ನಿರ್ದೇಶಕ ಸಿಂಪಲ್‌ ಸುನಿ ಕೃಪಾಕಟಾಕ್ಷ, ಮಗದಷ್ಟು ‘ರಿಚ್‌’ ಆಗ್ತಿದ್ದಾರೆ ಬಿಗ್‌ ಬಾಸ್‌ ವಿಜೇತ ಕಾರ್ತಿಕ್‌ ಮಹೇಶ್‌
ಕನ್ನಡ ಸುದ್ದಿ  /  ಮನರಂಜನೆ  /  ನಿರ್ದೇಶಕ ಸಿಂಪಲ್‌ ಸುನಿ ಕೃಪಾಕಟಾಕ್ಷ, ಮಗದಷ್ಟು ‘ರಿಚ್‌’ ಆಗ್ತಿದ್ದಾರೆ ಬಿಗ್‌ ಬಾಸ್‌ ವಿಜೇತ ಕಾರ್ತಿಕ್‌ ಮಹೇಶ್‌

ನಿರ್ದೇಶಕ ಸಿಂಪಲ್‌ ಸುನಿ ಕೃಪಾಕಟಾಕ್ಷ, ಮಗದಷ್ಟು ‘ರಿಚ್‌’ ಆಗ್ತಿದ್ದಾರೆ ಬಿಗ್‌ ಬಾಸ್‌ ವಿಜೇತ ಕಾರ್ತಿಕ್‌ ಮಹೇಶ್‌

ಸ್ಯಾಂಡಲ್‌ವುಡ್‌ ನಿರ್ದೇಶಕ ಸಿಂಪಲ್‌ ಸುನಿ ಇದೀಗ ಮತ್ತೊಂದು ಹೊಸ ಸಿನಿಮಾ ಜತೆಗೆ ಆಗಮಿಸುತ್ತಿದ್ದಾರೆ. ರಿಚಿ ರಿಚ್‌ ಹೆಸರಿನ ಈ ಚಿತ್ರದಲ್ಲಿ ಬಿಗ್‌ ಬಾಸ್‌ ಕನ್ನಡ ಸೀಸನ್‌ 10ರ ವಿಜೇತ ಕಾರ್ತಿಕ್‌ ಮಹೇಶ್‌ ಹೀರೋ.

ನಿರ್ದೇಶಕ ಸಿಂಪಲ್‌ ಸುನಿ ಕೃಪಾಕಟಾಕ್ಷ, ರಿಚ್‌ ಆಗ್ತಿದ್ದಾರೆ ಬಿಗ್‌ ಬಾಸ್‌ ವಿಜೇತ ಕಾರ್ತಿಕ್‌ ಮಹೇಶ್‌
ನಿರ್ದೇಶಕ ಸಿಂಪಲ್‌ ಸುನಿ ಕೃಪಾಕಟಾಕ್ಷ, ರಿಚ್‌ ಆಗ್ತಿದ್ದಾರೆ ಬಿಗ್‌ ಬಾಸ್‌ ವಿಜೇತ ಕಾರ್ತಿಕ್‌ ಮಹೇಶ್‌

Karthik Mahesh: ಸ್ಯಾಂಡಲ್‌ವುಡ್‌ನಲ್ಲಿ ತಮ್ಮ ನಿರ್ದೇಶನದ ಮೂಲಕವೇ ಗಮನ ಸೆಳೆದ ನಿರ್ದೇಶಕರ ಸಾಲಿನಲ್ಲಿ ನಿಲ್ಲುವವರು ಸಿಂಪಲ್‌ ಸುನಿ. ಯುವಪೀಳಿಗೆಯನ್ನೇ ಗಮನದಲ್ಲಿಟ್ಟುಕೊಂಡು, ನವಿರಾದ ಹಾಸ್ಯದ ಮೂಲಕ ಕಥೆ ಹೇಳುವ ಸುನಿ ಅವರ ಶೈಲಿಗೆ ಅಭಿಮಾನಿಗಳಿದ್ದಾರೆ. ಈಗ ಇದೇ ಸಿಂಪಲ್‌ ಸುನಿ, ಹೊಸ ಕಥೆಯ ಜತೆಗೆ ಆಗಮಿಸಿದ್ದಾರೆ. ಈ ಸಲ ಅವರಿಗೆ ನಾಯಕನಾಗಿ ಸಾಥ್‌ ನೀಡುತ್ತಿರುವುದು ಬಿಗ್‌ ಬಾಸ್‌ ಕನ್ನಡ ಸೀಸನ್‌ 10ರ ವಿಜೇತ ಕಾರ್ತಿಕ್‌ ಮಹೇಶ್‌. ಈ ಜೋಡಿಯ ಚಿತ್ರಕ್ಕೀಗ ರಿಚಿ ರಿಚ್‌ ಶೀರ್ಷಿಕೆ ಇಡಲಾಗಿದೆ.

