ಬಿಗ್ ಬಾಸ್ ಕನ್ನಡ ಸೀಸನ್ 11: ಗ್ರ್ಯಾಂಡ್‌ ಎಂಟ್ರಿ ಕೊಟ್ಟ ‌ಗೀತಾ ಸೀರಿಯಲ್‌ ನಟಿ ಭವ್ಯಾ ಗೌಡ, ಹೋಗಿದ್ದು ಸ್ವರ್ಗಕ್ಕಾ, ನರಕಕ್ಕಾ?-bigg boss kannada season 11 contestants list geetha serial bhavya gowda enters bbk 11 colors kannada reality show mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಬಿಗ್ ಬಾಸ್ ಕನ್ನಡ ಸೀಸನ್ 11: ಗ್ರ್ಯಾಂಡ್‌ ಎಂಟ್ರಿ ಕೊಟ್ಟ ‌ಗೀತಾ ಸೀರಿಯಲ್‌ ನಟಿ ಭವ್ಯಾ ಗೌಡ, ಹೋಗಿದ್ದು ಸ್ವರ್ಗಕ್ಕಾ, ನರಕಕ್ಕಾ?

ಬಿಗ್ ಬಾಸ್ ಕನ್ನಡ ಸೀಸನ್ 11: ಗ್ರ್ಯಾಂಡ್‌ ಎಂಟ್ರಿ ಕೊಟ್ಟ ‌ಗೀತಾ ಸೀರಿಯಲ್‌ ನಟಿ ಭವ್ಯಾ ಗೌಡ, ಹೋಗಿದ್ದು ಸ್ವರ್ಗಕ್ಕಾ, ನರಕಕ್ಕಾ?

Bigg boss Kannada Season 11 contestants List: ಗೀತಾ ಸೀರಿಯಲ್‌ ನಟಿ ಭವ್ಯಾ ಗೌಡ ಅವರು ಈ ಸಲದ ಬಿಗ್‌ಬಾಸ್‌ ಕನ್ನಡ ಸೀಸನ್‌ 11 ಕ್ಕೆ ಎಂಟ್ರಿ ಪಡೆದಿದ್ದಾರೆ. ಕಿರುತೆರೆ ನಟಿಯಾಗಿರುವ ಆಗಿರುವ ಅವರು ಸಾಕಷ್ಟು ಜನಪ್ರಿಯತೆ ಗಳಿಸಿದವರು. ಭವ್ಯಾ ಗೌಡ ಹೇಗೆ ಪರ್ಫಾಮ್ ಮಾಡ್ತಾರೆ ಎನ್ನುವ ಬಗ್ಗೆ ನಿರೀಕ್ಷೆ ವ್ಯಕ್ತವಾಗಿದೆ.

ಬಿಗ್‌ಬಾಸ್‌ ಸೀಸನ್‌ 11ರ ಮೊದಲ ಸ್ಪರ್ಧಿಯಾಗಿ ಭವ್ಯಾ ಗೌಡ
ಬಿಗ್‌ಬಾಸ್‌ ಸೀಸನ್‌ 11ರ ಮೊದಲ ಸ್ಪರ್ಧಿಯಾಗಿ ಭವ್ಯಾ ಗೌಡ

