BBK 10: ‘ನಾನೂ ಕೋಪಿಷ್ಠೆ! ಚಿಕ್ಕಪುಟ್ಟ ವಿಷಯಕ್ಕೆ ಗಲಾಟೆ ಮಾಡಿದ್ರೆ ಸುಮ್ನಿರಲ್ಲ’; ಪವಿ ಪೂವಪ್ಪ
ಕನ್ನಡ ಸುದ್ದಿ  /  ಮನರಂಜನೆ  /  Bbk 10: ‘ನಾನೂ ಕೋಪಿಷ್ಠೆ! ಚಿಕ್ಕಪುಟ್ಟ ವಿಷಯಕ್ಕೆ ಗಲಾಟೆ ಮಾಡಿದ್ರೆ ಸುಮ್ನಿರಲ್ಲ’; ಪವಿ ಪೂವಪ್ಪ

BBK 10: ‘ನಾನೂ ಕೋಪಿಷ್ಠೆ! ಚಿಕ್ಕಪುಟ್ಟ ವಿಷಯಕ್ಕೆ ಗಲಾಟೆ ಮಾಡಿದ್ರೆ ಸುಮ್ನಿರಲ್ಲ’; ಪವಿ ಪೂವಪ್ಪ

ಮಾಡೆಲಿಂಗ್‌ ಕ್ಷೇತ್ರದಲ್ಲಿ ಹೆಸರು ಮಾಡಿರುವ ಪವಿ ಪೂವಪ್ಪ ವೈಲ್ಡ್‌ ಕಾರ್ಡ್‌ ಎಂಟ್ರಿ ಮೂಲಕ ಬಿಗ್‌ಬಾಸ್‌ ಕನ್ನಡ ಸೀಸನ್‌ 10ಕ್ಕೆ ಪ್ರವೇಶ ಪಡೆದಿದ್ದಾರೆ. ಫಿಸಿಕಲ್‌ ಆಗಿ ನಾನು ಸ್ಟ್ರಾಂಗ್‌ ಎಂದು ಹೇಳಿಕೊಳ್ಳುವ ಪವಿ, ತಾನು ಅಷ್ಟೇ ಕೋಪಿಷ್ಠೆಯೂ ಹೌದು ಎಂದಿದ್ದಾರೆ.

BBK 10: ‘ನಾನೂ ಕೋಪಿಷ್ಠೆ! ಚಿಕ್ಕಪುಟ್ಟ ವಿಷಯಕ್ಕೆ ಗಲಾಟೆ ಮಾಡಿದ್ರೆ ಸುಮ್ನಿರಲ್ಲ’; ಪವಿ ಪೂವಪ್ಪ
BBK 10: ‘ನಾನೂ ಕೋಪಿಷ್ಠೆ! ಚಿಕ್ಕಪುಟ್ಟ ವಿಷಯಕ್ಕೆ ಗಲಾಟೆ ಮಾಡಿದ್ರೆ ಸುಮ್ನಿರಲ್ಲ’; ಪವಿ ಪೂವಪ್ಪ

BBK 10: ಮಾಡೆಲಿಂಗ್‌ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಪವಿ ಪೂವಪ್ಪ, ಬಿಗ್‌ಬಾಸ್‌ ಮನೆಯೊಳಗೆ ವೈಲ್ಡ್‌ ಕಾರ್ಡ್‌ ಎಂಟ್ರಿ ಕೊಟ್ಟಿದ್ದಾರೆ. ಕೆಲವೊಮ್ಮೆ ಕೋಪಿಷ್ಠೆ, ಉಳಿದಂತೆ ಜಾಲಿಯಾಗಿರುವ ಅವರು, ಮನೆಯೊಳಗಿನ ಸ್ಪರ್ಧಿಗಳ ಲೆಕ್ಕಾಚಾರ ತಪ್ಪಿಸಲು ಸಿದ್ಧರಾಗಿಯೇ ಬಂದಿದ್ದಾರೆ. ಬಿಗ್‌ಬಾಸ್ ಮನೆಯೊಳಗೆ ಹೋಗುವುದಕ್ಕೂ ಕ್ಷಣಕಾಲ ಮೊದಲು ಅವರು ಜಿಯೋ ಸಿನಿಮಾಗೆ ನೀಡಿರುವ ಸಂದರ್ಶನದಲ್ಲಿ ಆಡಿದ ಮಾತುಗಳು ಇಲ್ಲಿವೆ.

