ಬಿಗ್ ಬಾಸ್ ಕನ್ನಡ ಸೀಸನ್ 11: ಬಿಗ್ ಕಟಕಟೆಗೆ ಲಾಯರ್ ಜಗದೀಶ್ ಆಗಮನ; ‘ದರ್ಶನ್ ಪರ ಹೋರಾಟದ ಕಥೆ ಏನಾಯ್ತು ಸ್ವಾಮಿ’ ಎಂದ ನೆಟ್ಟಿಗ
Bigg boss Kannada Season 11 contestants List: ಕಾಂಟ್ರವರ್ಸಿ ಹೇಳಿಕೆಯಿಂದಲೇ ಸುದ್ದಿಯಾದ ನ್ಯಾಯವಾದಿ ಕೆ.ಎನ್. ಜಗದೀಶ್ ಈ ಸಲದ ಬಿಗ್‌ಬಾಸ್ ಕನ್ನಡ ಸೀಸನ್ 11 ಕ್ಕೆ ಎಂಟ್ರಿ ಪಡೆದಿದ್ದಾರೆ. ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಸಂತ್ರಸ್ತ್ರ ಯುವತಿ ಪರ ವಕಾಲತ್ತು ವಹಿಸಿದ್ದ ಜಗದೀಶ್, ಇದೀಗ ಬಿಗ್ ಬಾಸ್ ಮನೆಗೆ ಬಲಗಾಲಿಟ್ಟು ಆಗಮಿಸಿದ್ದಾರೆ.
Lawyar K N Jagadish: ಲಾಯರ್ ಕೆ.ಎನ್ ಜಗದೀಶ್ ಅವರು ಬಿಗ್ ಬಾಸ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದು ಖಚಿತವಾಗಿದೆ. ಕಳೆದ ಬಾರಿಯ ಸೀಸನ್ 10ರ ಯಶಸ್ಸಿನ ಬಳಿಕ, ನಿರೀಕ್ಷೆ ಮೂಡಿಸಿದ್ದ ಸೀಸನ್ 11ರಲ್ಲಿ ಯಾರೆಲ್ಲ ಸ್ಪರ್ಧಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂಬ ಅಚ್ಚರಿಗೆ ಶನಿವಾರ (ಸೆ 28) ಉತ್ತರ ಸಿಕ್ಕಿದೆ. 16 ಮಂದಿ ಸ್ಪರ್ಧಿಗಳ ಪೈಕಿ, ಲಾಯರ್ ಜಗದೀಶ್ ಸೇರಿ ನಾಲ್ಕು ಸ್ಪರ್ಧಿಗಳ ಹೆಸರನ್ನು ರಾಜಾ ರಾಣಿ ಶೋನ ಗ್ರ್ಯಾಂಡ್ ಫಿನಾಲೆಯಲ್ಲಿ ರಿವೀಲ್ ಮಾಡಲಾಗಿತ್ತು. ಈಗ ಇದೇ ಬಿಗ್ ಬಾಸ್ ಮನೆಗೆ ಭವ್ಯಾ ಗೌಡ ಮತ್ತು ಯಮುನಾ ಶ್ರೀನಿಧಿ, ಧನರಾಜ್ ಆಚಾರ್, ಗೌತಮಿ ಜಾಧವ್ ಬಳಿಕ ಐದನೇ ಸ್ಪರ್ಧಿಯಾಗಿ ಜಗದೀಶ್ ಆಗಮಿಸಿದ್ದಾರೆ.
ಲಾಯರ್ ಕೆ. ಎನ್. ಜಗದೀಶ್ ತಮ್ಮ ಸೋಷಿಯಲ್ ಮೀಡಿಯಾ ಫೇಮ್ ಮೂಲಕವೇ ಬಿಗ್ ಬಾಸ್ ಮನೆಗೆ ಕಿಚ್ಚು ಹಚ್ಚಲಿದ್ದಾರೆ. ವಿವಾದಗಳ ಮೂಲಕವೇ ಇವರು ಹೆಚ್ಚು ಸದ್ದು ಮಾಡಿದವರು. ಕಳೆದ ವರ್ಷ ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಸಂತ್ರಸ್ತ್ರ ಯುವತಿ ಪರ ವಕಾಲತ್ತು ವಹಿಸಿದ್ದರು ಜಗದೀಶ್. ಹೀಗಿರುವಾಗಲೇ ಇತ್ತೀಚಿನ ಕೆಲ ದಿನಗಳಿಂದ ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಮುನ್ನೆಲೆಗೆ ಬಂದಿದ್ದರು ಜಗದೀಶ್. ಈಗ ಅದೇ ಫೇಮ್‌ನೊಂದಿಗೆ ಬಿಗ್‌ಬಾಸ್ ಮನೆ ಪ್ರವೇಶಿಸುವ ಅವಕಾಶ ಪಡೆದಿದ್ದಾರೆ.
ಮಕ್ಕಳನ್ನೂ ರಾಜಕಾರಣಿಗಳನ್ನಾಗಿಸೋಣ...
