ್ನೆ ಮಾಡಬೇಕಾಗಿರುವ ವಿಚಾರಗಳು

1. ಕಳಪೆ ಕೊಡುವುದರ ಬಗ್ಗೆ ಚರ್ಚಿಸಿದ್ದು.

2. ಬಳೆಯನ್ನು ಬಲಹೀನತೆಯ ಸಂಕೇತ ಅನ್ನುವ ರೀತಿಯಲ್ಲಿ ಮಾತನಾಡಿರುವುದು.

3. ಪ್ರತಾಪ್ ಅವರ ಬಗ್ಗೆ ಹಗುರವಾಗಿ, ಕೆಟ್ಟದಾಗಿ ಮಾತನಾಡಿರುವುದು.

- ನಗ್ತಾ ನಗ್ತಾ ಕ್ಲಾಸ್ ತಗೋ ಬೇಡಿ ಸರ್, ಅಮೇಲೆ ಅದನ್ನು ತಮಾಷೆ ಅಂಕೊತರೆ, ಅವರ ತಪ್ಪು ದೊಡ್ಡದಿದೆ, ಮಾಸ್ ಆಗಿ ಕ್ಲಾಸ್ ತಗೋಳಿ ಬಾಸ್

Whats_app_banner