‘’ಹಾಯ್ ನನ್ನ ಹೆಸ್ರು ಪವಿ ಪೂವಪ್ಪ. ನಾನು ಮಾಡೆಲ್. ಹತ್ತು ವರ್ಷದಿಂದ ಮಾಡೆಲಿಂಗ್ ಕ್ಷೇತ್ರದಲ್ಲಿ ಇದ್ದೀನಿ. ವೈಲ್ಡ್‌ ಕಾರ್ಡ್‌ ಎಂಟ್ರಿ ಮೂಲಕ ಬಿಗ್‌ಬಾಸ್‌ ಮನೆಯೊಳಗೆ ಸ್ಪರ್ಧಿಯಾಗಿ ಹೋಗ್ತಿರೋದು ನನಗಂತೂ ತುಂಬ ಖುಷಿಯ ವಿಷಯ. ಎಕ್ಸೈಟ್‌ಮೆಂಟ್ ತುಂಬಾನೇ ಇದೆ. ಭಯ ಇಲ್ಲ. ಬಿಗ್‌ಬಾಸ್ ಮನೆಯೊಳಗೆ ಹೋದಮೇಲೇ ಗೊತ್ತಾಗತ್ತೆ ಏನು ಎತ್ತ ಅಂತ…

ನಾನು ನಾನಾಗೇ ಇರ್ತೀನಿ..

ಮನೆಯಲ್ಲಿ ಅಮ್ಮ ಅಣ್ಣನಿಗೆ ಎಲ್ಲ ತುಂಬ ಖುಷಿಯಾಯ್ತು. ಇದುವರೆಗೆ ಜನರು ನನ್ನನ್ನು ಮಾಡೆಲಿಂಗ್ ಫೀಲ್ಡ್‌ನಲ್ಲಿ ನೋಡಿದ್ದಾರೆ. ನನ್ನ ಕ್ಯಾರೆಕ್ಟರ್ ಬಿಹೇವಿಯರ್ ಎಲ್ಲವನ್ನು ಇಡೀ ಕರ್ನಾಟಕದ ಜನರು ನೋಡಬಹುದು ಇಲ್ಲಿ. ಜನರು ನನ್ನಿಂದ ಎಂಟರ್‍ಟೈನ್ಮೆಂಟ್ ನಿರೀಕ್ಷಿಸಬಹುದು. ನಾನು ನಾನಾಗೇ ಇರ್ತೀನಿ.

ನಾನು ಕೋಪಿಷ್ಠೆ

ನಾನು ಶಾರ್ಟ್‌ ಟೆಂಪರ್ಡ್‌. ಆದ್ರೆ ಸಂದರ್ಭದ ಮೇಲೆ ಹೋಗತ್ತೆ. ಸುಮ್ ಸುಮ್ನೆ ಚಿಕ್ಕ ಪುಟ್ಟ ವಿಷಯಕ್ಕೆಲ್ಲ ಕೋಪ ಬರಲ್ಲ. ಅದು ಬಿಟ್ರೆ ನಾನು ಖುಷಿಖುಷಿಯಾಗಿರುತ್ತೇನೆ. ಕೋಪ ಬಂದ್ರೆ ಕಷ್ಟ ಅಷ್ಟೆ. ನಾನು ತುಂಬ ಮಿಸ್ ಮಾಡಿಕೊಳ್ಳೋದು ನನ್ನ ನಾಯಿಗಳು. ಅವುಗಳು ನನ್ನ ಜಗತ್ತು. ನನ್ನ ಬಳಿ ಹನ್ನೆರಡು ನಾಯಿಗಳಿವೆ. ಅವುಗಳನ್ನು ಮಿಸ್ ಮಾಡ್ಕೋತೀನಿ.

