ಬಿಗ್‌ ಬಾಸ್ ಕನ್ನಡ ಸೀಸನ್ 11: ಪಟಾಕಿ ಪೋರಿಯೋ ಎನ್ನುತ್ತಲೇ ಬಿಗ್‌ ಮನೆಗೆ ಎಂಟ್ರಿಕೊಟ್ಟ ನಟಿ ಅನುಷಾ ರೈ-bigg boss kannada season 11 contestants list actress anusha rai enters bbk 11 colors kannada reality show mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಬಿಗ್‌ ಬಾಸ್ ಕನ್ನಡ ಸೀಸನ್ 11: ಪಟಾಕಿ ಪೋರಿಯೋ ಎನ್ನುತ್ತಲೇ ಬಿಗ್‌ ಮನೆಗೆ ಎಂಟ್ರಿಕೊಟ್ಟ ನಟಿ ಅನುಷಾ ರೈ

ಬಿಗ್‌ ಬಾಸ್ ಕನ್ನಡ ಸೀಸನ್ 11: ಪಟಾಕಿ ಪೋರಿಯೋ ಎನ್ನುತ್ತಲೇ ಬಿಗ್‌ ಮನೆಗೆ ಎಂಟ್ರಿಕೊಟ್ಟ ನಟಿ ಅನುಷಾ ರೈ

Bigg boss Kannada Season 11 contestants List: ನಟಿ ಅನುಷಾ ರೈ ಅವರು ಈ ಸಲದ ಬಿಗ್‌ಬಾಸ್‌ ಕನ್ನಡ ಸೀಸನ್‌ 11 ಕ್ಕೆ ಎಂಟ್ರಿ ಪಡೆದಿದ್ದಾರೆ. ನಟಿಯಾಗಿ ಗುರುತಿಸಿಕೊಂಡಿರುವ ಅವರು, ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಿಚ್ಚ ಸುದೀಪ್‌ ಅವರ ಪಟಾಕಿ ಪೋರಿಯೋ ಹಾಡಿಗೆ ಹೆಜ್ಜೆ ಹಾಕಿ ಬಿಗ್‌ ಮನೆಗೆ ಎಂಟ್ರಿಕೊಟ್ಟಿದ್ದಾರೆ.

ಬಿಗ್‌ ಬಾಸ್‌ ಸೀಸನ್‌ 11ರ ಐದನೇ ಸ್ಪರ್ಧಿಯಾಗಿ ಅನುಷಾ ರೈ ಎಂಟ್ರಿಕೊಟ್ಟಿದ್ದಾರೆ.
ಬಿಗ್‌ ಬಾಸ್‌ ಸೀಸನ್‌ 11ರ ಐದನೇ ಸ್ಪರ್ಧಿಯಾಗಿ ಅನುಷಾ ರೈ ಎಂಟ್ರಿಕೊಟ್ಟಿದ್ದಾರೆ.

ಅನುಷಾ ರೈ: ನಟಿ ಅನುಷಾ ರೈ ಬಿಗ್‌ ಬಾಸ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದು ಖಚಿತವಾಗಿದೆ. ಕಳೆದ ಬಾರಿಯ ಸೀಸನ್‌ 10ರ ಯಶಸ್ಸಿನ ಬಳಿಕ, ನಿರೀಕ್ಷೆ ಮೂಡಿಸಿದ್ದ ಸೀಸನ್‌ 11ರಲ್ಲಿ ಯಾರೆಲ್ಲ ಸ್ಪರ್ಧಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂಬ ಅಚ್ಚರಿಗೆ ಶನಿವಾರ (ಸೆ 28) ಉತ್ತರ ಸಿಕ್ಕಿದೆ. 16 ಮಂದಿ ಸ್ಪರ್ಧಿಗಳ ಪೈಕಿ, ಶನಿವಾರ ನಾಲ್ಕು ಸ್ಪರ್ಧಿಗಳ ಹೆಸರನ್ನು ರಾಜಾ ರಾಣಿ ಶೋನ ಗ್ರ್ಯಾಂಡ್‌ ಫಿನಾಲೆಯಲ್ಲಿ ರಿವೀಲ್‌ ಮಾಡಲಾಗಿತ್ತು. ಇದೀಗ ಐದನೇ ಸ್ಪರ್ಧಿಯಾಗಿ ಬಿಗ್‌ ಮನೆ ಪ್ರವೇಶಿಸಿದ್ದಾರೆ ಅನುಷಾ ರೈ.