ಗೀತಾ ಸೀರಿಯಲ್‌ ಖ್ಯಾತಿಯ ನಟಿ ಭವ್ಯಾ ಗೌಡ ಅವರು ಬಿಗ್‌ ಬಾಸ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದು ಖಚಿತವಾಗಿದೆ. ಬಿಗ್‌ಬಾಸ್‌ ಕನ್ನಡ ಸೀಸನ್‌ 11 ಶುರುವಾಗಿದೆ. ಕಳೆದ ಬಾರಿಯ ಸೀಸನ್‌ 10ರ ಯಶಸ್ಸಿನ ಬಳಿಕ, ನಿರೀಕ್ಷೆ ಮೂಡಿಸಿದ್ದ ಸೀಸನ್‌ 11ರಲ್ಲಿ ಯಾರೆಲ್ಲ ಸ್ಪರ್ಧಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂಬ ಅಚ್ಚರಿಗೆ ಶನಿವಾರ (ಸೆ 28) ಉತ್ತರ ಸಿಕ್ಕಿದೆ. 16 ಮಂದಿ ಸ್ಪರ್ಧಿಗಳ ಪೈಕಿ, ನಾಲ್ಕು ಸ್ಪರ್ಧಿಗಳ ಹೆಸರನ್ನು ರಾಜಾ ರಾಣಿ ಶೋನ ಗ್ರ್ಯಾಂಡ್‌ ಫಿನಾಲೆಯಲ್ಲಿ ರಿವೀಲ್‌ ಮಾಡಲಾಗಿದೆ. ಸತ್ಯ ಸೀರಿಯಲ್‌ ಗೌತಮಿ ಜಾಧವ್‌, ಲಾಯರ್‌ ಕೆ.ಎನ್‌.ಜಗದೀಶ್‌, ಹಿಂದುತ್ವದ ಫೈರ್‌ ಬ್ರ್ಯಾಂಡ್‌ ಚೈತ್ರಾ ಕುಂದಾಪುರ ಮತ್ತು ಗೋಲ್ಡ್‌ ಸುರೇಶ್‌ ಹೆಸರು ಫೈನಲ್‌ ಆಗಿದ್ದು, ಈಗ ಬಾಕಿ 12 ಸ್ಪರ್ಧಿಗಳು ಪೈಕಿ ಭವ್ಯಾ ಗೌಡ ಬಿಗ್‌ಬಾಸ್‌ಗೆ ಹೋಗುವುದು ಖಚಿತವಾಗಿದೆ.

ಕಲರ್ಸ್‌ ಕನ್ನಡದ ಗೀತಾ ಸೀರಿಯಲ್‌ ಮೂಲಕ ಖ್ಯಾತಿ ಪಡೆದ ನಟಿ ಭವ್ಯಾ ಗೌಡ ಇದೀಗ ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರ ಮೊದಲ ಸ್ಪರ್ಧಿಯಾಗಿ ಬಿಗ್‌ ಬಾಸ್‌ ಮನೆಗೆ ಎಂಟ್ರಿ ಪಡೆದಿದ್ದಾರೆ. ಅಚ್ಚರಿಯ ವಿಚಾರ ಏನೆಂದರೆ ಸ್ವರ್ಗ ಮತ್ತು ನರಕದ ಪೈಕಿ ಭವ್ಯ ನೇರವಾಗಿ ಸ್ವರ್ಗದ ಬಾಗಿಲು ತಟ್ಟಿದ್ದಾರೆ. ಕಿಚ್ಚ ಸುದೀಪ್‌ ಅವರ ಎದುರಿಗೆ ನಿಂತು, ಕೊಂಚ ನರ್ವಸ್‌ ಆದ ಭವ್ಯಾ, ಶೋ ಬಗ್ಗೆ ಮಾತನಾಡಿದ್ದು ಹೀಗೆ.

ರಿಯಲ್‌ ಭವ್ಯಾ ಎಲ್ಲರಿಗೂ ಗೊತ್ತಾಗಲಿ..