ಸುದೀಪ್ ಜತೆಗೆ ವೇದಿಕೆ ಮೇಲೆ ಮಾತನಾಡಿದ ಜಗದೀಶ್, "ಭ್ರಷ್ಟಾಚಾರದಲ್ಲಿ ಮುಳುಗಿದ್ದೇವೆ. ಇಡೀ ಸಮಾಜ ಹಾಳಾಗಿದೆ. ಧ್ವನಿ ಎತ್ತುವವರಿಲ್ಲ. ನಾಯಕ ಇದ್ದಾನೆ, ಎಂಎಲ್‌ಎ, ಎಂಪಿ ಇದ್ದಾರೆ. ಆದರೆ, ಕೆಳಗಿನವರ ನೋವು ನೋಡುವವರಿಲ್ಲ. ಇದೀಗ ನನ್ನಿಂದ ಬದಲಾವಣೆಗೆ ಮುಂದಾಗಬೇಕು ಎಂದು ನಿರ್ಧರಿಸಿದ್ದಾನೆ. 22 ವರ್ಷಗಳ ಹಿಂದೆ ಕಬ್ಜ ಆಗಿದ್ದ ನನ್ನ ಜಮೀನುಗಳನ್ನು ನಾನು ಉಳಿಸಿಕೊಂಡೆ. ಅಲ್ಲಿಂದ ಹೋರಾಟದ ಭಾವನೆ ನನ್ನೊಳಗಿದೆ. ನಮ್ಮ ಮಕ್ಕಳನ್ನು ರಾಜಕಾರಣಿಗಳನ್ನಾಗಿಸೋಣ. ಎಂಎಲ್‌ಎ, ಎಂಪಿ ಮಾಡೋಣ ಎಂದಿದ್ದಾರೆ ಜಗದೀಶ್.
ಸ್ವರ್ಗಕ್ಕಾ ನರಕಕ್ಕಾ?
ಶನಿವಾರವೇ ರಾಜಾ ರಾಣಿ ಗ್ರ್ಯಾಂಡ್ ಫಿನಾಲೆ ಶೋನಲ್ಲಿ ಬಿಗ್ ಬಾಸ್‌ಗೆ ಹೋಗುವ ನಾಲ್ಕು ಜನರನ್ನು ರಿವೀಲ್ ಮಾಡಲಾಗಿತ್ತು. ಆ ಪೈಕಿ ಲಾಯರ್ ಕೆ ಎನ್ ಜಗದೀಶ್ ಸಹ ಲಿಸ್ಟ್‌ನಲ್ಲಿದ್ದರು. 15 ನಿಮಿಷದ ಅವಧಿಯಲ್ಲಿ ಎರಡು ಲಕ್ಷಕ್ಕೂ ಅಧಿಕ ವೋಟ್ ಪಡೆದ ಜಗದೀಶ್, ಇದೀಗ ನೇರವಾಗಿ ಸ್ವರ್ಗದ ಬಾಗಿಲು ತಟ್ಟಿದ್ದಾರೆ.
ಈಗಾಗಲೇ ಮನೆ ಪ್ರವೇಶಿಸಿದವರು
ಮೊದಲ ಸ್ಪರ್ಧಿಯಾಗಿ ಭವ್ಯಾ ಗೌಡ (ಸ್ವರ್ಗ)
ಎರಡನೇ ಸ್ಪರ್ಧಿಯಾಗಿ ಯಮುನಾ ಶ್ರೀನಿಧಿ (ಸ್ವರ್ಗ)
ಮೂರನೇ ಸ್ಪರ್ಧಿಯಾಗಿ ಧನರಾಜ್ ಆಚಾರ್ (ಸ್ವರ್ಗ)
ನಾಲ್ಕನೇ ಸ್ಪರ್ಧಿಯಾಗಿ ಗೌತಮಿ ಜಾಧವ್ (ಸ್ವರ್ಗ)
ಐದನೇ ಸ್ಪರ್ಧಿಯಾಗಿ ಅನುಷಾ ರೈ (ನರಕ)
ಆರನೇ ಸ್ಪರ್ಧಿಯಾಗಿ ಧರ್ಮ ಕೀರ್ತಿರಾಜ್ (ಸ್ವರ್ಗ)
ಏಳನೇ ಸ್ಪರ್ಧಿಯಾಗಿ ಲಾಯರ್ ಜಗದೀಶ್ (ಸ್ವರ್ಗ)
ಬಿಗ್ ಬಾಸ್ ಕನ್ನಡ ಸೀಸನ್ 11 ರ ತಾಜಾ ಮಾಹಿತಿ ಎಲ್ಲಿ ಸಿಗುತ್ತೆ?
ಕಲರ್ಸ್ ಕನ್ನಡ ನಡೆಸುತ್ತಿರುವ 'ಬಿಗ್ ಬಾಸ್ ಕನ್ನಡ ಸೀಸನ್ 11' ರಿಯಾಲಿಟಿ ಶೋ ಕುರಿತ ಸಮಗ್ರ ಮಾಹಿತಿಯನ್ನು 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ನೋಡಬಹುದು. ದೊಡ್ಮನೆ ಎಂದೇ ಪ್ರಖ್ಯಾತವಾಗಿರುವ ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳು ಹೇಗೆ ಆಡುತ್ತಿದ್ದಾರೆ? ಜನರು ಅವರ ಬಗ್ಗೆ ಏನು ಯೋಚಿಸುತ್ತಿದ್ದಾರೆ? ಕುತೂಹಲಕಾರಿ ತಿರುವುಗಳೇನು ಎನ್ನುವ ವಿವರ ತಿಳಿಯಲು kannada.hindustantimes.com/topic/bigg-boss-kannada ಜಾಲತಾಣಕ್ಕೆ ಭೇಟಿ ನೀಡಿ.