2017ರಲ್ಲಿ ತೆರೆಕಂಡ ಮಹಾನುಭಾವರು ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟಿದ್ದ ಅನುಷಾ ರೈ, ಅದಾದ ಬಳಿಕ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಿಎಂಡಬ್ಲ್ಯೂ, ಗೋಸಿ ಗ್ಯಾಂಗ್, ರಾಧಿಕಾ ಕುಮಾರಸ್ವಾಮಿ ಅವರ ದಮಯಂತಿ, ನಿಖಿಲ್‌ ಕುಮಾರಸ್ವಾಮಿ ನಾಯಕನಾಗಿ ನಟಿಸಿದ ರೈಡರ್, ಖಡಕ್, ಪೆಂಟಗನ್, ಧೈರ್ಯಂ ಸರ್ವತ್ರ ಸಾಧನಂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚಿಗೆ ದುಬೈನಲ್ಲಿ ನಡೆದ ಸೈಮಾ ಅವಾರ್ಡ್‌ ಕಾರ್ಯಕ್ರಮದಲ್ಲಿಯೂ ಅನುಷಾ ಭಾಗವಹಿಸಿದ್ದರು.

ಸ್ವರ್ಗಕ್ಕಾ ನರಕಕ್ಕಾ?

ಕಿಚ್ಚ ಸುದೀಪ್‌ ನಟನೆಯ ಪೈಲ್ವಾನ್‌ ಚಿತ್ರದ ಪಟಾಕಿ ಪೋರಿಯೋ ಹಾಡಿನ ಮೂಲಕ ವೇದಿಕೆ ಮೇಲೆ ಕುಣಿದು ಎಲ್ಲರನ್ನು ರಂಜಿಸಿದ ಅನುಷಾ, ನಟ ಧರ್ಮ ಕೀರ್ತಿರಾಜ್‌ ಅವರ ಮೂಲಕ ಬಿಗ್‌ಬಾಸ್‌ ಮನೆ ಪ್ರವೇಶಿಸುತ್ತಿದ್ದಾರೆ. ಕನ್ಫೆಷನ್‌ ರೂಮ್‌ನಲ್ಲಿ ಕೂತ ಭವ್ಯಾ ಮತ್ತು ಯಮುನಾ ಜೋಡಿ ಧರ್ಮ ಅವರನ್ನು ಸ್ವರ್ಗಕ್ಕೆ ಕಳಿಸಿದರೆ, ಅನುಷಾ ಅವರನ್ನು ನರಕಕ್ಕೆ ಕಳಿಸಲಾಗಿದೆ.