ನನ್ನ ಗೇಮ್ ನಾನು ಆಡ್ತೀನಿ

ವೈಲ್ಡ್‌ ಕಾರ್ಡ್‌ ಎಂಟ್ರಿ ಅಂತ ಹೋದಾಗ ಎಲ್ಲ ಸ್ಪರ್ಧಿಗಳು ಡಾಮಿನೆಂಟ್ ಮಾಡ್ತಾರೆ ಅಂತೆಲ್ಲ ಕೇಳಿದೀನಿ. ಆದ್ರೆ ನನಗೂ ಒಂದು ಅಡ್ವಾಂಟೇಜ್ ಇದೆ. ನಾನು ಅವರನ್ನೆಲ್ಲ ಮೊದಲೇ ನೋಡಿಕೊಂಡು ಮನೆಯೊಳಗೆ ಹೋಗುತ್ತಿದ್ದೇನೆ. ಅದೇನೇ ಇದ್ದರೂ ನನ್ನ ಗೇಮ್ ನಾನು ಆಡ್ತೀನಿ ಅಷ್ಟೆ. ಅಲ್ಲಿ ಹೋದ ಮೇಲೆ ಯಾರು ಯಾವ ಥರ ಬಿಹೇವ್ ಮಾಡ್ತಾರೆ ಅನ್ನೋದ್ರ ಮೇಲೆ ನನ್ನ ರಿಯಾಕ್ಷನ್ ಡಿಪೆಂಡ್ ಆಗುತ್ತದೆ.

ನಾನು ಫಿಜಿಕಲಿ ಸ್ಟ್ರಾಂಗ್ ಇದೀನಿ. ಅದು ನನ್ನ ಸ್ಟ್ರೆಂಥ್. ಯಾರಾದ್ರೂ ಚಿಕ್ಕಪುಟ್ಟ ವಿಷಯಕ್ಕೆ ಗಲಾಟೆ ಮಾಡಿದ್ರೆ ನಾನು ಶಾರ್ಟ್‌ ಟೆಂಪರ್ ಆಗ್ತೀನಿ. ಅದು ನನ್ನ ವೀಕ್‌ನೆಸ್‌. ಸದ್ಯಕ್ಕೆ ನನ್ನ ಫೆವರಿಟ್ ಸ್ಪರ್ಧಿ ಕಾರ್ತಿಕ್. ಯಾರೂ ಇಷ್ಟ ಇಲ್ಲ ಅಂತ ಹೇಳಕ್ಕಾಗಲ್ಲ. ಆದ್ರೆ ನನಗೆ ಹೊಂದಿಕೊಳ್ಳಲು ಸಾಧ್ಯವಿಲ್ಲ ಅನಿಸುವುದು ತನಿಷಾ ಕುಪ್ಪಂಡ ಜೊತೆಗೆ. ಯಾಕಂದ್ರೆ ನನ್ನ ಕ್ಯಾರೆಕ್ಟರ್ ಅವರ ಕ್ಯಾರೆಕ್ಟರಿಗೆ ತದ್ವಿರುದ್ಧವಾಗಿದೆ. ಹಾಗಾಗಿ ಅವರಿಂದ ದೂರ ಇರಬೇಕಾಗುತ್ತದೆ.

ವೈಲ್ಡ್‌ ಕಾರ್ಡ್ ಎಂಟ್ರಿಯ ಮೂಲಕ ಬಿಗ್‌ಬಾಸ್ ಮನೆಗೆ ಹೋಗ್ತಿದೀನಿ. ಆದಷ್ಟೂ ಗೆಲ್ಲಲು ಪ್ರಯತ್ನಪಡ್ತೀನಿ. ವೈಲ್ಡ್‌ಕಾರ್ಡ್‌ಯಲ್ಲಿ ಒಳಗೆ ಹೋದವರು ಗೆಲ್ಲಲು ಸಾಧ್ಯ ಇಲ್ಲ ಎಂದು ಎಲ್ಲರೂ ಅಂದುಕೊಂಡಿರ್ತಾರೆ. ಅದನ್ನು ಈ ಸಲ ಬದಲಾಯಿಸೋಣ ಅಂದುಕೊಂಡಿದೀನಿ" ಎಂದಿದ್ದಾರೆ.

Whats_app_banner