ನಾಯಕನಾಗಿ ಕಾರ್ತಿಕ್‌ ಮಹೇಶ್‌

ಬಿಗ್‌ ಬಾಸ್‌ ವಿಜೇತರಾಗಿ ಹೊರಬಂದ ಬಳಿಕ ಕಾರ್ತಿಕ್‌ ಮಹೇಶ್‌, ರಾಮರಸ ಸಿನಿಮಾದಲ್ಲಿ ಲೀಡ್‌ ರೋಲ್‌ನಲ್ಲಿ ನಟಿಸುತ್ತಿದ್ದಾರೆ. ಅದನ್ನು ಬಿಟ್ಟು ಅವರ ಬತ್ತಳಿಕೆಯಲ್ಲಿ ಬೇರೆ ಸಿನಿಮಾಗಳಿಲ್ಲ ಎಂಬುದಕ್ಕಿಂತ ಅಧಿಕೃತವಾಗಿ ಘೋಷಣೆ ಆಗಿರಲಿಲ್ಲ. ಈಗ ರಿಚಿ ರಿಚ್‌ ಚಿತ್ರದ ಮೂಲಕ ಸಿಂಪಲ್‌ ಸುನಿ ಜತೆಗೆ ಕಾರ್ತಿಕ್‌ ಕೈ ಜೋಡಿಸಿದ್ದಾರೆ. ರಿಚ್‌ ಆಗುವ ಕನಸನ್ನು ಇಬ್ಬರೂ ಈ ಸಿನಿಮಾ ಮೂಲಕ ನನಸು ಮಾಡಿಕೊಳ್ಳುವ ಉಮೇದಿನಲ್ಲಿದ್ದಾರೆ. ಹಾಗಾದರೆ, ಏನಿದು ಸಿನಿಮಾ? ನಿರ್ಮಾಪಕರು ಯಾರು, ತಾರಾಗಣ, ತಾಂತ್ರಿಕ ಬಳಗದ ಮಾಹಿತಿ ಇಲ್ಲಿದೆ.

ಏಕಕಾಲದಲ್ಲಿ ಎರಡು ಸಿನಿಮಾ ಘೋಷಣೆ

ಕನ್ನಡ ಚಿತ್ರರಂಗಕ್ಕೆ ಸದಭಿರುಚಿ ಸಿನಿಮಾಗಳನ್ನು ನಿರ್ಮಿಸುವ ಆಶಯದೊಂದಿಗೆ ಬೆಂಗಳೂರಿನ ಉದ್ಯಮಿಯಾಗಿ ಅರವಿಂದ್ ವೆಂಕಟೇಶ್ ರೆಡ್ಡಿ ತಮ್ಮದೇ ಎವಿಆರ್‌ ಎಂಟರ್ಟೈನರ್‌ ಬ್ಯಾನರ್ ಪ್ರಾರಂಭಿಸಿದ್ದಾರೆ. ಈ ಬ್ಯಾನರ್ ಅಡಿ ಏಕಕಾಲಕ್ಕೆ ಎರಡು ಸಿನಿಮಾಗಳನ್ನು ಘೋಷಣೆ ಮಾಡಲಾಗಿದೆ. ಎವಿಆರ್‌ ಎಂಟರ್ಟೈನರ್‌ ನಿರ್ಮಾಣದ ಚೊಚ್ಚಲ ಚಿತ್ರಕ್ಕೆ ಸಿಂಪಲ್ ಸುನಿ ಸಾರಥಿ.