ಸ್ವರ್ಗ, ನರಕವೇ ಈ ಸಲದ ಹೈಲೈಟ್‌

ಈಗಾಗಲೇ ಹೊಸ ಪ್ರೋಮೋಗಳು ಸ್ವರ್ಗ, ನರಕದ ಕಾನ್ಸೆಪ್ಟ್‌ ಬಗ್ಗೆ ಮಾಹಿತಿ ನೀಡಿತ್ತು. ಈಗ ಅದರ ಮುಂದುವರಿದ ಭಾಗ ಹೇಗಿರಲಿದೆ ಎಂಬುದನ್ನು ನೋಡಲು ವೀಕ್ಷಕರು ತುದಿಗಾಲ ಮೇಲೆ ಕೂತಿದ್ದಾರೆ. ಇಲ್ಲಿಯವರೆಗೂ ಒಂದೇ ಮನೆ ಎರಡು ಬಣಗಳು ಎಂದು ಎಲ್ಲರೂ ತಿಳಿದಿದ್ದರು. ಈಗ ಸ್ವರ್ಗವೇ ಬೇರೆ, ನರಕವೇ ಬೇರೆ ಎಂದು ಕಿಚ್ಚ ಸುದೀಪ್‌ ಪ್ರೋಮೋದಲ್ಲಿ ಹೇಳಿದ್ದರು. ಸ್ವರ್ಗ ಮತ್ತು ನರಕದ ಪರಿಕಲ್ಪನೆಗೆ ತಕ್ಕಂತೆ, ಮನೆಯನ್ನೂ ಸೆಟ್‌ ಮಾಡಲಾಗಿದೆ. ಸ್ವರ್ಗದಲ್ಲಿ ಸ್ಪರ್ಧಿಗಳು ಐಶಾರಾಮಿ ಜೀವನ ಸಾಗಿಸಿದರೆ, ನರಕದಲ್ಲಿ ಕೈದಿಯಂತೆ ಬದುಕಬೇಕು ಎಂಬುದನ್ನು ಲೇಟೆಸ್ಟ್‌ ಪ್ರೋಮೋದಲ್ಲಿ ನೋಡಬಹುದು.

ಈಗಾಗಲೇ ಮನೆ ಪ್ರವೇಶಿಸಿದವರು

ಮೊದಲ ಸ್ಪರ್ಧಿಯಾಗಿ ಭವ್ಯಾ ಗೌಡ

ಎರಡನೇ ಸ್ಪರ್ಧಿಯಾಗಿ ಯಮುನಾ ಶ್ರೀನಿಧಿ

ಮೂರನೇ ಸ್ಪರ್ಧಿಯಾಗಿ ಧನರಾಜ್‌ ಆಚಾರ್

‌ನಾಲ್ಕನೇ ಸ್ಪರ್ಧಿಯಾಗಿ ಗೌತಮಿ ಜಾಧವ್‌

ಐದನೇ ಸ್ಪರ್ಧಿಯಾಗಿ ಅನುಷಾ ರೈ

ಬಿಗ್‌ ಬಾಸ್‌ ಕನ್ನಡ ಸೀಸನ್ 11 ರ ತಾಜಾ ಮಾಹಿತಿ ಎಲ್ಲಿ ಸಿಗುತ್ತೆ?

ಕಲರ್ಸ್‌ ಕನ್ನಡ ನಡೆಸುತ್ತಿರುವ 'ಬಿಗ್‌ ಬಾಸ್‌ ಕನ್ನಡ ಸೀಸನ್ 11' ರಿಯಾಲಿಟಿ ಶೋ ಕುರಿತ ಸಮಗ್ರ ಮಾಹಿತಿಯನ್ನು 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ನೋಡಬಹುದು. ದೊಡ್ಮನೆ ಎಂದೇ ಪ್ರಖ್ಯಾತವಾಗಿರುವ ಬಿಗ್‌ ಬಾಸ್‌ ಮನೆಯಲ್ಲಿರುವ ಸ್ಪರ್ಧಿಗಳು ಹೇಗೆ ಆಡುತ್ತಿದ್ದಾರೆ? ಜನರು ಅವರ ಬಗ್ಗೆ ಏನು ಯೋಚಿಸುತ್ತಿದ್ದಾರೆ? ಕುತೂಹಲಕಾರಿ ತಿರುವುಗಳೇನು ಎನ್ನುವ ವಿವರ ತಿಳಿಯಲು kannada.hindustantimes.com/topic/bigg-boss-kannada ಜಾಲತಾಣಕ್ಕೆ ಭೇಟಿ ನೀಡಿ.

mysore-dasara_Entry_Point