ಸಿಕ್ಕಾಪಟ್ಟೆ ಅಂದ್ರೆ ಸಿಕ್ಕಾಪಟ್ಟೆ ಖುಷಿಯಿದೆ. ನನ್ನಲ್ಲಿ ಸಿಕ್ಕಾಪಟ್ಟೆ ಶೇಡ್ಸ್‌ ಇದೆ. ನನ್ನನ್ನು ಅರ್ಥ ಮಾಡಿಕೊಳ್ಳಲು ಹೊರಟ್ಟಿದ್ದೇನೆ. ಸೀರಿಯಲ್‌ನಲ್ಲಿ ಗೀತಾ ಬಗ್ಗೆ ಕರುನಾಡಿನ ಜನರಿಗೆ ಗೊತ್ತಿತ್ತು. ಆದರೆ ರಿಯಲ್‌ ಭವ್ಯ ಗೌಡ ಯಾರು ಎಂಬುದು ಗೊತ್ತಿಲ್ಲ. ಅದೂ ನೋಡುಗರಿಗೆ ಗೊತ್ತಾಗಲಿ ಎಂಬ ಕಾರಣಕ್ಕೆ ಬಿಗ್‌ಬಾಸ್‌ಗೆ ಬಂದಿದ್ದೇನೆ ಎಂದಿದ್ದಾರೆ.

ನಯಾ ಲುಕ್‌ನಲ್ಲಿ ಕಿಚ್ಚನ ಆಗಮನ

ಸೀಸನ್‌ಗಳಿಂದ ಸೀಸನ್‌ಗಳು ಬದಲಾದರೂ, ಕಿಚ್ಚ ಸುದೀಪ್‌ ಮಾತ್ರ ಅದೇ ಗತ್ತಿನಲ್ಲಿಯೇ ನಿರೂಪಕರಾಗಿ ಮುಂದುವರಿಯುತ್ತಿದ್ದಾರೆ. ಈ ಸಲದ ಸೀಸನ್‌ 11ರಲ್ಲಿಯೂ ಅದೇ ಜೋಶ್‌ನಲ್ಲಿಯೇ ಎದುರಾಗಿದ್ದಾರೆ. ಸಖತ್‌ ಸ್ಟೈಲಿಶ್‌ ಆಗಿ ಸುದೀಪ್‌ ಗ್ರ್ಯಾಂಡ್‌ ಓಪನಿಂಗ್‌ನಲ್ಲಿ ಕಂಡಿದ್ದಾರೆ. ಕಲರ್‌ ಹಾಡುಗಳಿಗೆ ಸ್ಪರ್ಧಿಗಳೂ ಹೆಜ್ಜೆ ಹಾಕಿ ಎಲ್ಲರ ಮುಂದೆ ಅಷ್ಟೇ ಅದ್ಧೂರಿಯಾಗಿಯೇ ಎಂಟ್ರಿಕೊಟ್ಟಿದ್ದಾರೆ.

ಸ್ವರ್ಗ ನರಕವೇ ಈ ಸಲದ ಹೈಲೈಟ್‌

ಈಗಾಗಲೇ ಹೊಸ ಪ್ರೋಮೋಗಳು ಸ್ವರ್ಗ ನರಕದ ಕಾನ್ಸೆಪ್ಟ್‌ ಬಗ್ಗೆ ಮಾಹಿತಿ ನೀಡಿತ್ತು. ಈಗ ಅದರ ಮುಂದುವರಿದ ಭಾಗ ಹೇಗಿರಲಿದೆ ಎಂಬುದನ್ನು ನೋಡಲು ವೀಕ್ಷಕರು ತುದಿಗಾಲ ಮೇಲೆ ಕೂತಿದ್ದಾರೆ. ಇಲ್ಲಿಯವರೆಗೂ ಒಂದೇ ಮನೆ ಎರಡು ಬಣಗಳು ಎಂದು ಎಲ್ಲರೂ ತಿಳಿದಿದ್ದರು. ಈಗ ಸ್ವರ್ಗವೇ ಬೇರೆ, ನರಕವೇ ಬೇರೆ ಎಂದು ಕಿಚ್ಚ ಸುದೀಪ್‌ ಪ್ರೋಮೋದಲ್ಲಿ ಹೇಳಿದ್ದರು. ಸ್ವರ್ಗ ಮತ್ತು ನರಕದ ಪರಿಕಲ್ಪನೆಗೆ ತಕ್ಕಂತೆ, ಮನೆಯನ್ನೂ ಸೆಟ್‌ ಮಾಡಲಾಗಿದೆ. ಸ್ವರ್ಗದಲ್ಲಿ ಸ್ಪರ್ಧಿಗಳು ಐಶಾರಾಮಿ ಜೀವನ ಸಾಗಿಸಿದರೆ, ನರಕದಲ್ಲಿ ಕೈದಿಯಂತೆ ಬದುಕಬೇಕು ಎಂಬುದನ್ನು ಲೇಟೆಸ್ಟ್‌ ಪ್ರೋಮೋದಲ್ಲಿ ನೋಡಬಹುದು.