ಅರವಿಂದ್ ವೆಂಕಟೇಶ್ ರೆಡ್ಡಿ ನಿರ್ಮಾಣದಲ್ಲಿ ರಿಚಿ ರಿಚ್ ಎಂಬ ಸಿನಿಮಾ ಘೋಷಣೆಯಾಗಿದೆ. ಸುನಿ ಸಾರಥ್ಯದಲ್ಲಿ ಮೂಡಿ ಬರಲಿರುವ ಈ ಚಿತ್ರಕ್ಕೆ ಬಿಗ್ ಬಾಸ್ ಖ್ಯಾತಿಯ ಕಾರ್ತಿಕ್ ಮಹೇಶ್ ನಾಯಕನಾಗಿ ನಟಿಸಲಿದ್ದಾರೆ. ಅವರಿಗಿಲ್ಲಿ ರಿದ್ದೇಶ್ ಚಿನ್ನಯ್ಯ ಎಂಬ ಪಾತ್ರ. ಫನ್, ಫ್ಯಾಮಿಲಿ ಜೊತೆಗೆ ಎಮೋಷನಲ್ ಅಂಶಗಳನ್ನು ಬ್ಲೆಂಡ್ ಮಾಡಿ ಈ ಕಥೆಯನ್ನು ಸುನಿ ತೆರೆಮೇಲೆ ತರುತ್ತಿದ್ದಾರೆ. ವೀರ್ ಸಮರ್ಥ್ ಸಂಗೀತ ನಿರ್ದೇಶನ, ಅಭಿಲಾಷ್ ಕಳತ್ತಿ ಛಾಯಾಗ್ರಹಣ ಈ ಚಿತ್ರಕ್ಕಿದೆ.

ಕಾರ್ತಿಕ್‌ ಮಹೇಶ್‌ ಪೋಸ್ಟ್‌

"ಒಳ್ಳೆ ಸದಭಿರುಚಿಯ ಚಿತ್ರಗಳನ್ನು ನಿರ್ಮಿಸುವ ಉದ್ದೇಶದಿಂದ ಹಾಗೂ ನಿಮ್ಮೆಲ್ಲರ ಆಶೀರ್ವಾದದೊಂದಿಗೆ AVR ENTERTAINMENT ಅನ್ನು ಶುಭಾರಂಭ ಮಾಡುತ್ತಿದ್ದೇನೆ. ಹಾಗೂ ನಿಮ್ಮ ಮುಂದೆ ಮೊದಲು 2 ಚಿತ್ರಗಳನ್ನು ಪ್ರಸ್ತುತಪಡಿಸುತ್ತಿದ್ದೇನೆ .. ಅದರೊಳಗೊಂದು

ರಿಚಿ ರಿಚ್ (RICHIE RICH)

ರಿದ್ದೇಶ್ ಚಿನ್ನಯ್ಯ (RICHIE ) ಆದ ಇವನು ಶ್ರೀಮಂತ (RICH) ಆಗುವುದು ಹೇಗೆಂದು ಯೋಚಿಸುತ್ತಿದ್ದಾನೆ .. ಗೊತ್ತಿದ್ದವರು ಇವನಿಗೆ ಸಹಾಯ ಮಾಡಬಲ್ಲಿರಾ ...

ನೀವಿಲ್ಲದಿರುವ ದಿನ ಬಡತನ

ನೀವಿದ್ದರೆ ಜೊತೆ ಅದೇ ಸಿರಿತನ

ಸದಾ ಜೊತೆಗಿದ್ದು ಹಾರೈಸಿ ..

-ರಿಚಿ ರಿಚ್ ಚಿತ್ರತಂಡ-

ಸುಜಯ್‌ ಶಾಸ್ತ್ರಿ ನಿರ್ದೇಶನದಲ್ಲಿ ಇನ್ನೊಂದು

ಎವಿಆರ್‌ ಎಂಟರ್ಟೈನರ್‌ ಬ್ಯಾನರ್ ಅಡಿ ಬರಲಿರುವ ಎರಡನೇ ಸಿನಿಮಾಗೆ ಸುಜಯ್ ಶಾಸ್ತ್ರಿ ನಿರ್ದೇಶಕರು. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ, ಎಲ್ರ ಕಾಲೆಳೆಯುತ್ತೆ ಕಾಲ ಚಿತ್ರಗಳನ್ನು ನಿರ್ದೇಶಿಸಿರುವ ಸುಜಯ್ ಈ ಬಾರಿ ಕ್ರೀಡಾ ಕಥೆಯ ಜತೆ ಆಗಮಿಸಿದ್ದಾರೆ. ಫುಟ್‌ಬಾಲ್‌ ಕಥಾಹಂದರಯುಳ್ಳ ಈ ಚಿತ್ರದ ನಾಯಕ ಯಾರು? ಸದ್ಯಕ್ಕೆ ಸಸ್ಪೆನ್ಸ್ ಆಗಿ ಇಡಲಾಗಿದೆ. ಟೀಂ ರೆಡಿ ಇದೆ. ಕೋಚ್ ಯಾರು ಅನ್ನೋದನ್ನು ಸ್ಪಲ್ಪ ದಿನದಲ್ಲೇ ಹೇಳುವುದಾಗಿ ಚಿತ್ರತಂಡ ತಿಳಿಸಿದೆ.

Whats_app_banner