24*7 ಲೈವ್‌ ವೀಕ್ಷಣೆ ಇಲ್ಲ

ಇಷ್ಟು ಸೀಸನ್‌ಗಳಲ್ಲಿ ಒಂದೂವರೆ ಗಂಟೆಗಳ ಕಾಲ ಕಾರ್ಯಕ್ರಮ ಪ್ರಸಾರವಾಗುತ್ತಿತ್ತು. ಈ ಬಾರಿಯೂ ಅದೇ ಸಮಯ ನಿಗದಿಯಾಗಿದೆ. ಇದಕ್ಕಾಗಿ ಕಲರ್ಸ್‌ ಕನ್ನಡದ 2 ಧಾರಾವಾಹಿಗಳು ಮುಕ್ತಾಯವಾಗಿವೆ. ಆದರೆ ಈ ಸೀಸನ್‌ನಲ್ಲಿ ಕಳೆದ ಬಾರಿಯಂತೆ 24 ಗಂಟೆಗಳ ಲೈವ್‌ ಇರುವುದಿಲ್ಲ. ಕಳೆದ ಸೀಸನ್‌ನಲ್ಲಿ ಕಾರ್ಯಕ್ರಮದ ಲೈವ್‌ ಮಿಸ್‌ ಮಾಡಿಕೊಂಡವರು ಅದನ್ನು ಜಿಯೋದಲ್ಲಿ ನೋಡುವ ಅವಕಾಶವಿತ್ತು. ಆದರೆ ಈ ಬಾರಿ ವಾಹಿನಿ, ಜಿಯೋದಲ್ಲಿ ಲೈವ್‌ ಪ್ರಸಾರ ಮಾಡದಿರಲು ನಿರ್ಧರಿಸಿದೆ.

ಬಿಗ್‌ ಬಾಸ್‌ ಕನ್ನಸ ಸೀಸನ್ 11 ರ ತಾಜಾ ಮಾಹಿತಿ ಎಲ್ಲಿ ಸಿಗುತ್ತೆ?

ಕಲರ್ಸ್‌ ಕನ್ನಡ ನಡೆಸುತ್ತಿರುವ 'ಬಿಗ್‌ ಬಾಸ್‌ ಕನ್ನಡ ಸೀಸನ್ 11' ರಿಯಾಲಿಟಿ ಶೋ ಕುರಿತ ಸಮಗ್ರ ಮಾಹಿತಿಯನ್ನು 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ನೋಡಬಹುದು. ದೊಡ್ಮನೆ ಎಂದೇ ಪ್ರಖ್ಯಾತವಾಗಿರುವ ಬಿಗ್‌ ಬಾಸ್‌ ಮನೆಯಲ್ಲಿರುವ ಸ್ಪರ್ಧಿಗಳು ಹೇಗೆ ಆಡುತ್ತಿದ್ದಾರೆ? ಜನರು ಅವರ ಬಗ್ಗೆ ಏನು ಯೋಚಿಸುತ್ತಿದ್ದಾರೆ? ಕುತೂಹಲಕಾರಿ ತಿರುವುಗಳೇನು ಎನ್ನುವ ವಿವರ ತಿಳಿಯಲು kannada.hindustantimes.com ಜಾಲತಾಣಕ್ಕೆ ಭೇಟಿ ನೀಡಿ.

mysore-dasara_Entry_Point